ಪಾಕಿಸ್ತಾನದಲ್ಲಿ ಹಿಂದೂ ದೇವಳ ಧ್ವಂಸ: ಭಾರತದ ಪ್ರತಿಭಟನೆ
ನವದೆಹಲಿ: ಖೈಬರ್ ಪಖ್ತೂನ್ಕ್ವಾದ ಕರಕ್ ಜಿಲ್ಲೆಯಲ್ಲಿ ಹಿಂದೂ ದೇವಾಲಯವೊಂದನ್ನು ಧ್ವಂಸಗೊಳಿಸಿದ ಘಟನೆಯ ಬಗ್ಗೆ ಖಾರವಾಗಿ ಪ್ರತಿಕ್ರಿಸಿರುವ ಭಾರತ ಪಾಕಿಸ್ತಾನಕ್ಕೆ ಔಪಚಾರಿಕ ಪ್ರತಿಭಟನೆಯನ್ನು ಸಲ್ಲಿಸಿದೆ.
"ಈ ವಿಷಯವನ್ನು ಪಾಕಿಸ್ತಾನದ ಜೊತೆಗೆ ಅಧಿಕೃತವಾಗಿ ಕೈಗೆತ್ತಿಕೊಳ್ಳಲಾಯಿತು ಮತ್ತು ಪ್ರಬಲ ಪ್ರತಿಭಟನೆ ಸಲ್ಲಿಸಲಾಯಿತು’ ಎಂದ ಹೆಸರು ಹೇಳಲು ಇಚ್ಛಿಸದ, ಸುದ್ದಿ ಮೂಲ 2021ರ ಜನವರಿ 01ರ
ಶುಕ್ರವಾರ ತಿಳಿಸಿತು.
ವಾಯುವ್ಯ ಪಟ್ಟಣವಾದ ಕರಕ್‌ನ ತೇರಿ ಗ್ರಾಮದಲ್ಲಿರುವ ಕೃಷ್ಣ ದ್ವಾರ ಮಂದಿರದೊಂದಿಗೆ ಶ್ರೀ ಪರಮಹಂಸ ಜಿ ಮಹಾರಾಜರ ಸಮಾದಿಯನ್ನು ಬುಧವಾರ ಜನಸಮೂಹ ಧ್ವಂಸಗೊಳಿಸಿದೆ.
ದೇವಾಲಯವು ಹೆಚ್ಚುವರಿ ಭೂಮಿಯನ್ನು ಅತಿಕ್ರಮಣ ಮಾಡಿ ಬೆಂಕಿ ಹಚ್ಚಿದೆ ಎಂದು ಜನಸಮೂಹ ಹೇಳಿಕೊಂಡಿದೆ. ಹಿಂದೂ ದೇವಾಲಯದ ಮೇಲೆ ಬುಧವಾರ ದಾಳಿ ನಡೆದ ನಂತರ ನಡೆಸಲಾದ ರಾತ್ರಿ ಕಾರ್ಯಾಚರಣೆಯಲ್ಲಿ ಕನಿಷ್ಠ ಎರಡು ಡಜನ್ ಜನರನ್ನು ಬಂಧಿಸಲಾಗಿದೆ ಎಂದು ವರದಿಗಳು ತಿಳಿಸಿವೆ. ಸುಮಾರು ೧,೫೦೦ ಜನರು ದೇವಾಲಯದ ಮೇಲಿನ ದಾಳಿಯಲ್ಲಿ ಭಾಗವಹಿಸಿದ್ದರು ಎಂದು ವರದಿ ಹೇಳಿದೆ.
ಟೆರಿ ಗ್ರಾಮದಲ್ಲಿ ಪೂಜಾ ಸ್ಥಳದ ಮೇಲೆ ನಡೆದ ದಾಳಿಯ ಬಗ್ಗೆ ದೇಶದ ಮುಖ್ಯ ನ್ಯಾಯಮೂರ್ತಿ ಗುಲ್ಜಾರ್ ಅಹ್ಮದ್ ಗುರುವಾರ ಸ್ವ ಇಚ್ಛೆಯಿಂದ ಗಮನ ಸೆಳೆದ ನಂತರ ಈ ಬಂಧನಗಳು ನಡೆದಿವೆ.
ಕರಾಚಿಯಲ್ಲಿ ಗುರುವಾರ ನಡೆದ ಸಭೆಯಲ್ಲಿ ಅಲ್ಪಸಂಖ್ಯಾತ ಶಾಸಕ ರಮೇಶ್ ಕುಮಾರ್ ಅವರು ದೇವಾಲಯಕ್ಕೆ ಬೆಂಕಿ ಹಚ್ಚಿರುವ ಬಗ್ಗೆ ವಿವರಿಸಿದ ನಂತರ ಮುಖ್ಯ ನ್ಯಾಯಮೂರ್ತಿ ಈ ಕ್ರಮ ಕೈಗೊಂಡಿದ್ದಾರೆ. ದೇಶದ ಸುಪ್ರೀಂ ಕೋರ್ಟ್ ಈ ಪ್ರಕರಣವನ್ನು ಜನವರಿ ೫ ರಂದು ವಿಚಾರಣೆ ನಡೆಸಲಿದೆ.
