Wednesday, December 2, 2020

ಬೋರಿಸ್ ಜಾನ್ಸನ್ ಗಣರಾಜ್ಯೋತ್ಸವಕ್ಕೆ ಮುಖ್ಯ ಅತಿಥಿ; ಮೋದಿ ಆಹ್ವಾನ

 ಬೋರಿಸ್ ಜಾನ್ಸನ್ ಗಣರಾಜ್ಯೋತ್ಸವಕ್ಕೆ ಮುಖ್ಯ ಅತಿಥಿ; ಮೋದಿ ಆಹ್ವಾನ

ನವದೆಹಲಿ: ೨೦೨೧ ಗಣರಾಜ್ಯೋತ್ಸವದಲ್ಲಿ ಇಂಗ್ಲೆಂಡಿನ ಪ್ರಧಾನಿ ಬೋರಿಸ್ ಜಾನ್ಸನ್ ಮುಖ್ಯ ಅತಿಥಿಯಾಗಿ ಭಾಗವಹಿಸುವ ನಿರೀಕ್ಷೆಯಿದೆ, ಪ್ರಧಾನಿ ನರೇಂದ್ರ ಮೋದಿ ಅರು ನವೆಂಬರ್ ೨೭ ದೂರವಾಣಿ ಸಂಭಾಷಣೆಯ ಸಂದರ್ಭದಲ್ಲಿ ಜಾನ್ಸನ್ ಅವರಿಗೆ ಔಪಚಾರಿಕ ಆಹ್ವಾನ ನೀಡಿದ್ದಾರೆ.

ಮುಂದಿನ ವರ್ಷ ಇಂಗ್ಲೆಂಡಿನಲ್ಲಿ ನಡೆಯಲಿರುವ ಜಿ - ಶೃಂಗಸಭೆಗೆ ಪ್ರಧಾನಿ ಮೋದಿಯವರನ್ನು ಜಾನ್ಸನ್ ಆಹ್ವಾನಿಸಿದ್ದಾರೆ ಎಂದು ಸುದ್ದಿ ಮೂಲಗಳು 2020 ಡಿಸೆಂಬರ್ 2ರ ಬುಧವಾರ ತಿಳಿಸಿವೆ.

ಭಾರತದ ಗಣರಾಜ್ಯೋತ್ಸವದ ಪರೇಡಿನಲ್ಲಿ ಪಾಲ್ಗೊಂಡಿದ್ದ ಕೊನೆಯ ಬ್ರಿಟಿಷ್ ಪ್ರಧಾನಿ ಜಾನ್ ಮೇಜರ್. ಅವರು ೧೯೯೩ರಲ್ಲಿ ಗಣರಾಜ್ಯೋತ್ಸವ ಪರೇಡಿನಲ್ಲಿ ಪಾಲ್ಗೊಂಡಿದ್ದರು.

ನವದೆಹಲಿಯು ವಿಷಯದ ಬಗ್ಗೆ ತುಟಿ ಬಿಚ್ಚಿಲ್ಲ. ಆದರೆ, ರಾಜತಾಂತ್ರಿಕರು ಇದು ಪ್ರಧಾನಿ ಮೋದಿಯವರ ಉತ್ತಮ ಚಿಂತನೆಯ ತಂತ್ರ ಎಂದು ಭಾವಿಸಿದ್ದಾರೆ. ಅಮೆರಿಕದ ನೂತನ ಅಧ್ಯಕ್ಷರಾಗಲಿರುವ ಜೋ ಬಿಡೆನ್ ಅವರ ಆಡಳಿತದಲ್ಲಿನ ಸಂಬಂಧದ ಬಗ್ಗೆ ಆತಂಕ ಇರುವ ಹಿನ್ನೆಲೆಯಲ್ಲಿ ಬ್ರೆಕ್ಸಿಟ್‌ನಿಂದ ಹೊರಬರುತ್ತಿರುವ ಇಂಗ್ಲೆಂಡನ್ನು ಆಹ್ವಾನಿಸಿರುವುದು ಉತ್ತಮ ಚಿಂತನೆಯ ಫಲ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ಮುಂದಿನ ದಶಕದಲ್ಲಿ ಭಾರತ-ಇಂಗ್ಲೆಂಡ್ ಸಂಬಂಧಗಳಿಗಾಗಿ ಮಹತ್ವಾಕಾಂಕ್ಷೆಯ ಮಾರ್ಗ ನಕ್ಷೆಯಲ್ಲಿ ತಮ್ಮ ಸ್ನೇಹಿತ ಇಂಗ್ಲೆಂಡ್ ಪ್ರಧಾನಿ ಬೋರಿಸ್ ಜಾನ್ಸನ್ ಅವರೊಂದಿಗೆ ಅತ್ಯುತ್ತಮ ಚರ್ಚೆ ನಡೆಸಿರುವುದಾಗಿ ಪ್ರಧಾನಿ ಮೋದಿ ತಮ್ಮ ನವೆಂಬರ್ ೨೭ ಟ್ವೀಟ್ ನಲ್ಲಿ ತಿಳಿಸಿದ್ದಾರೆ.

"ವ್ಯಾಪಾರ ಮತ್ತು ಹೂಡಿಕೆಗಳು, ರಕ್ಷಣಾ ಮತ್ತು ಭದ್ರತೆ, ಹವಾಮಾನ ಬದಲಾವಣೆ ಮತ್ತು ಕೋವಿಡ್ -೧೯ ವಿರುದ್ಧ ಹೋರಾಡುವ ಎಲ್ಲಾ ಕ್ಷೇತ್ರಗಳಲ್ಲಿನ ನಮ್ಮ ಸಹಕಾರವನ್ನು ಅಧಿಕಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡಲು ನಾವು ಒಪ್ಪಿದ್ದೇವೆ" ಎಂದು ಪ್ರಧಾನಿ ಮೋದಿ ತಮ್ಮ ಟ್ವೀಟ್ ನಲ್ಲಿ ತಿಳಿಸಿದ್ದಾರೆ.

