My Blog List

Friday, July 31, 2020

ವಿದೇಶೀ ವಿಮಾನಯಾನ ಆಗಸ್ಟ್ ೩೧ ರವರೆಗೆ ಇಲ್ಲ

ವಿದೇಶೀ ವಿಮಾನಯಾನ ಆಗಸ್ಟ್ ೩೧ ರವರೆಗೆ ಇಲ್ಲ

ನವದೆಹಲಿ: ಭಾರತವು ಅಂತರರಾಷ್ಟ್ರೀಯ ವಾಣಿಜ್ಯ ವಿಮಾನ ಹಾರಾಟದ ನಿಷೇಧವನ್ನು ಆಗಸ್ಟ್ ೩೧ ರವರೆಗೆ ವಿಸ್ತರಿಸಿ 2020 ಜುಲೈ 31ರ ಶುಕ್ರವಾರ ಆದೇಶ ಹೊರಡಿಸಿತು.

ಆದರೆ ಅಂತಾರಾಷ್ಟ್ರೀಯ ಸರಕು ಸಾಗಣೆ ಕಾರ್ಯಾಚರಣೆ ಮತ್ತು ವಿಮಾನಯಾನ ನಿಯಂತ್ರಕ ಸಂಸ್ಥೆಯಾದ ನಾಗರಿಕ ವಿಮಾನಯಾನ ಮಹಾನಿರ್ದೇಶಕ- ಡಿಜಿಸಿಎ  ನಿರ್ದಿಷ್ಟವಾಗಿ ಅನುಮೋದಿಸಿದ ವಿಮಾನಗಳಿಗೆ ನಿರ್ಬಂಧ ಅನ್ವಯಿಸುವುದಿಲ್ಲ ಎಂದು ಆದೇಶ ತಿಳಿಸಿತು.

ಭಾರತದಿಂದ ನಿಗದಿತ ಅಂತಾರಾಷ್ಟ್ರೀಯ ವಾಣಿಜ್ಯ ಪ್ರಯಾಣಿಕ ವಿಮಾನ ಸೇವೆಗಳ ಅಮಾನತನ್ನು ಆಗಸ್ಟ್ ೩೧ ರಾತ್ರಿ ೧೨ ಗಂಟೆಯವರೆಗೆ ವಿಸ್ತರಿಸಲು ಸರ್ಕಾರ ನಿರ್ಧರಿಸಿದೆ ಎಂದು ಹೇಳಿಕೆ ತಿಳಿಸಿದೆ.

ಜುಲೈ ತಿಂಗಳ ಆರಂಭದಲ್ಲಿ, ದೇಶಾದ್ಯಂತ ಕೋವಿಡ್ -೧೯ ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ, ನಾಗರಿಕ ವಿಮಾನಯಾನ ಸಚಿವಾಲಯವು ಅಂತರರಾಷ್ಟ್ರೀಯ ವಿಮಾನಗಳ ನಿಷೇಧವನ್ನು ಜುಲೈ ೩೧ ರವರೆಗೆ ವಿಸ್ತರಿಸಿತ್ತು.

ಇದಕ್ಕೂ ಮುನ್ನ, ಜುಲೈ ೧೫ರವೆಗೆ ನಿಷೇಧವು ಜಾರಿಯಲ್ಲಿರುತ್ತದೆ ಎಂದು ತಿಳಿಸಲಾಗಿತ್ತು. ದೇಶೀಯ ಮಾರ್ಗಗಳಲ್ಲಿನ ವಿಮಾನಗಳ ಪ್ರಯಾಣಿಕರ ಸಾಮರ್ಥ್ಯವನ್ನು ಹಿಂದಿನ ಶೇಕಡಾ ೩೩ರಿಂದ ಶೇಕಡಾ ೪೫ಕ್ಕೆ ಏರಿಸಿದ್ದರ ನಡುವೆಯೇ ಅಂತಾರಾಷ್ಟ್ರೀಯ ವಿಮಾನಯಾನ ನಿಷೇಧವನ್ನು ವಿಸ್ತರಿಸಲಾಯಿತು.

ಕೋವಿಡ್ -೧೯ ಆರೋಗ್ಯ ಬಿಕ್ಕಟ್ಟಿನ ವೇಳೆಯಲ್ಲಿ ಹಂತ ಹಂತವಾಗಿ ಪ್ರಯಾಣಿಕರ ಪಯಣಕ್ಕೆ ಅನುಕೂಲ ಕಲ್ಪಿಸಲು ಅಮೆರಿಕ, ಫ್ರಾನ್ಸ್ ಮತ್ತು ಜರ್ಮನಿಯೊಂದಿಗೆಸಾರಿಗೆ ಬಬಲ್ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ಅಮೆರಿಕದ ಏರ್ ಫ್ರಾನ್ಸ್ ಮತ್ತು ಯುನೈಟೆಡ್  ಏರ್ ಲೈನ್ಸ್ ಭಾರತದೊಂದಿಗೆ "ಏರ್ ಬಬಲ್" ವ್ಯವಸ್ಥೆಗಳ ಅಡಿಯಲ್ಲಿ ಸೀಮಿತ ಸಂಖ್ಯೆಯ ಅಂತರರಾಷ್ಟ್ರೀಯ ವಿಮಾನಯಾನಗಳನ್ನು ನಿರ್ವಹಿಸಲಿವೆ.

