Friday, January 16, 2009

ಉಚಿತ ಆಯುರ್ವೇದ ಚಿಕಿತ್ಸಾ ಶಿಬಿರ

ಉಚಿತ ಆಯುರ್ವೇದ ಚಿಕಿತ್ಸಾ ಶಿಬಿರ

  ಸಹಸ್ರಾಕ್ಷ ವೈದ್ಯ ಶಾಲಾ ಉಕ್ಕಿನಡ್ಕದ ಬೆಂಗಳೂರು ಶಾಖೆಗಳಾದ ಹನುಮಂತನಗರ ಮತ್ತು ಮಲ್ಲೇಶ್ವರಂ ಶಾಖೆಗಳಲ್ಲಿ ದಿನಾಂಕ 17.01.2009ರ ಶನಿವಾರ ಮತ್ತು 18.01.2009ರ ಭಾನುವಾರದಂದು ಆಸಿಡಿಟಿ ಮತ್ತು ಇತರೆ ಉದರ ಸಂಬಂಧೀ ರೋಗಗಳಿಗೆ ಉಚಿತ ತಪಾಸಣೆ ನಡೆಸಲಾಗುವುದು ಎಂದು ಸಹಸ್ರಾಕ್ಷ ವೈದ್ಯ ಶಾಲಾ ಆಯುರ್ವೇದ ಚಿಕಿತ್ಸಾ ಕೇಂದ್ರವು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.

ಈ ಆಯುರ್ವೇದ ಸಂಸ್ಥೆಯು ಮೂಲತ: ಕೇರಳ ಸಂಸ್ಥೆಯಾಗಿದ್ದು, ಕಳೆದ 60 ವರ್ಷಗಳಿಂದ ಹಲವು ರೋಗಗಳಿಗೆ ಚಿಕಿತ್ಸೆ ನೀಡುತ್ತಿದ್ದು, ಆಯುರ್ವೇದದಲ್ಲಿ ಹಲವು ಸಂಶೋಧನೆಗಳನ್ನು ನಡೆಸುತ್ತಿದೆ.

    ವೈದ್ಯರಾದ ಡಾ. ವಿನಯ ಕುಮಾರ.ಕೆ (ದೂ: 080-65791889) ಮತ್ತು ಡಾ. ಸುಮಿತ್ ಕುಮಾರ್ (ದೂ: 080-23361997) ಅವರು ರೋಗಿಗಳ ತಪಾಸಣೆ ನಡೆಸಲಿದ್ದಾರೆ.

 ಕೇರಳದ ಸಹಸ್ರಾಕ್ಷ ವೈದ್ಯ ಶಾಲೆಯ ವೈದ್ಯರಾದ ಡಾ. ಜಯಗೋವಿಂದ ಉಕ್ಕಿನಡ್ಕ ಅವರು ಪ್ರತಿ ತಿಂಗಳ ಮೊದಲ ಬುಧವಾರದಂದು ಹನುಮಂತನಗರ ಶಾಖೆಯಲ್ಲಿ ತಪಾಸಣೆಗೆ ಲಭ್ಯರಿರುತ್ತಾರೆ ಎಂದೂ ಪ್ರಕಟಣೆ ತಿಳಿಸಿದೆ 

No comments:

Advertisement