Friday, July 31, 2020

ವಿದೇಶೀ ವಿಮಾನಯಾನ ಆಗಸ್ಟ್ ೩೧ ರವರೆಗೆ ಇಲ್ಲ

ವಿದೇಶೀ ವಿಮಾನಯಾನ ಆಗಸ್ಟ್ ೩೧ ರವರೆಗೆ ಇಲ್ಲ

ನವದೆಹಲಿ: ಭಾರತವು ಅಂತರರಾಷ್ಟ್ರೀಯ ವಾಣಿಜ್ಯ ವಿಮಾನ ಹಾರಾಟದ ನಿಷೇಧವನ್ನು ಆಗಸ್ಟ್ ೩೧ ರವರೆಗೆ ವಿಸ್ತರಿಸಿ 2020 ಜುಲೈ 31ರ ಶುಕ್ರವಾರ ಆದೇಶ ಹೊರಡಿಸಿತು.

ಆದರೆ ಅಂತಾರಾಷ್ಟ್ರೀಯ ಸರಕು ಸಾಗಣೆ ಕಾರ್ಯಾಚರಣೆ ಮತ್ತು ವಿಮಾನಯಾನ ನಿಯಂತ್ರಕ ಸಂಸ್ಥೆಯಾದ ನಾಗರಿಕ ವಿಮಾನಯಾನ ಮಹಾನಿರ್ದೇಶಕ- ಡಿಜಿಸಿಎ  ನಿರ್ದಿಷ್ಟವಾಗಿ ಅನುಮೋದಿಸಿದ ವಿಮಾನಗಳಿಗೆ ನಿರ್ಬಂಧ ಅನ್ವಯಿಸುವುದಿಲ್ಲ ಎಂದು ಆದೇಶ ತಿಳಿಸಿತು.

ಭಾರತದಿಂದ ನಿಗದಿತ ಅಂತಾರಾಷ್ಟ್ರೀಯ ವಾಣಿಜ್ಯ ಪ್ರಯಾಣಿಕ ವಿಮಾನ ಸೇವೆಗಳ ಅಮಾನತನ್ನು ಆಗಸ್ಟ್ ೩೧ ರಾತ್ರಿ ೧೨ ಗಂಟೆಯವರೆಗೆ ವಿಸ್ತರಿಸಲು ಸರ್ಕಾರ ನಿರ್ಧರಿಸಿದೆ ಎಂದು ಹೇಳಿಕೆ ತಿಳಿಸಿದೆ.

ಜುಲೈ ತಿಂಗಳ ಆರಂಭದಲ್ಲಿ, ದೇಶಾದ್ಯಂತ ಕೋವಿಡ್ -೧೯ ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ, ನಾಗರಿಕ ವಿಮಾನಯಾನ ಸಚಿವಾಲಯವು ಅಂತರರಾಷ್ಟ್ರೀಯ ವಿಮಾನಗಳ ನಿಷೇಧವನ್ನು ಜುಲೈ ೩೧ ರವರೆಗೆ ವಿಸ್ತರಿಸಿತ್ತು.

ಇದಕ್ಕೂ ಮುನ್ನ, ಜುಲೈ ೧೫ರವೆಗೆ ನಿಷೇಧವು ಜಾರಿಯಲ್ಲಿರುತ್ತದೆ ಎಂದು ತಿಳಿಸಲಾಗಿತ್ತು. ದೇಶೀಯ ಮಾರ್ಗಗಳಲ್ಲಿನ ವಿಮಾನಗಳ ಪ್ರಯಾಣಿಕರ ಸಾಮರ್ಥ್ಯವನ್ನು ಹಿಂದಿನ ಶೇಕಡಾ ೩೩ರಿಂದ ಶೇಕಡಾ ೪೫ಕ್ಕೆ ಏರಿಸಿದ್ದರ ನಡುವೆಯೇ ಅಂತಾರಾಷ್ಟ್ರೀಯ ವಿಮಾನಯಾನ ನಿಷೇಧವನ್ನು ವಿಸ್ತರಿಸಲಾಯಿತು.

