ಪಾಕಿಸ್ತಾನದ ಜಿಹಾದಿ ಬತ್ತಳಿಕೆಯಲ್ಲಿ ಹೊಸ ಆಯುಧ ಚೀನೀ ಡ್ರೋಣ್
ನವದೆಹಲಿ: ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕ ಗುಂಪುಗಳು ಮತ್ತು ಅದರ ಇಂಟರ್ ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್ಐ) ಭಾರತದ ಪಂಜಾಬ್ ಹಾಗೂ ಜಮ್ಮು ಮತ್ತು ಕಾಶ್ಮೀರದಲ್ಲಿ ಗಡಿಯುದ್ದಕ್ಕೂ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಕಳ್ಳಸಾಗಣೆ ಮಾಡುವ ಸಾಮರ್ಥ್ಯವನ್ನು ವಿಸ್ತರಿಸಲು ದೊಡ್ಡ ಡ್ರೋಣ್ಗಳನ್ನು ಬಳಸಲಾರಂಭಿಸಿದೆ ಎಂದು ಸುದ್ದಿ ಮೂಲಗಳು 2020 ಡಿಸೆಂಬರ್ 01ರ ಮಂಗಳವಾರ ತಿಳಿಸಿವೆ.
ಕಳೆದ
ಕೆಲವು ವರ್ಷಗಳಿಂದ ಸಣ್ಣ ಪ್ರಮಾಣದಲ್ಲಿ ಶಸ್ತ್ರಾಸ್ತ್ರ ಕಳ್ಳಸಾಗಣೆಗಾಗಿ ಡ್ರೋಣ್ಗಳನ್ನು ಬಳಸುತ್ತಿದ್ದ ಭಯೋತ್ಪಾದಕ ಗುಂಪುಗಳು ಮತ್ತು ಐಎಸ್ಐ, ಪ್ರತಿ ಸರಕಿನಲ್ಲಿ
ಹೆಚ್ಚಿನ ಪ್ರಮಾಣದ ಬಂದೂಕುಗಳನ್ನು ಸಾಗಿಸಬಲ್ಲ ದೊಡ್ಡ ಡ್ರೋಣ್ಗಳ ನವೀಕರಿಸಿದ ಆವೃತ್ತಿಗಳನ್ನು
ಸಂಗ್ರಹಿಸಿಕೊಂಡಿವೆ ಎಂದು ದೆಹಲಿಯ ಭಯೋತ್ಪಾದನೆ ನಿಗ್ರಹ ಅಧಿಕಾರಿಗಳು ತಿಳಿಸಿದ್ದಾರೆ.
ನಿಯಂತ್ರಣ
ರೇಖೆಯಲ್ಲಿ (ಎಲ್ಒಸಿ) ಎತ್ತರದ ಪರ್ವತ ಮಾರ್ಗಗಳಲ್ಲಿ ಹಿಮಪಾತದ ಕಾರಣ ಜಮ್ಮು ಮತ್ತು ಕಾಶ್ಮೀgಕ್ಕೆ ಜಿಹಾದಿ ಒಳನುಸುಳುವಿಕೆಯನ್ನು ಕಷ್ಟಕರವಾಗುವ ಹಿನ್ನೆಲೆಯಲ್ಲಿ ನವೀಕೃತ ದ್ರೋಣ್ ಬಳಕೆಯು ಭಯೋತ್ಪಾದಕರು, ಪಾಕ್ ಸೈನಿಕರ ಸಾಮರ್ಥ್ಯ ಹೆಚ್ಚಳಕ್ಕೆ ನಿರ್ಣಾಯಕವಾಗಿದೆ.
ಜಮ್ಮು
ಮತ್ತು ಕಾಶ್ಮೀರದಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಭಯೋತ್ಪಾದಕರಿಗೆ ಸರಬರಾಜು ಮಾಡಲು ಉದ್ದೇಶಿಸಲಾಗಿರುವ ಶಸ್ತ್ರಾಸ್ತ್ರಗಳನ್ನು ಪಂಜಾಬಿನಲ್ಲಿ ಉದುರಿಸುತ್ತಿದೆ ಎಂದು ಅನೇಕ ಗುಪ್ತಚರ ವರದಿಗಳು ತಿಳಿಸಿವೆ.
