Thursday, August 27, 2020

ಪತಂಜಲಿಯ ಕೊರೊನಿಲ್ ಟ್ರೇಡ್ ಮಾರ್ಕ್ ನಿರ್ಬಂಧಕ್ಕೆ ಸುಪ್ರೀಂ ನಕಾರ

 ಪತಂಜಲಿಯ ಕೊರೊನಿಲ್ ಟ್ರೇಡ್ ಮಾರ್ಕ್
ನಿರ್ಬಂಧಕ್ಕೆ ಸುಪ್ರೀಂ ನಕಾರ


ನವದೆಹಲಿ: ಕೋವಿಡ್ -೧೯ ಸಾಂಕ್ರಾಮಿಕ ಸಮಯದಲ್ಲಿ ಬಿಡುಗಡೆ ಮಾಡಲಾದ ಮತ್ತು ಮಾರಾಟವಾಗುತ್ತಿರುವ ಯೋಗಿ ಬಾಬಾ ರಾಮದೇವ್ ನೇತೃತ್ವದ ಪತಂಜಲಿ ಆಯುರ್ವೇದ ಸಂಸ್ಥೆಯ ರೋಗ ನಿರೋಧಕ ಶಕ್ತಿ ವರ್ಧಕಕೊರೋನಿಲ್ಕುರಿತ ಟ್ರೇಡ್ ಮಾರ್ಕ್ ವಿವಾದವನ್ನು ಸುಪ್ರೀಂಕೋರ್ಟ್ 2020 ಆಗಸ್ಟ್ 27ರ ಗುರುವಾರ ಬಗೆ ಹರಿಸಿದ್ದು, ಟ್ರೇಡ್ ಮಾರ್ಕ್ (ಮಾರಾಟ ಗುರುತು) ಬಳಸದಂತೆ ಸಂಸ್ಥೆಯನ್ನು ನಿರ್ಬಂಧಿಸಲು ನಿರಾಕರಿಸಿದೆ.

ಟ್ರೇಡ್ಮಾರ್ಕ್ ವಿವಾದಕ್ಕೆ ಸಂಬಂಧಿಸಿದ ಪ್ರಕರಣವು ಬ್ರ್ಯಾಂಡಿಂಗ್ ಅರ್ಹತೆಗಳಿಗೆ ಅಥವಾಕೊರೊನಿಲ್ಬ್ರಾಂಡ್ ಹೆಸರಿನಲ್ಲಿ ಮಾರಾಟವಾಗುವ ಉತ್ಪನ್ನಗಳ ಸೂತ್ರೀಕರಣದ ಪರಿಣಾಮಕಾರಿತ್ವಕ್ಕೆ ಸಂಬಂಧಿಸಿಲ್ಲ ಎಂದು ಹೇಳಿದ ಭಾರತದ ಮುಖ್ಯ ನ್ಯಾಯಮೂರ್ತಿ ಎಸ್ ಬೋಬ್ಡೆ ನೇತೃತ್ವದ ನ್ಯಾಯಪೀಠವು ಮದ್ರಾಸ್ ಹೈಕೋರ್ಟಿನ  ವಿಭಾಗೀಯ ಪೀಠವು ನೀಡಿದ ಮಧ್ಯಂತರ ಆದೇಶದಲ್ಲಿ ಹಸ್ತಕ್ಷೇಪ ಮಾಡಲು ನಿರಾಕರಿಸಿತು.

ಮದ್ರಾಸ್ ಹೈಕೋರ್ಟಿನ ವಿಭಾಗೀಯ ಪೀಠವು ಆಗಸ್ಟ್ ೧೪ರಂದು ಏಕಸದಸ್ಯ ಪೀಠವು ನೀಡಿದ್ದ ಹಿಂದಿನ ಆದೇಶವನ್ನು ತಡೆ ಹಿಡಿಯುವ ಮೂಲಕ ಪತಂಜಲಿ ಸಂಸ್ಥೆಗೆ ಮಧ್ಯಂತರ ಪರಿಹಾರವನ್ನು ಒದಗಿಸಿತ್ತು.

ಏಕ ಸದಸ್ಯ ಪೀಠವು ಆಗಸ್ಟ್ ರಂದುಕೊರೊನಿಲ್ಎಂಬ ಟ್ರೇಡ್ಮಾರ್ಕ್ ಬಳಸದಂತೆ ಪತಂಜಲಿ ಸಂಸ್ಥೆಯನ್ನು ನಿರ್ಬಂಧಿಸಿತ್ತು. ಮತ್ತು ಅರುದ್ರ ಎಂಜಿನಿಯರ್ಸ್ ಪ್ರೈವೇಟ್ ಲಿಮಿಟೆಡ್ ಎಂಬ ಖಾಸಗಿ ಸಂಸ್ಥೆ ದಾಖಲಿಸಿದ್ದ ಟ್ರೇಡ್ಮಾರ್ಕ್ ಉಲ್ಲಂಘನೆ ಖಟ್ಲೆಯಲ್ಲಿ ಪತಂಜಲಿ ಸಂಸ್ಥೆಯ ಮೇಲೆ ೧೦ ಲಕ್ಷ ರೂಪಾಯಿಗಳ ದಂಡವನ್ನೂ ವಿಧಿಸಿತ್ತು.

