ಸತ್ಯನಾರಾಯಣ ಪೂಜೆ, ಗಣಪ ವಿಸರ್ಜನೆ
ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರಿ ಬಾಲಾಜಿ ಕೃಪಾ ಬಡಾವಣೆಯ ಶ್ರೀ
ಬಾಲಾಜಿ ಮಹಾಗಣಪತಿ ದೇವಸ್ಥಾನದಲ್ಲಿ ಮೂರು ದಿನಗಳಿಂದ ನಡೆದ ಸಾರ್ವಜನಿಕ ಗಣೇಶೋತ್ಸವ ೨೦೨೫ ಸೆಪ್ಟೆಂಬರ್
೦೮ರ ಭಾನುವಾರ ಸಂಜೆ ಮುಕ್ತಾಯಗೊಂಡಿತು.
ಬೆಳಗ್ಗೆ ಗಣಪತಿ ಉಪನಿಷತ್ ಸಹಿತ ಪೂಜೆ, ಶ್ರೀ ಸತ್ಯನಾರಾಯಣ ಪೂಜೆಯ ಬಳಿಕ ವಿಸರ್ಜನಾ ಪೂಜೆ ನಡೆಯಿತು.
ಕಂದಾಯ ಸಚಿವ ಹಾಗೂ ಬ್ಯಾಟರಾಯನಪುರ ಕ್ಷೇತ್ರದ ಶಾಸಕ ಶ್ರೀ ಕೃಷ್ಣ ಬೈರೇಗೌಡ, ಮಾಜಿ ಸಚಿವ ಶ್ರೀ ಎಸ್.ಎನ್. ಕೃಷ್ಣಯ್ಯ ಶೆಟ್ಟಿ ಅವರ ಪರವಾಗಿ ಶ್ರೀ ರಮೇಶ್, ಜನತಾದಳ ನಾಯಕ ವೇಣುಗೋಪಾಲ್, ಕಾಂಗ್ರೆಸ್ ಯುವ ನಾಯಕ ಎಚ್.ಎ. ಶಿವಕುಮಾರ್, ವೇದಿಕೆ ಪ್ರಾಯೋಜಕ
ಸಿರಾಜ್ ಪಾಲ್ಗೊಂಡಿದ್ದರು.
ಉತ್ಸವದ ಕೊನೆಯ ದಿನ ವಿವಿಧ ಆಟೋಟಗಳಲ್ಲಿ ವಿಜೇತರಾದ ಮಕ್ಕಳು, ಮಹಿಳೆಯರು ಮತ್ತು ಪುರುಷರಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಸಂಜೆ ಬಡಾವಣೆಯ ಪ್ರಮುಖ ರಸ್ತೆಗಳಲ್ಲಿ ತಮಿಳ್ನಾಡಿನಿಂದ ಆಗಮಿಸಿದ ತಮಟೆ ತಂಡದ ತಮಟೆ ವಾದ್ಯದೊಂದಿಗೆ ಗಣಪತಿ ಶೋಭಾಯಾತ್ರೆ ನಡೆದು ರಾಚೇನಹಳ್ಳಿ ಕಲ್ಯಾಣಿಯಲ್ಲಿ ಗಣಪನ ವಿಸರ್ಜನೆ ಮಾಡಲಾಯಿತು.
ಈ ಸಂದರ್ಭದ ಕೆಲವು ಚಿತ್ರಗಳು ಹಾಗೂ ವಿಡಿಯೋಗಳು ಇಲ್ಲಿವೆ.




No comments:
Post a Comment