Tuesday, June 30, 2020

ಚೀನಾದಲ್ಲಿ ಮುಸ್ಲಿಮ್ ಜನಸಂಖ್ಯೆ ಹದ್ದುಬಸ್ತಿಗೆ ’ಜನಾಂಗೀಯ ನರಮೇಧ’

ಚೀನಾದಲ್ಲಿ ಮುಸ್ಲಿಮ್ ಜನಸಂಖ್ಯೆ ಹದ್ದುಬಸ್ತಿಗೆ  'ಜನಾಂಗೀಯ ನರಮೇಧ

ಬೀಜಿಂಗ್: ಚೀನಾ ಸರ್ಕಾರವು ರಾಷ್ಟ್ರದ ಮುಸ್ಲಿಮ್ ಜನಸಂಖ್ಯೆಯನ್ನು ನಿಗ್ರಹಿಸುವ ಸಲುವಾಗಿ ಉಯಿಘರ್ ಮತ್ತಿತರ ಅಲ್ಪಸಂಖ್ಯಾತರಲ್ಲಿ ಜನನ ಪ್ರಮಾಣ ಕಡಿತಗೊಳಿಲು ಅತ್ಯಂತ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಹ್ಯಾನ್ ಮತ್ತಿತರ ಜನಾಂಗ ವೃದ್ಧಿಗಾಗಿ ಸಂತಾನ ಹೆಚ್ಚಸಲು ಪ್ರೋತ್ಸಾಹ ನೀಡುತ್ತದೆ ಎಂಬ ಮಾಹಿತಿ ಬಹಿರಂಗಕ್ಕೆ ಬಂದಿದೆ.

ಬಲವಂತದ ಜನನ ನಿಯಂತ್ರಣದ ಬಗ್ಗೆ ವೈಯಕ್ತಿಕ ಉಯಿಘರ್ ಮಹಿಳೆಯರು ಮೊತ್ತ ಮೊದಲ ಬಾರಿಗೆ ಮಾತನಾಡಿದ್ದು, ಜನಾಂಗ ದಮನದ ಅಭ್ಯಾಸವು ಹಿಂದೆ ತಿಳಿದಿರುವುದಕ್ಕಿಂತ ಹೆಚ್ಚು ವ್ಯಾಪಕವಾಗಿದೆ ಮತ್ತು ವ್ಯವಸ್ಥಿತವಾಗಿದೆ ಎಂಬುದು ಸರ್ಕಾರದ ಅಂಕಿಅಂಶಗಳು, ರಾಜ್ಯ ದಾಖಲೆಗಳು ಮತ್ತು ೩೦ ಮಾಜಿ ಬಂಧಿತರು, ಅವರ ಕುಟುಂಬ ಸದಸ್ಯರು ಮತ್ತು ಮಾಜಿ ಬಂಧಿತರ ಸಂದರ್ಶನದಿಂದ ಬೆಳಕಿಗೆ ಬಂದಿದೆ.

ಕ್ಸಿನ್ಜಿಯಾಂಗ್ ದೂರದ ಪಶ್ಚಿಮ ಪ್ರದೇಶದಲ್ಲಿ ಕಳೆದ ನಾಲ್ಕು ವರ್ಷಗಳಿಂದ ನಡೆದ ಮುಸ್ಲಿಮ್ ಜನಸಂಖ್ಯಾ ನಿಯಂತ್ರಣ ಅಭಿಯಾವನ್ನು ಕೆಲವು ತಜ್ಞರುಜನಾಂಗೀಯ ನರಮೇಧಎಂದು ಬಣ್ಣಿಸಿದ್ದಾರೆ.

ಸರ್ಕಾರವು ನಿಯಮಿತವಾಗಿ ಅಲ್ಪಸಂಖ್ಯಾತ ಮಹಿಳೆಯರನ್ನು ಗರ್ಭಧಾರಣೆಯ ತಪಾಸಣೆಗೆ ಒಳಪಡಿಸುತ್ತದೆ ಮತ್ತು ಗರ್ಭಾಶಯದ ಸಾಧನಗಳು, ಕ್ರಿಮಿನಾಶಕ ಬಳಕೆಯ ಮೂಲಕ ನೂರಾರು ಸಾವಿರ ಗರ್ಭಪಾತಕ್ಕೆ ಒತ್ತಾಯಿಸುತ್ತದೆ ಎಂಬುದನ್ನು ಸಂದರ್ಶನಗಳು ಮತ್ತು ಅಂಕಿಸಂಖ್ಯೆಗಳು ತೋರಿಸಿವೆ.

ಐಯುಡಿಗಳ ಬಳಕೆ ಮತ್ತು ಕ್ರಿಮಿನಾಶಕವು ರಾಷ್ಟ್ರವ್ಯಾಪಿ ಕುಸಿದಿದ್ದರೂ, ಕ್ಸಿನ್ಜಿಯಾಂಗ್ನಲ್ಲಿ ಇದು ತೀವ್ರವಾಗಿ ಏರುತ್ತಿದೆ ಎಂದು ವರದಿ ಹೇಳಿದೆ.

