ಡೊನಾಲ್ಡ್ ಟ್ರಂಪ್: ಒಬಾಮಾ ಕಿಡಿ!
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರೆಟಿಕ್ ಅಭ್ಯರ್ಥಿ ಜೋ ಬಿಡೆನ್ ಪರ ಪ್ರಚಾರ ಮಾಡಿದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ, ಡೊನಾಲ್ಡ್ ಟ್ರಂಪ್ ವಿರುದ್ಧ ಹರಿಹಾಯ್ದರು.
ಹಾಲಿ ಅಧ್ಯಕ್ಷ
ಡೊನಾಲ್ಡ್ ಟ್ರಂಪ್ ತಮ್ಮ ಅಹಂಕಾರವನ್ನು ಪೋಷಿಸುವುದರಲ್ಲೇ ಕಾಲ ಕಳೆದರೇ ಹೊರತು, ಮಾರಕ ಕೊರೊನಾ ವೈರಸ್ ಹಾವಳಿಯನ್ನು ನಿಯಂತ್ರಿಸಲು ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ಒಬಾಮಾ ಕಿಡಿಕಾರಿದರು.
ಟ್ರಂಪ್ಗೆ ಜನರ ಪ್ರಾಣ
ರಕ್ಷಣೆಗಿಂತ ತಮ್ಮ ಅಹಂಕಾರವೇ ಮುಖ್ಯವಾಗಿತ್ತು. ತಮ್ಮ ನಾಲ್ಕು ವರ್ಷಗಳ ಆಡಳಿತಾವಧಿಯಲ್ಲಿ ಟ್ರಂಪ್ ತಮ್ಮೊಬ್ಬರನ್ನು ಹೊರತುಪಡಿಸಿ, ಉಳಿದ ಯಾವುದೇ ಅಮೆರಿಕನ್ನರಿಗೆ ಯಾವುದೇ ರೀತಿಯ ನೆರವು ನೀಡಲಿಲ್ಲ ಎಂದು ಬರಾಕ್ ಒಬಾಮ ತೀವ್ರ ವಾಗ್ದಾಳಿ ನಡೆಸಿದರು.
No comments:
Post a Comment