Sunday, December 29, 2019

‘ನೋಟ್ ಬಂದಿ ನಂ.2 ಹೆಚ್ಚು ಗಂಡಾಂತರಕಾರಿ: ರಾಹುಲ್

ಎನ್ಪಿಆರ್, ಎನ್ಆರ್ಸಿ ವಿರುದ್ದ  ವಾಗ್ದಾಳಿ
ನೋಟ್ ಬಂದಿ ನಂ.2' ಹೆಚ್ಚು ಗಂಡಾಂತರಕಾರಿ: ರಾಹುಲ್
ನವದೆಹಲಿ: ಕಾಂಗ್ರೆಸ್ ಪಕ್ಷದ ೧೩೫ನೇ ಸ್ಥಾಪನಾ ದಿನದ ಅಂಗವಾಗಿ 2019 ಡಿಸೆಂಬರ್ 28ರ ಶನಿವಾರ ನಡೆದ ಸಮಾರಂಭದಲ್ಲಿ ಪಕ್ಷದ ನಾಯಕ ರಾಹುಲ್ ಗಾಂಧಿಯವರು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್ಪಿಆರ್) ಮತ್ತು ಪ್ರಸ್ತಾಪಿತ ರಾಷ್ಟ್ರೀಯ ಪೌರ ನೋಂದಣಿಯನ್ನು (ಎನ್ಆರ್ಸಿ) ನೋಟು ಅಮಾನ್ಯೀಕರಣಕ್ಕೆ ಹೋಲಿಕೆ ಮಾಡಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಉಗ್ರ ವಾಕ್ ಪ್ರಹಾರ ನಡೆಸಿದರು.
ಎನ್ಪಿಆರ್ ಮತ್ತು ಎನ್ಆರ್ಸಿ ಕಸರತ್ತುಗಳನ್ನುನೋಟ್ಬಂದಿ ನಂ. (ನೋಟು ಅಮಾನ್ಯೀಕರಣ ನಂ.) ಎಂಬುದಾಗಿ ಬಣ್ಣಿಸಿದ ರಾಹುಲ್ ಕಸರತ್ತುಗಳು ನೋಟು ಅಮಾನ್ಯೀಕರಣಕ್ಕಿಂತಲೂ ಗಂಡಾಂತರಕಾರಿಯಾಗಲಿವೆಎಂದು ಎಚ್ಚರಿಸಿದರು.

ಎನ್ಪಿಆರ್ ಮತ್ತು ಪ್ರಸ್ತಾಪಿತ ಎನ್ಆರ್ಸಿ ವಿರುದ್ಧ ಶನಿವಾರ ರಾಷ್ಟ್ರಾದ್ಯಂತಧ್ವಜ ಮೆರವಣಿಗೆಗಳನ್ನು ನಡೆಸಿ ಪ್ರತಿಭಟನೆ ನಡೆಸುವ ಮೂಲಕಸಂವಿಧಾನ ರಕ್ಷಿಸಿ- ಭಾರತ ರಕ್ಷಿಸಿಸಂದೇಶವನ್ನು ಕಾಂಗ್ರೆಸ್ ಪಕ್ಷವು ಜನರಿಗೆ ರವಾನಿಸಿತು.

ಮುಂಬೈ, ದೆಹಲಿ, ಕೋಲ್ಕತ ಮತ್ತು ಜೈಪುರ ಸೇರಿದಂತೆ ವಿವಿಧ ನಗರಗಳಲ್ಲಿ ಸರ್ಕಾರದಜನ ವಿರೋಧಿ ನೀತಿಗಳನ್ನುಪ್ರತಿಭಟಿಸಲು ಮತ್ತು ತಿದುಪಡಿ ಮಾಡಲಾದ ಪೌರತ್ವ  ಕಾಯ್ದೆ, ಎನ್ಪಿಆರ್ ಮತ್ತು ಎನ್ಆರ್ಸಿಯನ್ನು ಹಿಡಿದುಕೊಂಡು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಸಹಸ್ರಾರು ಕಾಂಗ್ರೆಸ್ ಕಾರ್ಯಕರ್ತರು ಮತ್ತು ನಾಯಕರು ಬೀದಿಗಳಿಗೆ ಇಳಿದರು.

ಕಸರತ್ತಿನ ಮೂಲ ಕಲ್ಪನೆ ಎಲ್ಲ ಬಡ ಜನರಿಗೆ ನೀವು ಭಾರತೀಯರೋ ಅಥವಾ ಅಲ್ಲವೋ ಎಂಬುದಾಗಿ ಪ್ರಶ್ನಿಸುವುದಾಗಿದೆಎಂದು ರಾಹುಲ್ ಗಾಂಧಿಯವರು ಏಐಸಿಸಿ ಕೇಂದ್ರ ಕಚೇರಿಯಲ್ಲಿ ಪಕ್ಷದ ೧೩೫ನೇ ಸ್ಥಾಪನಾ ದಿನದ ಅಂಗವಾಗಿ ನಡೆದ ಧ್ವಜಾರೋಹಣದ ಬಳಿಕ ಸುದ್ದಿಗಾರರ ಜೊತೆ ಮಾತನಾಡುತ್ತಾ ಹೇಳಿದರು.

