My Blog List

Monday, December 21, 2020

ಕ್ರಿಸ್‌ಮಸ್ ದಿನ ರೈತರೊಂದಿಗೆ ಪ್ರಧಾನಿ ಸಂವಹನ

 ಕ್ರಿಸ್‌ಮಸ್ ದಿನ ರೈತರೊಂದಿಗೆ ಪ್ರಧಾನಿ ಸಂವಹನ

ನವದೆಹಲಿ:  ಪಧಾನಿ ನರೇಂದ್ರ ಮೋದಿ ಅವರುಪಿಎಂ-ಕಿಸಾನ್ ಸಮ್ಮಾನ್ ನೇರ ನಗದು ವರ್ಗಾವಣೆ ಯೋಜನೆಯಡಿ ರೈತರಿಗೆ ಮುಂದಿನ ಕಂತನ್ನು ಬಿಡುಗಡೆ ಮಾಡಲಿದ್ದು ಅದಕ್ಕೆ ಸಂಬಂಧಿಸಿದಂತೆ ಕ್ರಿಸ್ ಮಸ್ ದಿನದಂದು ರೈತರ ಜೊತೆ ಚಾಟ್ ಮಾಡಲಿದ್ದಾರೆ. ಬಾರಿಯ ಕಂತಿನಲ್ಲಿ ಪ್ರಧಾನಿಯವರು ಕೋಟಿ ರೈತರಿಗೆ ೧೮,೦೦೦ ಕೋಟಿ ರೂಪಾಯಿಗಳನ್ನು ಪಾವತಿ ಮಾಡಲಿದ್ದಾರೆ ಎಂದು ಕೃಷಿ ಸಚಿವಾಲಯ 2020 ಡಿಸೆಂಬರ್ 21ರ ಸೋಮವಾರ ತಿಳಿಸಿತು.

ಮೋದಿಯವರು ೨೦೧೯ ರಲ್ಲಿ ಮೊದಲ ಕಂತನ್ನು ಬಿಡುಗಡೆ ಮಾಡಿದ್ದರು ಮತ್ತು ತಮ್ಮ ಜೀವನೋಪಾಯಕ್ಕೆ ಧಕ್ಕೆ ತರುತ್ತದೆ ಎಂದು ಬಹುತೇಕ ಪಂಜಾಬಿನ ಸಾವಿರಾರು ರೈತರು ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟಿಸುತ್ತಿರುವ ಸಮಯದಲ್ಲಿ ಇನ್ನೊಂದು ಕಂತನ್ನು ಬಿಡುಗಡೆ ಮಾಡಲಿದ್ದಾರೆ. ಕೃಷಿ ಸುಧಾರಣೆಗಳು ರೈತರಿಗೆ ಹೆಚ್ಚಿನ ಮಾರುಕಟ್ಟೆ ಅವಕಾಶವನ್ನು ನೀಡುತ್ತವೆ ಮತ್ತು ಕೃಷಿ ಕ್ಷೇತ್ರದಲ್ಲಿ ಹೂಡಿಕೆಯನ್ನು ಹೆಚ್ಚಿಸುತ್ತದೆ ಎಂದು ಸರ್ಕಾರ ಪ್ರತಿಪಾದಿಸುತ್ತಿದೆ.

ಇದು ಮುಕ್ತ ಸಂಭಾಷಣೆಯಾಗಿದೆ. ಪ್ರಧಾನಮಂತ್ರಿ ಹೊಸ ಕೃಷಿ ಕಾನೂನುಗಳ ಬಗ್ಗೆ ಮತ್ತು ಅವು ರೈತರಿಗೆ ಹೇಗೆ ಪ್ರಯೋಜನವನ್ನು ನೀಡುತ್ತವೆ  ಎಂಬ ಮಾತನಾಡುವ ಸಾಧ್ಯತೆ ಇದೆ ಎಂದು ಹೆಸರು ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರು ಹೇಳಿದರು.

ಪಿಎಂ-ಕಿಸಾನ್ ಸಮ್ಮಾನ್ ಯೋಜನೆಯ ಅಡಿಯಲ್ಲಿ, ಸರ್ಕಾರವು ಮಾನ್ಯ ದಾಖಲಾತಿಯೊಂದಿಗೆ ರೈತರಿಗೆ ವರ್ಷಕ್ಕೆ ,೦೦೦ ರೂ.ಗಳ ಆದಾಯ ಬೆಂಬಲವನ್ನು ಒದಗಿಸುತ್ತದೆ, ನಾಲ್ಕು ತಿಂಗಳಿಗೊಮ್ಮೆ  ಮೂರು ಸಮಾನ ನಗದು ವರ್ಗಾವಣೆಯಲ್ಲಿ ,೦೦೦ ರೂ. ಮೊದಲ ಕಂತು ಪಾವತಿಸುವ ಮೂಲಕ ೨೦೧೯ರ ಫೆಬ್ರುವರಿಯಲ್ಲಿ  ಇದನ್ನು ಪ್ರಾರಂಭಿಸಲಾಯಿತು.

