My Blog List

Saturday, July 25, 2020

ಒಂದೇ ದಿನದಲ್ಲಿ ೪.೨ ಲಕ್ಷ ಕೊರೋನಾ ಪರೀಕ್ಷೆ

ಒಂದೇ ದಿನದಲ್ಲಿ . ಲಕ್ಷ ಕೊರೋನಾ ಪರೀಕ್ಷೆ

ಸೋಂಕಿತ ಪ್ರಕರಣ ೧೩ ಲಕ್ಷ, ಚೇತರಿಕೆ . ಲಕ್ಷ

ನವದೆಹಲಿ: ಕೊರೋನಾವೈರಸ್ ಸೋಂಕನ್ನು ಪತ್ತೆಹಚ್ಚಲು ಭಾರತವು ಒಂದೇ ದಿನದಲ್ಲಿ , ೨೦,೦೦೦ ಮಾದರಿಗಳನ್ನು ಪರೀಕ್ಷಿಸುವ ಮೂಲಕ ದಾಖಲೆ ನಿರ್ಮಿಸಿದೆ. ಶುಕ್ರವಾರ ಬೆಳಿಗ್ಗೆಯಿಂದ ೨೪ ಗಂಟೆಗಳ ಅವಧಿಯಲ್ಲಿ ದೇಶವು ಇಷ್ಟು ದೊಡ್ಡ ಸಂಖ್ಯೆಯ ಮಾದರಿಗಳ ಮೇಲೆ ಪರೀಕ್ಷೆಗಳನ್ನು ನಡೆಸುತ್ತಿರುವುದು ಇದೇ ಮೊದಲು ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಕೋವಿಡ್ -೧೯ ಅಂಕಿಸಂಖ್ಯೆಗಳು 2020 ಜುಲೈ 25ರ ಶನಿವಾರ ಸೂಚಿಸಿದವು.

ಕಳೆದ ೨೪ ಗಂಟೆಗಳಲ್ಲಿ ,೨೦,೮೯೮ ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ಟೆಸ್ಟ್ ಪರ್ ಮಿಲಿಯನ್ (ಟಿಪಿಎಂ) ೧೧,೪೮೫ಕ್ಕೆ ಏರಿದೆ ಮತ್ತು ಇದರೊಂದಿಗೆ ದೇಶದ ಒಟ್ಟು ಪರೀಕ್ಷಾ ಸಾಮರ್ಥ್ಯ ,೫೮,೪೯,೦೬೮ ಕ್ಕೆ ಏರಿತು.

ಭಾರvದಲ್ಲಿ ಶುಕ್ರವಾರ ಸಂಜೆಯ ವೇಳೆಗೆ ಕೋವಿಡ್ -೧೯ ರೋಗಿಗಳ ಸಂಖ್ಯೆ ೧೩ ಲಕ್ಷ ದಾಟಿದ್ದು, ದೇಶವು ಬ್ರೆಜಿಲ್ ದೇಶವನ್ನು ಹಿಂದಿಕ್ಕಿದೆ. ಪ್ರಸ್ತುತ ಜಗತ್ತಿನಲ್ಲಿ ಅತೀ ಕೊರೋನಾವೈರಸ್ ಪ್ರಕರಣಗಳು ಅಮೆರಿಕದಲ್ಲಿ ದಾಖಲಾಗಿದ್ದರೆ ಎರಡನೇ ಸ್ಥಾನದಲ್ಲಿ ಭಾರತ ಇದೆ.

೧೨ ಲಕ್ಷ ಸೋಂಕು ಪ್ರಕರಣಗಳನ್ನು ದಾಟಿದ ಎರಡೇ ದಿನಗಳಲ್ಲಿ ಭಾರತದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ೧೩ ಲಕ್ಷವನ್ನು ದಾಟಿದೆ. ಇದೇ ವೇಳೆಗೆ ಚೇತರಿಕೆ ಕೂಡ ಗಣನೀಯವಾಗಿ ಹೆಚ್ಚಿದೆ. ಒಟ್ಟು ಸೋಂಕಿತರ ಪೈಕಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿರುವ ರೋಗಿಗಳ ಸಂಖ್ಯೆ ,೪೯,೪೩೧ ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಇದರಿಂದಾಗಿ ರಾಷ್ಟ್ರಮಟ್ಟದಲ್ಲಿ ದೇಶದ ಚೇತರಿಕೆಯ ಪ್ರಮಾಣವು ಶೇಕಡಾ ೬೩.೫೪ ಕ್ಕೆ ಏರಿದೆ.

