My Blog List

Saturday, October 31, 2020

ಭಾರತದಲ್ಲಿ ಕೊರೋನಾ ಪ್ರಕರಣ, ಸಾವು ಗಮನಾರ್ಹ ಇಳಿಕೆ

 ಭಾರತದಲ್ಲಿ ಕೊರೋನಾ ಪ್ರಕರಣ, ಸಾವು ಗಮನಾರ್ಹ ಇಳಿಕೆ

ನವದೆಹಲಿ: ಭಾರತದಲ್ಲಿ ಕೋವಿಡ್-೧೯ ಸೋಂಕು ಪ್ರಕರಣಗಳು ಮತ್ತು ಸಾವುಗಳು ಸೆಪ್ಟೆಂಬರ್ ಮಧ್ಯದ ಗರಿಷ್ಠ ಮಟ್ಟದ ಅರ್ಧದಷ್ಟು ಕಡಿಮೆಯಾಗಿವೆ.

ದೇಶದಲ್ಲಿ ಕೊರೋನಾವೈರಸ್ ರೋಗವು ಸೆಪ್ಟೆಂಬರ್ ಮಧ್ಯz ಗರಿಷ್ಠ ಮಟ್ಟದಿಂದ ಶೇಕಡಾ ೫೦ರಷ್ಟು ಕೆಳಕ್ಕೆ ಇಳಿದಿದೆ. ವಿಶೇಷವೆಂದರೆ ಕೊರೋನಾವೈರಸ್ ಪ್ರಕರಣಗಳು ಮತ್ತು ಸಾವುಗಳು ಉತ್ತುಂಗಕ್ಕೆ ಏರಿದ ಗತಿಗಿಂತ ತೀವ್ರವಾದ ವೇಗದಲ್ಲಿ ಕೆಳಕ್ಕೆ ಇಳಿಯುತ್ತಿವೆ.

ದೇಶದಲ್ಲಿ ಸಾಂಕ್ರಾಮಿಕ ಪ್ರಕರಣಗಳ ಏಳು ದಿನಗಳ ಸರಾಸರಿ ಗುರುವಾರ ೪೭,೨೧೬ ರಷ್ಟಿತ್ತು. ಸೆಪ್ಟೆಂಬರ್ ೧೭ ರಂದು ೯೩,೭೩೫ ಪ್ರಕರಣಗಳೊಂದಿಗೆ ಗ್ರಾಫ್ ಉತ್ತುಂಗಕ್ಕೇರಿತ್ತು.

ಬೇರೆ ರೀತಿಯಲ್ಲಿ ಹೇಳುವುದಾದರೆ, ಕಳೆದ ವಾರದಲ್ಲಿ ಪತ್ತೆಯಾದ ಪ್ರಕರಣಗಳ ಸರಾಸರಿ ಸಂಖ್ಯೆ ಸಾಂಕ್ರಾಮಿಕ ರೋಗದ ದೊಡ್ಡ ಹಂತದಲ್ಲಿನ ಸರಾಸರಿಗಿಂತ ಶೇಕಡಾ ೫೦ರಷ್ಟು ಕಡಿಮೆಯಾಗಿದೆ.

ದೈನಂದಿನ ಸಾವುಗಳ ಏಳು ದಿನಗಳ ಸರಾಸರಿ ಗ್ರಾಫ್ನಲ್ಲಿನ ಕುಸಿತ ಇನ್ನೂ ತೀವ್ರವಾಗಿದೆ. ಸೆಪ್ಟೆಂಬರ್ ೧೯ ರಂದು ಸಾವುಗಳು ,೧೭೬ ಕ್ಕೆ ಏರಿತ್ತು. ಅಕ್ಟೋಬರ್ ೨೯ ಹೊತ್ತಿಗೆ ಸಂಖ್ಯೆ ಶೇಕಡಾ ೫೦ಕ್ಕಿಂತ ಹೆಚ್ಚು ಅಂದರೆ ೫೪೩ಕ್ಕೆ ಇಳಿದಿದೆ.

ದೈನಂದಿನ ಪ್ರಕರಣಗಳು ಮತ್ತು ಸಾವುಗಳು ಎರಡೂ ಪ್ರಸ್ತುತ ಜುಲೈನಲ್ಲಿ ಇದ್ದ ಪ್ರಮಾಣಕ್ಕೆ ಇಳಿದಿವೆ. ೪೭,೨೧೬ಕ್ಕೆ ಇಳಿದಿರುವ ಸೋಂಕಿನ ಪ್ರಕರಣಗಳ ಸಂಖ್ಯೆ, ಜುಲೈ ೨೭ ರಂದು ಇದ್ದ ೪೬,೭೬೦ಕ್ಕೆ ಸಮೀಪದಲ್ಲಿದೆ.

ಜುಲೈ ೨೭ರ ಬಳಿಕ ಸೆಪ್ಟೆಂಬರ್ ೧೭ ರಂದು ಕೋವಿಡ್ -೧೯ ಪ್ರಕರಣಗಳು ಉತ್ತುಂಗಕ್ಕೆ ಏರಲು ೫೨ ದಿನಗಳನ್ನು ತೆಗೆದುಕೊಂಡಿದ್ದವು. ಇದಕ್ಕೆ ವಿರುದ್ಧವಾಗಿ, ನಂತರದ ಗರಿಷ್ಠ ಶೇಕಡಾ ೫೦ಕ್ಕೆ ಇಳಿಯಲು ಬೇಕಾದ ದಿನಗಳು ೪೨-೪೨ ಮಾತ್ರ ಎಂದು ಅಂಕಿ ಸಂಖ್ಯೆಗಳು ತೋರಿಸಿವೆ.

