My Blog List

Wednesday, May 13, 2020

ಸೇನಾಪಡೆ ಕ್ಯಾಂಟೀನ್‌ಗಳಲ್ಲಿ ಇನ್ನು ಸ್ವದೇಶೀ ಉತ್ಪನ್ನ ಮಾರಾಟ

ಸೇನಾಪಡೆ ಕ್ಯಾಂಟೀನ್ಗಳಲ್ಲಿ ಇನ್ನು ಸ್ವದೇಶೀ ಉತ್ಪನ್ನ ಮಾರಾಟ
ಪ್ರಧಾನಿ ಕರೆಯ ಬೆನ್ನಲ್ಲೇ ಗೃಹ ಸಚಿವ ಅಮಿತ್ ಶಾ ಘೋಷಣೆ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಸ್ವದೇಶೀ ಅಭಿಯಾನಕ್ಕೆ ಕರೆ ನೀಡಿದ ಬೆನ್ನಲ್ಲೇ ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್ಪಿಎಫ್) ಮತ್ತು ಗಡಿ ಭದ್ರತಾ ಪಡೆಗಳಂತಹ (ಬಿಎಸ್ಎಫ್)  ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಗಳ (ಸಿಎಪಿಎಫ್) ಕ್ಯಾಂಟೀನ್ಗಳು ಜೂನ್ ೧ರಿಂದ ೧೦ ಲಕ್ಷ ಸಿಬ್ಬಂದಿಯ ಸುಮಾರು ೫೦ ಲಕ್ಷ ಕುಟುಂಬ ಸದಸ್ಯರಿಗೆ ದೇಶೀ ಉತ್ಪನ್ನಗಳನ್ನು ಮಾತ್ರವೇ ಮಾರಾಟ ಮಾಡಲಿವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು  2020 ಮೇ 13ರ ಬುಧವಾರ ಘೋಷಿಸಿದರು.

ಹಿಂದಿಯಲ್ಲಿ ಸರಣಿ ಟ್ವೀಟ್ಗಳನ್ನು ಮಾಡಿದ ಶಾ, ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾವಲಂಬನೆ ಸಲುವಾಗಿ ಸ್ಥಳೀಯ ಉತ್ಪನ್ನಗಳಿಗೆ ಪ್ರೋತ್ಸಾಹ ಹಾಕುವಂತೆ ಮನವಿ ಮಾಡಿದ್ದನ್ನು ಅನುಸರಿಸಿ ಗೃಹ ವ್ಯವಹಾರಗಳ ಸಚಿವಾಲಯವು ನಿರ್ಧಾರ ಕೈಗೊಂಡಿದೆ ಎಂದು ತಿಳಿಸಿದರು.

ದೇಶದಲ್ಲೇ ನಿರ್ಮಿಸಲಾದ ಉತ್ಪನ್ನಗಳನ್ನು ಗರಿಷ್ಠ ಪ್ರಮಾಣದಲ್ಲಿ ಬಳಕೆ ಮಾಡುವಂತೆ ಮತ್ತು ಇದೇ ವೇಳೆಯಲ್ಲಿ ಇತರರನ್ನೂ ಸ್ವದೇಶೀ ನಿರ್ಮಿತ ವಸ್ತುಗಳನ್ನು ಬಳಸುವಂತೆ ಪ್ರೋತ್ಸಾಹಿಸಲು ಶಾ ರಾಷ್ಟ್ರದ ಪ್ರಜೆಗಳಿಗೆ ಮನವಿ ಮಾಡಿದರು.

ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಗಳ (ಸಿಎಪಿಎಫ್) ಕ್ಯಾಂಟೀನುಗಳು ಇನ್ನು ಮುಂದೆ ಕೇವಲ ದೇಶೀಯ  ಉತ್ಪನ್ನಗಳನ್ನು ಮಾತ್ರವೇ ಮಾರಾಟ ಮಾಡಲು ಗೃಹ ವ್ಯವಹಾರಗಳ ಸಚಿವಾಲಯವು ನಿರ್ಧರಿಸಿದೆ. ಇದು ದೇಶಾದ್ಯಂತ ೨೦೨೦ ಜೂನ್ ೧ರಿಂದ ಎಲ್ಲ ಸಿಎಪಿಎಫ್ ಕ್ಯಾಂಟೀನುಗಳಿಗೆ ಅನ್ವಯಿಸುತ್ತದೆ. ಇದರೊಂದಿಗೆ ೧೦ ಲಕ್ಷ ಸಿಎಪಿಎಫ್ ಸಿಬ್ಬಂದಿಯ ಕುಟುಂಬಗಳ ಸುಮಾರು ೫೦ ಲಕ್ಷ ಸದಸ್ಯರು ದೇಶೀ ಉತ್ಪನ್ನಗಳನ್ನು ಬಳಸಲಿದ್ದಾರೆ ಎಂದು ಶಾ ಹೇಳಿದರು.

ಸಿಎಪಿಎಫ್, ಸಿಆರ್ಪಿಎಫ್, ಬಿಎಸ್ಎಫ್, ಸಿಐಎಸ್ ಎಫ್, ಐಟಿಬಿಪಿ, ಎಸ್ಎಸ್ಬಿ, ಎನ್ಎಸ್ಜಿ ಮತ್ತು ಅಸ್ಸಾಂ ರೈಫಲ್ಸ್ ಕ್ಯಾಂಟೀನುಗಳು ವಾರ್ಷಿಕವಾಗಿ ಒಟ್ಟು ,೮೦೦ ಕೋಟಿ ರೂಪಾಯಿಗಳ ಮೌಲ್ಯದ ಉತ್ಪನ್ನಗಳನ್ನು ಮಾರಾಟ ಮಾಡುತ್ತವೆ.

ಪ್ರಧಾನಿ ಮೋದಿ ಅವರು ಮಂಗಳವಾರ ರಾಷ್ಟ್ರವನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ ದೇಶವನ್ನು ಸ್ವಾವಲಂಬಿಯನ್ನಾಗಿ ಮಾಡುವ ನಿಟ್ಟಿನಲ್ಲಿ ಭಾರತದಲ್ಲೇ ನಿರ್ಮಿಸಿದ ಉತ್ಪನ್ನಗಳನ್ನು ಬಳಸುವಂತೆ ಮನವಿ ಮಾಡಿದ್ದನ್ನು  ಉಲ್ಲೇಖಿಸಿದ ಶಾ, ’ಇದು ಖಚಿತವಾಗಿ ಭವಿಷ್ಯದಲ್ಲಿ ವಿಶ್ವವನ್ನು ಮುನ್ನಡೆಸಲು ಭಾರತದ ಮಾರ್ಗವನ್ನು ಸುಗಮಗೊಳಿಸುವುದು ಎಂದು ಹೇಳಿದ್ದರು.

ಪ್ರತಿಯೊಬ್ಬ ಭಾರತೀಯನೂ ಭಾರತದಲ್ಲೇ ನಿರ್ಮಿಸಿದ ಉತ್ಪನಗಳನ್ನು (ಸ್ವದೇಶೀ) ಖರೀದಿಸುವ ಪ್ರತಿಜ್ಞೆ ಮಾಡಿದರೆ, ರಾಷ್ಟವು ವರ್ಷಗಳಲ್ಲಿ ಸ್ವಾವಲಂಬಿಯಾಗಲಿದೆ ಎಂದು ಅವರು ಹೇಳಿದ್ದರು.
ದೂರದರ್ಶನಗಳ ಮೂಲಕ ಮಂಗಳವಾರ ರಾಷ್ಟ್ರವನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ ಪ್ರಧಾನಿ ಮೋದಿಯವರು ಬಿಕ್ಕಟ್ಟಿನಲ್ಲಿ ಸ್ಥಳೀಯ ಉತ್ಪಾದಕರು ನಿರ್ಮಿಸಿದ ಉತ್ಪನ್ನಗಳು ನಮ್ಮ ಬೇಡಿಕೆಗಳನ್ನು ಪೂರೈಸಿವೆ. ಈಗ ಭಾರತೀಯರುಸ್ಥಳೀಯ ಉತ್ಪನ್ನಗಳ ಬಗ್ಗೆ ಗಟ್ಟಿ ಧ್ವನಿ ಹೊರಡಿಸಬೇಕು ಮತ್ತು ಅವುಗಳನ್ನೇ ಖರೀದಿಸಬೇಕು ಎಂದು ಹೇಳಿದ್ದರು.