ಶನಿವಾರ, ೪೮,೯೧೬ ಹೊಸ ಪ್ರಕರಣಗಳು ವರದಿಯಾದ ಬಳಿಕ, ದೇಶದ ಕೊರೋನವೈರಸ್ ಸೋಂಕಿನ ಸಂಖ್ಯೆ ೧೩,೩೬,೮೬೧ ಕ್ಕೆ ಏರಿದರೆ, ಸಾವಿನ ಸಂಖ್ಯೆ ೩೧,೩೫೮ ಕ್ಕೆ ಏರಿತು, ಕಳೆದ ೨೪ ಗಂಟೆಗಳಲ್ಲಿ ೭೫೭ ಜನರು ವೈರಲ್ ಸೋಂಕಿಗೆ ಬಲಿಯಾಗಿದ್ದಾರೆ. ಕೋವಿಡ್ -೧೯ ಪ್ರಕರಣಗಳು ೪೫,೦೦೦ ಕ್ಕಿಂತ ಹೆಚ್ಚಾಗಿ ವರದಿಯಾಗುತ್ತಿರುವುದು  ಸತತ ಮೂರನೇ ದಿನವಾಗಿದೆ.

ದೇಶದಲ್ಲಿ ಪ್ರಸ್ತುತ ,೫೬,೦೭೧ ಸಕ್ರಿಯ ಕೊರೋನಾ ಪ್ರಕರಣಗಳು ಇವೆ.

ಶುಕ್ರವಾರ, ಭಾರತವು ಕೊರೋನಾ ಸೋಂಕಿನ ವಿರುದ್ಧ ತಯಾರಿಸಲಾಗಿರುವ ದೇಶೀಯಕೊವಾಕ್ಸಿನ್ಲಸಿಕೆಯನ್ನು ಮೊತ್ತ ಮೊದಲ ಬಾರಿಗೆ ಮನುಷ್ಯರ ಮೇಲೆ ಪ್ರಯೋಗಿಸಿತು ಎಂದು ದೆಹಲಿಯ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಏಮ್ಸ್) ಹೇಳಿಕೆಯೊಂದರಲ್ಲಿ ತಿಳಿಸಿದೆ. ಸ್ವ ಇಚ್ಛೆಯಿಂದ ಮುಂದೆ ಬಂದಿರುವ ರೋಗಿಗಳಿಗೆ ಟ್ರಯಲ್ ಕೋವಿಡ್ -೧೯ ಲಸಿಕೆಯ ಮೊದಲ ಪ್ರಮಾಣವನ್ನು ನೀಡಲಾಯಿತು.

ಜಾಗತಿಕವಾಗಿ ಪ್ರಾಯೋಗಿಕ ಪರೀಕ್ಷೆಗಳಲ್ಲಿರುವ ಸುಮಾರು ೨೪ ಲಸಿಕೆಗಳಲ್ಲಿಕೊವಾಕ್ಸಿನ್ಕೂಡಾ ಒಂದಾಗಿದೆ. ಕೋವಾಕ್ಸಿನ್‌ನ ಎರಡು ಹಂತದ ಯಾದೃಚ್ಛಿಕ ಪ್ಲಸೀಬೊ-ನಿಯಂತ್ರಿತ ಕ್ಲಿನಿಕಲ್ ಪ್ರಯೋಗಗಳನ್ನು ನಡೆಸಲು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯು ಆಯ್ಕೆ ಮಾಡಿದ ೧೨ ತಾಣಗಳಲ್ಲಿ ಏಮ್ಸ್ ಕೂಡ ಸೇರಿದೆ.

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್-ಐಸಿಎಂಆರ್) ಮತ್ತು ಪುಣೆಯ ರಾಷ್ಟ್ರೀಯ ವೈರಾಣು ಸಂಸ್ಥೆ (ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ-ಎನ್‌ಐವಿ) ಸಹಯೋಗದೊಂದಿಗೆ ಹೈದರಾಬಾದ್ ಮೂಲದ ಭಾರತ ಬಯೋಟೆಕ್ ಅಭಿವೃದ್ಧಿ ಪಡಿಸಿದ ದೇಶದ ಮೊದಲ ಕೋವಿಡ್ -೧೯ ಲಸಿಕೆ ಕೊವಾಕ್ಸಿನ್, ಇತ್ತೀಚೆಗೆ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾದಿಂದ (ಡಿಸಿಜಿಐ) ಮಾನವ ಕ್ಲಿನಿಕಲ್ ಪ್ರಯೋಗಗಳಿಗೆ ಅನುಮೋದನೆ ಪಡೆದಿದೆ.

No comments:

Advertisement