ಗಡಿ
ರಾಜ್ಯದಲ್ಲಿ ಉಗ್ರಗಾಮಿತ್ವವನ್ನು ಪುನರುಜ್ಜೀವನಗೊಳಿಸುವ ಸತತ ಪ್ರಯತ್ನದ ಭಾಗವಾಗಿ ಹ್ಯಾಂಡ್ಲರುಗಳು ಪಂಜಾಬಿನ ರೈತ
ಆಂದೋಲನವನ್ನು ಬಳಸಿಕೊಳ್ಳಲು ಪಾಕಿಸ್ತಾನ ಮೂಲದ ಖಲಿಸ್ತಾನಿ ಗುಂಪುಗಳನ್ನು ನುಗ್ಗಿಸುತ್ತಿವೆ ಎಂದು ಇತ್ತೀಚಿನ ವರದಿಗಳು ಸೂಚಿಸಿವೆ. ಈ ಅನುಮಾನಗಳನ್ನು ಕೇಂದ್ರ
ಮತ್ತು ಆಂತರಿಕ ಭದ್ರತಾ ಸಂಸ್ಥೆಗಳಿಗೆ ರಾಜ್ಯ ಪೊಲೀಸ್ ಮತ್ತೆ ಮತ್ತೆ ತಿಳಿಸಿದೆ.
ಪಂಜಾಬಿನಲ್ಲಿ
ಮಾತ್ರ, ಪಂಜಾಬ್ ಪೊಲೀಸರು ಶಸ್ತ್ರಾಸ್ತ್ರಗಳ ಜೊತೆಗೆ ನಾಲ್ಕು ಚೀನಾದ ಡ್ರೋಣ್ಗಳನ್ನು ೨೦೧೯ರ ಆಗಸ್ಟ್ ೧೨ರಿಂದ ಇಲ್ಲಿಯವರೆಗೆ ವಶ ಪಡಿಸಿಕೊಂಡಿದ್ದಾರೆ. ೨೦೧೯ರ ಆಗಸ್ಟ್
೧೨ರಿಂದ ಇತರ ವೈಮಾನಿಕ ಚಲನವಲನಗಳ ಹೊರತಾಗಿ ಈ ಡ್ರೋಣ್ಗಳನ್ನು
ಬಳಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆದರೆ
ಬಂದೂಕುಗಳನ್ನು ಸಾಗಿಸಲು ಚೀನಾದ ವಾಣಿಜ್ಯ ಡ್ರೋಣ್ಗಳನ್ನು ಬಳಸುವುದು ಸಮಸ್ಯೆಯ ಒಂದು ಭಾಗ ಮಾತ್ರ. ಗಡಿಯ ಸಮೀಪವಿರುವ ಗುರಿಗಳನ್ನು ಬಾಂಬ್ ಮಾಡಲು ಬಳಸಲಾಗುವ ಹೊರೆಗಳನ್ನು ಹೊತ್ತೊಯ್ಯುವ ಸಾಮರ್ಥ್ಯವಿರುವ ಡ್ರೋಣ್ಗಳ ಬೆದರಿಕೆಯ ಬಗ್ಗೆ
ಜಾಗರೂಕರಾಗಿರಲು ಗುಪ್ತಚರ ಸಂಸ್ಥೆಗಳು ಭದ್ರತಾ ಪಡೆಗಳನ್ನು ಎಚ್ಚರಿಸಿದೆ.
ಸಣ್ಣ
ಬಾಂಬ್ ದಾಳಿ ನಡೆಸಲು ಅಗ್ಗದ ಡ್ರೋಣ್ಗಳನ್ನು ಬಳಸುವ ಯಶಸ್ಸಿನಿಂದ ಪ್ರೇರಣೆ ಪಡೆದ ಪಾಕಿಸ್ತಾನದ ಐಎಸ್ಐ, ಭಯೋತ್ಪಾದಕ ಗುಂಪುಗಳಿಗಾಗಿ
ಈ ಆಯ್ಕೆಯನ್ನು ಅನ್ವೇಷಿಸುತ್ತಿದೆ. ಈ ವರ್ಷದ ಏಪ್ರಿಲ್ನಲ್ಲಿ ಪಂಜಾಬ್ ಪ್ರಾಂತ್ಯದ ಟ್ಯಾಕ್ಸಿಲಾದಲ್ಲಿ ಹಿರಿಯ ಲಷ್ಕರ್-ಇ-ತೊಯ್ಬಾ ಮತ್ತು
ಜೈಶ್-ಎ-ಮೊಹಮ್ಮದ್ ಕಮಾಂಡರ್ಗಳ ಜೊತೆಗಿನ ಸಭೆಯಲ್ಲಿ
ಐಎಸ್ಐ ತನ್ನ ಯೋಜನೆಯನ್ನು
ಮೊದಲು ರೂಪಿಸಿತ್ತು.
ಪಾಕಿಸ್ತಾನ
ಆಕ್ರಮಿತ ಕಾಶ್ಮೀರದ ಕೋಟ್ಲಿ ಜಿಲ್ಲೆಯ ಬ್ರಿಗೇಡ್ ಕೇಂದ್ರ ಕಚೇರಿಯಲ್ಲಿ ಮುಂದಿನ ತಿಂಗಳು ಮುಂದಿನ ಸಭೆ ನಡೆದಿತ್ತು ಎಂದು ಅಕ್ಟೋಬರಿನಲ್ಲಿ ಗುಪ್ತಚರ ವರದಿ ತಿಳಿಸಿದೆ.