ನಡೆಯುತ್ತಿರುವ ಇಡೀ ತಮಾಷೆ ಏನೆಂದರೆನೋಟ್ ಬಂದಿ ನಂ.ನ್ನು ಜಾರಿಗೊಳಿಸುತ್ತಿರುವುದು. ಇದು ಜನರ ಪಾಲಿಗೆ ನೋಟು ಅಮಾನ್ಯೀಕರಣಕ್ಕಿಂತಲೂ ಹೆಚ್ಚು ಗಂಡಾಂತರಕಾರಿ. ಇದು ನೋಟು ಅಮಾನ್ಯೀಕರಣದ ದುಪ್ಪಟ್ಟು ಪರಿಣಾಮವನ್ನು ಬೀರಲಿದೆಎಂದು  ಕಾಂಗ್ರೆಸ್ ನಾಯಕ ಸರ್ಕಾರದ ಮೇಲೆ ದಾಳಿ ನಡೆಸಿದರು.

ಅವರ (ಪ್ರಧಾನಿ ನರೇಂದ್ರ ಮೋದಿ) ೧೫ ಗೆಳೆಯರು ಯಾವುದೇ ದಾಖಲೆಗಳನ್ನೂ ತೋರಿಸಬೇಕಾಗಿಲ್ಲ ಮತ್ತು ಸೃಷ್ಟಿಯಾದ ಹಣವೆಲ್ಲವೂ ೧೫ ಜನರ ಕಿಸೆಗಳಿಗೆ ಸೇರಲಿದೆಎಂದು ರಾಹುಲ್ ನುಡಿದರು.

ರಾಹುಲ್ ಗಾಂಧಿಯವರು ಹಿಂದೆ ಸರ್ಕಾರವು ಆಯ್ದ ಕೆಲವುಅಪ್ತಮಿತ್ರ ಬಂಡವಾಳಶಾಹಿಗಳಿಗಾಗಿಸರ್ಕಾರವು ಕೆಲಸ ಮಾಡುತ್ತಿದೆ ಎಂದು ಆಪಾದಿಸಿದ್ದರು.

ರಾಷ್ಟ್ರದಲ್ಲಿ ಬಂಧನ ಕೇಂದ್ರಗಳು ಇವೆ ಎಂಬುದಾಗಿ ಹೇಳಿದ್ದಕ್ಕಾಗಿ ಬಿಜೆಪಿಯು ಶುಕ್ರವಾರ ತಮ್ಮನ್ನುಸುಳ್ಳುಗಾರಎಂಬುದಾಗಿ ಕರೆದರೂ ಪಟ್ಟು ಬಿಡದ ರಾಹುಲ್ ಗಾಂಧಿ ಶನಿವಾರ ಪುನಃ ಮೋದಿ ಸರ್ಕಾರದ ವಿರುದ್ಧ ದಾಳಿ ಮುಂದುವರೆಸಿದರು.

ನೀವು ನನ್ನ ಟ್ವೀಟನ್ನು ನೋಡಿರಬಹುದು. ಭಾರತದಲ್ಲಿ ಬಂಧನ ಕೇಂದ್ರಗಳು ಇಲ್ಲ ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿದ ಭಾಷಣವನ್ನು ನೀವು ನೋಡಿರಬಹುದು. ನೀವು ಬಂಧನ ಕೇಂದ್ರದ ವಿಡಿಯೋವನ್ನೂ ನೋಡಿರಬಹುದು. ಯಾರು ಸುಳ್ಳು ಹೇಳುತ್ತಿದ್ದಾರೆ ಎಂದು ನೀವೇ ನಿರ್ಧರಿಸಬಹುದುಎಂದು ರಾಹುಲ್ ವರದಿಗಾರರಿಗೆ ತಿಳಿಸಿದರು.

ಗುರುವಾರ ರಾಹುಲ್ ಗಾಂಧಿಯವರು ಮೋದಿ ಅವರ ವಿರುದ್ಧದೇಶದಲ್ಲಿ ಬಂಧನ ಕೇಂದ್ರಗಳು ಇಲ್ಲ’ ಎಂಬುದಾಗಿ ಹೇಳಿದ್ದಕ್ಕಾಗಿ ಟೀಕಿಸಿದ್ದರು. ’ಆರ್ಎಸ್ಎಸ್ ಪ್ರಧಾನಿಯವರು ಭಾರತ ಮಾತೆಗೆ ಸುಳ್ಳು ಹೇಳುತ್ತಿದ್ದಾರೆಎಂದು ರಾಹುಲ್ ಟೀಕಿಸಿದ್ದರು.

