Thursday, August 27, 2020

ನೀಟ್, ಜೆಇಇ ನಿಗದಿಯಂತೆ: ಕೇಂದ್ರದ ಸಮರ್ಥನೆ

 ನೀಟ್, ಜೆಇಇ ನಿಗದಿಯಂತೆ:  ಕೇಂದ್ರದ ಸಮರ್ಥನೆ


ನವದೆಹಲಿ: ಕೊರೋನಾವೈರಸ್ ಸಾಂಕ್ರಾಮಿಕದ ಮಧ್ಯೆ ನೀಟ್ ಮತ್ತು ಜೆಇಇ ಪರೀಕ್ಷೆಗಳನ್ನು ನಡೆಸುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ಅವರು 2020 ಆಗಸ್ಟ್ 27ರ ಗುರುವಾರ ಪ್ರಬಲವಾಗಿ ಸಮರ್ಥಿಸಿಕೊಂಡರು.

ಮೌನವಾಗಿರುವ ಬಹುಸಂಖ್ಯಾತ ವಿದ್ಯಾರ್ಥಿಗಳು ಪರೀಕ್ಷೆಗಳು ನಡೆಯಬೇಕೆಂದು ಬಯಸುತ್ತಾರೆ ಎಂದು ಸಚಿವರು ನುಡಿದರು.

"ಜೆಟಿಇಯ .೫೮ ಲಕ್ಷ ಅಭ್ಯರ್ಥಿಗಳಲ್ಲಿ . ಲಕ್ಷ ಮಂದಿ ತಮ್ಮ ಪ್ರವೇಶ ಪತ್ರಗಳನ್ನು ಡೌನ್ಲೋಡ್ ಮಾಡಿಕೊಂಡಿದ್ದಾರೆ ಎಂದು ಎನ್ಟಿಎ ಡಿಜಿ ಹೇಳಿದೆ. ನೀಟ್ಗಾಗಿ ೧೫.೯೭ ಲಕ್ಷ ಅಭ್ಯರ್ಥಿಗಳ ಪೈಕಿ ೧೦ ಲಕ್ಷಕ್ಕೂ ಹೆಚ್ಚು ಮಂದಿ ತಮ್ಮ ಪ್ರವೇಶ ಪತ್ರಗಳನ್ನು ಕೇವಲ ೨೪ ಗಂಟೆಗಳಲ್ಲಿ ಡೌನ್ಲೋಡ್ ಮಾಡಿದ್ದಾರೆ. ಯಾವುದೇ ಬೆಲೆ ತೆತ್ತಾದರೂ ಪರೀಕ್ಷೆಗಳನ್ನು ನಡೆಸಬೇಕೆಂದು ವಿದ್ಯಾರ್ಥಿಗಳು ಬಯಸುತ್ತಾರೆ ಎಂಬುದನ್ನು ಇದು ತೋರಿಸುತ್ತದೆಎಂದು ಪೋಖ್ರಿಯಾಲ್ ಹೇಳಿದರು.

"ಜೆಇಇ ಪರೀಕ್ಷಾ ಕೇಂದ್ರಗಳನ್ನು ೫೭೦ ರಿಂದ ೬೬೦ಕ್ಕೆ ಹೆಚ್ಚಿಸಲಾಗಿದ್ದು, ವಿದ್ಯಾರ್ಥಿಗಳ ಅನುಕೂಲಕ್ಕಾಗಿ ನೀಟ್ ಕೇಂದ್ರಗಳನ್ನು ,೫೪೬ ರಿಂದ ಈಗ ,೮೪೨ಕ್ಕೆ ಹೆಚ್ಚಿಸಲಾಗಿದೆ. ವಿದ್ಯಾರ್ಥಿಗಳಿಗೆ ಅವರ ಆಯ್ಕೆಯ ಪರೀಕ್ಷಾ ಕೇಂದ್ರಗಳನ್ನು ಸಹ ನೀಡಲಾಗಿದೆ" ಎಂದು ಸಚಿವರು ನುಡಿದರು.