ಕೊರೋನಾ ಹಿನ್ನೆಲೆಯಲ್ಲಿ ಸಿಕ್ಕಿಬಿದ್ದ ಪ್ರಯಾಣಿಕರನ್ನು ಭಾರತಕ್ಕೆ ಕರೆತರಲು ದೇಶವು ಕುವೈತ್‌ನೊಂದಿಗೆ ಪ್ರಯಾಣ ಬಬಲ್ ಒಪ್ಪಂದಕ್ಕೆ ಸಹಿ ಹಾಕಿದೆ. ವಿವಿಧ ದೇಶಗಳಿಂದ ಪ್ರಯಾಣಿಕರ ಸಂಚಾರವನ್ನು ಸರಾಗಗೊಳಿಸುವ ಸಲುವಾಗಿ ವಿಮಾನಯಾನ ಸಚಿವಾಲಯವು ಇದೇ ರೀತಿಯ ವ್ಯವಸ್ಥೆಗಳನ್ನು ಜಾರಿಗೆ ತರುವ ಸಾಧ್ಯತೆಯಿದೆ. ಜುಲೈ ರಂದು ಭಾರತವು ಯುನೈಟೆಡ್ ಅರಬ್ ಎಮಿರೇಟ್ಸ್‌ನೊಂದಿಗೆ ಪ್ರಯಾಣ ಬಬಲ್ ಒಪ್ಪಂದವನ್ನು ಘೋಷಿಸಿತ್ತು, ಅದು ಜುಲೈ ೧೨ ರಿಂದ ೨೬ ರವರೆಗೆ ಜಾರಿಯಲ್ಲಿರುತ್ತದೆ.

ಪರಸ್ಪರ ಸಂಪರ್ಕ ಪುನಸ್ಥಾನಪನೆ ಮತ್ತು ಗಡಿಯನ್ನು ತೆರೆಯಲು ಬಯಸುವ ರಾಷ್ಟ್ರಗಳ ಮಧ್ಯೆ ದ್ವಿಪಕ್ಷೀಯ ಪ್ರಯಾಣ ಬಬಲ್ ಒಪ್ಪಂದ ಮಾಡಿಕೊಳ್ಳಲಾಗುತ್ತದೆ. ಇದು ಎರಡು ದೇಶಗಳ ನಡುವಿನ ಪ್ರಯಾಣ ಕಾರಿಡಾರನ್ನು ಸೂಚಿಸುತ್ತದೆ.  ಕೋವಿಡ್ -೧೯ ಸಾಂಕ್ರಾಮಿಕ ರೋಗವು ವಿಶ್ವಾದ್ಯಂತ ಸುಮಾರು ೧೮೫ ದೇಶಗಳಿಗೆ ಹರಡಿದ್ದರಿಂದ ಮಾರ್ಚ್ ೨೩ ರಿಂದ ಭಾರತ ಸರ್ಕಾರವು ಅಂತಾರಾಷ್ಟ್ರೀಯ ವಿಮಾನಯಾನಗಳನ್ನು ಸ್ಥಗಿತಗೊಳಿಸಿದೆ.

ಸೀಮಿತ ದೇಶೀಯ ವಿಮಾನಗಳು ಮೇ ೨೫ ರಿಂದ ಕೆಲವು ವಲಯಗಳಲ್ಲಿ ಪುನಾರಂಭಗೊಂಡಿವೆ.

ಭಾರತ ಮತ್ತು ಇತರ ದೇಶಗಳಲ್ಲಿ ಕೋವಿಡ್-೧೯ ಉಂಟಾದ ಕಾರಣ ಅಂತಾರಾಷ್ಟ್ರೀಯ ವಿಮಾನಯಾನಗಳನ್ನು ಸ್ಥಗಿತಗೊಳಿಸಿದ ಸಮಯದಲ್ಲಿ, ಸಿಕ್ಕಿಬಿದ್ದ ಪ್ರಜೆಗಳನ್ನು ಭಾರತಕ್ಕೆ ಮತ್ತು ಭಾರತದಿಂದ ವಿದೇಶಕ್ಕೆ  ಸ್ಥಳಾಂತರಿಸಲು ವಿದೇಶಿ ವಿಮಾನಯಾನ ಸಂಸ್ಥೆಗಳಿಂದ ,೫೦೦ಕ್ಕೂ ಹೆಚ್ಚು ವಾಪಸಾತಿ ಹಾರಾಟಕ್ಕೆ ಸರ್ಕಾರ ಅನುಮೋದನೆ ನೀಡಿತ್ತು.

ಕೇಂದ್ರದ ವಂದೇ ಭಾರತ್ ಮಿಷನ್ ಅಡಿಯಲ್ಲಿ, ರಾಷ್ಟ್ರೀಯ ವಿಮಾನಯಾನ ಸಂಸ್ಥೆ  ಏರ್ ಇಂಡಿಯಾ ಮತ್ತು ಅದರ ಅಂಗಸಂಸ್ಥೆ ಏರ್ ಇಂಡಿಯಾ ಎಕ್ಸ್ ಪ್ರೆಸ್ ,೬೭,೪೩೬ ಮಂದಿ ಪ್ರಯಾಣಿಕರನ್ನು ಸ್ಥಳಾಂತರಿಸಿದೆ ಮತ್ತು ಇತರ ವಿಮಾನಗಳು ಮೇ ರಿಂದ ಜುಲೈ ೩೦ ನಡುವೆ ,೮೬,೮೧೧ ಪ್ರಯಾಣಿಕರನ್ನು ವಾಪಸ್ ಕರೆತಂದಿವೆ.

No comments:

Advertisement