ಪಾಕಿಸ್ತಾನದ ಧಾರ್ಮಿಕ ವ್ಯವಹಾರಗಳ ಸಚಿವ ನೂರುಲ್ ಹಕ್ ಖಾದ್ರಿ ಈ ದಾಳಿಯನ್ನು "ಪಂಥೀಯ ಸಾಮರಸ್ಯದ ವಿರುದ್ಧದ ಪಿತೂರಿ" ಎಂದು ಕರೆದರು. ಖಾದ್ರಿ ‘ಅಲ್ಪಸಂಖ್ಯಾತರ ಧಾರ್ಮಿಕ ಸ್ವಾತಂತ್ರ್ಯದ ರಕ್ಷಣೆ ನಮ್ಮ ಧಾರ್ಮಿಕ, ಸಾಂವಿಧಾನಿಕ, ನೈತಿಕ ಮತ್ತು ರಾಷ್ಟ್ರೀಯ ಜವಾಬ್ದಾರಿ’ ಗುರುವಾರ ಟ್ವೀಟ್ ಮಾಡಿದ್ದರು.
ಸ್ಥಳೀಯ ಮಾಧ್ಯಮಗಳು ಹಿಂದೂ ಸಮುದಾಯದ ಪ್ರತಿನಿಧಿ ವಕೀಲ ರೋಹಿತ್ ಕುಮಾರ್ ಅವರನ್ನು ಉಲ್ಲೇಖಿಸಿ, ದೇವಾಲಯವು ಒಪ್ಪಿದ ಪ್ರದೇಶವನ್ನು ಮೀರಿಲ್ಲ ಎಂದು ವರದಿ ಮಾಡಿವೆ.
ಏತನ್ಮಧ್ಯೆ, ತೇರಿ ಗ್ರಾಮದಲ್ಲಿ ಪೂಜಾ ಸ್ಥಳವನ್ನು ಪುನರ್ನಿರ್ಮಿಸಬೇಕೆಂದು ಒತ್ತಾಯಿಸಿ ಡಜನ್ಗಟ್ಟಲೆ ಹಿಂದೂಗಳು ಕರಾಚಿ ನಗರದಲ್ಲಿ ಪ್ರದರ್ಶನ ನಡೆಸಿದ್ದಾರೆಂದು ವರದಿ ತಿಳಿಸಿದೆ.
ಈ ದೇವಾಲಯದ ಮೇಲೆ ಈ ಮುನ್ನ ಮೊದಲು ೧೯೯೭ ರಲ್ಲಿ ಆಕ್ರಮಣ ನಡೆಸಿ ಅದನ್ನು ನೆಲಸಮ ಮಾಡಲಾಗಿತ್ತು. ೨೦೧೫ ರಲ್ಲಿ ಸುಪ್ರೀಂ ಕೋರ್ಟಿನ ಮಧ್ಯಸ್ಥಿಕೆಯ ನಂತರ ಸ್ಥಳೀಯ ಸಮುದಾಯವು ಅದರ ಪುನರ್ನಿರ್ಮಾಣಕ್ಕೆ ಒಪ್ಪಿಗೆ ನೀಡಿತ್ತು.
ದೇವಾಲಯದ ಪುನರ್ನಿರ್ಮಾಣದ ಸಮಯದಲ್ಲಿ ದೇವಾಲಯಕ್ಕೆ ಹಂಚಿಕೆಯಾದ ಜಮೀನಿನ ಬಗ್ಗೆ ವಿವಾದ ಉಂಟಾಗಿದ್ದು, ದೇವಾಲಯದ ಬೆಂಬಲಿಗರು ಮತ್ತು ಸ್ಥಳೀಯ ಮುಸ್ಲಿಂ ಧಾರ್ಮಿಕ ಮುಖ್ಯಸ್ಥರ ಮಧ್ಯೆ ಕೆಲವು ತಪ್ಪು ತಿಳುವಳಿಕೆಗಳಿಗೆ ಕಾರಣವಾಯಿತು ಎನ್ನಲಾಗಿದೆ.
೧೯೧೯ ರಲ್ಲಿ ಗುರು ಶ್ರೀ ಪರಮಹಂಸ ದಯಾಳ್ ಅವರ ಪಾರ್ಥಿವ ಶರೀರವನ್ನು ಈ ಸ್ಥಳದಲ್ಲಿ ಸಮಾಧಿ ಮಾಡಲಾಗಿತ್ತು ಮತ್ತು ಅಲ್ಲಿ ದೇವಾಲಯವನ್ನು ನಿರ್ಮಿಸಲಾಗಿತ್ತು.
ಮುಸ್ಲಿಂ ಧಾರ್ಮಿಕ ಮುಖ್ಯಸ್ಥರ ಪರಿಷತ್ತಿನ ಶಿಫಾರಸಿನ ಮೇರೆಗೆ ಪಾಕಿಸ್ತಾನ ಸರ್ಕಾರ ಹಿಂದೂ ನಿವಾಸಿಗಳಿಗೆ ಇಸ್ಲಾಮಾಬಾದಿನಲ್ಲಿ ಹೊಸ ದೇವಾಲಯ ನಿರ್ಮಿಸಲು ಅವಕಾಶ ನೀಡಿದ ಕೆಲವೇ ವಾರಗಳ ನಂತರ ಈ ದಾಳಿ ನಡೆದಿದೆ.
No comments:
Post a Comment