My Blog List

Thursday, November 12, 2020

ಹಾಸ್ಯನಟ ಕುನಾಲ್ ಕಮ್ರಾ ವಿರುದ್ಧ ಸುಪ್ರೀಂ ನಿಂದನೆ ಪ್ರಕರಣ

 ಹಾಸ್ಯನಟ ಕುನಾಲ್ ಕಮ್ರಾ ವಿರುದ್ಧ ಸುಪ್ರೀಂ ನಿಂದನೆ ಪ್ರಕರಣ

ನವದೆಹಲಿ: ರಿಪಬ್ಲಿಕ್ ಟಿವಿ ಸಂಪಾದಕ ಅರ್ನಬ್ ಗೋಸ್ವಾಮಿ ಅವರಿಗೆ ಮಧ್ಯಂತರ ಜಾಮೀನು ನೀಡಿದ್ದಕ್ಕಾಗಿ ಸುಪ್ರಿಂಕೋರ್ಟನ್ನು ಟೀಕಿಸಿ ಸರಣಿ ಟ್ವೀಟ್ಗಳನ್ನು ಪ್ರಕಟಿಸಿದ ಹಾಸ್ಯನಟ ಕುನಾಲ್ ಕಮ್ರಾ ಈಗ ಸುಪ್ರೀಂಕೋರ್ಟ್ ನಿಂದನೆಯ ಆರೋಪಕ್ಕೆ ಗುರಿಯಾಗಿದ್ದ ನ್ಯಾಯಾಂಗ ನಿಂದನೆ ಮೊಕದ್ದಮೆ ಎದುರಿಸಬೇಕಾಗಿ ಬಂದಿದೆ.

ಸ್ಟ್ಯಾಂಡ್-ಅಪ್ ಕಾಮಿಕ್ ಕುನಾಲ್ ಕಮ್ರಾ ವಿರುದ್ಧ ಕ್ರಿಮಿನಲ್ ನ್ಯಾಯಾಂಗ ನಿಂದನೆ ಮೊಕದ್ದಮೆ ಹೂಡಲು ಬಯಸಿದ ಕಾನೂನು ವಿದ್ಯಾರ್ಥಿ ಮತ್ತು ಇಬ್ಬರು ವಕೀಲರಿಗೆ ಖಟ್ಲೆ ದಾಖಲಿಸಲು ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ 2020 ನವೆಂಬರ್ 12ರ ಗುರುವಾರ ಒಪ್ಪಿಗೆ ನೀಡಿದರು.

"ಜನರು ಸುಪ್ರೀಂ ಕೋರ್ಟ್ ಮೇಲೆ ಅಸಮರ್ಥನೀಯ ದಾಳಿ ಮಾಡುವುದನ್ನು ಜನರು ಅರ್ಥಮಾಡಿಕೊಳ್ಳಲು ಇದು ಸಕಾಲ ಮತ್ತು ಇಂತಹ ಅಪರಾಧವು ನಿರ್ದಯವಾಗಿ ಶಿಕ್ಷೆಗೆ ಕಾರಣವಾಗುತ್ತದೆ ಎಂದು  ವೇಣುಗೋಪಾಲ್ ಹೇಳಿದರು.

ಹಾಸ್ಯನಟನ ಟ್ವೀಟ್ಗಳು ಕೆಟ್ಟ ಅಭಿರುಚಿಯವು ಮಾತ್ರವಲ್ಲ, ಹಾಸ್ಯ ಮತ್ತು ತಿರಸ್ಕಾರದ ನಡುವಿನ ಗಡಿಯನ್ನು ಸ್ಪಷ್ಟವಾಗಿ ದಾಟಿವೆ ಎಂದು ಅಟಾರ್ನಿ ಜನರಲ್ ಹೇಳಿದರು.

" ಟ್ವೀಟ್ ಭಾರತದ ಸರ್ವೋಚ್ಚ ನ್ಯಾಯಾಲಯ ಮತ್ತು ಅದರ ನ್ಯಾಯಮೂರ್ತಿಗಳ ವಿರುದ್ಧದ ಸಂಪೂರ್ಣ ಪ್ರಚೋದನೆಯಾಗಿದೆ ಎಂದೂ ವೇಣುಗೋಪಾಲ್ ಹೇಳಿದರು.

"ಇಂದು ಜನರು ಧೈರ್ಯದಿಂದ ಮತ್ತು ನಿರ್ಭಯವಾಗಿ ಸುಪ್ರೀಂ ಕೋರ್ಟ್ ಮತ್ತು ಅದರ ನ್ಯಾಯಮೂರ್ತಿಗಳ ಖಂಡನೆಯನ್ನು ವಾಕ್ ಸ್ವಾತಂತ್ರ್ಯ ಎಂದು ನಂಬುತ್ತಾರೆ ಎಂದು ಅಟಾರ್ನಿ ಜನರಲ್ ನುಡಿದರು.

No comments:

Advertisement