ನಿಯಮಗಳ ಪಾಲನೆ ವೈಫಲ್ಯಕ್ಕಾಗಿ ಬಂಧನ ಶಿಬಿರಗಳಲ್ಲಿ ಸಾಮೂಹಿಕ ಬಂಧನಕ್ಕೆ ಗುರಿಪಡಿಸುವ ಮೂಲಕ  ಜನಸಂಖ್ಯಾ ನಿಯಂತ್ರಣ ಕ್ರಮಗಳನ್ನು ಜಾರಿಗೊಳಿಸಲಾತ್ತದೆ.

ಹೆಚ್ಚಿನ ಮಕ್ಕಳನ್ನು ಹೊಂದಿರುವುದು ಜನರನ್ನು ಬಂಧನ ಶಿಬಿರಗಳಿಗೆ ಕಳುಹಿಸಲು ಒಂದು ಪ್ರಮುಖ ಕಾರಣವಾಗಿದೆ ಎಂಬುದು ಸುದ್ದಿ ಸಂಸ್ಥೆಯೊಂದರ ತನಿಖಾ ವರದಿಯಿಂದ ಬಯಲಿಗೆ ಬಂದಿದೆ. ಮೂರು ಅಥವಾ ಅದಕ್ಕಿಂತ ಹೆಚ್ಚಿನ ಮಕ್ಕಳು ಇರುವ ಪೋಷಕರನ್ನು ಅವರು ಭಾರೀ ಮೊತ್ತದ ದಂಡ ಪಾವತಿಸದೇ ಇದ್ದಲ್ಲಿ ಬಂಧನ ಶಿಬಿರಕ್ಕೆ ಅಟ್ಟಲಾಗುತ್ತದೆ. ಅಡಗಿದ ಮಕ್ಕಳನ್ನು ಹುಡುಕುವ ಸಲುವಾಗಿ ಮನೆಗಳ ಮೇಲೆ ದಾಳಿ ನಡೆಸುವ ಪೊಲೀಸರು ಮನೆಗಳ ಹೆತ್ತವರನ್ನು ಬೆದರಿಸುತ್ತಾರೆ.

ಚೀನಾ ಸಂಜಾತ ಗುಲ್ನರ್ ಒಮಿರ್ಜಾಕ್ ಅವರಿಗೆ ಮೂರನೆಯ ಮಗುವಿನ ಜನನದ ಬಳಿಕ ಸರ್ಕಾರವು ಐಯುಡಿ ಧರಿಸಲು ಆದೇಶಿಸಿತು. ಎರಡು ವರ್ಷಗಳ ನಂತರ, ೨೦೧೮ ಜನವರಿಯಲ್ಲಿ, ನಾಲ್ವರು ಮಿಲಿಟರಿ ಅಧಿಕಾರಿಗಳು ಆಕೆಯ ಬಾಗಿಲನ್ನು ಬಡಿದು ಬಂದರು. ಬಂಧಿತ ತರಕಾರಿ ವ್ಯಾಪಾರಿಯ ಬಡ ಪತ್ನಿಯಾದ ಒಮಿರ್ಜಾಕ್ ಅವರಿಗೆ ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದ್ದಕ್ಕಾಗಿ ,೬೮೫ ಡಾಲರ್ ದಂq ವಿಧಿಸಿ, ಪಾವತಿಸಲು ಮೂರು ದಿನಗಳ ಕಾಲಾವಕಾಶ ನೀಡಿದರು.

ದಂಡ ಪಾವತಿಸದೇ ಇದ್ದಲ್ಲಿ, ಆಕೆಯನ್ನು, ಪತಿ ಮತ್ತು ಜನಾಂಗದ ಇತರ ಮಿಲಿಯನ್ ಮಂದಿ ಅಲ್ಪಸಂಖ್ಯಾತರು ಬಂಧನದಲ್ಲಿ ಇರುವ ಬಂಧನ ಶಿಬಿರಕ್ಕೆ ತಳ್ಳಲಾಗುವುದು ಎಂದು ಬೆದರಿಸಿದರು. ಲಕ್ಷಾಂತರ ಮಂದಿಯನ್ನು ಕೂಡಾ ಸರ್ಕಾರವು ಹೆಚ್ಚಿನ ಮಕ್ಕಳನ್ನು ಹೊಂದಿದ್ದಕ್ಕಾಗಿಯೇ ಬಂಧನ ಶಿಬಿರಗಳಿಗೆ ಅಟ್ಟಿದೆ.

ದೇವರು ನಿಮಗೆ ಮಕ್ಕಳನ್ನು ಕೊಡುತ್ತಾನೆ. ಜನರು ಮಕ್ಕಳನ್ನು ಪಡೆಯದಂತೆ ತಡೆಯುವುದು ತಪ್ಪುಎಂದು ಒಮಿರ್ಜಾಕ್ ಸಂದರ್ಶನದಲ್ಲಿ ಹೇಳಿದರು. ಆಕೆಗೆ ಈಗಲೂ ದುರ್ದಿನ ನೆನಪಾಗುತ್ತದೆ. ’ಅವರು ನಮ್ಮ ಜನಾಂಗವನ್ನೇ ನಾಶ ಮಾಡಬಯಸಿದ್ದಾರೆಎಂದು ಆಕೆ ನುಡಿದರು.