ಸ್ವಾವಲಂಬನೆಯ ತಂತ್ರದ ವಿವರಗಳ ಬಗ್ಗೆ ಮಾತನಾಡಿದ ಮೋದಿ, ಸ್ವಾವಲಂಬನೆಯು ಬೆಳೆಯುತಿರುವ ಹೊಸ ಆರ್ಥಿಕತೆ, ಮೂಲಸಲತ್ತು ನಿರ್ಮಣ, ತಂತ್ರಜ್ಞಾನ ಆಧಾರಿತ ವಿತರಣಾ ವ್ಯವಸ್ಥೆ, ಯುವ ಜನಸಂಖ್ಯೆ ಮತ್ತು ದೇಶೀ ಬೇಡಿಕೆಯನ್ನು ಬಳಸಿಕೊಳ್ಳುವಿಕೆ ಐದು ಸ್ತಂಭಗಳ ಮೇಲೆ ನಿಂತಿದೆ ಎಂದು ವಿವರಿಸಿದ್ದರು.

ನಾವು ಸ್ಥಳೀಯವನ್ನು ನಮ್ಮ ಜೀವನದ ಮಂತ್ರವನ್ನಾಗಿ ಮಾಡಬೇಕು ಎಂದು ಸಮಯ ನಮಗೆ ಕಲಿಸಿದೆ. ಆದ್ದರಿಂದ, ಇಂದಿನಿಂದ ಪ್ರತಿಯೊಬ್ಬ ಭಾರತೀಯರು ತಮ್ಮ ಸ್ಥಳೀಯರಿಗಾಗಿ ಸ್ಥಳೀಯ ಉತ್ಪನ್ನಗಳನ್ನು ಖರೀದಿಸಲು ಮಾತ್ರವಲ್ಲದೆ ಹೆಮ್ಮೆಯಿಂದ ಉತ್ತೇಜಿಸಲು ಗಟ್ಟಿ ಧ್ವನಿ ನೀಡಬೇಕಾಗಿದೆ. ನಮ್ಮ ದೇಶ ಇದನ್ನು ಮಾಡಬಹುದೆಂಬ ವಿಶ್ವಾಸ ನನಗೆ ಇದೆ ಎಂದು ಪ್ರಧಾನಿ ಮೋದಿ ಮಂಗಳವಾರ ಕೊರೋನಾ ಬಿಕ್ಕಟ್ಟಿನ ವಿರುದ್ಧ ಹೋರಾಟಕ್ಕಾಗಿ ೨೦ ಲಕ್ಷ ಕೋಟಿ ರೂಪಾಯಿಗಳ ವಿಶೇಷ ಆರ್ಥಿಕ ಕೊಡುಗೆ ಪ್ರಕಟಿಸಿದ ತಮ್ಮ ಭಾಷಣದಲ್ಲಿ ಹೇಳಿದ್ದರು.

