My Blog List

Tuesday, December 1, 2020

ಜಿಎಸ್‌ಟಿ ಸಂಗ್ರಹ: ಸತತ ಎರಡನೇ ತಿಂಗಳು ೧ ಲಕ್ಷ ಕೋಟಿ ರೂ

 ಜಿಎಸ್ಟಿ ಸಂಗ್ರಹ: ಸತತ  ಎರಡನೇ ತಿಂಗಳು ಲಕ್ಷ ಕೋಟಿ ರೂ

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಆದಾಯ ಸತತ ಎರಡನೇ ತಿಂಗಳಲ್ಲಿ ಲಕ್ಷ ಕೋಟಿ ರೂಪಾಯಿಗಳನ್ನು ಮೀರಿದ್ದು, ನವೆಂಬರಿನಲ್ಲಿ ,೦೪,೯೬೩ ಕೋಟಿ ರೂಪಾಯಿಗಳಿಗೆ ತಲುಪಿದೆ. ಇದರಿಂದಾಗಿ  ಶೇಕಡಾ .೪ರ ವಾರ್ಷಿಕ ಬೆಳವಣಿಗೆಯನ್ನು ದಾಖಲಾದಂತಾಗಿದೆ. ಆದಾಗ್ಯೂ, ಹಿಂದಿನ ತಿಂಗಳಲ್ಲಿ ಸಂಗ್ರಹಿಸಿದ ,೦೫,೧೫೫ ಕೋಟಿ ರೂ.ಗಳಿಗೆ ಹೋಲಿಸಿದರೆ ಆದಾಯವು ಸ್ವಲ್ಪ ಕುಸಿದಿದ್ದು, ಶೇ..೧೮ರಷ್ಟು ಕಡಿಮೆಯಾಗಿದೆ.

ಜಿಎಸ್ಟಿ ಸಂಗ್ರಹವು ಆರು ತಿಂಗಳ ಕಾಲ ಸಂಕೋಚನ ಕ್ರಮದಲ್ಲಿ ಉಳಿದುಕೊಂಡ ನಂತರ ಸತತ ಮೂರನೇ ತಿಂಗಳು ಸಕಾರಾತ್ಮಕ ಬೆಳವಣಿಗೆಯನ್ನು ತೋರಿಸಿದೆ, ಇದು ಕೋವಿಡ್ -೧೯ ಸಾಂಕ್ರಾಮಿಕ ರೋಗವು ಭಾರತವನ್ನು ಬಾಧಿಸಿದ ಬಳಿಕ ವರ್ಷದ ಮಾರ್ಚ್ ತಿಂಗಳಲ್ಲಿ ರಾಷ್ಟ್ರವ್ಯಾಪಿ ದಿಗ್ಬಂಧನ (ಲಾಕ್ಡೌನ್) ಜಾರಿಗೊಳಿಸಿದಂದಿನಿಂದ ಕುಸಿದ ಆರ್ಥಿಕತೆಯು ಈಗ ಚೇತರಿಕೆಯ ಲಕ್ಷಣಗಳನ್ನು ಸೂಚಿಸುತ್ತಿರುವುದನ್ನು ಇದು ತೋರಿಸಿದೆ. ಜಿಎಸ್ಟಿಗೆ ಸಂಬಂಧಿಸಿದ ಅಧಿಕೃತ ಅಂಕಿ ಅಂಶಗಳನ್ನು 2020 ಡಿಸೆಂಬರ್ 01ರ ಮಂಗಳವಾರ ಬಿಡುಗಡೆ ಮಾಡಲಾಗಿದೆ.

"ಜಿಎಸ್ಟಿ ಆದಾಯದಲ್ಲಿ ಇತ್ತೀಚಿನ ಚೇತರಿಕೆಯ ಪ್ರವೃತ್ತಿಗೆ ಅನುಗುಣವಾಗಿ, ೨೦೨೦ ನವೆಂಬರ್ ತಿಂಗಳ ಆದಾಯವು ಕಳೆದ ವರ್ಷದ ಇದೇ ತಿಂಗಳಲ್ಲಿನ ಜಿಎಸ್ಟಿ ಆದಾಯಕ್ಕಿಂತ ಶೇಕಡಾ .೪ರಷ್ಟು ಹಚ್ಚಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

