My Blog List

Tuesday, June 30, 2020

೮೦ ಕೋಟಿ ಜನರಿಗೆ ನವೆಂಬರ್‌ವರೆಗೂ ಉಚಿತ ರೇಷನ್: ಪ್ರಧಾನಿ

೮೦ ಕೋಟಿ ಜನರಿಗೆ ನವೆಂಬರ್ವರೆಗೂ ಉಚಿತ ರೇಷನ್: ಪ್ರಧಾನಿ

ಮಾಸ್ಕ್, ಅಂತರ ಕಡ್ಡಾಯ ಪಾಲನೆಗೆ ಆಗ್ರಹ

ನವದೆಹಲಿ: ಕೊರೋನಾವೈರಸ್ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ದೇಶದ ೮೦ ಕೋಟಿ ಜನರಿಗೆ ನೆರವಾಗಲು ಪ್ರಧಾನಮಂತ್ರಿ ಗರೀಬ ಕಲ್ಯಾಣ ಅನ್ನ ಯೋಜನೆಯನ್ನು (ಪಿಎಂಜಿಕೆಎವೈ) ನವೆಂಬರ್ ಅಂತ್ಯದವರೆಗೆ ವಿಸ್ತರಿಸಲಾಗುವುದು ಮತ್ತು ಉಚಿತ ಪಡಿತರ ಒದಗಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು 2020 ಜೂನ್ 30ರ ಮಂಗಳವಾರ ಪ್ರಕಟಿಸಿದರು. ಇದೇ ವೇಳೆಗೆ ಮಾಸ್ಕ್ ಧರಿಸುವುದು ಮತ್ತು ಅಂತರ ಪಾಲನೆಯನ್ನು ಕಡ್ಡಾಯವಾಗಿ ಅನುಸರಿಸಲು ಅವರು ಜನರನ್ನು ಆಗ್ರಹಿಸಿದರು.

ಅನ್ ಲಾಕ್ ಆರಂಭದ ಮುನ್ನಾದಿನ ರಾಷ್ಟ್ರವನ್ನು ಉದ್ದೇಶಿಸಿ ಭಾಷಣ ಮಾಡಿದ ಪ್ರಧಾನಿ ಉಚಿತ ಪಡಿತರದ ಜೊತೆಗೆ  ಒಂದು ಕಿಲೋ ಗ್ರಾಂ ಕಡಲೆಕಾಳನ್ನೂ ಒದಗಿಸಲಾಗುವುದು ಎಂದು ಮೋದಿ ಹೇಳಿದರು. ಮುಂದಿನ ಐದು ತಿಂಗಳ ಅವಧಿಗೆ ಪಿಎಂಜಿಕೆಎವೈ ಯೋಜನೆ ವಿಸ್ತರಣೆಯಿಂದ ಬೊಕ್ಕಸದ ಮೇಲೆ ೯೦ ಸಾವಿರ ಕೋಟಿ ರೂಪಾಯಿಗಳ ಹೆಚ್ಚಿನ ಹೊರೆ ಬೀಳುವುದು ಎಂದು ಪ್ರಧಾನಿ ನುಡಿದರು.

ಇನ್ನೂ ಐದು ತಿಂಗಳ ಕಾಲ ೮೦ ಕೋಟಿ ಜನರು ಉಚಿತ ಪಡಿತರ ಪಡೆಯಲಿದ್ದಾರೆ ಎಂದು ಹೇಳಿದ ಪ್ರಧಾನಿ ಕೊರೋನಾವೈರಸ್ ಪ್ರಸರಣ ತಡೆಗಾಗಿ ರಾಷ್ಟ್ರವ್ಯಾಪಿ ದಿಗ್ಬಂಧನ (ಲಾಕ್ ಡೌನ್) ಜಾರಿಗೊಳಿಸಿದ ದಿನದಿಂದ ಇಲ್ಲಿಯವರೆಗೆ ಕೇಂದ್ರ ಸರ್ಕಾರ ಮಾಡಿದ ಕೆಲಸಗಳನ್ನು ವಿವರಿಸಿದರು.

