My Blog List

Tuesday, May 12, 2020

ಭಾರತದಲ್ಲೇ ಕೊರೋನಾ ಸಾವು ಅತ್ಯಂತ ಕಡಿಮೆ

ಭಾರತದಲ್ಲೇ  ಕೊರೋನಾ ಸಾವು ಅತ್ಯಂತ ಕಡಿಮೆ
ನವದೆಹಲಿ: ಇಡೀ ವಿಶ್ವದಲ್ಲೇ ಕೋವಿಡ್-೧೯ ಸಾವಿನ ಪ್ರಮಾಣ ಭಾರತದಲ್ಲಿ ಅತ್ಯಂತ ಕಡಿಮೆ. ವಿಶ್ವದಲ್ಲಿ ಕೋವಿಡ್ ಸಾವಿನ ಪ್ರಮಾಣ ಶೇಕಡಾ ೭.೫ ಆಗಿದ್ದರೆ, ಭಾರತದಲ್ಲಿ ಅದು ಶೇಕಡಾ ೩.೨, ದೇಶದ ಕೆಲವು ರಾಜ್ಯಗಳಲ್ಲಿ ಈ ಪ್ರಮಾಣ ಇದಕ್ಕಿಂತಲೂ ಕಡಿಮೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷ ವರ್ಧನ್ ಅವರು  2020 ಮೇ 12ರ ಮಂಗಳವಾರ ಇಲ್ಲಿ ಹೇಳಿದರು.

ಭಾರತದಲ್ಲಿ ಕೊರೋನಾ ಸಾವಿನ ಪ್ರಕರಣಗಳ ಸಂಖ್ಯೆ ಮಂಗಳವಾರ ೭೦,೦೦೦ಕ್ಕೆ ಏರಿದ್ದು, ಕಳೆದ ೨೪ ಗಂಟೆಗಳಲ್ಲಿ ೨,೨೯೩ ಹೊಸ ಪ್ರಕರಣಗಳು ಮತ್ತು ೮೭ಸಾವುಗಳು ಸಂಭವಿಸಿವೆ. ೨೨,೪೫೪ ಮಂದಿ ಗುಣಮುಖರಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ ೪೬,೦೦೮ ಆಗಿದೆ.

ವಿಶ್ವಾದ್ಯಂತ ಕೊರೋನಾವೈರಸ್ ಸೋಂಕಿvರು ೪೨,೯೭,೩೭೭, ಸಾವು ೨,೮೯,೧೦೧
ಚೇತರಿಸಿಕೊಂಡವರು- ೧೫,೪೫,೭೪೫
ಅಮೆರಿಕ ಸೋಂಕಿತರು ೧೩,೯೦,೩೯೨, ಸಾವು ೮೨,೦೯೬
ಸ್ಪೇನ್ ಸೋಂಕಿತರು ೨,೬೯,೫೨೦, ಸಾವು ೨೬,೯೨೦
ಇಟಲಿ ಸೋಂಕಿತರು ೨,೧೯,೮೧೪,  ಸಾವು ೩೦,೭೩೯
ಜರ್ಮನಿ ಸೋಂಕಿತರು ೧,೭೨,೭೧೨, ಸಾವು ೭,೬೬೭
ಚೀನಾ ಸೋಂಕಿತರು ೮೨,೯೧೯, ಸಾವು ೪,೬೩೩
ಇಂಗ್ಲೆಂಡ್ ಸೋಂಕಿತರು ೨,೨೬,೪೬೩, ಸಾವು ೩೨,೬೯೨
ಅಮೆರಿಕದಲ್ಲಿ ೩೦೧, ಇರಾನಿನಲ್ಲಿ ೪೮, ಬೆಲ್ಜಿಯಂನಲ್ಲಿ ೫೪, ಸ್ಪೇನಿನಲ್ಲಿ ೧೭೬, ನೆದರ್ ಲ್ಯಾಂಡ್ಸ್‌ನಲ್ಲಿ ೫೪, ರಶ್ಯಾದಲ್ಲಿ ೧೦೭, ಸ್ವೀಡನ್‌ನಲ್ಲಿ ೫೭, ಮೆಕ್ಸಿಕೋದಲ್ಲಿ ೧೦೮, ಇಂಗ್ಲೆಂಡಿನಲ್ಲಿ ೬೨೭ ಒಟ್ಟಾರೆ ವಿಶ್ವಾದ್ಯಂತ ೧,೯೬೪ ಮಂದಿ ಒಂದೇ ದಿನ ಸಾವನ್ನಪ್ಪಿದ್ದಾರೆ.

No comments:

Advertisement