೨೦೨೦ ನವೆಂಬರ್ ತಿಂಗಳಲ್ಲಿ ಸಂಗ್ರಹಿಸಿದ ಒಟ್ಟು ಜಿಎಸ್ಟಿ ಆದಾಯ ,೦೪,೯೬೩ ಕೋಟಿ ರೂಪಾಯಿಗಳು. ಇದರಲ್ಲಿ ಕೇಂದ್ರ ಜಿಎಸ್ಟಿ (ಸಿಜಿಎಸ್ಟಿ) ೧೯,೧೮೯ ಕೋಟಿ ರೂಪಾಯಿಗಳು. ರಾಜ್ಯ ಜಿಎಸ್ಟಿ (ಎಸ್ಜಿಎಸ್ಟಿ) ೨೫,೫೪೦ ಕೋಟಿ ರೂಪಾಯಿಗಳು, ಇಂಟಿಗ್ರೇಟೆಡ್ ಜಿಎಸ್ಟಿ (ಐಜಿಎಸ್ಟಿ) ೫೧, ೯೯೨ ಕೋಟಿ ರೂಪಾಯಿಗಳು (ಸರಕುಗಳ ಆಮದಿಗೆ ಸಂಗ್ರಹಿಸಿದ ೨೨,೦೭೮ ಕೋಟಿ ರೂ. ಸೇರಿದಂತೆ) ಎಂದು ಅದು ಹೇಳಿದೆ.

ಸರಕುಗಳ ಆಮದಿನ ಮೇಲೆ ಸಂಗ್ರಹಿಸಿದ ೮೦೯ ಕೋಟಿ ರೂಪಾಯಿ ಸೇರಿದಂತೆ ತಿಂಗಳ ಪರಿಹಾರ ಸೆಸ್ ಸಂಗ್ರಹವು ,೨೪೨ ಕೋಟಿ ರೂಪಾಯಿಗಳಾಗಿದ್ದು, ಸೆಸ್ ಸಂಗ್ರಹವು ಅಕ್ಟೋಬರ್ ೨೦೨೦ ,೦೧೧ ಕೋಟಿ ರೂಪಾಯಿಗೆ ಹೋಲಿಸಿದರೆ ಸುಮಾರು ಶೇಕಡಾ ೩ರಷ್ಟು ಹೆಚ್ಚಳವನ್ನು ತೋರಿಸಿದೆ. ೨೦೧೭ರ ಜುಲೈಯಲ್ಲಿ  ಹೊಸ ಪರೋಕ್ಷ ತೆರಿಗೆ ನಿಯಮವನ್ನು ಪರಿಚಯಿಸುವ ಸಮಯದಲ್ಲಿ, ಜಿಎಸ್ಟಿ ಕಾನೂನು ರಾಜ್ಯಗಳಿಗೆ ತಮ್ಮ ವಾರ್ಷಿಕ ಆದಾಯದಲ್ಲಿ ಶೇ.೧೪ರಷ್ಟು ಹೆಚ್ಚಳದ ಭರವಸೆಯನ್ನು ನೀಡಿದೆ. ಐದು ವರ್ಷಗಳು (೨೦೨೨ ರವರೆಗೆ) ಮತ್ತು ಐಷಾರಾಮಿ ಸರಕುಗಳ ಮೇಲೆ ಮತ್ತು ಮದ್ಯ, ಸಿಗರೇಟ್, ಗಾಳಿ ತುಂಬಿದ ನೀರು, ವಾಹನಗಳು, ಕಲ್ಲಿದ್ದಲು ಮತ್ತು ಇತರ ತಂಬಾಕು ಉತ್ಪನ್ನಗಳ ಮೇಲೆ ವಿಧಿಸುವ ಪರಿಹಾರ ಸೆಸ್ ಮೂಲಕ ಅವರ ಆದಾಯದ ಕೊರತೆಯನ್ನು ಭರಿಸಿಕೊಳ್ಳಬೇಕಾಗಿದೆ.

