ಭಾರತದಲ್ಲಿ ತಗ್ಗಿತು ಅಪೌಷ್ಟಿಕತೆ, ಹೆಚ್ಚಿತು ಬೊಜ್ಜು..!
ವಿಶ್ವಸಂಸ್ಥೆ: ಭಾರತದಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿರುವವರ ಸಂಖ್ಯೆ ೬೦ ದಶಲಕ್ಷದಷ್ಟು (ಮಿಲಿಯನ್) ಇಳಿಕೆಯಾಗಿದೆ. ೨೦೦೪-೦೬ರಲ್ಲಿ ಶೇಕಡಾ ೨೧.೭ ರಷ್ಟಿದ್ದ ಅಪೌಷ್ಟಿಕ ಜನರ ಪ್ರಮಾಣ ೨೦೧೭-೧೯ರಲ್ಲಿ ಶೇಕಡಾ ೧೪ ಕ್ಕೆ ಇಳಿದಿದೆ ಎಂದು ವಿಶ್ವಸಂಸ್ಥೆ ವರದಿಯೊಂದು 2020 ಜುಲೈ 14ರ ಮಂಗಳವಾರ ತಿಳಿಸಿತು.
2020 ಜುಲೈ 13ರ ಸೋಮವಾರ ಬಿಡುಗಡೆಯಾದ ರಾಜ್ಯ ಆಹಾರ ಭದ್ರತೆ ಮತ್ತು ಪೋಷಣೆಯ ವರದಿಯು, ಭಾರತದಲ್ಲಿ ಕಡಿಮೆ ಕುಂಠಿತ ಮಕ್ಕಳು ಆದರೆ ಹೆಚ್ಚು ಬೊಜ್ಜು ವಯಸ್ಕರು ಇದ್ದಾರೆ ಎಂದು ಹೇಳಿತು.
ಹಸಿವು ಮತ್ತು ಅಪೌಷ್ಟಿಕತೆಯನ್ನು ಕೊನೆಗೊಳಿಸುವ ಅತ್ಯಂತ ಅಧಿಕೃತ ಜಾಗತಿಕ ಅಧ್ಯಯನ ಎಂಬುದಾಗಿ ಪರಿಗಣಿಸಲಾಗಿರುವ ಈ ವರದಿಯು ಭಾರತದಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿರುವವರ ಸಂಖ್ಯೆ ೨೦೦೪ ರಲ್ಲಿ ೨೪.೯೪ ಕೋಟಿಯಷ್ಟು (೨೪೯.೪ ಮಿಲಿಯನ್) ಇದ್ದುದು ೨೦೧೭ರ ವೇಳೆಗೆ ೧೯.೯೨ ಕೋಟಿಗೆ (೧೯೯.೨ ಮಿಲಿಯನ್) ಇಳಿದಿದೆ ಎಂದು ಹೇಳಿತು.
ಶೇಕಡಾವಾರು ಪ್ರಕಾರ, ಭಾರತದ ಒಟ್ಟು ಜನಸಂಖ್ಯೆಯಲ್ಲಿ ಅಪೌಷ್ಟಿಕತೆಯ ಹರಡುವಿಕೆಯು ೨೦೦೪-೦೬ರಲ್ಲಿ ಇದ್ದ ೨೧.೭ ಶೇಕಡಾದಿಂದ ೨೦೧೭-೧೯ರಲ್ಲಿ ೧೪ ಕ್ಕೆ ಇಳಿದಿದೆ ಎಂದು ಅದು ಹೇಳಿತು.
ಅಪೌಷ್ಟಿಕತೆಯ ಕಡಿತವನ್ನು ತೋರಿಸುವ ಪೂರ್ವ ಮತ್ತು ದಕ್ಷಿಣ ಏಷ್ಯಾ ಖಂಡದ ಎರಡು ಉಪಪ್ರದೇಶಗಳಲ್ಲಿ ಎರಡು ದೊಡ್ಡ ಆರ್ಥಿಕತೆಗಳಾದ ಚೀನಾ ಮತ್ತು ಭಾರತ ಪ್ರಾಬಲ್ಯ ಹೊಂದಿವೆ.
ವಿಭಿನ್ನ ಪರಿಸ್ಥಿತಿಗಳು, ಇತಿಹಾಸಗಳು ಮತ್ತು ಪ್ರಗತಿಯ ಪ್ರಮಾಣಗಳ ಹೊರತಾಗಿಯೂ, ದೀರ್ಘಕಾಲೀನ ಆರ್ಥಿಕ ಬೆಳವಣಿಗೆ, ಕುಸಿದ ಅಸಮಾನತೆ ಮತ್ತು ಮೂಲ ಸರಕು ಮತ್ತು ಸೇವೆಗಳಿಗೆ ಸುಧಾರಣೆಯ ಪ್ರವೇಶದಿಂದ ಉಭಯ ದೇಶಗಳಲ್ಲಿನ ಹಸಿವು ಕಡಿಮೆಯಾಗಿದೆ ಎಂದು ವರದಿ ಹೇಳಿದೆ.
ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ (ಎಫ್‌ಎಒ), ಕೃಷಿ ಅಭಿವೃದ್ಧಿಗಾಗಿ ಅಂತಾರಾಷ್ಟ್ರೀಯ ನಿಧಿ (ಐಎಫ್‌ಎಡಿ), ವಿಶ್ವಸಂಸ್ಥೆಯ ಮಕ್ಕಳ ನಿಧಿ (ಯುನಿಸೆಫ್), ವಿಶ್ವಸಂಸ್ತೆ ವಿಶ್ವ ಆಹಾರ ಕಾರ್ಯಕ್ರಮ (ಡಬ್ಲ್ಯುಎಫ್‌ಪಿ) ಮತ್ತು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್ ಒ) ಜಂಟಿಯಾಗಿ ಈ ವರದಿಯನ್ನು ಸಿದ್ಧಪಡಿಸಿವೆ.
