Monday, November 2, 2020

ಗುಜ್ಜರ್ ಮೀಸಲಾತಿ ಚಳವಳಿ ತೀವ್ರ, ರೈಲು ಸಂಚಾರ ಅಸ್ತವ್ಯಸ್ತ

 ಗುಜ್ಜರ್ ಮೀಸಲಾತಿ ಚಳವಳಿ ತೀವ್ರ, ರೈಲು ಸಂಚಾರ ಅಸ್ತವ್ಯಸ್ತ

ಜೈಪುರ: ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ನೀಡುವಂತೆ ಒತ್ತಾಯಿಸಿ ತಮ್ಮ ಆಂದೋಲನವನ್ನು ತೀವ್ರಗೊಳಿಸಿರುವ ಗುಜ್ಜರ್ ಸಮುದಾಯದ ಸದಸ್ಯರು, 2020 ನವೆಂಬರ್ 02ರ ಸೋಮವಾರ ರಾಜಸ್ಥಾನದ ವಿವಿಧ ಕಡೆ ರೈಲು ಸಂಚಾರವನ್ನು ನಿರ್ಬಂಧಿಸಿದ ಪರಿಣಾಮವಾಗಿ ರಾಜ್ಯದಲ್ಲಿ ರೈಲು ಸಂಚಾರ ಅಸ್ತವ್ಯಸ್ತಗೊಂಡಿತು. ಇದೇ ವೇಳೆಗೆ ವದಂತಿಗಳನ್ನು ತಡೆಯುವ ಸಲುವಾಗಿ ರಾಜ್ಯ ಸರ್ಕಾರವು ಇಂಟರ್ನೆಟ್ ಸೌಲಭ್ಯವನ್ನು ಅಮಾನತುಗೊಳಿಸಿತು.

ಚಳವಳಿಕಾರರು ಭರತಪುರದಲ್ಲಿ ರೈಲು ಮಾರ್ಗವನ್ನು ನಿರ್ಬಂಧಿಸಿದ್ದನ್ನು ಅನುಸರಿಸಿ, ದೆಹಲಿ-ಮುಂಬೈ ರೈಲ್ವೆ ಮಾರ್ಗದಲ್ಲಿ ಒಂದು ಡಜನ್‌ಗೂ ಹೆಚ್ಚು ರೈಲುಗಳನ್ನು ಬೇರೆ ಮಾರ್ಗಗಳಿಗೆ ತಿರುಗಿಸಲಾಯಿತು. ಮುನ್ನೆಚ್ಚರಿಕೆ ಕ್ರಮವಾಗಿ ಆಗ್ರಾ-ಜೈಪುರ ಮಾರ್ಗದಲ್ಲಿ ಬಸ್ ಸೇವೆಯನ್ನು ಸ್ಥಗಿತಗೊಳಿಸಲಾಯಿತು.

ಅತ್ಯಂತ ಹಿಂದುಳಿದ ವರ್ಗ (ಎಂಬಿಸಿ) ಸಮುದಾಯವಾಗಿ ಗುರುತಿಸಿ ಮೀಸಲಾತಿ ಜಾರಿಗೊಳಿಸಲು ಒತ್ತಾಯಿಸುತ್ತಿರುವ ಸಮುದಾಯದ ಸದಸ್ಯರು, ತಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೂ ಆಂದೋಲನ ಮುಂದುವರಿಯುತ್ತದೆ ಎಂದು ಹೇಳಿದರು.

"ನಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೆ ಮತ್ತು ಅದಕ್ಕೆ ಸಂಬಂಧಿಸಿದಂತೆ ಸರ್ಕಾರವು ಆದೇಶ ಹೊರಡಿಸುವವರೆಗೆ ನಾವು ನಮ್ಮ ಆಂದೋಲನವನ್ನು ಮುಂದುವರಿಸುತ್ತೇವೆ. ನಮ್ಮ ಸಮುದಾಯದ ಯುವಕರು ನಿರುದ್ಯೋಗಿಗಳಾಗಿದ್ದಾರೆ, ೨೫,೦೦೦ ಉದ್ಯೋಗಗಳು ತಡೆ ಹಿಡಿಯಲ್ಪಟ್ಟಿವೆ ಮತ್ತು ನಮ್ಮ ಸಮಸ್ಯೆಗಳ ಬಗ್ಗೆ ಯಾರೂ ಮಾತನಾಡುತ್ತಿಲ್ಲ" ಎಂದು ಗುಜ್ಜರ್ ನಾಯಕ ವಿಜಯ್ ಬೈನ್ಸ್ಲಾ ಹೇಳಿದ್ದಾರೆ.

ಹಿಂದೂನ್ ಸಿಟಿ-ಬಯಾನಾ ಮಾರ್ಗದಲ್ಲಿ ರೈಲ್ವೆ ಮಾರ್ಗವನ್ನು ನಿರ್ಬಂಧಿಸಿದ್ದರಿಂದ ಏಳು ರೈಲುಗಳನ್ನು ಬೇರೆ ಮಾರ್ಗಗಳಿಗೆ ತಿರುಗಿಸಲಾಯಿತು ಎಂದು ಪಶ್ಚಿಮ ರೈಲ್ವೆ ಭಾನುವಾರ ರಾತ್ರಿ ತಿಳಿಸಿದೆ. ಬೇರೆಡೆಗೆ ತಿರುಗಿಸಲಾದ ರೈಲುಗಳಲ್ಲಿ ಹಜರತ್ ನಿಜಾಮುದ್ದೀನ್-ಕೋಟಾ, ಬಾಂದ್ರಾ ಟರ್ಮಿನಸ್-ಮುಜಾಫ್ಫರಪುರ, ಕೋಟಾ-ಡೆಹ್ರಾಡೂನ್, ಇಂದೋರ್-ಹಜರತ್ ನಿಜಾಮುದ್ದೀನ್, ಹಜರತ್ ನಿಜಾಮುದ್ದೀನ್-ಇಂದೋರ್, ಹಜರತ್ ನಿಜಾಮುದ್ದೀನ್-ಉದಯಪುರ ಮತ್ತು ಉದಯಪುರ-ಹಜರತ್ ನಿಜಾಮುದ್ದೀನ್ ಸೇರಿವೆ.

ತೊಂದರೆಗೆ ಒಳಗಾಗಿರುವ ಮಾರ್ಗಗಳನ್ನು ಪಟ್ಟಿ ಮಾಡಿ ಪ್ರಕಟಿಸಿದ, ಪಶ್ಚಿಮ ರೈಲ್ವೆಯು ತನ್ನ ಟ್ವಿಟ್ಟರ್ ಸಂದೇಶದಲ್ಲಿ, "ಗುಜ್ಜರ್ ಆಂದೋಲನದಿಂದಾಗಿ, ಉತ್ತರ ಪ್ರದೇಶದ ಹಿಂದೂನ್ ನಗರ ಮತ್ತು ರಾಜಸ್ಥಾನದ ಬಯಾನಾ ವಿಭಾಗದ ಮಧ್ಯೆ ರೈಲು ಸಂಚಾರವನ್ನು ನಿಲ್ಲಿಸಲಾಗಿದೆ" ಎಂದು ಹೇಳಿದೆ.

ಅನೇಕ ಜಿಲ್ಲೆಗಳಲ್ಲಿ ಮೊಬೈಲ್ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಕೆಲವು ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.