 ಒಟ್ಟು ಸೋಂಕು ೮೧ ಲಕ್ಷಕ್ಕೆ:

೪೮,೬೪೮ ಹೊಸ ಕೋವಿಡ್-೧೯ ಸೋಂಕುಗಳೊಂದಿಗೆ, ಭಾರತದ ಕೊರೋನಾ ಸೋಂಕು ಪ್ರಕರಣಗಳ ಒಟ್ಟು ಸಂಖ್ಯೆ ಶನಿವಾರ ೮೧,೩೭,೧೧೯ ಕ್ಕೆ ಏರಿಕೆಯಾಗಿದೆ, ಆದರೆ ಚೇತರಿಕೆಯ ಸಂಖ್ಯೆ ೭೪ ಲಕ್ಷವನ್ನು ದಾಟಿದೆ, ಚೇತರಿಕೆ ಪ್ರಮಾಣ ಶೇಕಡಾ ೯೧.೩೪ ಕ್ಕೆ ಏರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ ಅಂಶಗಳು ತಿಳಿಸಿವೆ.

೫೫೧ ಹೊಸ ಸಾವುಗಳೊಂದಿಗೆ ದೇಶದ ಕೋವಿಡ್-೧೯ ಸಾವಿನ ಸಂಖ್ಯೆ ,೨೧,೬೪೧ ಕ್ಕೆ ಏರಿದೆ ಎಂದು ಬೆಳಗ್ಗೆ ಗಂಟೆಗೆ ನವೀಕರಿಸಿದ ಮಾಹಿತಿ ತೋರಿಸಿದೆ.

ಕೋವಿಡ್-೧೯ ಸಾಂಕ್ರಾಮಿಕದಿಂದ ಈವರೆಗೆ ಒಟ್ಟು ೭೪,೩೨,೮೨೯ ಜನರು ಚೇತರಿಸಿಕೊಂಡಿದ್ದು, ರಾಷ್ಟ್ರೀಯ ಚೇತರಿಕೆ ಪ್ರಮಾಣ ಶೇಕಡಾ ೯೧.೩೪ಕ್ಕೆ ತಲುಪಿದೆ. ಪ್ರಕರಣದ ಸಾವಿನ ಪ್ರಮಾಣ ಶೇಕಡಾ .೪೯ ಕ್ಕೆ ಇಳಿದಿದೆ.

ಸಕ್ರಿಯ ಕೋವಿಡ್-೧೯ ಪ್ರಕರಣಗಳ ಸಂಖ್ಯೆ ಸತತ ಎರಡನೇ ದಿನ ಲಕ್ಷಕ್ಕಿಂತ ಕಡಿಮೆಯಾಗಿದೆ.

ದೇಶದಲ್ಲಿ ಕೊರೋನವೈರಸ್ ಸೋಂಕಿನ ,೮೨,೬೪೯ ಸಕ್ರಿಯ ಪ್ರಕರಣಗಳಿವೆ, ಇದು ಒಟ್ಟು ಪ್ರಕರಣಗಳ ಶೇಕಡಾ .೧೬ ರಷ್ಟಿದೆ ಎಂದು ಡೇಟಾ ತಿಳಿಸಿದೆ.

ಭಾರತದ ಕೋವಿಡ್-೧೯  ಸೋಂಕು ಪ್ರಕರಣಗಳು ಆಗಸ್ಟ್ ರಂದು ೨೦ ಲಕ್ಷ, ಆಗಸ್ಟ್ ೨೩ ರಂದು ೩೦ ಲಕ್ಷ ಮತ್ತು ಸೆಪ್ಟೆಂಬರ್ ರಂದು ೪೦ ಲಕ್ಷ ದಾಟಿದ್ದವು. ಇದು ಸೆಪ್ಟೆಂಬರ್ ೧೬ ರಂದು ೫೦ ಲಕ್ಷ, ಸೆಪ್ಟೆಂಬರ್ ೨೮ ರಂದು ೬೦ ಲಕ್ಷ, ಅಕ್ಟೋಬರ್ ೧೧ ರಂದು ೭೦ ಲಕ್ಷ ಮತ್ತು ಅಕ್ಟೋಬರ್ ೨೯ ರಂದು ೮೦ ಲಕ್ಷ ದಾಟಿದೆ.

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಪ್ರಕಾರ, ಅಕ್ಟೋಬರ್ ೩೦ ರವರೆಗೆ ಕೋವಿಡ್-೧೯ ಗಾಗಿ ಒಟ್ಟು ೧೦,೮೭,೯೬,೦೬೪ ಮಾದರಿಗಳನ್ನು ಪರೀಕ್ಷಿಸಲಾಗಿದೆ. ಪೈಕಿ ೧೦,೬೭,೯೭೬ ಮಾದರಿಗಳನ್ನು ಶುಕ್ರವಾರ ಪರೀಕ್ಷಿಸಲಾಗಿದೆ.

No comments:

Advertisement