ಕೋವಿಡ್ -೧೯ ಆರೋಗ್ಯ ಬಿಕ್ಕಟ್ಟಿನ ವೇಳೆಯಲ್ಲಿ ಹಂತ ಹಂತವಾಗಿ ಪ್ರಯಾಣಿಕರ ಪಯಣಕ್ಕೆ ಅನುಕೂಲ ಕಲ್ಪಿಸಲು ಅಮೆರಿಕ, ಫ್ರಾನ್ಸ್ ಮತ್ತು ಜರ್ಮನಿಯೊಂದಿಗೆಸಾರಿಗೆ ಬಬಲ್ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ಅಮೆರಿಕದ ಏರ್ ಫ್ರಾನ್ಸ್ ಮತ್ತು ಯುನೈಟೆಡ್  ಏರ್ ಲೈನ್ಸ್ ಭಾರತದೊಂದಿಗೆ "ಏರ್ ಬಬಲ್" ವ್ಯವಸ್ಥೆಗಳ ಅಡಿಯಲ್ಲಿ ಸೀಮಿತ ಸಂಖ್ಯೆಯ ಅಂತರರಾಷ್ಟ್ರೀಯ ವಿಮಾನಯಾನಗಳನ್ನು ನಿರ್ವಹಿಸಲಿವೆ.

ಕೊರೋನಾ ಹಿನ್ನೆಲೆಯಲ್ಲಿ ಸಿಕ್ಕಿಬಿದ್ದ ಪ್ರಯಾಣಿಕರನ್ನು ಭಾರತಕ್ಕೆ ಕರೆತರಲು ದೇಶವು ಕುವೈತ್‌ನೊಂದಿಗೆ ಪ್ರಯಾಣ ಬಬಲ್ ಒಪ್ಪಂದಕ್ಕೆ ಸಹಿ ಹಾಕಿದೆ. ವಿವಿಧ ದೇಶಗಳಿಂದ ಪ್ರಯಾಣಿಕರ ಸಂಚಾರವನ್ನು ಸರಾಗಗೊಳಿಸುವ ಸಲುವಾಗಿ ವಿಮಾನಯಾನ ಸಚಿವಾಲಯವು ಇದೇ ರೀತಿಯ ವ್ಯವಸ್ಥೆಗಳನ್ನು ಜಾರಿಗೆ ತರುವ ಸಾಧ್ಯತೆಯಿದೆ. ಜುಲೈ ರಂದು ಭಾರತವು ಯುನೈಟೆಡ್ ಅರಬ್ ಎಮಿರೇಟ್ಸ್‌ನೊಂದಿಗೆ ಪ್ರಯಾಣ ಬಬಲ್ ಒಪ್ಪಂದವನ್ನು ಘೋಷಿಸಿತ್ತು, ಅದು ಜುಲೈ ೧೨ ರಿಂದ ೨೬ ರವರೆಗೆ ಜಾರಿಯಲ್ಲಿರುತ್ತದೆ.

ಪರಸ್ಪರ ಸಂಪರ್ಕ ಪುನಸ್ಥಾನಪನೆ ಮತ್ತು ಗಡಿಯನ್ನು ತೆರೆಯಲು ಬಯಸುವ ರಾಷ್ಟ್ರಗಳ ಮಧ್ಯೆ ದ್ವಿಪಕ್ಷೀಯ ಪ್ರಯಾಣ ಬಬಲ್ ಒಪ್ಪಂದ ಮಾಡಿಕೊಳ್ಳಲಾಗುತ್ತದೆ. ಇದು ಎರಡು ದೇಶಗಳ ನಡುವಿನ ಪ್ರಯಾಣ ಕಾರಿಡಾರನ್ನು ಸೂಚಿಸುತ್ತದೆ.  ಕೋವಿಡ್ -೧೯ ಸಾಂಕ್ರಾಮಿಕ ರೋಗವು ವಿಶ್ವಾದ್ಯಂತ ಸುಮಾರು ೧೮೫ ದೇಶಗಳಿಗೆ ಹರಡಿದ್ದರಿಂದ ಮಾರ್ಚ್ ೨೩ ರಿಂದ ಭಾರತ ಸರ್ಕಾರವು ಅಂತಾರಾಷ್ಟ್ರೀಯ ವಿಮಾನಯಾನಗಳನ್ನು ಸ್ಥಗಿತಗೊಳಿಸಿದೆ.