ಇದಕ್ಕೂ ಮುನ್ನ ಗೃಹ ಇಲಾಖೆಯು ಭರತ್‌ಪುರ, ಧೋಲ್ಪುರ್, ಸವಾಯಿ ಮಾಧೋಪುರ, ದೌಸಾ, ಟೋಂಕ್, ಬುಂಡಿ, ಝಾಲ್ವಾರ್ ಮತ್ತು ಕರೌಲಿ ಜಿಲ್ಲೆಗಳಲ್ಲಿ ರಾಷ್ಟ್ರೀಯ ಭದ್ರತಾ ಕಾಯ್ದೆಯನ್ನು (ಎನ್‌ಎಸ್‌ಎ) ಜಾರಿಗೊಳಿಸಿತ್ತು. ಜೈಪುರ ವಿಭಾಗದಲ್ಲಿ, ಜಿ / ಜಿ / ಜಿ ಡೇಟಾ ಸೇವೆಗಳು, ಸಾಮೂಹಿಕ ಎಸ್‌ಎಂಎಸ್ / ಎಂಎಂಎಸ್ ಮತ್ತು ಇಂಟರ್ನೆಟ್ ಮೂಲಕ ಸಾಮಾಜಿಕ ಮಾಧ್ಯಮ (ಧ್ವನಿ ಕರೆಗಳು ಮತ್ತು ಬ್ರಾಡ್‌ಬ್ಯಾಂಡ್ ಇಂಟರ್ನೆಟ್ ಹೊರತುಪಡಿಸಿ) ಸಂಜೆ ರಿಂದ ೨೪ ಗಂಟೆಗಳ ಕಾಲ ಅಮಾನತುಗೊಳಿಸಲಾಗಿದೆ. ಕೊಟ್ಪುಟ್ಲಿ, ಪಾವ್ತಾ, ಶಹಪುರ, ವಿರಾಟನಗರ ಮತ್ತು ಜಮ್ವಾ ರಾಮಗಢದಲ್ಲಿ ಶುಕ್ರವಾರ, ಇಂಟರ್ನೆಟ್ ಸ್ಥಗಿತಗೊಳಿಸಿದರೆ ಧೋಲ್ಪುರದಲ್ಲಿ ಸೆಕ್ಷನ್ ೧೪೪ರ ಅಡಿಯಲ್ಲಿ ನಿರ್ಬಂಧಕಾಜ್ಞೆ ಜಾರಿಗೊಳಿಸಲಾಗಿದೆ.

ವಿಷಯವನ್ನು ಚರ್ಚಿಸಲು ರಾಜ್ಯ ಸರ್ಕಾರ ಅಕ್ಟೋಬರ್ ೨೯ ರಂದು ಸಂಪುಟ ಸಮಿತಿ ಸಭೆ ಕರೆದಿತ್ತು, ಆದರೆ ಗುಜ್ಜರ ನಾಯಕರು ಭಾಗವಹಿಸಲು ನಿರಾಕರಿಸಿದರು. ಗುಜ್ಜರರ ಪ್ರಮುಖ ಬೇಡಿಕೆಗಳನ್ನು ಸರ್ಕಾರ ಈಡೇರಿಸಿದೆ, ಆದರೆ ಸಮುದಾಯದ ಮುಖಂಡರು ಇದು ಸಾಕಾಗುವುದಿಲ್ಲ ಎಂದು ಹೇಳಿದ್ದಾರೆ.