" ಕೋವಿಡ್ ಕಾಲದಲ್ಲಿ, ನಾವು ಕೊರೊನಿಲ್ ಪದದ ಬಳಕೆಯನ್ನು ತಡೆದರೆ, ಅದು (ಪತಂಜಲಿಯ) ಉತ್ಪನ್ನಕ್ಕೆ ಭಯಾನಕವಾಗಿರುತ್ತದೆಎಂದು ಸಿಜೆಐ ಬಾಬ್ಡೆ ಅವರು ವಿಭಾಗೀಯ ಪೀಠದ ಮಧ್ಯಂತರ ಆದೇಶವನ್ನು ಪ್ರಶ್ನಿಸಿ ಅರುದ್ರ ಸಲ್ಲಿಸಿದ್ದ ಮೇಲ್ಮನವಿ ಗುರುವಾರ ವಿಚಾರಣೆಗೆ ಬಂದಾಗ ಹೇಳಿದರು.

ಸುಪ್ರೀಂಕೋರ್ಟ್ ಪೀಠವು ಅರುದ್ರ  ಅರ್ಜಿಯನ್ನು ತಳ್ಳಿಹಾಕಿತು ಮತ್ತು ಹೈಕೋರ್ಟ್ ವಿಭಾಗೀಯ ಪೀಠದ ಮುಂದೆ ವಿಷಯವನ್ನು ಮುಂದುವರೆಸಲು ಸಂಸ್ಥೆಗೆ ನಿರ್ದೇಶಿಸಿತು. ಮದ್ರಾಸ್ ಹೈಕೋರ್ಟಿನ ವಿಭಾಗೀಯ ಪೀಠವು ಸೆಪ್ಟೆಂಬರಿನಲ್ಲಿ ವಿಷಯವನ್ನು ಆಲಿಸಲಿದೆ.

ಕೈಗಾರಿಕಾ ಶುಚಿಗೊಳಿಸುವಿಕೆ ಮತ್ತು ರಾಸಾಯನಿಕ ಸಿದ್ಧತೆಗಳಿಗಾಗಿ ಬಳಸುವ ಉತ್ಪನ್ನಕ್ಕಾಗಿ ೧೯೯೩ ರಿಂದ ಟ್ರೇಡ್ಮಾರ್ಕ್ಕೊರೊನಿಲ್ತಮ್ಮ ಒಡೆತನದಲ್ಲಿದೆ ಎಂದು ಅರುದ್ರಾ ಎಂಜಿನಿಯರ್ಸ್ ಪ್ರತಿಪಾದಿಸಿದೆ.

ಕೋವಿಡ್- ೧೯ ಸಾಂಕ್ರಾಮಿಕವನ್ನು ಗುಣಪಡಿಸುತ್ತದೆ ಎಂಬುದಾಗಿ ಹೇಳುವ ಮೂಲಕ ರೋಗದ ಬಗೆಗೆ ಸಾರ್ವಜನಿಕರಲ್ಲಿ ಇದ್ದ ಭೀತಿಯನ್ನು ಸಂಸ್ಥೆಯು ತನ್ನ ಲಾಭಕ್ಕೆ ಬಳಸಿಕೊಂಡಿದೆ ಎಂದು ಏಕ ಸದಸ್ಯ ಪೀಠವು ಹೇಳಿತ್ತು.

ಪ್ರತಿವಾದಿಗಳು (ಪತಂಜಲಿ) ೧೦,೦೦೦ ಕೋಟಿ ಕಂಪನಿ ಎಂದು ಪದೇ ಪದೇ ಪ್ರತಿಪಾದಿಸಿದ್ದಾರೆ. ಆದಾಗ್ಯೂ, ವಾಸ್ತವವಾಗಿ ಕೆಮ್ಮು, ಶೀತ ಮತ್ತು ಜ್ವರದ ವಿರುದ್ಧ ರೋಗ ನಿರೋಧಕ ಶಕ್ತಿ ನೀಡುವ ಕೊರೋನಿಲ್ ಮಾತ್ರೆಯನ್ನು ಕೊರೋನಾವೈರಸ್ಸಿಗೆ ಮದ್ದು ಎಂಬುದಾಗಿ ಪ್ರತಿಪಾದಿಸುವ ಮೂಲಕ ಸಾಂಕ್ರಾಮಿಕದ ಬಗೆಗೆ ಸಾರ್ವಜನಿಕರಲ್ಲಿದ್ದ ಭಯವನ್ನು ತನ್ನ ಲಾಭಕ್ಕಾಗಿ ಬಳಸಿಕೊಂಡಿದ್ದಾರೆಎಂದು ಹೇಳಿದ ಏಕ ಸದಸ್ಯ ಪೀಠವು ಸಂಸ್ಥೆಗೆ ೧೦ ಲಕ್ಷ ರೂಪಾಯಿಗಳ ದಂಡ ವಿಧಿಸಿತ್ತು.

No comments:

Advertisement