ವಿದ್ಯಾರ್ಥಿಗಳ ದೇಶವ್ಯಾಪಿ ಪ್ರತಿಭಟನೆಯ ಜೊತೆಗೆ ವಿರೋಧ ಪಕ್ಷಗಳು ಕೈಜೋಡಿಸುತ್ತಿದ್ದಂತೆಯೇ, ’ಶಿಕ್ಷಣದ ರಾಜಕೀಯಕರಣವನ್ನುಖಂಡಿಸಿದ ಪೋಖ್ರಿಯಾಲ್  ಸುಪ್ರೀಂ ಕೋರ್ಟಿನ ಆದೇಶಗಳಿಗೆ ಬದ್ಧರಾಗಿರುವಂತೆ ಎಲ್ಲರಿಗೂ ಮನವಿ ಮಾಡಿದರು.

ಶೂನ್ಯ ಶೈಕ್ಷಣಿಕ ವರ್ಷವು ವಿದ್ಯಾರ್ಥಿಗಳಿಗೆ ಅಪಾರ ನಷ್ಟವನ್ನುಂಟು ಮಾಡುತ್ತದೆ ಮತ್ತು ವೇಳಾಪಟ್ಟಿಯ ಪ್ರಕಾರ ಪರೀಕ್ಷೆಗಳನ್ನು ನಡೆಸುವಂತೆ ತಮಗೆ ಅಭ್ಯರ್ಥಿಗಳು ಮತ್ತು ಅವರ ಪೋಷಕರಿಂದ ಹಲವಾರು -ಮೇಲ್ಗಳ ಮೂಲಕ ಮನವಿ ಮಾಡಿದ್ದಾರೆ ಎಂದುನಿಶಾಂಕ್ಪೋಖ್ರಿಯಾಲ್ ಸಂದರ್ಶನ ಒಂದರಲ್ಲಿ ತಿಳಿಸಿದರು.

ಸಾಂಕ್ರಾಮಿಕ ರೋಗವು ಯಾವಾಗ ಕೊನೆಗೊಳ್ಳುತ್ತದೆ ಎಂಬುದರ ಬಗ್ಗೆ ಯಾವುದೇ ಖಚಿತತೆಯಿಲ್ಲ. ಆದ್ದರಿಂದ ಆದ್ದರಿಂದ ಮುನ್ನೆಚ್ಚರಿಕೆಗಳೊಂದಿಗೆ ಮುಂದುವರೆಯುವುದೇ ಪರಿಹಾರವಾಗಿದೆಎಂದು ಅವರು ನುಡಿದರು.

ಕೊರೋನವೈರಸ್ ಸಾಂಕ್ರಾಮಿಕದ ಮಧ್ಯೆ ನೀಟ್ ಮತ್ತು ಜೆಇಇಗಳನ್ನು ನಡೆಸುವ ಕೇಂದ್ರದ ನಿರ್ಧಾರದ ವಿರುದ್ಧ  ವಿರೋಧ ಪಕ್ಷಗಳು ವಾಗ್ದಾಳಿ ನಡೆಸಿದ ಒಂದು ದಿನದ ಬಳಿಕ, ಪ್ರತಿಭಟನಾ ನಿರತ ವಿದ್ಯಾರ್ಥಿಗಳಿಗೆ ಬಲತುಂಬಲು ರಾಷ್ಟ್ರವ್ಯಾಪಿ ಪ್ರತಿಭಟನೆ ನಡೆಸಲು ಕಾಂಗ್ರೆಸ್ ನಿರ್ಧರಿಸಿದೆ.

ಪರೀಕ್ಷೆಗಳನ್ನು ಮುಂದೂಡದಿದ್ದರೆ ಸಾರಿಗೆ ಕೊರತೆ ಮತ್ತು ಅನಿವಾರ್ಯ ಜನಸಂದಣಿಯ ಬಗ್ಗೆ ಆತಂಕವನ್ನು ಕಾಂಗ್ರೆಸ್ ಹಾಗೂ ಇತರ ವಿರೋಧ ಪಕ್ಷಗಳು ವ್ಯಕ್ತ ಪಡಿಸಿವೆ.