ಯೋಜನೆಯಿಂದ ರೈತರು ಹೇಗೆ ಪ್ರಯೋಜನ ಪಡೆದಿದ್ದಾರೆ ಎಂಬ ಬಗ್ಗೆ ಪ್ರಧಾನ ಮಂತ್ರಿಗಳು ಪೂರ್ವಸಿದ್ಧತೆಯಿಲ್ಲದ ಪ್ರಶ್ನೆಗಳನ್ನು ಕೇಳುತ್ತಾರೆ ಮತ್ತು "ಅವರು ಏನು ಬೆಳೆಯುತ್ತಿದ್ದಾರೆ ಮತ್ತು ಬಜೆಟಿಗಿಂತ ಮುಂಚಿತವಾಗಿ ಅವರಿಗಾಗಿ ಏನು ಮಾಡಬೇಕೆಂದು ಅವರು ಬಯಸುತ್ತಾರೆ ಎಂದು ಪ್ರಧಾನಿ ಕೇಳಲಿದ್ದಾರೆ ಎಂದು ಅಧಿಕಾರಿ ನುಡಿದರು.

ಸಂವಹನಕ್ಕಾಗಿ ದೇಶಾದ್ಯಂತದ ರೈತರು ಆನ್‌ಲೈನ್‌ನಲ್ಲಿ ಸಂಪರ್ಕ ಹೊಂದುತ್ತಾರೆ ಎಂದು ಅಧಿಕಾರಿ ತಿಳಿಸಿದರು.

ಕೃಷಿಯ ನೆಲದ ವಾಸ್ತವತೆಗಳ ಬಗ್ಗೆ ಪ್ರತಿಕ್ರಿಯೆ ಪಡೆಯಲು ಪ್ರಧಾನಿ ಉದ್ದೇಶಿಸಿದ್ದಾರೆ ಎಂದು ಅವರು ನುಡಿದರು.

ದೆಹಲಿಯ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿರುವ ಸಾವಿರಾರು ರೈತರು ನಡೆಸುತ್ತಿರುವ ಬೃಹತ್ ಆಂದೋಲನವನ್ನು ತಡೆಯಲು ಮೋದಿ ಸರ್ಕಾರ ತನ್ನ ಪ್ರಯತ್ನವನ್ನು ಹೆಚ್ಚಿಸಿದೆ.

ಕೃಷಿ ಸುಧಾರಣೆಗಳ ಪ್ರಯೋಜನಗಳನ್ನು ಪ್ರಧಾನಿ ಮೋದಿ ಆಗಾಗ್ಗೆ ವಿವರಿಸುತ್ತಿದ್ದಾರೆ ಮತ್ತು ಕನಿಷ್ಠ ಬೆಂಬಲ ಬೆಲೆ ಮತ್ತು ಕೃಷಿ ಮಂಡಿಗಳು ಸೇರಿದಂತೆ ಅಸ್ತಿತ್ವದಲ್ಲಿರುವ ಸರ್ಕಾರದ ಬೆಂಬಲ ಕಾರ್ಯವಿಧಾನವು ಮುಂದುವರೆಯುತ್ತದೆ ಎಂದು ರೈತರಿಗೆ ಭರವಸೆ ನೀಡುತ್ತಿದ್ದಾರೆ.

ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ರೈತ ಸಹೋದರ ಸಹೋದರಿಯರಿಗೆ ಪತ್ರ ಬರೆದು ಸಭ್ಯ ಸಂವಾದ ನಡೆಸಲು ಪ್ರಯತ್ನಿಸುತ್ತಿದ್ದಾರೆ. ಎಲ್ಲಾ ರೈತರು ಇದನ್ನು ಓದಬೇಕೆಂದು ನಾನು ವಿನಂತಿಸುತ್ತೇನೆ ಎಂದು ಪ್ರಧಾನಿ ಮೋದಿ ಗುರುವಾರ ಟ್ವೀಟ್ ಮಾಡಿದ್ದರು.

ಕಾರ್ಯಕ್ರಮದ ಅಡಿಯಲ್ಲಿ ಡಿಸೆಂಬರ್ ನಿಂದ ಮಾರ್ಚ್, ಏಪ್ರಿಲ್‌ನಿಂದ ಜುಲೈ ಮತ್ತು ಆಗಸ್ಟ್ ನಿಂದ ನವೆಂಬರ್ ಅವಧಿಯಲ್ಲಿ ನಗದು ವರ್ಗಾವಣೆ ಪ್ರತಿ ನಾಲ್ಕು ತಿಂಗಳಿಗೊಮ್ಮೆ ನಡೆಯುತ್ತದೆ.

No comments:

Advertisement