My Blog List

Wednesday, December 30, 2020

ಕೃಷಿ ಕಾನೂನು ಪರಿಶೀಲನೆಗೆ ಸಮಿತಿ: ಕೇಂದ್ರ ಪ್ರಸ್ತಾಪ, ಕಾಯ್ದೆ ರದ್ದಿಗೆ ನಕಾರ

 ಕೃಷಿ ಕಾನೂನು ಪರಿಶೀಲನೆಗೆ ಸಮಿತಿ: ಕೇಂದ್ರ ಪ್ರಸ್ತಾಪ, ಕಾಯ್ದೆ ರದ್ದಿಗೆ ನಕಾರ

ನವದೆಹಲಿ: ಮೂರು ಕೃಷಿ ಕಾಯಿದೆಗಳಿಗೆ ಸಂಬಂಧಿಸಿದಂತೆ ಪ್ರತಿಭಟನಾ ನಿರತ ಕೃಷಿ ಮುಖಂಡರೊಂದಿಗೆ 2020 ಡಿಸೆಂಬರ್ 30ರ ಬುಧವಾರ ಆರನೇ ಸುತ್ತಿನ ಮಾತುಕತೆ ನಡೆಸಿದ ಮೂವರು ಕೇಂದ್ರ ಸಚಿವರು ತಮ್ಮ ಜೀವನೋಪಾಯಕ್ಕೆ ಧಕ್ಕೆ ತರುತ್ತದೆ ಎಂದು ಚಳವಳಿಕಾರರು ಹೇಳುವ ಮೂರು ಕೃಷಿ ಕಾನೂನು ರದ್ದುಪಡಿಸುವ ಬೇಡಿಕೆಯನ್ನು ತಿರಸ್ಕರಿಸಿದ್ದಾರೆ, ಆದಾಗ್ಯೂ, ಹೊಸ ಕಾಯ್ದೆಗಳ ಪರಿಶೀಲನೆಗೆ ಸಮಿತಿ ರಚಿಸಲು ಕೇಂದ್ರವು ಪ್ರಸ್ತಾಪಿಸಿದೆ.

ಕೇಂದ್ರ ಸಚಿವರಾದ ನರೇಂದ್ರ ಸಿಂಗ್ ತೋಮರ್, ಪಿಯೂಷ್ ಗೋಯಲ್ ಮತ್ತು ಸೋಮ ಪ್ರಕಾಶ್ ಕೂಡ ಕೃಷಿ ಬೆಲೆಗಳಿಗೆ ಕನಿಷ್ಠ ಬೆಲೆಗಳನ್ನು ಖಾತರಿಪಡಿಸುವ ಕಾನೂನಿನ ಸಾಧ್ಯತೆಯ ಬಗ್ಗೆ ಚರ್ಚಿಸಿದ್ದಾರೆ ಎಂದು ಮಾತುಕತೆಯಲ್ಲಿ ಪಾಲ್ಗೊಂಡಿದ್ದ ಹಿರಿಯ ರೈತ ಪ್ರತಿನಿಧಿಯೊಬ್ಬರು ತಿಳಿಸಿದರು.

ಮೊದಲ ಸುತ್ತಿನ ಮಾತುಕತೆಯ ನಂತರ ಮಂತ್ರಿಗಳು ಊಟದ ವಿರಾಮದ ಸಮಯದಲ್ಲಿ ರೈತರೊಂದಿಗೆ ಊಟ ಹಂಚಿಕೊಂಡು ಕಠಿಣ ಮಾತುಕತೆಗಳ ಮಧ್ಯೆ ಸ್ನೇಹಪರತೆಯನ್ನು ಪ್ರಸ್ತುತಪಡಿಸಿದರು.

ಬುಧವಾರ ಮೊದಲ ಸುತ್ತಿನ ಮಾತುಕತೆಯಲ್ಲಿ, ಊಟದ ವಿರಾಮದ ನಂತರ, ರೈತರು ಇತ್ತೀಚಿನ ಮೂರು ಕೃಷಿ ಸುಧಾರಣಾ ಕಾನೂನುಗಳನ್ನು ರದ್ದುಗೊಳಿಸುವ ಪ್ರಮುಖ ವಿಷಯವನ್ನು ಎತ್ತಿದರು.

ತಮ್ಮ ಬೇಡಿಕೆಗಳ ನಡುವೆ, ರೈತರು ಕನಿಷ್ಠ ಬೆಂಬಲ ಬೆಲೆಗಳು ಎಂದು ಕರೆಯಲ್ಪಡುವ ನಿಗದಿತ ಕನಿಷ್ಠ ಬೆಂಬಲ ಬೆಲೆಗಳನ್ನು ಕೇಂದ್ರ- ರಾಜ್ಯಗಳು ಸಂಯುಕ್ತವಾಗಿ ನಿರ್ಧರಿಸಲು ಕಾನೂನು ರೂಪಿಸುವ ಸಲಹೆ ಮುಂದಿಟ್ಟರು. "ಮಂತ್ರಿಗಳು ಬಗ್ಗೆ ಏನನ್ನೂ ಹೇಳಲಿಲ್ಲ ಆದರೆ ಎಂಎಸ್‌ಪಿ ಕುರಿತು ಕಾನೂನಿನ ಬೇಡಿಕೆಯನ್ನು ಚರ್ಚಿಸಲು ಅವರು ಬಯಸಿರುವುದಾಗಿ ಹೇಳಿದರು" ಎಂದು ಭಾರತೀಯ ಕಿಸಾನ್ ಯೂನಿಯನ್ ಬಣದ ಮುಖಂಡ ಜೋಗಿಂದರ್ ಸಿಂಗ್ ಉಗರ್‍ಹಾನ್ ಹೇಳಿದರು.