ಸೀಮಿತ ದೇಶೀಯ ವಿಮಾನಗಳು ಮೇ ೨೫ ರಿಂದ ಕೆಲವು ವಲಯಗಳಲ್ಲಿ ಪುನಾರಂಭಗೊಂಡಿವೆ.

ಭಾರತ ಮತ್ತು ಇತರ ದೇಶಗಳಲ್ಲಿ ಕೋವಿಡ್-೧೯ ಉಂಟಾದ ಕಾರಣ ಅಂತಾರಾಷ್ಟ್ರೀಯ ವಿಮಾನಯಾನಗಳನ್ನು ಸ್ಥಗಿತಗೊಳಿಸಿದ ಸಮಯದಲ್ಲಿ, ಸಿಕ್ಕಿಬಿದ್ದ ಪ್ರಜೆಗಳನ್ನು ಭಾರತಕ್ಕೆ ಮತ್ತು ಭಾರತದಿಂದ ವಿದೇಶಕ್ಕೆ  ಸ್ಥಳಾಂತರಿಸಲು ವಿದೇಶಿ ವಿಮಾನಯಾನ ಸಂಸ್ಥೆಗಳಿಂದ ,೫೦೦ಕ್ಕೂ ಹೆಚ್ಚು ವಾಪಸಾತಿ ಹಾರಾಟಕ್ಕೆ ಸರ್ಕಾರ ಅನುಮೋದನೆ ನೀಡಿತ್ತು.

ಕೇಂದ್ರದ ವಂದೇ ಭಾರತ್ ಮಿಷನ್ ಅಡಿಯಲ್ಲಿ, ರಾಷ್ಟ್ರೀಯ ವಿಮಾನಯಾನ ಸಂಸ್ಥೆ  ಏರ್ ಇಂಡಿಯಾ ಮತ್ತು ಅದರ ಅಂಗಸಂಸ್ಥೆ ಏರ್ ಇಂಡಿಯಾ ಎಕ್ಸ್ ಪ್ರೆಸ್ ,೬೭,೪೩೬ ಮಂದಿ ಪ್ರಯಾಣಿಕರನ್ನು ಸ್ಥಳಾಂತರಿಸಿದೆ ಮತ್ತು ಇತರ ವಿಮಾನಗಳು ಮೇ ರಿಂದ ಜುಲೈ ೩೦ ನಡುವೆ ,೮೬,೮೧೧ ಪ್ರಯಾಣಿಕರನ್ನು ವಾಪಸ್ ಕರೆತಂದಿವೆ.

