ಸಿನಿಮಾ ದೃಶ್ಯವಲ್ಲ, ಪಾಕ್ ಆಕ್ರಮಿತ ಕಾಶ್ಮೀರದ ವಾಸ್ತವ!
2025 ಅಕ್ಟೋಬರ್ 1ರ ಬುಧವಾರ ಪಾಕಿಸ್ತಾನದ ಪಂಜಾಬಿ ಸೈನ್ಯವು ಕಾಶ್ಮೀರಿ ಪ್ರತಿಭಟನಾಕಾರರನ್ನು
ತಡೆಯಲು ದಾದ್ಯಾಲ್‌ನ ಪಾಲಕ್
ಸೇತುವೆಯ ಮೇಲೆ ಮೂರು ದೊಡ್ಡ ಕಂಟೈನರ್‌ಗಳನ್ನು ಇಟ್ಟು
ಮಾರ್ಗವನ್ನು ಬಂದ್ ಮಾಡಿತ್ತು.
ಆದರೆ, ಸ್ಥಳೀಯರು ಯಾವುದೇ ಸಾಧನಗಳಿಲ್ಲದೆ, ಬರಿಗೈಯಲ್ಲೇ ಆ ಬೃಹತ್ ಕಂಟೈನರ್‌ಗಳನ್ನು ಸೇತುವೆಯಿಂದ ಕೆಳಗೆ, ಮಂಗ್ಲಾ ಜಲಾಶಯಕ್ಕೆ ತಳ್ಳಿಬಿಟ್ಟಿದ್ದಾರೆ!
ಹಣದುಬ್ಬರ ಮತ್ತು ಆರ್ಥಿಕ ಸಂಕಷ್ಟಗಳ ವಿರುದ್ಧ ಸಿಡಿದೆದ್ದ ಜನರ
ಆಕ್ರೋಶದ ಮುಂದೆ ಕಂಟೈನರ್‌ಗಳ ಬ್ಲಾಕೇಡ್ ನಡೆಯಲಿಲ್ಲ.
ಈ ಘಟನೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ (Pak occupied Kashmir /PoK) ತೀವ್ರಗೊಳ್ಳುತ್ತಿರುವ
ಅಶಾಂತಿಗೆ ಸಾಕ್ಷಿಯಾಗಿದೆ. ಘರ್ಷಣೆಗಳಲ್ಲಿ ಇಬ್ಬರು ಪ್ರತಿಭಟನಾಕಾರರು ಮೃತಪಟ್ಟು, ಹಲವರು ಗಾಯಗೊಂಡಿದ್ದಾರೆ. ಆವಾಮಿ ಆಕ್ಷನ್ ಕಮಿಟಿ ಬಂದ್‌ಗೆ ಕರೆ
ನೀಡಿದೆ.
ಉಗ್ರ ಆಕ್ರೋಶದಲ್ಲಿರುವ ಜನರನ್ನು ತಡೆಯಲು ಯಾವುದೇ ಶಕ್ತಿಗೂ
ಸಾಧ್ಯವಿಲ್ಲ ಎಂದು ಈ ಘಟನೆ ಸಾರಿ ಹೇಳುತ್ತಿದೆ! ಪಾಕ್
ಆಕ್ರಮಿತ ಕಾಶ್ಮೀರದಲ್ಲಿ ಜನರ ಪ್ರತಿಭಟನೆಯ ಅಲೆ ದಿನದಿಂದ ದಿನಕ್ಕೆ ವ್ಯಾಪಕಗೊಳ್ಳುತ್ತಿದೆ ಎಂದು
ವರದಿಗಳು ಹೇಳುತ್ತಿವೆ
ಎಕ್ಸ್
(ಹಿಂದಿನ ಟ್ವಿಟ್ಟರ್) ಸಾಮಾಜಿಕ ಜಾಲತಾಣದಲ್ಲಿ ಪ್ರಕಟಗೊಂಡಿರುವ ಈ ವಿಡಿಯೋ ಪೋಸ್ಟ್ ಒಂದೇ
ದಿನದಲ್ಲಿ ಒಂದು ಲಕ್ಷಕ್ಕೂ ಹೆಚ್ಚು
ವೀಕ್ಷಣೆಗಳನ್ನು ಕಂಡಿದೆ.

No comments:
Post a Comment