ಭಾರತದಲ್ಲಿ ೫ ವರ್ಷದೊಳಗಿನ ಮಕ್ಕಳಲ್ಲಿ ಬೆಳವಣಿಗೆ ಕುಂಠಿತಗೊಳ್ಳುವಿಕೆಯ ಪ್ರಮಾಣವು ೨೦೧೨ ರಲ್ಲಿದ್ದ ಶೇಕಡಾ ೪೭.೮ ರಿಂದ ೨೦೧೯ ರಲ್ಲಿ ಶೇಕಡಾ ೩೪.೭ ಕ್ಕೆ ಅಥವಾ ೨೦೧೨ ರಲ್ಲಿ ಇದ್ದ ೬.೨೦ ಕೋಟಿಯಿಂದ (೬೨ ಮಿಲಿಯನ್) ೨೦೧೯ ರಲ್ಲಿ ೪.೦೩ ಕೋಟಿಗೆ (೪೦.೩ ಮಿಲಿಯನ್) ಇಳಿದಿದೆ ಎಂದು ಅದು ಹೇಳಿದೆ.
ಆದರೆ ಆತಂಕಕಾರಿ ಅಂಶವೆಂದರೆ ೨೦೧೨-೧೬ರ ನಡುವೆ ಹೆಚ್ಚಿನ ಭಾರತೀಯ ವಯಸ್ಕರು ಬೊಜ್ಜು ಹೊಂದಿದ್ದಾರೆ ಎಂದು ವರದಿ ಹೇಳಿದೆ.
ಬೊಜ್ಜು ಹೊಂದಿರುವ ವಯಸ್ಕರ ಸಂಖ್ಯೆ (೧೮ ವರ್ಷ ಮತ್ತು ಅದಕ್ಕಿಂತ ಹೆಚ್ಚಿನವರು) ೨೦೧೨ ರಲ್ಲಿ ೨.೫೨ ಕೋಟಿಯಿಂದ (೨೫.೨ ಮಿಲಿಯನ್) ೨೦೧೬ ರಲ್ಲಿ ೩.೪೩ ಕೋಟಿಗೆ (೩೪.೩ ಮಿಲಿಯನ್) ಏರಿತು, ಅಂದರೆ ಶೇಕಡಾ ೩.೧ ರಿಂದ ಶೇಕಡಾ ೩.೯ ಕ್ಕೆ ಏರಿದೆ.
ಗರ್ಭಿಣಿಯರಾಗುವ ವಯಸ್ಸಿನಲ್ಲಿ (೧೫-೪೯ ವಯೋಮಾನ) ರಕ್ತಹೀನತೆಯಿಂದ ಬಳಸಲು ಮಹಿಳೆಯರ ಸಂಖ್ಯೆ ೨೦೧೨ ರಲ್ಲಿ೧೬.೫೬ ಕೋಟಿಯಿಂದ (೧೬೫.೬ ಮಿಲಿಯನ್) ೨೦೧೬ ರಲ್ಲಿ ೧೭.೫೬ ಕೋಟಿಗೆ (೧೭೫.೬ ಮಿಲಿಯನ್) ಏರಿತು.
ಸ್ತನ್ಯಪಾನ ಮಾಡುವ ಕೇವಲ ೫ ತಿಂಗಳ ವಯಸ್ಸಿನ ಶಿಶುಗಳ ಸಂಖ್ಯೆ ೨೦೧೨ ರಲ್ಲಿ ೧.೧೨ ಕೋಟಿ (೧೧.೨ ಮಿಲಿಯನ್) ಇದ್ದುದು ೨೦೧೯ ರಲ್ಲಿ ೧.೩೯ ಕೋಟಿಗೆ (೧೩.೯ ಮಿಲಿಯನ್) ಏರಿತು.
೨೦೧೯ ರಲ್ಲಿ ಜಾಗತಿಕವಾಗಿ ಸುಮಾರು ೬೯ ಕೋಟಿ (೬೯೦ ಮಿಲಿಯನ್) ಜನರು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ (ಅಥವಾ ಹಸಿದಿದ್ದಾರೆ), ಇದು ೨೦೧೮ ರಿಂದ ೧ ಕೋಟಿಯಷ್ಟು (೧೦ ಮಿಲಿಯನ್) ಹೆಚ್ಚಾಗಿದೆ ಎಂದು ವರದಿ ಹೇಳಿದೆ.
ಹಸಿದವರು ಏಷ್ಯಾದಲ್ಲಿ ಹೆಚ್ಚು, ಆದರೆ ಆಫ್ರಿಕಾದಲ್ಲಿ ಇರ ಸಂಖ್ಯೆ ವೇಗವಾಗಿ ಹೆಚ್ಚುತ್ತಿದೆ.
ವಿಶ್ವಾದ್ಯಂತ ಕೋವಿಡ್-೧೯ ಸಾಂಕ್ರಾಮಿಕವು ೨೦೨೦ರ ಅಂತ್ಯದ ವೇಳೆಗೆ ೧೩ ಕೋಟಿಗೂ (೧೩೦ ಮಿಲಿಯನ್) ಹೆಚ್ಚು ಜನರನ್ನು ದೀರ್ಘಕಾಲದ ಹಸಿವಿಗೆ ತಳ್ಳಬಹುದು ಎಂದು ವರದಿ ಮುನ್ಸೂಚನೆ ನೀಡಿದೆ.
No comments:
Post a Comment