ಇಬ್ಬರು ಪ್ರಧಾನ ಮಂತ್ರಿಗಳ ನಡುವಿನ ಸಂಭಾಷಣೆ ಬಹಳ ಸಕಾರಾತ್ಮಕವಾಗಿದೆ ಎಂದು ಇಂಗ್ಲೆಂಡ್ ಮೂಲದ ಜನರು ಹೇಳಿದ್ದಾರೆ. ಅದರಲ್ಲೂ ವಿಶೇಷವಾಗಿ ಪ್ರಧಾನಿ ಜಾನ್ಸನ್ ಅವರು ಭಾರತದೊಂದಿಗೆ ಮುಕ್ತ ವ್ಯಾಪಾರ ಒಪ್ಪಂದದ ಆಹ್ವಾನ ನೀಡಿದ್ದಾರೆ ನೀಡುತ್ತಾರೆ ಮತ್ತು ಹವಾಮಾನ ಬದಲಾವಣೆಯ ವಿಷಯಗಳ ಬಗ್ಗೆ ಸಹಕಾರವನ್ನು ಹೆಚ್ಚಿಸುತ್ತಿದ್ದಾರೆ. ಪಾಲುದಾರಿಕೆಯನ್ನು ಮತ್ತಷ್ಟು ಗಟ್ಟಿಗೊಳಿಸುವ ಮತ್ತು ಕೋವಿಡ್-೧೯ ವಿರೋಧಿ ಸ್ಪಂದನೆಯ ಮಾರ್ಗಗಳನ್ನು ಉಭಯ ನಾಯಕರು ಚರ್ಚಿಸಿದರು.

ಗ್ರೇಟ್ ಬ್ರಿಟನ್‌ನಿಂದ ಗ್ಲೋಬಲ್ ಬ್ರಿಟನ್ ಆಗಬೇಕೆಂಬ ಆಸೆಯನ್ನು ಇಂಗ್ಲೆಂಡ್ ಹೊಂದಿದ್ದರೆ, ಜನವರಿ ಬ್ರೆಕ್ಸಿಟ್ ಲಂಡನ್ನಿನ ಮೇಲೆ ಗಂಭೀರ ಒತ್ತಡವನ್ನು ಬೀರುತ್ತದೆ. ಏಕೆಂದರೆ ಐರೋಪ್ಯ ಒಕ್ಕೂಟದ ಒಟ್ಟು  ವ್ಯಾಪಾರದಲ್ಲಿ ಶೇಕಡಾ ೪೭ರಷ್ಟು ಪಾಲನ್ನು ಇಂಗ್ಲೆಂಡ್ ಹೊಂದಿದೆ. ಐರೋಪ್ಯ ಒಕ್ಕೂಟದ ವ್ಯವಹಾರದಲ್ಲಿ ಇಂಗ್ಲೆಂಡಿನ ರಫ್ತಿನ ಪ್ರಮಾಣ ಶೇಕಡಾ ೪೩ ಮತ್ತು ಆಮದು ಪ್ರಮಾಣ ಶೇಕಡಾ ೫೨ರಷ್ಟು ಇದೆ.

ಯುರೋಪ್ ಕಠಿಣ ಗಡಿಗೆ ಸಿದ್ಧವಾಗಿದೆ ಮತ್ತು ಅಮೆರಿಕದ ಚುನಾಯಿತ ಅಧ್ಯಕ್ಷ  ಜೋ ಬಿಡೆನ್ ಹಿಂದೆ ಬ್ರೆಕ್ಸಿಟ್ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರಿಂದ, ಇಂಗ್ಲೆಂಡ್ ವ್ಯಾಪಾರ ವಿಷಯಗಗಳಲ್ಲಿ ಅನಿಶ್ಚಿತತೆಯನ್ನು ಎದುರಿಸುತ್ತಿದೆ.

ಭಾರತದ ದೃಷ್ಟಿಕೋನದಿಂದ, ನವದೆಹಲಿಯು ಲಂಡನ್ ಜೊತೆ ತೊಡಗಿಸಿಕೊಳ್ಳುವುದು ಅವಶ್ಯಕವಾಗಿದೆ, ಏಕೆಂದರೆ ಇದು ಪಿ - ಭಾಗವಾಗಿದೆ ಮತ್ತು ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದ ಬಗ್ಗೆ ಅಮೆರಿಕದ ಆಸಕ್ತಿ ಹೊಂದಿದೆ. ಪಾಕಿಸ್ತಾನ ಆಕ್ರಮಿತ ಕಾಶ್ಮೀg (ಪಿಒಕೆ) ಮೀರ್‌ಪುರದಿಂದ ಇಂಗ್ಲೆಂಡ್ ಬಲವಾದ ರಾಜಕೀಯ ಲಾಬಿಯನ್ನು ಹೊಂದಿದೆ, ಇದು ಜಮ್ಮು ಮತ್ತು ಕಾಶ್ಮೀರದಂತಹ ವಿಷಯಗಳ ಬಗ್ಗೆ ಭಾರತದ ಹಾದಿಯನ್ನು ಸುಗಮಗೊಳಿಸುತ್ತದೆ.

No comments:

Advertisement