ಗ್ರಾಹಕರ ಸುಖ-ದುಃಖ

My Blog List

Friday, July 31, 2020

ಭಾರತ: ಕೊರೋನಾ ಸಾವಿನ ಪ್ರಮಾಣ ಶೇ.೨.೧ಕ್ಕೆ ಇಳಿಕೆ

ಭಾರತ: ಕೊರೋನಾ

ನವದೆಹಲಿ: ದೇಶದ ಒಟ್ಟು ಕೊರೋನಾ ಸೋಂಕಿತರ ಪೈಕಿ ೧೦ ಲಕ್ಷಕ್ಕೂ ಹೆಚ್ಚು ಮಂದಿ ಸಂಪೂರ್ಣ ಗುಣಮುಖರಾಗಿ ಚೇತರಿಸಿದ್ದು, ಸಾವಿನ ಪ್ರಮಾಣ ಶೇಕಡಾ .೧ಕ್ಕೆ ಇಳಿದಿದೆ. ಇದು ವಿಶ್ವದಲ್ಲೇ ಅತ್ಯಂತ ಕಡಿಮೆ ಎಂದು ಕೇಂದ್ರ ಸರ್ಕಾರ  2020 ಜುಲೈ 30ರ ಗುರುವಾರ ತಿಳಿಸಿತು.

ಕೇಂದ್ರ ಆರೋಗ್ಯ ಸಚಿವಾಲಯದ ಗುರುವಾರದ ಅಂಕಿ ಸಂಖ್ಯೆಗಳ ಪ್ರಕಾರ ಭಾರತದ ಒಟ್ಟು ಕೊರೋನಾ ಸೋಂಕು ಪ್ರಕರಣಗಳ ಸಂಖ್ಯೆ ೧೬,೧೬,೭೬೭. ಸಾವಿನ ಸಂಖ್ಯೆ ೩೫,೩೭೪. ಚೇತರಿಸಿದವರ ಸಂಖ್ಯೆ ೧೦,೨೯,೦೬೯.

ದೇಶಾದ್ಯಂತ ಹೆಚ್ಚಿರುವ ಕೊರೊನಾ ಸುನಾಮಿ ವಿರುದ್ಧ ಹೋರಾಟ ನಡೆಸಲು ಹಲವಾರು ತಂತ್ರಗಳನ್ನು ಉಪಯೋಗಿಸಲಾಗಿದೆ. ಬಗ್ಗೆ ಈಗಾಗಲೇ ಚರ್ಚೆಗೆ ಬಂದಿರುವ ಸಮುದಾಯ ಪ್ರತಿರೋಧಕ ಶಕ್ತಿ (ಹರ್ಡ್ ಇಮ್ಯುನಿಟಿ)ಯನ್ನು ಪ್ರಮುಖ ಅಸ್ತ್ರವನ್ನಾಗಿ ಬಳಸಲು ಸಾಧ್ಯವಿಲ್ಲ ಎಂದು ಅದು ಸ್ಪಷ್ಟಪಡಿಸಿದೆ.

ಕುರಿತು ಮಾಹಿತಿ ನೀಡಿದ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ಆರ್. ಭೂಷಣ್, ’ಭಾರತದಂತಹ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶದಲ್ಲಿ ಹರ್ಡ್ ಇಮ್ಯುನಿಟಿಯನ್ನು ಪ್ರಮುಖ ಅಸ್ತ್ರವನ್ನಾಗಿ ಬಳಸಲು ಸಾಧ್ಯವಿಲ್ಲ. ಸದ್ಯಕ್ಕೆ ಕೊರೊನಾದ ಲಕ್ಷಣಗಳನ್ನು ನೋಡಿಕೊಂಡು ಚಿಕಿತ್ಸೆ ನೀಡಬೇಕಾಗಿದೆ ಎಂದು ತಿಳಿಸಿದರು.

ಒಟ್ಟು ಜನಸಂಖ್ಯೆಯ ಶೇಕಡ ೭೦ ರಿಂದ ೯೦ರಷ್ಟು ಮಂದಿಗೆ ಸೋಂಕು ತಗುಲಿದಾಗ ಹರ್ಡ್ ಇಮ್ಯುನಿಟಿ ತಂತ್ರ ಪ್ರಯೋಜನಕಾರಿ. ಆದರೆ ಇದನ್ನೇ ಈಗ ಬಳಸಲು ಸಾಧ್ಯವಿಲ್ಲ ಎಂದು ಭೂಷಣ್ ಹೇಳಿದರು.

ದೇಶದಲ್ಲಿ ಈಗ ದಾಖಲೆಯ ೧೦ ಲಕ್ಷಕ್ಕೂ ಹೆಚ್ಚು ಮಂದಿ ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದಾರೆ. ವೈದ್ಯರು, ನರ್ಸ್ಗಳು ಹಾಗೂ ಕೊರೊನಾ ವಾರಿಯರ್ಗಳ ಅವಿರತ ಶ್ರಮದಿಂದಾಗಿ ಇದು ಸಾಧ್ಯವಾಗಿದೆ ಎಂದು ಅವರು ವಿವರಿಸಿದರು.