ದೇಶದ ಕೊರೋನಾ ಸಾವಿನ ಪ್ರಮಾಣ ಶೇಕಡಾ ೨.೧೮ಕ್ಕೆ ಇಳಿಕೆ

 ದೇಶದ ಕೊರೋನಾ ಸಾವಿನ  ಪ್ರಮಾಣ ಶೇಕಡಾ .೧೮ಕ್ಕೆ ಇಳಿಕೆ

ನವದೆಹಲಿ: ಕೊರೋನಾವೈರಸ್ ಸಾಂಕ್ರಾಮಿಕದ ಮಧ್ಯೆ ಹೋಟೆಲ್ ಮತ್ತು ಸಾಪ್ತಾಹಿಕ ಮಾರುಕಟ್ಟೆಗಳನ್ನು ಪ್ರಾಯೋಗಿಕ ನೆಲೆಯಲ್ಲಿ ಮತ್ತೆ ತೆರೆಯಲು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ನೇತೃತ್ವದ ಆಪ್ ಸರ್ಕಾರ ಕೈಗೊಂಡ ನಿರ್ಧಾರಕ್ಕೆ ಬ್ರೇಕ್ ಹಾಕಿರುವ ದೆಹಲಿಯ ಲೆಪ್ಟಿನೆಂಟ್ ಗವರ್ನರ್ (ಎಲ್‌ಜಿ) ಅನಿಲ್ ಬೈಜಾಲ್ ಅವರು ನಿರ್ಧಾರವನ್ನು 2020 ಜುಲೈ 31ರ ಶುಕ್ರವಾರ ರದ್ದು ಪಡಿಸಿದರು.

ಅನ್ಲಾಕ್ .೦ರ ಹಿನ್ನೆಲೆಯಲ್ಲಿ ಹೋಟೆಲ್ ಮತ್ತು ಸಾಪ್ತಾಹಿಕ ಮಾರುಕಟ್ಟೆಗಳನ್ನು ಪ್ರಾಯೋಗಿಕ ನೆಲೆಯನ್ನು ತೆರೆಯಲು ಅರವಿಂದ ಕೇಜ್ರಿವಾಲ್ ಸರ್ಕಾರ ನಿರ್ಧರಿಸಿತ್ತು.

ಮಧ್ಯೆ, ಆರೋಗ್ಯ ಸಚಿವ ಡಾ.ಹರ್ಷ ವರ್ಧನ್ ಅವರು ಶುಕ್ರವಾರ ಕೋವಿಡ್ -೧೯ ಪರಿಸ್ಥಿತಿ ಕುರಿತ ಸಚಿವರ ತಂಡದ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಒಟ್ಟು ಸಕ್ರಿಯ ಪ್ರಕರಣಗಳಲ್ಲಿ ಶೇಕಡಾ .೨೮ ಮಾತ್ರ ವೆಂಟಿಲೇಟರ್, ಶೇಕಡಾ .೬೧ ತೀವ್ರ ನಿಗಾ ಘಟಕ (ಐಸಿಯು) ಮತ್ತು ಶೇಕಡಾ .೩೨ ಆಮ್ಲಜನಕದ ಬೆಂಬಲದಲ್ಲಿ ಇವೆ ಎಂದು ಅವರು ಹೇಳಿದರು.

ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಎಲ್ಲ ಶಾಸಕರಿಗೆ ಮೂರು ತಿಂಗಳ ವೇತನದಲ್ಲಿ ಶೇಕಡಾ ೩೦ ವೇತನವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡುವಂತೆ ಮನವಿ ಮಾಡಿದ್ದಾರೆ. "ನಾನು ನಿಧಿಗೆ ತಮ್ಮ ಕೊಡುಗೆಯನ್ನು ನೀಡುವಂತೆ ಮನವಿ ಮಾಡುತ್ತೇನೆ ಎಂದು ಅವರು ಹೇಳಿದರು. ಏತನ್ಮಧ್ಯೆ, ಭಾರತದ ಕೊರೋನಾವೈರಸ್ ಸೋಂಕು ಪ್ರಕರಣಗಳ ಸಂಖ್ಯೆ ಶುಕ್ರವಾರ ೧೬ ಲಕ್ಷವನ್ನು ದಾಟಿದೆ.
ಕಳೆದ ೨೪ ಗಂಟೆಗಳಲ್ಲಿ ಹೊಸದಾಗಿ ೫೫,೦೭೯ ಸೋಂಕು ಪ್ರಕರಣಗಳು ಪ್ರಕರಣಗಳು ದಾಖಲಾಗಿದ್ದು, ೭೭೯ ಸಾವುಗಳು ಸಂಭವಿಸಿವೆ. ಒಟ್ಟು ೧೬,೩೮,೮೭೧ ಪ್ರಕರಣಗಳ ಪೈಕಿ ೧೦,೫೭,೮೦೬ ಪ್ರಕರಣಗಳಲ್ಲಿ ರೋಗಿಗಳು ಸಂಪೂರ್ಣ ಗುಣಮುಖರಾಗಿ ಚೇತರಿಸಿದ್ದಾರೆ. ,೪೫,೩೧೮ ಸಕ್ರಿಯ ಪ್ರಕರಣಗಳಿವೆ. ಸಾವಿನ ಸಂಖ್ಯೆ ೩೫,೭೪೭ ಕ್ಕೆ ಏರಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ಕೋವಿಡ್ -೧೯ನ್ನು ಜಾಗತಿಕ ತುರ್ತುಸ್ಥಿತಿ ಎಂದು ಘೋಷಿಸಿದ ಆರು ತಿಂಗಳ ಬಳಿಕ, ಯುವಜನರು ಸೋಂಕಿಗೆ ಒಳಗಾಗಬಹುದು ಮತ್ತು ವೈರಸ್‌ಗೆ ಬಲಿಯಾಗಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಶುಕ್ರವಾರ ಎಚ್ಚರಿಕೆ ನೀಡಿದ್ದು, ಸ್ವಯಂ ರಕ್ಷಣೆಗಾಗಿ ಮುನ್ನೆಚ್ಚರಿಕೆ ವಹಿಸುವಂತೆ ಯುವಕರಿಗೆ ಸಲಹೆ ಮಾಡಿದೆ.

ಲಸಿಕೆ ನೀಡುವ ವಿಷಯಕ್ಕೆ ಸಂಬಂಧಿಸಿದಂತೆ ಇದೇ ಮೊದಲ ಬಾರಿಗೆ ಜನರು, ಎಲ್ಲಿ ವಾಸವಾಗಿದ್ದಾರೋ ಅಲ್ಲಿಯೇ ಏಕಕಾಲಕ್ಕೆ ಕೋವಿಡ್ -೧೯ ಲಸಿಕೆ ಪಡೆಯುವಂತಹ ಪರಿಸ್ಥಿತಿ ಉಂಟಾಗಬಹುದು ಎಂದು ಅದು ಹೇಳಿದೆ. "ನಾವು ನಮ್ಮ ವಿಧಾನವನ್ನು ಬದಲಾಯಿಸಬೇಕಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಹೇಳಿದರು.

ಜಾಗತಿಕ ಕೊರೋನಾವೈರಸ್ ಪ್ರಕರಣಗಳು ಶುಕ್ರವಾರ ೧೭ ಮಿಲಿಯನ್ (.೭೦ ಕೋಟಿ) ಗಡಿ ದಾಟಿವೆ.

ಪಂಜಾಬಿನಲ್ಲಿ ರಾತ್ರಿ ಕರ್ಫ್ಯೂ: ಪಂಜಾಬ್ ಸರ್ಕಾರವು ಶುಕ್ರವಾರ ಅನ್ಲಾಕ್ . ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದು, ರಾಜ್ಯದಲ್ಲಿ ರಾತ್ರಿ ೧೧ ರಿಂದ ಬೆಳಿಗ್ಗೆ ರವರೆಗೆ ರಾತ್ರಿ ಕರ್ಫ್ಯೂ ಜಾರಿಗೆ ಆದೇಶ ನೀಡಿದೆ. ಜಿಮ್ಸ್ ಮತ್ತು ಯೋಗ ಸಂಸ್ಥೆಗಳು ಆಗಸ್ಟ್ ೫ರಿಂದ ತೆರೆಯಲಿವೆ.