ಮುಸ್ಲಿಮರನ್ನು
ಬಂಧನ ಕೇಂದ್ರಗಳಿಗೆ ಕಳುಹಿಸಲಾಗುತ್ತದೆ ಎಂಬ ವದಂತಿಯನ್ನು ಕಾಂಗ್ರೆಸ್, ಅದರ ಮಿತ್ರ ಪಕ್ಷಗಳು ಮತ್ತು ನಗರ ನಕ್ಸಲರು ಹರಡುತ್ತಿದ್ದಾರೆ ಎಂಬುದಾಗಿ ಪ್ರಧಾನಿ ಮೋದಿ ಅವರು ಆಪಾದಿಸಿದ್ದ ವಿಡಿಯೋವನ್ನೂ ರಾಹುಲ್ ಗಾಂಧಿ ತಮ್ಮ ಟ್ವೀಟ್ಗೆ ಲಗತ್ತಿಸಿದ್ದರು.

ಎಡಿಟ್ ಮಾಡಲಾದ ವಿಡಿಯೋದಲ್ಲಿ ಅಸ್ಸಾಮಿನಲ್ಲಿ ನಿರ್ಮಾಣವಾಗುತ್ತಿರುವ ಬಂಧನ ಕೇಂದ್ರವನ್ನೂ ತೋರಿಸಲಾಗಿತ್ತು. ’ಆರ್ ಎಸ್ ಎಸ್ ಪ್ರಧಾನಿ ಭಾರತ ಮಾತೆಗೆ ಸುಳ್ಳು ಹೇಳುತ್ತಿದ್ದಾರೆಎಂದು ರಾಹುಲ್ ಗಾಂಧಿ ಜೂಟ್ ಜೂಟ್ ಜೂಟ್ (ಸುಳ್ಳು, ಸುಳ್ಳು, ಸುಳ್ಳು) ಎಂಬ ಪದಗಳ ಜೊತೆಗೆ ಹ್ಯಾಷ್ ಟ್ಯಾಗ್ ಜೋಡಿಸಿ ಹಿಂದಿ ಭಾಷೆಯಲ್ಲಿ ಬರೆದ ಟ್ವೀಟಿನಲ್ಲಿ ತಿಳಿಸಿದ್ದರು.

ಎನ್ಪಿಆರ್ ಮತ್ತು ಎನ್ಆರ್ಸಿಯನ್ನು ನೋಟು ಅಮಾನ್ಯೀಕರಣಕ್ಕೆ ಹೋಲಿಸಿದ ರಾಹುಲ್ ಗಾಂಧಿ ಶುಕ್ರವಾರ ಕೂಡಾ ಛತ್ತೀಸ್ ಗಢದಲ್ಲಿ ಮಾತನಾಡುತ್ತಾ ಕಸರತ್ತುಗಳು ಬಡವರ ಮೇಲಿನತೆರಿಗೆಎಂದು ಬಣ್ಣಿಸಿ ಬಡವರು ೨೦೧೬ರ ನವೆಂಬರ್ ತಿಂಗಳ ನೋಟು ಅಮಾನ್ಯೀಕರಣದ ಬಳಿಕ ಪರಿಸ್ಥಿತಿಯನ್ನು ಅನುಭವಿಸಲಿದ್ದಾರೆ ಎಂದು ಟೀಕಿಸಿದ್ದರು.

ಎನ್ಪಿಆರ್ ಇರಲಿ ಅಥವಾ ಎನ್ಆರ್ಸಿ ಇರಲಿ, ಅದು ದೇಶದ ಬಡ ಜನರ ಮೇಲಿನತೆರಿಗೆ. ನಿಮಗೆ ನೋಟು ಅಮಾನ್ಯೀಕರಣ ಗೊತ್ತಿದೆ. ಅದು ಬಡ ಜನರ ಮೇಲಿನತೆರಿಗೆಆಗಿತ್ತು. ನೀವು ಬ್ಯಾಂಕುಗಳಿಗೆ ಹೋಗಿ ನಿಮ್ಮ ಹಣ ಕೊಡಿ ಆದರೆ ನಿಮ್ಮ ಖಾತೆಯಿಂದ ಹಣ ಹಿಂಪಡೆಯುವಂತಿಲ್ಲ. ಸಂಪೂರ್ಣ ಹಣ ೧೫-೨೦ ಮಂದಿ ಶ್ರೀಮಂತರ ಕಿಸೆ ಸೇರಿತು. ಇದು (ಎನ್ಪಿಆರ್ ಅಥವಾ ಎನ್ಆರ್ಸಿ) ಅದೇ ರೀತಿಎಂದು ರಾಹುಲ್ ಹೇಳಿದ್ದರು.

No comments:

Advertisement