ದೇಶದ ಒಟ್ಟು ೧೬ ರಾಜ್ಯಗಳಲ್ಲಿ ಕೊರೊನಾ ಸೋಂಕಿನಿಂದ ಗುಣಮುಖರಾದವರ ಒಟ್ಟಾರೆ ಪ್ರಮಾಣ ರಾಷ್ಟ್ರಮಟ್ಟಕ್ಕಿಂತ ಹೆಚ್ಚಾಗಿದೆ. ನವದೆಹಲಿಯಲ್ಲಿ ಶೇ. ೮೮ ರಷ್ಟು ಮಂದಿ ಕೊರೊನಾ ಮುಕ್ತರಾಗಿದ್ದಾರೆ. ಲಡಾಖ್ನಲ್ಲಿ  ಶೇ. ೮೦, ಹರಿಯಾಣದಲ್ಲಿ ಶೇ. ೭೮, ಅಸ್ಸಾಮಿನಲ್ಲಿ ಶೇ. ೭೬, ತೆಲಂಗಾಣದಲ್ಲಿ ಶೇ. ೭೪, ತಮಿಳುನಾಡು, ಗುಜರಾತಿನಲ್ಲಿ ತಲಾ ಶೇ. ೭೩, ರಾಜಸ್ಥಾನದಲ್ಲಿ ಶೇ. ೭೦, ಮಧ್ಯಪ್ರದೇಶದಲ್ಲಿ ಶೇ. ೬೯, ಗೋವಾದಲ್ಲಿ ಶೇ. ೬೮ರಷ್ಟು ಮಂದಿ ಗುಣಮುಖರಾಗಿದ್ದಾರೆ ಎಂದು ಅವರು ನುಡಿದರು.

ಕೊರೊನಾ ಲಸಿಕೆ ಅಭಿವೃದ್ಧಿಪಡಿಸುವ ಕಾರ್ಯ ಗಮನಾರ್ಹ ಪ್ರಗತಿ ಸಾಧಿಸಿದೆ. ಒಟ್ಟು ಮೂರು ಕಡೆ ಪ್ರಯೋಗ ಮುಂದುವರೆದಿದೆ. ಕ್ಲಿನಿಕಲ್ ಟ್ರಯಲ್ ಈಗ ಮೂರನೇ ಹಂತದಲ್ಲಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಪ್ರಗತಿ ಕಾಣುವ ನಿರೀಕ್ಷೆ ಇದೆ ಎಂದು ಭೂಷಣ್ ಹೇಳಿದರು.

ಭಾರತದಲ್ಲಿ ಮತ್ತೊಂದು ಪ್ರಮುಖ ಅಂಶ ಅಂದರೆ ಮರಣ ಪ್ರಮಾಣ ಕಡಿಮೆ ಇರುವುದು. ಇಡೀ ವಿಶ್ವಕ್ಕೆ ಹೋಲಿಸಿದರೆ ಭಾರತದಲ್ಲಿ ಮರಣ ಪ್ರಮಾಣ ಶೇ. . ರಷ್ಟಿದೆ.

ಹರ್ಡ್ ಇಮ್ಯುನಿಟಿ: ಏನಿದು?

ವೈರಸ್ಸುಗಳ ಹಾವಳಿ ಹೆಚ್ಚಾಗಿ, ಸೋಂಕು ಹೆಚ್ಚಾದಾಗ ಸಮುದಾಯದಲ್ಲಿ ಪ್ರತಿರೋಧಕ ಶಕ್ತಿ ಹೆಚ್ಚಿಸಲು ಒತ್ತು ನೀಡಲಾಗುವುದು. ಜನತೆಯಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚು ಮಾಡಿ ಸೋಂಕು ಹರಡದಂತೆ ತಡೆಯುವ ವಿಧಾನವನ್ನು ಹರ್ಡ್ ಇಮ್ಯುನಿಟಿ (ಸಮುದಾಯ ಪ್ರತಿರೋಧ ಶಕ್ತಿ) ಎಂದು ಕರೆಯಲಾಗುತ್ತದೆ.

ಹರ್ಡ್ ಇಮ್ಯುನಿಟಿ ಎನ್ನುವುದು ವೈರಸ್ ಅಥವಾ ರೋಗದಿಂದ ನಮಗೆ ಸಿಗುವ ಪರೋಕ್ಷ ರಕ್ಷಣೆ. ಇದರಿಂದ ಜನರನ್ನು ರಕ್ಷಣೆ ಮಾಡಬಹುದು. ಒಂದು ಲಸಿಕೆ ಅಭಿವೃದ್ಧಿಪಡಿಸಿದಾಗ ಅಥವಾ ಜನರಿಗೆ ಸೋಂಕು ತಗುಲಿ ಗುಣಮುಖರಾದಾಗ ಇದು ಹೆಚ್ಚು ಅನುಕೂಲವಾಗುತ್ತದೆ. ಅತಿ ಹೆಚ್ಚು ಜನಸಂಖ್ಯೆಗೆ ಸೋಂಕು ಹರಡಿ ಗುಣವಾದಾಗ ಅಥವಾ ಅತಿ ಹೆಚ್ಚು ಜನರು ಪ್ರತಿಯೋಧ ಶಕ್ತಿ ಬೆಳೆಸಿಕೊಂಡಾಗ ವೈರಸ್ ಹರಡುವಿಕೆ ಕ್ರಮೇಣ ಕಡಿಮೆಯಾಗುತ್ತದೆ.

No comments:

Advertisement