ಕಾಂಗ್ರೆಸ್ ಹಂಗಾಮೀ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದಿದ್ದ ವೆಬಿನಾರ್ ಕಾರ್ಯಕ್ರಮದಲ್ಲಿ ಮಹಾರಾಷ್ಟ್ರ, ಪಶ್ಚಿಮ ಬಂಗಾಳ ಮತ್ತು ಪಂಜಾಬ್ ಮುಖ್ಯಮಂತ್ರಿಗಳು ಸಾಂಕ್ರಾಮಿಕ ಸಂದರ್ಭದಲ್ಲಿ ಪರೀಕ್ಷೆಗಳನ್ನು ನಡೆಸುವುದರ ವಿರುದ್ಧ ಮತ್ತೆ ಸುಪ್ರೀಂ ಕೋರ್ಟ್ ಮೆಟ್ಟಿಲೇರುವಂತೆ ಒತ್ತಾಯಿಸಿದ್ದರು.

ಕೊರೋನವೈರಸ್ ಸಾಂಕ್ರಾಮಿಕ ರೋಗವನ್ನು ಗಮನದಲ್ಲಿಟ್ಟುಕೊಂಡು ನೀಟ್ ಮತ್ತು ಜೆಇಇ ಪರೀಕ್ಷೆಗಳನ್ನು ಮುಂದೂಡಬೇಕೆಂಬ ಬೇಡಿಕೆಯನ್ನು ಬೆಂಬಲಿಸಿದ ಬಿಜೆಪಿಯೇತರ ಆಡಳಿತದ ಏಳು ಮುಖ್ಯಮಂತ್ರಿಗಳು ಬುಧವಾರ ವಿಷಯದ ಬಗ್ಗೆ ಜಂಟಿಯಾಗಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ನಿರ್ಧರಿಸಿದ್ದಾರೆ.

ದೇಶಾದ್ಯಂತ ಕೋವಿಡ್-೧೯ ಪ್ರಕರಣಗಳು ಹೆಚ್ಚುತ್ತಿರುವ ಸಮಯದಲ್ಲಿ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (ನೀಟ್) ಮತ್ತು ಜಂಟಿ ಪ್ರವೇಶ ಪರೀಕ್ಷೆ (ಜೆಇಇ) ನಡೆಸುವುದರ ವಿರುದ್ಧ ಡಿಎಂಕೆ ಮತ್ತು ಆಪ್ (ಎಎಪಿ)ಯಂತಹ ಪಕ್ಷಗಳು ಕೂಡಾ ದನಿ ಸೇರಿಸಿವೆ.

ಕೋವಿಡ್-೧೯ ಕಾರಣದಿಂದಾಗಿ ಪರೀಕ್ಷೆಗಳನ್ನು ಮುಂದೂಡಬೇಕೆಂದು ಒತ್ತಾಯಿಸುತ್ತಿರುವ ವಿದ್ಯಾರ್ಥಿಗಳ ಪರ ಬ್ಯಾಟಿಂಗ್ ಮಾಡುತ್ತಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ  ಅವರು ಸಮಸ್ಯೆಗಳನ್ನು  ಆಲಿಸಿ ಸೌಹಾರ್ದಯುತ ಪರಿಹಾರ ಕಂಡುಕೊಳ್ಳಬೇಕು ಎಂದು ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.

"ನೀಟ್-ಜೆಇಇ ಆಕಾಂಕ್ಷಿಗಳು ತಮ್ಮ ಆರೋಗ್ಯ ಮತ್ತು ಭವಿಷ್ಯದ ಬಗ್ಗೆ ಚಿಂತಿತರಾಗಿದ್ದಾರೆ. ಅವರಿಗೆ ನಿಜವಾದ ಕಾಳಜಿಗಳಿವೆ. ಅಸ್ಸಾಂ ಮತ್ತು ಬಿಹಾರದಲ್ಲಿ ಸಾಂಕ್ರಾಮಿಕ ಮತ್ತು ಪ್ರವಾಹ-ಅಪಾಯದ ಸಮಯದಲ್ಲಿ ಸಾಗಣೆ, ವಸತಿ ಸಮಸ್ಯೆಗಳ ಜೊತೆಗೆ ಕೋವಿಡ್ ಸೋಂಕಿನ ಭಯವಿದೆಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

"ಜಿಒಐ ಎಲ್ಲ ಪಾಲುದಾರರನ್ನೂ ಆಲಿಸಬೇಕು ಮತ್ತು ಸ್ವೀಕಾರಾರ್ಹ ಪರಿಹಾರವನ್ನು ಕಂಡುಕೊಳ್ಳಬೇಕುಎಂದು ಅವರು ಆಗ್ರಹಿಸಿದ್ದಾರೆ.

ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆ, ನೀಟ್ ಮತ್ತು ಜೆಇಇ ಮುಂದೂಡಬೇಕು ಮತ್ತು ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲು ಪರ್ಯಾಯ ವಿಧಾನಗಳ ಬಗ್ಗೆ ಕೇಂದ್ರ ಸರ್ಕಾರ ಪರ್ಯಾಲೋಚಿಸಬೇಕು ಎಂದು ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಪ್ರತ್ಯೇಕವಾಗಿ ಆಗ್ರಹಿಸಿದ್ದಾರೆ.

"ಅವರು (ಕೇಂದ್ರ) ಶಿಷ್ಟಾಚಾರಗಳನ್ನು ಅನುಸರಿಸಲಾಗುವುದು ಎಂದು ಹೇಳುತ್ತಿದ್ದಾರೆ. ೨೮ ಲಕ್ಷ ವಿದ್ಯಾರ್ಥಿಗಳು ಅನುಸರಿಸಬೇಕೆಂದು ಕೇಂದ್ರವು ಬಯಸುತ್ತಿರುವ ಅದೇ ಶಿಷ್ಟಾಚಾರಗಳನ್ನು ಅನುಸರಿಸಿ, ಲಕ್ಷಾಂತರ ಭಾರತೀಯರು ಸೋಂಕಿಗೆ ಒಳಗಾಗಿದ್ದಾರೆಎಂದು ಆಪ್ ಸುದ್ದಿಗಾರರಿಗೆ ತಿಳಿಸಿತು.

"ನಾವು ೨೮ ಲಕ್ಷ ವಿದ್ಯಾರ್ಥಿಗಳನ್ನು ಪರೀಕ್ಷಾ ಕೇಂದ್ರಗಳಿಗೆ ಕಳುಹಿಸುವ ಅಪಾಯವನ್ನು ಹೇಗೆ ತೆಗೆದುಕೊಳ್ಳಲು ಸಾಧ್ಯ? ಮತ್ತು ಅವರು ಸೋಂಕಿಗೆ ಒಳಗಾಗುವುದಿಲ್ಲ ಎಂದು ಖಚಿತಪಡಿಸಿಕೊಳ್ಳುವುದು ಹೇಗೆ?’ ಎಂದು ಸಿಸೋಡಿಯಾ ಕೇಳಿದರು.

ಜಂಟಿ ಪ್ರವೇಶ ಪರೀಕ್ಷೆ (ಮುಖ್ಯ) ಮತ್ತು ರಾಷ್ಟ್ರೀಯ ಅರ್ಹತೆ-ಪ್ರವೇಶ ಪರೀಕ್ಷೆಯನ್ನು (ನೀಟ್-ಯುಜಿ) ಸೆಪ್ಟೆಂಬರಿನಲ್ಲಿ ನಿಗದಿಯಂತೆ ನಡೆಸಲಾಗುವುದು ಎಂದು ಶಿಕ್ಷಣ ಸಚಿವಾಲಯದ ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.

ಎರಡು ಪರೀಕ್ಷೆಗಳನ್ನು ಮುಂದೂಡಬೇಕೆಂದು ಕೋರಿ ಸಲ್ಲಿಸಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ಕಳೆದ ವಾರ ವಜಾಗೊಳಿಸಿತ್ತು, ವಿದ್ಯಾರ್ಥಿಗಳ "ಅಮೂಲ್ಯ" ಶೈಕ್ಷಣಿಕ ವರ್ಷವನ್ನು "ವ್ಯರ್ಥ ಮಾಡಲಾಗದು ಮತ್ತು ಜೀವನವು ಮುಂದುವರಿಯಬೇಕಾಗಿದೆಎಂದು ಸುಪ್ರೀಂಕೋರ್ಟ್ ಹೇಳಿತ್ತು.

