ಅಂಗಾರಕ ಸಂಕಷ್ಟಿ ಪೂಜಾ
ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ
ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ೨೦೨೬ ಮೇ ೫ರ ಮಂಗಳವಾರ
ವೈಶಾಖ ಮಾಸದ ಶ್ರೀ ಅಂಗಾರಕ ಸಂಕಷ್ಟಿ ಪೂಜೆಯನ್ನು ಶ್ರದ್ಧಾ ಭಕ್ತಿಯೊಂದಿಗೆ ನೆರವೇರಿಸಲಾಯಿತು.
ಭಕ್ತರು ಶ್ರೀ ಮಹಾಗಣಪತಿಗೆ ಮೋದಕ ಹಾರ, ಕರ್ಜಿಕಾಯಿ ಹಾರ ಅರ್ಪಣೆಯೊಂದಿಗೆ ಸಂಗೀತ ಸೇವೆಯನ್ನೂ ಸಲ್ಲಿಸಿದರು.
೨೦೨೬ ಮೇ ೧ರ ಶುಕ್ರವಾರ ಹುಣ್ಣಿಮೆಯ ದಿನ ದೇವಸ್ಥಾನದಲ್ಲಿ ವೈಶಾಖ ಮಾಸದ ಶ್ರೀ ಸತ್ಯ ನಾರಾಯಣ ಪೂಜೆಯನ್ನೂ ನೆರವೇರಿಸಲಾಗಿತ್ತು.
ಭಕ್ತರು ಭಾರೀ ಸಂಖ್ಯೆಯಲ್ಲಿ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು.
ಈ ಸಂದರ್ಭದ ಕೆಲವು ಚಿತ್ರಗಳು ಹಾಗೂ ವಿಡಿಯೋ ಇಲ್ಲಿವೆ. ಮಹಾಮಂಗಳಾರತಿಯವಿಡಿಯೋ ನೋಡಲು ಕೆಳಗಿನ ಚಿತ್ರ ಕ್ಲಿಕ್ ಮಾಡಿರಿ.





No comments:
Post a Comment