ಅಣುಸ್ಥಾವರ ಗುರಿ: ಇರಾನ್ ಮೇಲೆ ಇಸ್ರೇಲ್ ದಾಳಿ
ನವದೆಹಲಿ: ʼರೈಸಿಂಗ್ ಲಯನ್ʼ ಹೆಸರಿನ ಬೃಹತ್ ಕಾರ್ಯಾಚರಣೆಯಲ್ಲಿ ಇಸ್ರೇಲ್ ೨೦೨೫ ಜೂನ್ ೧೩ರ ಶುಕ್ರವಾರ
ಇರಾನಿನ ನಟಾಂಜ್ ಪರಮಾಣು ತಾಣ ಸೇರಿದಂತೆ ಹಲವಾರು ಪರಮಾಣು ಮತ್ತು ಸೇನಾ ನೆಲೆಗಳ ಮೇಲೆ ದಾಳಿ ನಡೆಸಿದೆ.
ಇರಾನ್ ಕೂಡಾ ಪ್ರತಿದಾಳಿ ನಡೆಸಿರುವುದಾಗಿ ಹೇಳಿದ್ದು, ಮಧ್ಯಪ್ರಾಚ್ಯದಲ್ಲಿ ಯುದ್ಧಭೀತಿ ತಲೆದೋರಿದೆ.
ಇರಾನಿನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್‌ನ
ಕಮಾಂಡರ್-ಇನ್-ಚೀಫ್ ಹೊಸೈನ್ ಸಲಾಮಿ ಮತ್ತು IRGC ಏರೋಸ್ಪೇಸ್ ಫೋರ್ಸ್
ಕಮಾಂಡರ್ ಅಮೀರ್ ಅಲಿ ಹಾಜಿಜಾದೆ ಸೇರಿದಂತೆ
ಸುಮಾರು ೨೦ಕ್ಕೂ ಹೆಚ್ಚು ಹಿರಿಯ ಅಧಿಕಾರಿಗಳು ದಾಳಿಯಲ್ಲಿ ಹತರಾಗಿದ್ದಾರೆ ಎಂದು ವರದಿಗಳು ತಿಳಿಸಿವೆ.
1980 ರ ದಶಕದ ನಂತರ ಇರಾನ್ ಮೇಲೆ
ಇಸ್ರೇಲ್ ನಡೆಸಿದ ಅತಿದೊಡ್ಡ ದಾಳಿಯನ್ನು ಮೊಸಾದ್ ಮತ್ತು ಇಸ್ರೇಲ್ ರಕ್ಷಣಾ ಪಡೆಗಳ ಸುಮಾರು
೨೦೦ ವಿಮಾನಗಳು ನಡೆಸಿದವು ಎಂದು ವರದಿ ಹೇಳಿದೆ.
ಟೆಹ್ರಾಹರಾನಿನಿಂದ
ದಕ್ಷಿಣಕ್ಕೆ ಸುಮಾರು 225 ಕಿಲೋಮೀಟರ್ ದೂರದಲ್ಲಿರುವ ನಟಾಂಜ್ ಪರಮಾಣು ತಾಣವು ಇಸ್ರೇಲಿನ ಗುರಿಗಳಲ್ಲಿ
ಸೇರಿತ್ತು.
ಇರಾನ್‌ನ ತಬ್ರಿಜ್
ವಿಮಾನ ನಿಲ್ದಾಣ ಹಾಗೂ ಟೆಹರಾನಿನಲ್ಲಿ ಕವಿದ ಭಾರೀ ದೂಳಿನ ಹೊಗೆ ಸಾಮಾಜಿಕ ಜಾಲತಾಣಗಳಲ್ಲಿ
ವೈರಲ್ ಆಗಿತ್ತು.
ಪಶ್ಚಿಮ ಇರಾನಿನಲ್ಲಿ ವಾಯು ರಕ್ಷಣಾ ಪಡೆಗಳ ಮೇಲೆ ವ್ಯಾಪಕ ದಾಳಿಯನ್ನು ಪೂರ್ಣಗೊಳಿಸಿದೆ ಎಂದು ಇಸ್ರೇಲ್
ಸೇನೆ ದಾಳಿಗಳ ಬಳಿಕ ಹೇಳಿದೆ.