ಜೆಇಇ-ಮೇನ್ಸ್ಗಾಗಿ ಒಟ್ಟು .೫೩ ಲಕ್ಷ ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದರೆ, ೧೫.೯೭ ಲಕ್ಷ ವಿದ್ಯಾರ್ಥಿಗಳು ನೀಟ್ಗೆ ನೋಂದಾಯಿಸಿಕೊಂಡಿದ್ದಾರೆ. ನೀಟ್ ಸೆಪ್ಟೆಂಬರ್ ೧೩ ರಂದು ನಡೆಯಲಿದ್ದು, ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆ ಜೆಇಇಗೆ (ಮುಖ್ಯ) ಸೆಪ್ಟೆಂಬರ್ - ಅವಧಿಯ ದಿನಾಂಕಗಳು ನಿಗದಿಯಾಗಿದೆ.

ಒಂದು ವಿಭಾಗವು ಪರೀಕ್ಷೆಗಳ ವಿರುದ್ಧ ಪ್ರತಿಭಟಿಸುತ್ತಿದ್ದರೆ, ೧೦೦ ಕ್ಕೂ ಹೆಚ್ಚು ಶಿಕ್ಷಣ ತಜ್ಞರು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದು ಸರ್ಕಾರದ ನಿರ್ಧಾರವನ್ನು ಬೆಂಬಲಿಸಿದ್ದಾರೆ.

"ಯುವಕರು ಮತ್ತು ವಿದ್ಯಾರ್ಥಿಗಳು ರಾಷ್ಟ್ರದ ಭವಿಷ್ಯ. ಆದರೆ ಕೋವಿಡ್-೧೯ ಸಾಂಕ್ರಾಮಿಕ ಪರಿಣಾಮವಾಗಿ ವಿದ್ಯಾರ್ಥಿಗಳ ವೃತ್ತಿ ಜೀವನ, ಪ್ರವೇಶ, ಮತ್ತು ತರಗತಿಗಳ ಬಗ್ಗೆ ಅನಿಶ್ಚಿತತೆಯ ಮೋಡಗಳು ಮುಸುಕಿವೆ. ಅದನ್ನು ಶೀಘ್ರದಲ್ಲಿಯೇ ಪರಿಹರಿಸಬೇಕಾಗಿದೆಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.

ಪ್ರತಿ ವರ್ಷದಂತೆ, ವರ್ಷವೂ ಸಹ ಲಕ್ಷಾಂತರ ವಿದ್ಯಾರ್ಥಿಗಳು ತಮ್ಮ ೧೨ ನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ ಮತ್ತು ಈಗ ಮುಂದಿನ ಹಂತಕ್ಕಾಗಿ ಕುತೂಹಲದಿಂದ ಮನೆಯಲ್ಲಿ ಕಾಯುತ್ತಿದ್ದಾರೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.

"ಜೆಇಇ-ಮೇನ್ಸ್ ಮತ್ತು ನೀಟ್ ದಿನಾಂಕಗಳನ್ನು ಸರ್ಕಾರ ಘೋಷಿಸಿದೆ, ಪರೀಕ್ಷೆಗಳನ್ನು ನಡೆಸಲು ಯಾವುದೇ ವಿಳಂಬವು ವಿದ್ಯಾರ್ಥಿಗಳಿಗೆ ಅಮೂಲ್ಯವಾದ ವರ್ಷವನ್ನು ವ್ಯರ್ಥ ಮಾಡುತ್ತದೆ. ನಮ್ಮ ಯುವಜನರು ಮತ್ತು ವಿದ್ಯಾರ್ಥಿಗಳ ಕನಸುಗಳು ಮತ್ತು ಭವಿಷ್ಯವನ್ನು ಯಾವುದೇ ಬೆಲೆತೆತ್ತಾದರೂ ಸರಿ ರಾಜಿ ಮಾಡಬಾರದು. . ಆದಾಗ್ಯೂ, ಕೆಲವರು ನಮ್ಮ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ತಮ್ಮದೇ ಆದ ರಾಜಕೀಯ ಕಾರ್ಯಸೂಚಿಯನ್ನು ಮುಂದಿಟ್ಟುಕೊಂಡು ಪರೀಕ್ಷೆಗಳನ್ನು ಮತ್ತು ಸರ್ಕಾರವನ್ನು ವಿರೋಧಿಸಲು ಪ್ರಯತ್ನಿಸುತ್ತಿದ್ದಾರೆ "ಎಂದೂ ಪತ್ರ ಹೇಳಿದೆ.

No comments:

Advertisement