ಕನ್ಸಲ್ಟೆನ್ಸಿ ಸಂಸ್ಥೆ ಇವೈಯ ತೆರಿಗೆ ಪಾಲುದಾರ ಅಭಿಷೇಕ್ ಜೈನ್ ಅವರು, ‘ಎರಡನೇ ತಿಂಗಳು ಸತತವಾಗಿ ಒಂದು ಲಕ್ಷ ರೂ. ಜಿಎಸ್ಟಿ ಸಂಗ್ರಹವು ಆರ್ಥಿಕ ಚೇತರಿಕೆ ಮುಂದುವರೆದಿರುವುದರ ಲಕ್ಷಣವಾಗಿದೆಎಂದು ಹೇಳಿದರು. ಸಂಗ್ರಹಗಳು ಕಳೆದ ವರ್ಷ ಇದೇ ತಿಂಗಳಿಗಿಂತ ಸ್ವಲ್ಪ ಹೆಚ್ಚಾಗಿದೆ. ಸಾಂಕ್ರಾಮಿಕ ರೋಗದಿಂದ ಉಂಟಾಗಿರುವ ಜಿಎಸ್ಟಿ ಸಂಗ್ರಹದ ಕೊರತೆಯನ್ನು ನೀಗಿಸಲು ಇದು ಸಹಾಯ ಮಾಡುತ್ತದೆ ಎಂದು ಅವರು ನುಡಿದರು.

ಅನುಷ್ಠಾನದ ಸಮಸ್ಯೆಗಳು ಮತ್ತು ಕೋವಿಡ್ -೧೯ ಸಾಂಕ್ರಾಮಿಕ ರೋಗವು ಹಠಾತ್ತನೆ ಸಂಭವಿಸಿದ ಪರಿಣಾಮವಾಗಿ ಜಿಎಸ್ಟಿ ಆದಾಯ ಸಂಗ್ರಹದಲ್ಲಿ ತೀವ್ರ ಕುಸಿತದ ಆಧಾರದ ಮೇಲೆ, ಆಗಸ್ಟ್ ತಿಂಗಳಿನಲ್ಲಿ ಜಿಎಸ್ಟಿ ಮಂಡಳಿಯು ೨೦೨೦-೨೧ರ ಒಟ್ಟು ಆದಾಯದ ಕೊರತೆಯನ್ನು .೩೫ ಲಕ್ಷ ಕೋಟಿ ರೂಪಾಯಿ ಎಂದು ಅಂದಾಜಿಸಿದೆ. ಅನುಷ್ಠಾನದ ಸಮಸ್ಯೆಗಳಿಂದಾಗಿ ಪ್ರಸಕ್ತ ಹಣಕಾಸು ವರ್ಷದಲ್ಲಿ ಒಟ್ಟು ಮೊತ್ತದಲ್ಲಿ .೧೦ ಲಕ್ಷ ಕೋಟಿ ರೂಪಾಯಿ ಕೊರತೆಯಾಗುವುದು ಎಂದು ಅಂದಾಜಿಸಲಾಗಿದೆ.

ನಿಯಮಿತ ಇತ್ಯರ್ಥವಾಗಿ ಸರ್ಕಾರ ಸಿಜಿಎಸ್ಟಿಗೆ ೨೨,೨೯೩ ಕೋಟಿ ರೂಪಾಯಿ ಮತ್ತು ಐಜಿಎಸ್ಟಿಯಿಂದ ಎಸ್ಜಿಎಸ್ಟಿಗೆ ೧೬,೨೮೬ ಕೋಟಿ ರೂಪಾಯಿಗಳನ್ನು ನಿಗದಿ ಪಡಿಸಿದೆ. "೨೦೨೦ ನವೆಂಬರ್ ತಿಂಗಳಲ್ಲಿ ನಿಯಮಿತವಾಗಿ ಇತ್ಯರ್ಥಪಡಿಸಿದ ನಂತರ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಗಳಿಸಿದ ಒಟ್ಟು ಆದಾಯ ಸಿಜಿಎಸ್ಟಿಗೆ ೪೧,೪೮೨ ಕೋಟಿ ರೂಪಾಯಿ ಮತ್ತು ಎಸ್ಜಿಎಸ್ಟಿಗೆ ೪೧,೮೨೬ ಕೋಟಿ ರೂಪಾಯಿಎಂದು ಸರ್ಕಾರ ಹೇಳಿದೆ.

No comments:

Advertisement