ಪಿಎಂಜಿಕೆಎವೈ ಅಡಿಯಲ್ಲಿ .೭೫ ಲಕ್ಷ ಕೋಟಿ ರೂಪಾಯಿ ಮೊತ್ತದ ಕೊಡುಗೆಯನ್ನು ನಾವು ಪ್ರಕಟಿಸಿದ್ದೆವು. ಕಳೆದ ಮೂರು ತಿಂಗಳಲ್ಲಿ, ನಾವು ೩೧,೦೦೦ ಕೋಟಿ ರೂಪಾಯಿಗಳನ್ನು ೨೦ ಕೋಟಿ ಬಡ ಕುಟುಂಬಗಳ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಿದ್ದೇವೆ. ಅಲ್ಲದೆ, ಕೋಟಿಗೂ ಹೆಚ್ಚು ರೈತರ ಬ್ಯಾಂಕು ಖಾತೆಗಳಿಗೆ ೧೮,೦೦೦ ಕೋಟಿ ರೂಪಾಯಿಗಳನ್ನು ಜಮಾ ಮಾಡಿದ್ದೇವೆಎಂದು ಪ್ರಧಾನಿ ನುಡಿದರು.

ಮಾರ್ಚ್ ತಿಂಗಳಲ್ಲಿ ಸಾಂಕ್ರಾಮಿಕ ಆರಂಭವಾದಂದಿನಿಂದ ದೇಶವನ್ನು ಉದ್ದೇಶಿಸಿ ಮಾಡಿದ ತಮ್ಮ ಆರನೇ ಭಾಷಣದಲ್ಲಿ ಪ್ರಧಾನಿ ಮೋದಿ ಸಂಪೂರ್ಣವಾಗಿ ಕೊರೋನಾವೈರಸ್ ವಿರುದ್ಧದ ಹೋರಾಟ ಮತ್ತು ಕೊರೋನಾ ಬಿಕ್ಕಟ್ಟಿನ ಪರಿಣಾಮವನ್ನು ಕನಿಷ್ಠಗೊಳಿಸಲು ಸರ್ಕಾರ ಕೈಗೊಂಡ ಕ್ರಮಗಳ ಮೇಲೆ ಬೆಳಕು ಚೆಲ್ಲಿದರು.

ಬೇಗನೇ ದಿಗ್ಬಂಧನ ಜಾರಿಗೊಳಿಸಲು ಸರ್ಕಾರ ಕೈಗೊಂಡ ನಿರ್ಧಾರದ ಪರಿಣಾಮವಾಗಿ ಜಗತ್ತಿನ ಕೊರೋನಾ ಸಾವಿಗೆ ಹೋಲಿಸಿದರೆ ಭಾರತದಲ್ಲಿ ಸಾವಿನ ಪ್ರಮಾಣ ಅತ್ಯಂತ ಕಡಿಮೆ ಇದೆ ಎಂದು ಪ್ರಧಾನಿ ಪುನರುಚ್ಚರಿಸಿದರು.

ಕಲ್ಯಾಣ ಯೋಜನೆಗಳ ಯಶಸ್ವಿಗಾಗಿ ಪ್ರಧಾನಿಯವರು ರೈತರು ಮತ್ತು ಪ್ರಾಮಾಣಿಕ ತೆರಿಗೆದಾತರು ನೀಡಿದ  ಕೊಡುಗೆಯನ್ನು ಶ್ಲಾಘಿಸಿದರು.

ಪಿಎಂಜಿಕೆಎವೈ . ಲಕ್ಷ ಕೋಟಿ ರೂಪಾಯಿ ಮೊತ್ತದ ವಿಶೇಷ ಆರ್ಥಿಕ ಕೊಡುಗೆಯಾಗಿದ್ದು, ಆರ್ಥಿಕತೆ ಮತ್ತು ಬಡವರ ಮೇಲೆ ದಿಗ್ಬಂಧನದ ಪರಿಣಾಮವನ್ನು ಕನಿಷ್ಠಗೊಳಿಸುವ ಸಲುವಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇದನ್ನು ಪ್ರಕಟಿಸಿದ್ದರು.

