Saturday, September 6, 2025

ಹೆಗಡೆ ನಗರದಲ್ಲಿ ಗಣಪ ಸಂಭ್ರಮ

 ಹೆಗಡೆ ನಗರದಲ್ಲಿ ಗಣಪ ಸಂಭ್ರಮ

ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ೨೦೨೫ ಸೆಪ್ಟೆಂಬರ್‌ ೫ರ ಶುಕ್ರವಾರ ಗಣಪ ಸಂಭ್ರಮ.

ಬಡಾವಣೆಯ ೨೫ನೇ ವರ್ಷ ಹಾಗೂ ದೇವಸ್ಥಾನದ ೨ನೇ ವರ್ಷದ ಮೂರು ದಿನಗಳ ಗಣೇಶೋತ್ಸವ ಶುಕ್ರವಾರ ಆರಂಬವಾಯಿತು.


ಬೆಳಗ್ಗೆ ಗಣಪತಿ ಪ್ರತಿಷ್ಠಾಪನೆ ಮಂಗಳಾರತಿಯ ಬಳಿಕ ಭಕ್ತರಿಗೆ, ದೇವಸ್ಥಾನದಲ್ಲಿ ಇದೇ ಪ್ರಪ್ರಥಮ ಬಾರಿಗೆ ದೇವಾಲಯದಲ್ಲೇ ತಯಾರಿಸಿದ ಪ್ರಸಾದ ಸೇವೆಯ ವ್ಯವಸ್ಥೆ ಮಾಡಲಾಗಿತ್ತು. ಅಡುಗೆಗೆ ಬೇಕಾದ ಸಕಲ ಪರಿಕರಗಳನ್ನು ದೇವಸ್ಥಾನ ಸೇವಾಸಮಿತಿಯ ಅಧ್ಯಕ್ಷ ಶ್ರೀ ಚೌಡರೆಡ್ಡಿ ಅವರು ಕಾಣಿಕೆ ರೂಪದಲ್ಲಿ ಸಲ್ಲಿಸಿದ್ದರು. ಅಡುಗೆಗೆ ಬೇಕಾದ ಸುವಸ್ತುಗಳನ್ನು ಭಕ್ತರು ಕಾಣಿಕೆ ರೂಪದಲ್ಲಿ ಒದಗಿಸಿದ್ದರು.

ಮಧ್ಯಾಹ್ನದ ಬಳಿಕ ಮಹಿಳೆಯರಿಗೆ ವಿವಿಧ ಆಟೋಟಗಳನ್ನು ಏರ್ಪಡಿಸಲಾಗಿತ್ತು. ಸಂಜೆ ಕೇರಳದ ಚೆಂಡೆವಾದಕರಿಂದ ಕೇರಳ, ದಕ್ಷಿಣಕನ್ನಡದ ದೇವಸ್ಥಾನಗಳಲ್ಲಿ ನಡೆಯುವ ಪರಂಪರಾಗತ ಚೆಂಡೆ ವಾದನದ ಕಾರ್ಯಕ್ರಮ, ಬಡಾವಣೆಯ ನಿವಾಸಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಚೆಂಡೆ ವಾದಕರೊಂದಿಗೆ ಬಡಾವಣೆಯ ಪ್ರಮುಖ ರಸ್ತೆಗಳಲ್ಲಿ ಘೋಷಯಾತ್ರಾ ಕಾರ್ಯಕ್ರಮ ನಡೆಯಿತು.

ಬಡಾವಣೆಯ ಪುಟಾಣಿ ಸ್ಫೂರ್ತಿ ಹಾಗೂ ಪರಶಿವಮೂರ್ತಿ-ಮಾಧವಿ ದಂಪತಿಯ ಪುತ್ರ ಪ್ರತೀಕ್ಷಾ ಸುಂದರವಾದ ಭರತನಾಟ್ಯ ಪ್ರದರ್ಶನಗಳನ್ನು ನೀಡಿದರು. ಭಕ್ತರಿಂದ ಭಜನೆ ಕೂಡಾ ಜರುಗಿತು.

ಚೆಂಡೆವಾದನದೊಂದಿಗೆ ಮಹಾಪೂಜೆ- ಮಹಾಮಂಗಳಾರತಿಯ ಬಳಿಕ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.

ಈ ಸಂದರ್ಭದ ಕೆಲವು ಚಿತ್ರ ಹಾಗೂ ವಿಡಿಯೋಗಳು ಇಲ್ಲಿವೆ.







No comments:

Advertisement