ಅಮೆರಿಕದಿಂದ
ಭಾರತಕ್ಕೆ
೩೪೦ ಮಿಲಿಯನ್ ಡಾಲರ್ ಮೌಲ್ಯದ ಸಾಲ, ಹೂಡಿಕೆ
ನವದೆಹಲಿ: ಕೋವಿಡ್ -೧೯ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ವಿಶ್ವಾದ್ಯಂತ ಕೆಳವರ್ಗದ ಸಮುದಾಯಗಳನ್ನು ಉನ್ನತಿಗೇರಿಸುವ ಪ್ರಯತ್ನದ ಭಾಗವಾಗಿ ಭಾರತೀಯ ಸಂಸ್ಥೆಗಳು ಮತ್ತು ಸಂಘಟನೆಗಳಿಗೆ ೩೪೦ ದಶಲಕ್ಷ ಡಾಲರುಗಳಿಂತಲೂ (೩೪ ಕೋಟಿ ಡಾಲರ್) ಹೆಚ್ಚಿನ ಮೌಲ್ಯದ ಸಾಲ ಮತ್ತು ಹೂಡಿಕೆಗಳನ್ನು ನೀಡಲು ಅಮೆರಿಕ 2020 ಜೂನ್ 05ರ ಶನಿವಾರ ಒಪ್ಪಿಗೆ ನೀಡಿತು.
ಈ
ಹೆಚ್ಚಿನ ಸಾಲಗಳು ಆಫ್ರಿಕಾ, ಲ್ಯಾಟಿನ್ ಅಮೆರಿಕ, ಇಂಡೋ-ಪೆಸಿಫಿಕ್ ಮತ್ತು ಉದಯೋನ್ಮುಖ ಮಾರುಕಟ್ಟೆಗಳಲ್ಲಿ ಅಭಿವೃದ್ಧಿಯನ್ನು ಹೆಚ್ಚಿಸಲು ಅಮೆರಿಕ ಅಂತಾರಾಷ್ಟ್ರೀಯ ಅಭಿವೃದ್ಧಿ ಹಣಕಾಸು ನಿಗಮ (ಯುಎಸ್ ಇಂಟರ್ ನ್ಯಾಷನಲ್ ಡೆವಲಪ್ಮೆಂಟ್ ಫೈನಾನ್ಸ್ ಕಾರ್ಪೊರೇಷನ್ (ಡಿಎಫ್ಸಿ) ನಿರ್ದೇಶಕರ ಮಂಡಳಿಯು ಇತ್ತೀಚೆಗೆ ಅನುಮೋದಿಸಿದ ೧ ಬಿಲಿಯನ್ ಡಾಲರ್
ಹೂಡಿಕೆಗಳ ಭಾಗವಾಗಿದೆ.
ಕೋವಿಡ್
-೧೯ ರ ಪ್ರಭಾವದಿಂದ ಹಲವಾರು
ಯೋಜನೆಗಳು ಹಿಮ್ಮೆಟ್ಟುತ್ತಿರುಂತಹ ಅಭಿವೃದ್ಧಿಶೀಲ ರಾಷ್ಟ್ರಗಳನ್ನು ಈ ಯೋಜನೆಯ ಬೆಂಬಲಿಸುತ್ತದೆ
ಮತ್ತು ಈಕ್ವಿಟಿ ಹಾಗೂ ತಾಂತ್ರಿಕ ನೆರವು ಬಳಸುವ ಮೊದಲ ವಹಿವಾಟುಗಳನ್ನು ಒಳಗೊಂಡಿರುತ್ತದೆ ಎಂದು ಅಮೆರಿಕ ರಾಯಭಾರ ಕಚೇರಿಯ ಹೇಳಿಕೆ ತಿಳಿಸಿದೆ.
ಭಾರತದಲ್ಲಿ
ಇಂಧನ ಸುರಕ್ಷತೆಯನ್ನು ಬಲಪಡಿಸುವ ಉದ್ದೇಶದಿಂದ ರಾಜಸ್ಥಾನದಲ್ಲಿ ೩೦೦ ಮೆಗಾವ್ಯಾಟ್ ಸೌರ ವಿದ್ಯುತ್ ಸ್ಥಾವರವನ್ನು ನಿರ್ಮಿಸಲು ಮತ್ತು ನಿರ್ವಹಿಸಲು ರೆನ್ಯೂ ಪವರ್ಗೆ ಸಹಾಯ ಮಾಡಲು
೨ ೧೪೨ ಮಿಲಿಯನ್ ಡಾಲರ್ ಸಾಲವನ್ನು ಒದಗಿಸಲಾಗುವುದು. ಮತ್ತೊಂದು ೫೦ ಮಿಲಿಯನ್ ಡಾಲರ್
ಸಾಲವು ಸೀತಾರಾ ಸೋಲಾರ್ ಎನರ್ಜಿ ಪ್ರೈವೇಟ್ ಲಿಮಿಟೆಡ್ಗೆ ರಾಜಸ್ಥಾನದಲ್ಲಿ ೧೦೦
ಮೆಗಾವ್ಯಾಟ್ ಸೌರ ವಿದ್ಯುತ್ ಸ್ಥಾವರವನ್ನು ನಿರ್ಮಿಸಲು ಮತ್ತು ನಿರ್ವಹಿಸಲು ನೆರವಾಗುವ ಮೂಲಕ ವಿದ್ಯುತ್ ಸರಬರಾಜನ್ನು ಹೆಚ್ಚಿಸಲು ಅನುವು ಮಾಡಿಕೊಡಲಿದೆ.