ಹಾಲಿ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯು ವ್ಯಕ್ತಿಯೊಬ್ಬನಿಗೆ ಮಾಸಿಕ ಕಿ.ಗ್ರಾಂ. ಆಹಾರ ಧಾನ್ಯವನ್ನು ದೇಶದ ಬಡವರಿಗೆ ಕಿ.ಗ್ರಾಂ.ಗೆ - ರೂಪಾಯಿ ಸಬ್ಸಿಡಿ ದರದಲ್ಲಿ ಒದಗಿಸುತ್ತದೆ. ಯೋಜನೆಯ ಅಡಿಯಲ್ಲಿ ಒದಗಿಸಲಾಗುವ ಪಡಿತರ ಕೋಟಾವನ್ನು ಮಾರ್ಚ್ ತಿಂಗಳಲ್ಲಿ ಮುಂದಿನ ಮೂರು ತಿಂಗಳಿಗೆ ವಿಸ್ತರಿಸಿ, ಒದಗಿಸಲಾಗುವ ಆಹಾರ ಧಾನ್ಯದ ಪ್ರಮಾಣವನ್ನು ಕಿಲೋ ಗ್ರಾಂಗಳಿಗೆ ಹೆಚ್ಚಿಸಲಾಗಿತ್ತು.

ಮಾರ್ಚ್ ೨೪ರಂದು ಜಾರಿಗೊಳಿಸಲಾದ ದಿಗ್ಬಂಧನದ ಪರಿಣಾಮವಾಗಿ ಅಂಗಡಿಗಳು, ಕಾರ್ಖಾನೆಗಳು ಮತ್ತು ನಿರ್ಮಾಣ ಸ್ಥಳUಳಲ್ಲಿ ಕೆಲಸ ಸ್ಥಗಿತಗೊಂಡಿ ಲಕ್ಷಾಂತರ ಮಂದಿ ವಲಸೆ ಕಾರ್ಮಿಕರು ಕೆಲಸ ಕಳೆದುಕೊಂಡಿದ್ದರು.

ಲಡಾಖ್ನಲ್ಲಿ ಚೀನಾದ ಜೊತೆಗೆ ಗಡಿ ಸಂಘರ್ಷ ಮತ್ತು ದೇಶದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಕೊರೊನಾ ವೈರಸ್ ಪಿಡುಗಿನ ಸಂದರ್ಭದಲ್ಲೇ ಮೋದಿ ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಿದರು.

ದೇಶದಲ್ಲಿ ನಿರ್ಬಂಧ ಸಡಿಲಿಸುವಅನ್ ಲಾಕ್ .ಮಾರ್ಗಸೂಚಿಯನ್ನು ಕೇಂದ್ರ ಸರ್ಕಾರ ಜೂನ್ ೨೯ರ ಭಾನುವಾರ ಪ್ರಕಟಿಸಿತ್ತು. ಇದರ ಜೊತೆಗೆ ಚೀನಾದ ೫೯ ಆಪ್ಗಳಿಗೆ ಷೇಧ ಹೇರುವ ಮೂಲಕ ಗಡಿ ತಂಟೆಯ ವಿಚಾರದಲ್ಲಿ ಬಲ ಪ್ರಯೋಗಕ್ಕೆ ಮುಂದಾದರೆ ಕಠಿಣ ನಿರ್ಧಾರ ಕೈಗೊಳ್ಳಲು ಹಿಂಜರಿಯುವುದಿಲ್ಲ ಎಂಬ ಸಂದೇಶವನ್ನೂ ರವಾನಿಸಿತ್ತು.

ಸರ್ಕಾರ ನಿಮಗಾಗಿ ಶ್ರಮಿಸುತ್ತಿದೆ. ದಯವಿಟ್ಟು ಸಹಕರಿಸಿ. ಮಾಸ್ಕ್ ಧರಿಸುವುದನ್ನು ಮರೆಯಬೇಡಿ, ಅಂತರ ಕಾಪಾಡಿಕೊಳ್ಳಿಎಂದು ಪ್ರಧಾನಿ ತಮ್ಮ ಭಾಷಣದಲ್ಲಿ ಕಳಕಳಿಯ ಮನವಿ ಮಾಡಿದರು.