ಆತ್ಮ ನಿರ್ಭರ ಭಾರತ (ಸ್ವಾವಲಂಬಿ ಭಾರತ) ನಿರ್ಮಾಣಕ್ಕೆ ಪ್ರಧಾನಿಯವರು ನೀಡಿರುವ ಒತ್ತು, ’ಸ್ವದೇಶೀ ಮಾದರಿ ಅಭಿವೃದ್ಧಿಗೆ ಕೊರೋನಾ ನಂತರದ ಯುಗದಲ್ಲಿ ಒತ್ತು ನೀಡಲು ಆರ್ಎಸ್ಎಸ್  ನೀಡಿದ ಸಲಹೆಗೆ ಅನುಗುಣವಾಗಿದೆ ಎಂದು ಭಾವಿಸಲಾಗಿದೆ.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್ ಎಸ್ ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಸೇರಿದಂತೆ ಆರ್ಎಸ್ ಎಸ್ ಹಲವಾರು ಪ್ರಮುಖರು ಕೋವಿಡ್-೧೯ ನಂತರದ ವಿಶ್ವ ವ್ಯವಸ್ಥೆಯ ಬಗ್ಗೆ ಮಾತನಾಡುತ್ತಾ ಸ್ವದೇಶೀ ಅಭಿಯಾನಕ್ಕೆ ಒತ್ತು ನೀಡುವ ಬಗ್ಗೆ ಒಲವು ವ್ಯಕ್ತ ಪಡಿಸಿದ್ದರು. ಪ್ರಧಾನಿ ಮೋದಿ ಅವರೂ ಮಂಗಳವಾರ ತಮ್ಮ ಭಾಷಣದಲ್ಲಿ ಇದನ್ನು ಪ್ರಸ್ತಾಪಿಸಿದ್ದರು.

ಏಪ್ರಿಲ್ ೨೬ರಂದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರುಸ್ವಾವಲಂಬನೆ ಮತ್ತುಸ್ವದೇಶೀಗೆ ರಾಷ್ಟ್ರೀಯ ಮರುನಿರ್ಮಾಣದ ಮುಂದಿನ ಹಂತದಲ್ಲಿ ಒತ್ತು ನೀಡುವಂತೆ  ಕರೆ ನೀಡಿದ್ದರು.

ಸ್ವಾವಲಂಬನೆಯು ಅಭಿವೃದ್ಧಿಯ ಹೊಸ ಮಂತ್ರವಾಗಿದ್ದು,  ಇದು ಆರ್ಥಿಕ ವ್ಯವಸ್ಥೆಯನ್ನು ಉದ್ಯೋಗ, ಇಂಧನ ದಕ್ಷತೆ ಮತ್ತು ಪರಿಸರ ಸ್ನೇಹಿ ಎಂದು ಸೂಚಿಸುತ್ತದೆ - ಇದು ರಾಷ್ಟ್ರೀಯ ಪುನರ್ನಿರ್ಮಾಣದ ಮುಂದಿನ ಹಂತವಾಗಿರುತ್ತದೆ. ಬಿಕ್ಕಟ್ಟಿನ ಸಮಯದಲ್ಲಿ ಸಹ, ಕೆಲವು ಮೂಲಭೂತ ಸತ್ಯಗಳನ್ನು ಪರೀಕ್ಷಿಸಲಾಗುತ್ತಿದೆ. ನಾವು ರಾಷ್ಟ್ರೀಯ ಪುನರ್ನಿರ್ಮಾಣದ ಯೋಜನೆಯನ್ನು ಸ್ವಾವಲಂಬನೆಯ ಮೂಲಭೂತ ತತ್ತ್ವದೊಂದಿಗೆ ತೆಗೆದುಕೊಳ್ಳಬೇಕು ಎಂದು ಸ್ವದೇಶಿ ಸಂಸ್ಕಾರಗಳನ್ನುಪ್ರಚೋದಿಸುವ ಅಗತ್ಯತೆಯ ಬಗ್ಗೆ ಮಾತನಾಡುತ್ತಾ ಭಾಗವತ್ ಹೇಳಿದ್ದರು.

No comments:

Advertisement