ಜನನ ನಿಯಂತ್ರಣ ಅಭಿಯಾನದ ಪರಿಣಾಮವಾಗಿ ಮಕ್ಕಳನ್ನು ಹೊಂದುವುದರ ವಿರುದ್ಧ ಭಯೋತ್ಪಾದನೆಯ ವಾತಾವರಣ ಸೃಷ್ಟಿಯಾಗಿದೆ. ಉತೂರ್ ಪ್ರದೇಶಗಳಾದ ಹೋತಾನ್ ಮತ್ತು ಕಾಶ್ಗಾರ್ನಲ್ಲಿ ಜನನ ಪ್ರಮಾಣವು ೨೦೧೫ ರಿಂದ ೨೦೧೮ ರವರೆಗೆ ಶೇಕಡಾ ೬೦ಕ್ಕಿಂತ ಹೆಚ್ಚು ಕುಸಿದಿದೆ, ಇದು ಸರ್ಕಾರದ ಅಂಕಿಅಂಶಗಳಲ್ಲಿ ಇತ್ತೀಚಿನ ವರ್ಷವಾಗಿದೆ. ಕ್ಸಿನ್ಜಿಯಾಂಗ್ ಪ್ರದೇಶದಾದ್ಯಂತ, ಜನನ ಪ್ರಮಾಣವು ಇಳಿಮುಖವಾಗುತ್ತಲೇ ಇದೆ, ಕಳೆದ ಒಂದೇ ವರ್ಷದಲ್ಲಿ ಶೇಕಡಾ ೨೪ರಷ್ಟು ಕುಸಿದಿದೆ. ಇದು ದೇಶಾದ್ಯಂತ ಕೇವಲ .% ಕ್ಕೆ ಹೋಲಿಸಿದರೆ, ಅಂಕಿಅಂಶಗಳು ಅಗಾಧವಾಗಿರುವುದು ಕಂಡು ಬರುತ್ತದೆ.

ಜನನ ನಿಯಂತ್ರಣಕ್ಕೆ ಸರ್ಕಾರವು ಸುರಿಯುವ ನೂರಾರು ಮಿಲಿಯನ್ ಡಾಲರ್ ಹಣದಿಂದಾಗಿ ಚೀನಾದ ವೇಗವಾಗಿ ಬೆಳೆಯುತ್ತಿರುವ ಪ್ರದೇಶಗಳಲ್ಲಿ ಒಂದಾದ ಕ್ಸಿನ್ಜಿಯಾಂಗ್ ಪ್ರಗತಿ ಕೆಲವೇ ವರ್ಷಗಳಲ್ಲಿ ನಿಧಾನಗೊಂಡಿದೆ. " ರೀತಿಯ ಜನಾಂಗ ಕುಸಿತ ಅಭೂತಪೂರ್ವ. ಇದು ನಿರ್ದಯ ವರ್ತನೆಎಂದು ಚೀನಾದ ಅಲ್ಪಸಂಖ್ಯಾತ ಪ್ರದೇಶಗಳ ಪೊಲೀಸಿಂಗ್ ಪ್ರಮುಖ ತಜ್ಞರೊಬ್ಬರು ನುಡಿದರು.  "ಇದು ಉಯಿಘರ್ಗಳನ್ನು ದಮನಿಸುವ ವ್ಯಾಪಕ ನಿಯಂತ್ರಣ ಅಭಿಯಾನದ ಭಾಗವಾಗಿದೆಎಂದು ಅವರು ನುಡಿದರು.

" ಭಯಾನಕ ಕ್ರಮಗಳನ್ನು ತಕ್ಷಣವೇ ಕೊನೆಗೊಳಿಸಲು ನಾವು ಚೀನೀ ಕಮ್ಯುನಿಸ್ಟ್ ಪಕ್ಷವನ್ನು ಆಗ್ರಹಿಸುತ್ತೇವೆಎಂದು ಅವರು ನುಡಿದರು.

ಸರ್ಕಾರದ ನಕಾರ: ಆದಾಗ್ಯೂ, ಚೀನಾದ ವಿದೇಶಾಂಗ ಸಚಿವರು ವರದಿಯನ್ನು "ಕಟ್ಟುಕಥೆ" ಮತ್ತು "ನಕಲಿ ಸುದ್ದಿ" ಎಂದು ಲೇವಡಿ ಮಾಡಿದ್ದಾರೆ.

ಸರ್ಕಾರವು ಎಲ್ಲಾ ಜನಾಂಗಗಳನ್ನು ಸಮಾನವಾಗಿ ಪರಿಗಣಿಸುತ್ತದೆ ಮತ್ತು ಅಲ್ಪಸಂಖ್ಯಾತರ ಕಾನೂನು ಹಕ್ಕುಗಳನ್ನು ರಕ್ಷಿಸುತ್ತದೆ ಎಂದು ಅವರು ಹೇಳಿದರು.

No comments:

Advertisement