ನಾವು ಸತತ ಕೆಲಸ ಮಾಡುತ್ತೇವೆ. ಆರ್ಥಿಕ ಚಟುವಟಿಕೆಗಳನ್ನು ಇನ್ನಷ್ಟು ಮುಂದಕ್ಕೆ ತರುತ್ತೇವೆ. ಆತ್ಮ ನಿರ್ಭರ ಭಾರತ ನಿರ್ಮಿಸಲು ಹಗಲಿರುಳು ಶ್ರಮಿಸುತ್ತೇವೆ. ನಮ್ಮ ಅನ್ನದಾತರಾದ ರೈತರು ಮತ್ತು ನಿಷ್ಠಾವಂತ ತೆರಿಗೆ ಪಾವತಿದಾರರಿಗೆ ನೆರವಾಗಲು ಸರ್ಕಾರ ಬದ್ಧವಾಗಿದೆ. ಇವರ ನೆರವಿನಿಂದ ದೇಶ ಮಹತ್ವದ ಮುನ್ನಡೆ ಸಾಧಿಸಿದೆ. ನೀವು ನಿಷ್ಠೆಯಿಂದ ತೆರಿಗೆ ತುಂಬಿದ್ದರಿಂದಲೇ ದೇಶದ ಬಡವರು ಇಷ್ಟು ದೊಡ್ಡ ಸಂಕಟವನ್ನು ಎದುರಿಸಲು ಸಾಧ್ಯವಾಗಿದೆ. ಬಡವರ ಜೊತೆಗೆ ದೇಶದ ಎಲ್ಲ ರೈತರು ಮತ್ತು ತೆರಿಗೆ ಪಾವತಿದಾರರನ್ನು ನಮಿಸುತ್ತೇನೆಎಂದು ಪ್ರಧಾನಿ ಹೇಳಿದರು.

ಬಡವರು ಮತ್ತು ಅಗತ್ಯವಿರುವ ಜನರಿಗಾಗಿ ಸಾಕಷ್ಟು ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ದೇಶದ ಎಲ್ಲರಿಗೂ ಒಂದೇ ರೇಷನ್ ಕಾರ್ಡ್ ಕೊಡುವಒಂದು ದೇಶ, ಒಂದು ರೇಷನ್ ಕಾರ್ಡ್ಯೋಜನೆಯನ್ನೂ ಶೀಘ್ರ ಜಾರಿ ಮಾಡಲಿದ್ದೇವೆ ಎಂದು ಪ್ರಧಾನಿ ನುಡಿದರು.

ಜುಲೈ ಗುರುಪೂರ್ಣಿಮೆ, ಶ್ರಾವಣ ಶೀಘ್ರ ಆರಂಭವಾಗಲಿದೆ. ರಕ್ಷಾ ಬಂಧನ, ಗಣೇಶ ಚತುರ್ಥಿ, ಓಣಂ, ನವರಾತ್ರಿ, ದಸರಾ, ದೀಪಾವಳಿಯಂಥ ಹಬ್ಬಗಳು ಸಾಲುಸಾಲಾಗಿ ಬರುತ್ತಿವೆ.ಇದು ಖರ್ಚಿನ ಸಮಯ. ಅಂಶವನ್ನು ಗಮನದಲ್ಲಿರಿಸಿಕೊಂಡು ನಾವುಪ್ರಧಾನ ಮಂತ್ರಿ ಗರೀಬ್ ಕಲ್ಯಾಣಯೋಜನೆ ಮತ್ತು ಇತರ ಯೋಜನೆಯಗಳನ್ನು ದೀಪಾವಳಿವರೆಗೆ ಅಂದರೆ ನವೆಂಬರ್ ಅಂತ್ಯದವರೆಗೂ ವಿಸ್ತರಿಸಿದ್ದೇವೆ. ಮಹತ್ವದ ಯೋಜನೆಯು ಜುಲೈ, ಆಗಸ್ಟ್, ಸೆಪ್ಟೆಂಬರ್, ಅಕ್ಟೋಬರ್ ಮತ್ತು ನವೆಂಬರ್ ತಿಂಗಳವರೆಗೆ ಚಾಲ್ತಿಯಲ್ಲಿರುತ್ತವೆ. ೮೦ ಕೋಟಿ ಜನರಿಗೆ ಉಚಿತ ಪಡಿತರ ನೀಡುವ ಜೊತೆಗೆ ಒಂದು ಕೆಜಿ ಕಡಲೆಕಾಳನ್ನೂ ಕೊಡುತ್ತೇವೆ. ಕಾರ್ಯಕ್ಕಾಗಿ ಕೇಂದ್ರ ಸರ್ಕಾರವು ಲಕ್ಷ ಕೋಟಿ ವ್ಯಯಿಸುತ್ತಿದೆ ಎಂದು ಪ್ರಧಾನಿ ವಿವರಿಸಿದರು.