ಎರಡನೇ ಸುತ್ತಿನ ಮಾತುಕತೆಯಲ್ಲಿ, ಮೂರು ಕಾನೂನುಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಲು ಸಮಿತಿಯನ್ನು ರಚಿಸಬಹುದು ಎಂದು ಸರ್ಕಾರ ಹೇಳಿದೆ ಎಂದು ಸುದ್ದಿ ಮೂಲಗಳು ತಿಳಿಸಿದವು.

ಸರ್ಕಾರಿ ಅಧಿಕಾರಿಯೊಬ್ಬರು ಎಂಎಸ್‌ಪಿ ಕುರಿತ ಕಾನೂನಿನ ಸಾಧಕ-ಬಾಧಕಗಳನ್ನು ವಿವರಿಸಿದರು. ಖಾಸಗಿ ವ್ಯಾಪಾರಿಗಳಿಗೆ ಸಹ ಎಂಎಸ್‌ಪಿ ಕಡ್ಡಾಯಗೊಳಿಸುವ ಕಾನೂನು, ಮೂಲಭೂತವಾಗಿ ಯಾವುದೇ ಕೃಷಿ ಉತ್ಪನ್ನಗಳನ್ನು ರಾಜ್ಯ ನಿಗದಿತ ಬೆಲೆಗಳಿಗಿಂತ ಕಡಿಮೆ ಮಾರಾಟ ಮಾಡುವುದನ್ನು ನಿಷೇಧಿಸುವುದು ಮತ್ತು ಮಾರುಕಟ್ಟೆಗಳಲ್ಲಿ ಅವ್ಯವಸ್ಥೆಯನ್ನು ಹುಟ್ಟುಹಾಕುತ್ತದೆ ಎಂದು ಸರ್ಕಾರ ವಾದಿಸಿತು.

ಖಾಸಗಿ ವ್ಯಾಪಾರಿಗಳು ತಮಗೆ ಲಾಭದಾಯಕವಲ್ಲದೇ ಇದ್ದಲ್ಲಿ ಎಂಎಸ್‌ಪಿ ದರದಲ್ಲಿ ಖರೀದಿಸಲಾರರು ಎಂದು ತೋಮರ್ ಹೇಳಿದರು.

ಸೆಪ್ಟೆಂಬರಿನಲ್ಲಿ ಅಂಗೀಕರಿಸಲಾದ ಮೂರು ಕೃಷಿ ಕಾನೂನುಗಳು ಭಾರತದ ರೈತರು ಮುಕ್ತ ಮಾರುಕಟ್ಟೆಗಳನ್ನು ರಚಿಸುವ ಮೂಲಕ ವ್ಯಾಪಾರ ಮಾಡುವ ವಿಧಾನವನ್ನು ಬದಲಿಸುತ್ತವೆ, ದಶಕಗಳಷ್ಟು ಹಳೆಯದಾದ, ಸರ್ಕಾರಿ ಕೃಷಿ ಮಾರುಕಟ್ಟೆಗಳ ಜಾಲಕ್ಕೆ ವಿರುದ್ಧವಾಗಿ, ಭವಿಷ್ಯದ ಮಾರಾಟಕ್ಕೆ ಅಗತ್ಯ ಸರಕುಗಳನ್ನು ದಾಸ್ತಾನು ಮಾಡಲು ವ್ಯಾಪಾರಿಗಳಿಗೆ ಅವಕಾಶ ಮಾಡಿಕೊಡುವುದು ಮತ್ತು ಗುತ್ತಿಗೆ ಕೃಷಿ ಒಪ್ಪಂದಕ್ಕೆ ರಾಷ್ಟ್ರೀಯ ಚೌಕಟ್ಟನ್ನು ರೂಪಿಸುವುದು. ಒಟ್ಟಿನಲ್ಲಿ, ಕಾನೂನುಗಳು ದೊಡ್ಡ ನಿಗಮಗಳು ಮತ್ತು ಜಾಗತಿಕ ಸೂಪರ್ ರ್ಮಾರ್ಕೆಟ್ ಸರಪಳಿಗಳನ್ನು ರೈತರಿಂದ ನೇರವಾಗಿ ಖರೀದಿಸಲು ಅನುವು ಮಾಡಿಕೊಡುತ್ತದೆ, ದಶಕಗಳಷ್ಟು ಹಳೆಯ ನಿಯಮಗಳನ್ನು ಬೈಪಾಸ್ ಮಾಡುತ್ತವೆ.


ಸುಧಾರಣೆಗಳು ದೊಡ್ಡ ಸಂಸ್ಥೆಗಳಿಗೆ ಬೆಲೆಗಳನ್ನು ನಿರ್ದೇಶಿಸಲು ಮತ್ತು ಅವುಗಳನ್ನು ಬಳಸಿಕೊಳ್ಳಲು ಅನುವು ಮಾಡಿಕೊಡುತ್ತದೆ ಮತ್ತು ಅಂತಿಮವಾಗಿ ರೈತರನ್ನು ದೊಡ್ಡ ಸಂಸ್ಥೆಗಳ ಕೃಪಾಶ್ರಯಕ್ಕೆ ತಳ್ಳುತ್ತವೆ ಎಂದು ರೈತರು ಆಪಾದಿಸುತ್ತಾರೆ.

No comments:

Advertisement