ಶುಕ್ರವಾರ ತಾನು ಡಜನ್‌ಗಟ್ಟಲೆ ರಾಡಾರ್ ಸ್ಥಾಪನೆಗಳು ಮತ್ತು ಮೇಲ್ಮೈಯಿಂದ ಗಾಳಿಗೆ ಹಾರುವ ಕ್ಷಿಪಣಿ
ಉಡಾವಣಾ ಯಂತ್ರಗಳನ್ನು ನಾಶಪಡಿಸಿರುವುದಾಗಿ ಅದು ಪ್ರತಿಪಾದಿಸಿದೆ.
ಏತನ್ಮಧ್ಯೆ,
ಜೋರ್ಡಾನ್ ವಾಯುಪಡೆಯು ತನ್ನ ವಾಯುಪ್ರದೇಶದಲ್ಲಿ ಕ್ಷಿಪಣಿಗಳು ಮತ್ತು
ಡ್ರೋನ್‌ಗಳನ್ನು ತಡೆಹಿಡಿದಿದೆ ಎಂದು ಹೇಳಿದೆ.
ಇರಾನ್‌ನ ಸರ್ವೋಚ್ಚ
ನಾಯಕ ಅಯತೊಲ್ಲಾ ಅಲಿ ಖಮೇನಿ ಶುಕ್ರವಾರ ಇಸ್ರೇಲಿ ದಾಳಿಯ ಅಲೆಯಲ್ಲಿ ಕೊಲ್ಲಲ್ಪಟ್ಟ ಇಬ್ಬರು
ಉನ್ನತ ಮಿಲಿಟರಿ ಕಮಾಂಡರ್‌ಗಳನ್ನು ಬದಲಾಯಿಸಿದ್ದಾರೆ. ಜನರಲ್ ಮೊಹಮ್ಮದ್ ಬಘೇರಿ ಬದಲಿಗೆ ಜನರಲ್
ಅಬ್ದುಲ್ರಹೀಮ್ ಮೌಸಾವಿ ಅವರನ್ನು ಸಶಸ್ತ್ರ ಪಡೆಗಳ ಹೊಸ ಮುಖ್ಯಸ್ಥರನ್ನಾಗಿ ನೇಮಿಸಿರುವುದಾಗಿ
ಸ್ಟೇಟ್ ಟಿವಿ ತಿಳಿಸಿದೆ. ಮೌಸಾವಿ ಈ ಹಿಂದೆ ಉನ್ನತ ಸೇನಾ ಕಮಾಂಡರ್ ಆಗಿದ್ದರು. ಜನರಲ್ ಹೊಸೈನ್
ಸಲಾಮಿ ಬದಲಿಗೆ ಅರೆಸೈನಿಕ ಕ್ರಾಂತಿಕಾರಿ ಗಾರ್ಡ್ ಅನ್ನು ಮುನ್ನಡೆಸಲು ಖಮೇನಿ ಮೊಹಮ್ಮದ್ ಪಕ್‌ಪೂರ್
ಅವರನ್ನು ಆಯ್ಕೆ ಮಾಡಿದ್ದಾರೆ.
ಇರಾನ್ "ಒಪ್ಪಂದ ಮಾಡಿಕೊಳ್ಳಲು" 60 ದಿನಗಳ ಅಂತಿಮ ಗಡುವಿಗೆ ಪ್ರತಿಕ್ರಿಯಿಸಲು ವಿಫಲವಾಗಿದೆ.ಇಂದು 61 ನೇ ದಿನ" ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಟ್ರುತ್ ಸೋಶಿಯಲ್ ಮಾಧ್ಯಮದಲ್ಲಿ ಹೇಳಿದ್ದಾರೆ. ಇರಾನಿಗೆ ಬಹುಶಃ ಎರಡನೇ ಅವಕಾಶವಿದೆ ಎಂದೂ ಅವರು ಹೇಳಿದ್ದಾರೆ.
No comments:
Post a Comment