ಇದೀಗ ದೇಶದಲ್ಲಿ ಮಳೆಗಾಲ ಶುರುವಾಗಿದೆ. ಕೃಷಿ ಕ್ಷೇತ್ರದಲ್ಲಿ ಈಗ ಚುರುಕಿನ ಚಟುವಟಿಕೆ ಕಂಡು ಬರುತ್ತಿದೆ. ಇತರ ಕ್ಷೇತ್ರಗಳಲ್ಲಿ ಈಗ ಅಂಥ ಚಟುವಟಿಕೆಗಳು ಇಲ್ಲ ಎಂದು ಮೋದಿ ನುಡಿದರು.

ಹಳ್ಳಿಗಳಲ್ಲಿ ಉದ್ಯೋಗ ಒದಗಿಸಲು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನಾ ಅಡಿಯಲ್ಲಿ ಕ್ರಮಗಳನ್ನು ಕೈಗೊಂಡಿದ್ದೇವೆ. ಕೊರೊನಾದೊಂದಿಗೆ ಹೋರಾಡುತ್ತಿರುವ ಭಾರತದ ಬಡವರಿಗೆ ತಿಂಗಳ ಪಡಿತರ ನೀಡಿದ್ದೇವೆ. ಪ್ರತಿ ಕುಟುಂಬಕ್ಕೂ ಪ್ರತಿ ತಿಂಗಳು ಒಂದು ಕಿ,ಗ್ರಾಂ. ಬೇಳೆಯನ್ನೂ ಕೊಟ್ಟಿದ್ದೇವೆ. ಅಮೆರಿಕ ಮತ್ತು ಐರೋಪ್ಯ ಒಕ್ಕೂಟದ ಒಟ್ಟು ಜನಸಂಖ್ಯೆಗಿಂತಲೂ ಹೆಚ್ಚು ಜನರಿಗೆ ನಮ್ಮ ಸರ್ಕಾರಗಳು ಪಡಿತರ ವಿತರಿಸಿವೆ ಎಂದು ಪ್ರಧಾನಿ ನುಡಿದರು.

ಕೇಂದ್ರ ಸರ್ಕಾರವಿರಲಿ, ರಾಜ್ಯ ಸರ್ಕಾರವಿರಲಿ, ನಗರಾಡಳಿತ ಸಂಸ್ಥೆಗಳಿರಲಿ, ಎಲ್ಲ ಹಂತದ ಆಡಳಿತಗಳು ಯಾರೊಬ್ಬರೂ ಹಸಿವಿನಿಂದ ಬಳಲಬಾರದು ಎಂದು ಕಾಳಜಿ ವಹಿಸಿದವು. ಹೀಗಾಗಿಯೇ ಲಾಕ್ಡೌನ್ ನಂತರ ಸರ್ಕಾರವುಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನಾಆರಂಭಿಸಿತು. ಬಡವರಿಗೆ ಅನುಕೂಲ ಕಲ್ಪಿಸುವ ಮಹತ್ವದ ಪ್ಯಾಕೇಜ್ ಘೋಷಿಸಿತು. ಬಡವರ ಜನ್ಧನ್ ಖಾತೆಗಳಿಗೆ ಹಣ ಜಮಾ ಮಾಡಿದ್ದೇವೆ. ರೈತರ ಸಂಕಷ್ಟವನ್ನು ಕಡಿಮೆ ಮಾಡಲು ಯತ್ನಿಸಿದ್ದೇವೆ ಎಂದು ಮೋದಿ ನುಡಿದರು.