೫೦
ಮಿಲಿಯನ್ ಡಾಲರ್ ಸಾಲವು ಉತ್ತರ ಆರ್ಕ್ ಕ್ಯಾಪಿಟಲ್ಗೆ ನೀರು, ನೈರ್ಮಲ್ಯ
ಮತ್ತು ಆಹಾರ ಒದಗಿಸಲು ಅಥವಾ
ಮಹಿಳೆಯರ ಆರ್ಥಿಕ ಸಬಲೀಕರಣವನ್ನು ಮುನ್ನಡೆಸುವ ವ್ಯವಹಾರಗಳಿಗೆ ಸಾಲವನ್ನು ವಿಸ್ತರಿಸಲು ಸಹಾಯ ಮಾಡುತ್ತದೆ.
೨೭.೩ ಮಿಲಿಯನ್ ಡಾಲರ್
ಸಾಲವು ಪರ್ಯಾಪ್ತ ಸೋಲಾರ್
ಎನರ್ಜಿ ಪ್ರೈವೇಟ್ ಲಿಮಿಟೆಡ್ಗೆ ಗುಜರಾತ್ನಲ್ಲಿ
೫೦ ಮೆಗಾವ್ಯಾಟ್ ಸೌರ ವಿದ್ಯುತ್ ಸ್ಥಾವರವನ್ನು ನಿರ್ಮಿಸಲು ಮತ್ತು ನಿರ್ವಹಿಸಲು ಅನುವು ಮಾಡಿಕೊಡುತ್ತದೆ, ಇದೇ ವೇಳೆಗೆ ವರ್ಲ್ಡ್ ಬಿಸಿನೆಸ್ ಕ್ಯಾಪಿಟಲ್ಗೆ ೧೪.೬
ಮಿಲಿಯನ್ ಡಾಲರ್ ಸಾಲ ಖಾತರಿ ವಿದ್ಯಾರ್ಥಿ ಸಾಲ ಕಾರ್ಯಕ್ರಮದ ವಿಸ್ತರಣೆಗೆ ಲಭಿಸುತ್ತದೆ ಮತ್ತು ಶಿಕ್ಷಣದ ವಿಸ್ತರಣೆಗೆ ನೆರವಾಗುತ್ತದೆ.
ಭಾರತದಾದ್ಯಂತ
ಮೀನು, ಮಾಂಸ ಮತ್ತು ಉತ್ಪನ್ನಗಳನ್ನು ಕೈಗೆಟಕುವಂತೆ ಸರಬರಾಜು ಮಾಡುವ ನಿಟ್ಟಿನಲ್ಲಿ ನೆರವಾಗಲು ಫ್ರೆಶ್ಟೋಹೋಮ್ಗೆ ೨೦ ಮಿಲಿಯನ್
ಡಾಲರ್ವರೆಗಿನ ಪಾಲು ಒದಗಿಸಲಾಗುವುದು. ಆಹಾರ ಭದ್ರತೆಯನ್ನು ಬಲಪಡಿಸುವುದರ ಜೊತೆಗೆ, ಈ ಯೋಜನೆಯು ೧,೫೦೦ ಕ್ಕೂ ಹೆಚ್ಚು ರೈತರು ಮತ್ತು ಮೀನುಗಾರರಿಗೆ ಸಹಕಾರಿಯಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.
ದಕ್ಷಿಣ
ಏಷ್ಯಾ ಬೆಳವಣಿಗೆಯ ನಿಧಿ ೨ಕ್ಕೆ ಒದಗಿಸಲಾಗುವ ೩೦ ದಶಲಕ್ಷ ಡಾಲರ್
ಹೂಡಿಕೆಯು ಇಂಧನ, ನೀರು ಮತ್ತು ಆಹಾರ ಕ್ಷೇತ್ರಗಳಲ್ಲಿನ ವ್ಯವಹಾರಗಳನ್ನು ಬೆಂಬಲಿಸುತ್ತದೆ. ಈ ವಿರಳ ಸಂಪನ್ಮೂಲಗಳ
ಸುಸ್ಥಿರ ವಿಸ್ತರಣೆ ಮತ್ತು ಸಮರ್ಥ ಬಳಕೆಯನ್ನು ಉತ್ತೇಜಿಸುವ ಉದ್ದೇಶವನ್ನು ಈ ನಿಧಿ ಹೊಂದಿದೆ.
ಸ್ಟೆಲ್ಲಾಪ್ಸ್
ಟೆಕ್ನಾಲಜೀಸ್ಗೆ ೨.೭ ಮಿಲಿಯನ್ ಡಾಲರ್
ಸಾಲ ಖಾತರಿಯು ಕ್ಷೀರೋದ್ಯಮ ಮೌಲ್ಯ ಸರಪಳಿಯನ್ನು ಸುಗಮಗೊಳಿಸುವ ನವೀನ ಪರಿಹಾರಗಳನ್ನು ನೀಡುತ್ತದೆ. ಮತ್ತೊಂದು ೧೦
ಮಿಲಿಯನ್ ಡಾಲರ್ ಸಾಲವು ಮಿಲ್ಕ್ ಮಂತ್ರ ಎಂಬ ಕ್ಷೀರೋದ್ಯಮ ಕಂಪೆನಿಗೆ ಲಭಿಸುತ್ತದೆ.
ಪೂರ್ವ ಭಾರತದಲ್ಲಿ ಕ್ಷೀರೋತ್ಪನ್ನಗಳನ್ನು ಉತ್ಪಾದಿಸಲು ಮತ್ತು ಮಾರಾಟ ಮಾಡಲು ಮಿಲ್ಕ್ ಮಂತ್ರಕ್ಕೆ ೩,೭೧,೦೦೦ ಡಾಲರ್ವರೆಗಿನ ತಾಂತ್ರಿಕ ನೆರವು ನೀಡುತ್ತದೆ.
No comments:
Post a Comment