ಗುಜ್ಜರ ಗುಂಪುಗಳ ಪೈಕಿ ಒಂದು ಗುಂಪು ರಾಜ್ಯ ಸರ್ಕಾರವನ್ನು ಸಮೀಪಿಸುತ್ತಿರುವುದರಿಂದ ಗುಜ್ಜರ್ ಸಮುದಾಯ ವಿಭಜನೆಯಾಗುತ್ತದೆಯೇ ಎಂದು ಕೇಳಿದಾಗ ಸಮುದಾಯದ ನಾಯಕ ಬೈನ್ಸ್ಲಾ, " ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಸಮಸ್ಯೆಗಳನ್ನು ನಿವಾರಿಸಿ, ಸಮುದಾಯವು ತನ್ನ ಗುರಿ ಸಾಧಿಸುವ ನಿಟ್ಟಿನಲ್ಲಿ ಯಾರೇ ಸಹಕರಿಸಿದರೆ ಅದು ಸ್ವಾಗತಾರ್ಹ. ೩೫೦೦೦ ಉದ್ಯೋಗಗಳಿಗೆ ಅವಕಾಶ ನೀಡುವ ಮೂಲಕ ಎಂಬಿಸಿ ಮೀಸಲಾತಿಯ ಬ್ಯಾಕ್‌ಲಾಗ್‌ನ್ನು ತಕ್ಷಣವೇ ತೆರವುಗೊಳಿಸಬೇಕು ಎಂಬುದು ನಮ್ಮ ಮುಖ್ಯ ಬೇಡಿಕೆ ಎಂದು ಹೇಳಿದರು.

ಏನಿದ್ದರೂ, ಬಾರಿ, ನಾವು ಅದನ್ನು ಲಿಖಿತವಾಗಿ ಉತ್ತರ ಪಡೆಯಬಯಸುತ್ತೇವೆ. ಇಲ್ಲದಿದ್ದರೆ "ನಕಲಿ ಭರವಸೆ ನೀಡಿದಕ್ಕಾಗಿ ನಾವು ವಿಷಾದಿಸುತ್ತೇವೆ ಎಂದು ರಾಜ್ಯ ಸರ್ಕಾರವು ಬಹಿರಂಗವಾಗಿ ಹೇಳಿ ಸಾರ್ವಜನಿಕ ಕ್ಷಮೆಯಾಚಿಸಬೇಕು ಎಂದು ನಾವು ಬಯಸುತ್ತೇವೆ ಎಂದು ಅವರು ನುಡಿದರು.

ಹಿಂದಿನ ಗುಜ್ಜರ್ ಆಂದೋಲನಗಳಲ್ಲಿ ಪ್ರಾಣ ಕಳೆದುಕೊಂಡ ಗುಜ್ಜರ್ ನಾಯಕರ ಕುಟುಂಬಗಳಿಗೆ ಸರ್ಕಾರ ಅಕ್ಟೋಬರ್ ೨೯ ರಂದು ಲಕ್ಷ ರೂ ಪರಿಹಾರವನ್ನು ಘೋಷಿಸಿತ್ತು. ಮತ್ತೊಂದು ಪರಿಹಾರವಾಗಿ ಪರೀಕ್ಷೆಯನ್ನು ಪೂರ್ಣಗೊಳಿಸಿದ ಅತ್ಯಂತ ಹಿಂದುಳಿದ ವರ್ಗದ ೧೨೫೨ ಅಭ್ಯರ್ಥಿಗಳಿಗೆ ಪ್ರೊಬೇಷನರಿ ಅವಧಿ ಮುಗಿದ ನಂತರ ರಾಜ್ಯ ಸರ್ಕಾರವು ನಿಯಮಿತವಾಗಿ ವೇತನ ಪ್ರಮಾಣವನ್ನು ನೀಡಲಿದೆ ಎಂದು ಅಧಿಕಾರಿಗಳು ತಿಳಿಸಿದ್ದರು.

ಹಿಂದುಳಿದ ವರ್ಗಗಳಿಗೆ ಮೀಸಲಾತಿಗೆ ಸಂಬಂಧಿಸಿದ ನಿಬಂಧನೆಯನ್ನು ಒಂಬತ್ತನೇ ವೇಳಾಪಟ್ಟಿಯಲ್ಲಿ ಸೇರಿಸುವಂತೆ ಶಿಫಾರಸು ಮಾಡಿ ಕೇಂದ್ರಕ್ಕೆ ಪತ್ರ ಬರೆಯಲು ರಾಜ್ಯ ಸರ್ಕಾರ ನಿರ್ಧರಿಸಿತ್ತು.

No comments:

Advertisement