ದೆಹಲಿಯ ಪರಿಸ್ಥಿತಿಯನ್ನು ಸಚಿವರ ತಂಡ (ಗೋಮ್) ಚರ್ಚಿಸಿತು, ದೇಶದ ಚೇತರಿಕೆ ಪ್ರಮಾಣಕ್ಕೆ ಹೋಲಿಸಿದರೆ, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಶೇಕಡಾ ೮೯ಕ್ಕಿಂತ ಹೆಚ್ಚು ಚೇತರಿಕೆ ಕಂಡು ಬಂದಿದೆ ಎಂದು ಗೋಮ್ ಹೇಳಿತು. ಪುಣೆ, ಥಾಣೆ, ಬೆಂಗಳೂರು ಮತ್ತು ಹೈದರಾಬಾದ್ ಇನ್ನೂ ಚಿಂತೆಯ ವ್ಯಾಪ್ತಿಯಲ್ಲಿ ಇವೆ ಎಂದು ಅದು ಹೇಳಿತು.

 ಭಾರತವು ೧೦ ಲಕ್ಷಕ್ಕಿಂತಲೂ ( ಮಿಲಿಯನ್) ಹೆಚ್ಚು ಚೀತರಿಕೆಯ ಮೈಲಿಗಲ್ಲನ್ನು ಸಾಧಿಸಿದೆ. ದೇಶದ ಚೇತರಿಕೆಯ ಪ್ರಮಾಣವನ್ನು ಶೇಕಡಾ ೬೪.೫೪ಕ್ಕೆ ಏರಿದೆ. ವೈದ್ಯಕೀಯ ಮೇಲ್ವಿಚಾರಣೆಯಲ್ಲಿ ಸಕ್ರಿಯವಾಗಿರುವ ಪ್ರಕರಣಗಳು ಒಟ್ಟು  ಪ್ರಕರಣಗಳ ಕೇವಲ /೩ರಷ್ಟು ಅಥವಾ ಶೇಕಡಾ ೩೩.೨೭ರಷ್ಟಿವೆ ಎಂದು ಡಾ. ಹರ್ಷ ವರ್ಧನ್ ಹೇಳಿದರು.

ಭಾರತದಲ್ಲಿ ಕೋವಿಡ್-೧೯ ಸಾವಿನ ಪ್ರಮಾಣವು ಕ್ರಮೇಣ ಕಡಿಮೆಯಾಗುತ್ತಿದೆ. ಇದು ಪ್ರಸ್ತುತ ಶೇಕಡಾ .೧೮ರಷ್ಟು ಇದೆ. ವಿಶ್ವದ ಮರಣ ಪ್ರಮಾಣಕ್ಕೆ ಹೋಲಿಸಿದರೆ ಇದು ಅತ್ಯಂತ ಕಡಿಮೆ ಎಂದು ಅವರು ನುಡಿದರು.

ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ ಅವರು ಎಲ್ಲಾ ಶಾಸಕರಿಗೆ ತಮ್ಮ ಸಂಬಳದ ಶೇಕಡಾ ೩೦ರಷ್ಟನ್ನು ಮೂರು ತಿಂಗಳ ಕಾಲ ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡುವಂತೆ ರಾಜ್ಯ ಸಚಿವರ ಜೊತೆಗಿನ ವಿಡಿಯೋ ಕಾನ್ಫರೆನ್ಸಿನಲ್ಲಿ ಮನವಿ ಮಾಡಿದರು.

"ನೀವೆಲ್ಲರೂ ಒಪ್ಪಿದರೆ, ಸಾಂಕ್ರಾಮಿಕ ರೋಗವು ನಿಯಂತ್ರಣಕ್ಕೆ ಬರುವ ತನಕ, ಕೋವಿಡ್ -೧೯ ವಿರುದ್ಧ ಹೋರಾಡಲು ನಾವು ನಮ್ಮ ಸಂಬಳದ ಶೇಕಡಾ ೩೦ರಷ್ಟನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡೋಣ ಎಂದು ಅವರು ನುಡಿದರು.

Advertisement