ದೇಶದ ಪ್ರಧಾನಿಯಿಂದ ಹಿಡಿದು, ಹಳ್ಳಿಯ ಸಾಮಾನ್ಯ ಪ್ರಜೆಯವರೆಗೆ ಎಲ್ಲರಿಗೂ ನಿಯಮಗಳು ಅನ್ವಯವಾಗುತ್ತವೆ. ನಿಯಮಗಳಿಗಿಂತಲೂ ಮೇಲೆ ಯಾರೊಬ್ಬರೂ ಇಲ್ಲ. ದೇಶದ ನೂರಾರು ಕೋಟಿ ನಾಗರಿಕರ ಜೀವ ಕಾಪಾಡಲೆಂದು ನಾವು ನಿಯಮಗಳನ್ನು ರೂಪಿಸಿದ್ದೇವೆ. ದಿಗ್ಬಂಧನ ಸಂದರ್ಭದಲ್ಲಿ ಬಹಳ ಗಂಭೀರವಾಗಿ ನಿಯಮಗಳನ್ನು ಪಾಲಿಸಿದ್ದೇವೆ. ಮತ್ತೊಮ್ಮೆ ಅಂಥದ್ದೇ ಬದ್ಧತೆ ತೋರುವ ಸಂದರ್ಭ ಬಂದಿದೆ. ವಿಶೇಷವಾಗಿ ಕಂಟೇನ್ಮೆಂಟ್ ವಲಯಗಳಲ್ಲಿ ನಿಯಮಗಳನ್ನು ಬಿಗಿಯಾಗಿ ಜಾರಿ, ಅನುಷ್ಠಾನಕ್ಕೆ ತರಬೇಕಾಗಿದೆ ಎಂದು ಪ್ರಧಾನಿ ಹೇಳಿದರು.

ಕೊರೊನಾ ಜೊತೆಗೆ ಹೋರಾಡುತ್ತಲೇ ನಾವು ಅನ್ಲಾಕ್ನತ್ತ ಬಂದಿದ್ದೇವೆ. ಸಮಯಕ್ಕೆ ಸರಿಯಾಗಿ ಲಾಕ್ ಡೌನ್ ಮಾಡಿದ್ದು ಮತ್ತು ಇತರ ಕ್ರಮಗಳನ್ನು ಜರುಗಿಸಿದ್ದರಿಂದ ಲಕ್ಷಾಂತರ ಜನರ ಜೀವ ಉಳಿಯಿತು. ಕೊರೊನಾ ನಿರ್ವಹಣೆ ವಿಚಾರದಲ್ಲಿ ವಿಶ್ವದ ಹಲವು ದೇಶಗಳಿಗೆ ಹೋಲಿಸಿದರೆ ಭಾರತವು ಸಬಲವಾಗಿದೆ ಎಂದು ಪ್ರಧಾನಿ ಹೇಳಿದರು.

ಆದರೂ ದೇಶದಲ್ಲಿ ಅನ್ಲಾಕ್ . ಶುರುವಾದಾಗ ವ್ಯಕ್ತಿಗಳ ಸಾಮಾಜಿಕ ವ್ಯವಹಾರದಲ್ಲಿ ಸಡಿಲಕೆ ಕಂಡು ಬಂತು. ಮಾಸ್ಕ್ ಧರಿಸದ ನಾಗರಿಕರಿಂದ ೧೩ ಸಾವಿರ ಕೋಟಿ ರೂಪಾಯಿಯಷ್ಟು ದಂಡ ವಸೂಲಿ ಮಾಡಬೇಕಾಯಿತುಎಂದು ಪ್ರಧಾನಿ ವಿಷಾದಿಸಿದರು.

ಆರಂಭದಲ್ಲಿ ನಾವು ಮಾಸ್ಕ್ ಧರಿಸುವುದು, ಎರಡು ಅಡಿ ಅಂತರ ಕಾಪಾಡುವುದು ಮತ್ತು ೨೦ ಸೆಕೆಂಡ್ ಕೈ ತೊಳೆಯುವ ವಿಚಾರದಲ್ಲಿ ಉದಾಸೀನತೆ ತೋರುತ್ತಿರಲಿಲ್ಲ. ಈಗ ಇಂಥ ಕ್ರಮಗಳ ಅಗತ್ಯ ಇನ್ನೂ ಹೆಚ್ಚಾಗಿದೆ ಎಂದು ಮೋದಿ ನುಡಿದರು.

No comments:

Advertisement