ಭಾರತವು
ತನ್ನ ಡ್ರೋಣ್ ನಿರೋಧಿ ಸಾಮರ್ಥ್ಯವನ್ನು ನಿರ್ಮಿಸಲು ತೀವ್ರವಾಗಿ ಮುಂದಾಗುತ್ತಿರುವಾಗ, ಮುಂಬರುವ ಎರಡು ಚಳಿಗಾಲದ ತಿಂಗಳುಗಳಲ್ಲಿ ಪಂಜಾಬ್ ಮತ್ತು ಜಮ್ಮು ಮತ್ತು ಕಾಶ್ಮೀರ ಗಡಿಯಲ್ಲಿ ಹಿಮಪಾತವು ಭಾರತದ ಭದ್ರತಾ ಸಂಸ್ಥೆಗಳಿಗೆ ಕಠಿಣ ಪರೀಕ್ಷೆಯನ್ನು ಒಡ್ಡುತ್ತದೆ.
ಗಡಿ
ಭದ್ರತಾ ಪಡೆ ಮಹಾನಿರ್ದೇಶಕ ರಾಕೇಶ್ ಅಸ್ತಾನಾ ಅವರು ಮಂಗಳವಾರ ನಡೆದ ಬಲವರ್ಧನೆಯ ದಿನದ ಸಮಾರಂಭದಲ್ಲಿ ಈ ಸವಾಲನ್ನು ಪ್ರಸ್ತಾಪಿಸಿದರು,
ಈ ವರ್ಷದ ಜೂನ್ ೨೦ ರಂದು ಜಮ್ಮುವಿನ
ಕಥುವಾ ವಲಯದಲ್ಲಿ ಭಾರಿ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಹೊಂದಿರುವ ಡ್ರೋಣ್ನ್ನು ಬಿಎಸ್ಎಫ್ ತಡೆಹಿಡಿದಿದೆ ಎಂದು ಅವರು ಹೇಳಿದರು.
ಪಶ್ಚಿಮ
ಗಡಿಯಲ್ಲಿ ಡ್ರೋಣ್ ಒಳನುಸುಳುವಿಕೆಯನ್ನು ಎದುರಿಸಲು ತಾಂತ್ರಿಕ ಪರಿಹಾರಗಳನ್ನು ಕಂಡುಹಿಡಿಯಲು ಬಿಎಸ್ಎಫ್ ಸಹ ಕಾರ್ಯಮಗ್ನವಾಗಿದೆ ಎಂದು ಅವರು
ಹೇಳಿದರು.
ಡ್ರೋಣ್ಗಳನ್ನು ಪತ್ತೆ ಹಚ್ಚಲು ಮತ್ತು ಅವುಗಳನ್ನು ನಾಶಮಾಡಲು ಗಡಿಯುದ್ದಕ್ಕೂ ಕೆಳಮಟ್ಟದ ರಾಡಾರ್ಗಳನ್ನು ನಿಯೋಜಿಸುವಂತೆ ಪಂಜಾಬ್ ಪೊಲೀಸರು ಕೇಂದ್ರ ಮತ್ತು ಭಾರತೀಯ ವಾಯುಪಡೆಯನ್ನು (ಐಎಎಫ್) ಕೋರಿದ್ದಾರೆ.
ಅಂತಾರಾಷ್ಟ್ರೀಯ
ಗಡಿಗಳನ್ನು ನಿರ್ವಹಿಸುವ ಬಿಎಸ್ಎಫ್ ಸಹ ಈಗ ಶಸ್ತ್ರಾಸ್ತ್ರಗಳ
ಹೊರತಾಗಿ ಡ್ರೋನ್ ನಿರೋಧಿ ವ್ಯವಸ್ಥೆಯನ್ನು ಸಂಗ್ರಹಿಸಲು ಮುಂದಾಗುತ್ತಿದೆ. ಭಾರತದ ಈ ಎರಡು ಪ್ರಾಂತ್ಯಗಳಲ್ಲಿ
ಭಯೋತ್ಪಾದಕ ನಿಧಿ ಸಂಗ್ರಹಕ್ಕಾಗಿ ಮಾದಕ ದ್ರವ್ಯಗಳ ಮಾರಾಟವನ್ನೂ ಭಯೋತ್ಪಾದಕರು ನಡೆಸುತ್ತಿದ್ದಾರೆ ಎಂದು ವರದಿಗಳು ಹೇಳಿವೆ.
No comments:
Post a Comment