ಕರ್ನಾಟಕದ ಮತದಾರರ ಪಟ್ಟಿಯ ವಿಶೇಷ
ಸಮಗ್ರ ಪರಿಷ್ಕರಣೆಯಲ್ಲಿ (ಎಸ್ ಐ ಆರ್) ಎಎಸ್‌ಡಿಡಿಒ ಎಂಬುದಾಗಿ ವರ್ಗೀಕರಿಸಲಾದ ೧.೧೦ ಕೋಟಿಗೂ
ಹೆಚ್ಚಿನ ಮತದಾರರ ಪಟ್ಟಿಯನ್ನು ರಾಜ್ಯದ ಮುಖ್ಯ ಚುನಾವಣಾಧಿಕಾರಿ (ಸಿಇಒ) ಅನ್ಬು ಕುಮಾರ್ ಪ್ರಕಟಿಸಿದ್ದಾರೆ.
ಎಎಸ್‌ಡಿಡಿಒ ಅಂದರೆ ಪತ್ತೆಯಾಗದ
(ಅಬ್ಸೆಂಟ್-ಎ) ಶಾಶ್ವತ ಸ್ಥಳಾಂತರ (ಶಿಫ್ಟೆಡ್- ಎಸ್), ಮೃತ (ಡೆಡ್-ಡಿ), ಹೆಚ್ಚು ಕಡೆ ನೋಂದಣಿ
(ಡೂಪ್ಲಿಕೇಟ್- ಡಿ) ಮತ್ತು ಇತರೆ (ಅದರ್ಸ್-ಒ) ಎಂದು ಅರ್ಥ. ಅಂದರೆ, ಪತ್ತೆಯಾಗದ, ಶಾಶ್ವತವಾಗಿ
ಸ್ಥಳಾಂತರಗೊಂಡಿರುವ, ಮೃತರಾಗಿರುವ, ಒಂದಕ್ಕಿಂತ ಹೆಚ್ಚು ಕಡೆ ಹೆಸರು ನೋಂದಣಿಯಾಗಿರುವ ಮತ್ತು ಇತರೆ
ಮತದಾರರು ಎಂದು ಅರ್ಥ.
ನಿಮ್ಮ ಹೆಸರು ಈ ಪಟ್ಟಿಗೆ ಸೇರ್ಪಡೆಯಾಗಿದೆಯೇ
ಎಂದು ಪರಿಶೀಲಿಸಲು ಈ ಕೊಂಡಿಯನ್ನು (Link) ceo.karnataka.gov.in/asddo.html ಕ್ಲಿಕ್
ಮಾಡಿ ಪರಿಶೀಲಿಸಬಹುದು.
ನಿಮ್ಮ ಹೆಸರು ಈ ಪಟ್ಟಿಗೆ ಸೇರ್ಪಡೆ
ಆಗಿದ್ದರೆ, ನಿಮ್ಮ ಬಿಎಲ್ ಒ ಅವರನ್ನು ಸಂಪರ್ಕಿಸಿ ಏನು ಮಾಡಬೇಕು ಎಂದು ವಿಚಾರಿಸಿ. ಚುನಾವಣಾ ಆಯೋಗವು
ಪಟ್ಟಿ ಮಾಡಿರುವ ೧೧ ದಾಖಲೆಗಳಲ್ಲಿ ಯಾವ ದಾಖಲೆ ಸಲ್ಲಿಸಿ, ನಿಮ್ಮ ಹೆಸರನ್ನು ಅಂತಿಮ ಮತದಾರರ ಪಟ್ಟಿಗೆ
ಹೇಗೆ ಸೇರ್ಪಡೆ ಮಾಡಿಕೊಳ್ಳಬಹುದು ಎಂದು ತಿಳಿದುಕೊಳ್ಳಬಹುದು.
ಈ ಸುದ್ದಿಯನ್ನೂ ಓದಿ:
