My Blog List

Sunday, November 17, 2019

ಮುಗಿಯದ ಬಿಕ್ಕಟ್ಟು: ರಾಜ್ಯಪಾಲ -‘ಮಹಾಮೈತ್ರಿ’ ಭೇಟಿ ದಿಢೀರ್ ರದ್ದು

ಮುಗಿಯದ ಬಿಕ್ಕಟ್ಟು: ರಾಜ್ಯಪಾಲ -‘ಮಹಾಮೈತ್ರಿ’  ಭೇಟಿ ದಿಢೀರ್ ರದ್ದು
ಮುಂಬೈ/ ನವದೆಹಲಿ: ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಜೊತೆಗೆ ನಿಗದಿಯಾಗಿದ್ದಮಹಾಮೈತ್ರಿ (ಶಿವಸೇನೆ-ಎನ್ಸಿಪಿ- ಕಾಂಗ್ರೆಸ್) ನಾಯಕರ ಭೇಟಿ 2019 ನವೆಂಬರ್ 16ರ ಶನಿವಾರ ದಿಢೀರನೆ ರದ್ದಾಯಿತು. ಎಲ್ಲ ನಾಯಕರು ತಮ್ಮ ಕ್ಷೇತ್ರಗಳಲ್ಲಿ ಇರುವುದರಿಂದ ರಾಜ್ಯಪಾಲರ ಜೊತೆಗಿನ ನಿಗದಿತ ಭೇಟಿ ರದ್ದಾಗಿದೆ ಎಂದು ಉದ್ಧವ್ ಠಾಕ್ರೆ ನೇತೃತ್ವದ ಪಕ್ಷ  ಪ್ರಕಟಿಸಿತು.

ನೂತನ
ಮೈತ್ರಿಕೂಟದ ನಾಯಕರ ಜಂಟಿ ನಿಯೋಗವು ರಾಜ್ಯಪಾಲ ಕೋಶಿಯಾರಿ ಅವರನ್ನು ಸಂಜೆ .೩೦ ಗಂಟೆಗೆ ಭೇಟಿ ಮಾಡಬೇಕಾಗಿತ್ತು.

ಮಧ್ಯೆ, ದೆಹಲಿಯಲ್ಲಿ ಸಂಸತ್ತಿನ ಉಭಯ ಸದನಗಳಲ್ಲಿ ಶಿವಸೇನಾ ಸಂಸತ್ ಸದಸ್ಯರ ಆಸನ ವ್ಯವಸ್ಥೆ ಬದಲಾಗಿದೆ. ಅವರು ಈಗ ವಿರೋಧ ಪಕ್ಷಗಳ ಸಾಲಿನಲ್ಲಿ ಕೂರುವರು ಎಂದು ಸಂಸತ್ ಮೂಲಗಳು ತಿಳಿಸಿದವು.
ಶಿವಸೇನಾ ಮೂಲಗಳು ಮತ್ತು ಕಾಂಗ್ರೆಸ್ ವಕ್ತಾರರೊಬ್ಬರ ಪ್ರಕಾರ ಎನ್ಸಿಪಿ, ಶಿವಸೇನೆ ಮತ್ತು ಕಾಂಗ್ರೆಸ್ ಪಕ್ಷಗಳ ಬಹುತೇಕ ನಾಯಕರು ಲಭ್ಯರಿಲ್ಲವಾದ ಕಾರಣ ರಾಜ್ಯಪಾಲರ ಜೊತೆಗಿನ ನಿಗದಿತ ಭೇಟಿಯನ್ನು ರದ್ದು ಪಡಿಸಲಾಯಿತು.

ರಾಜ್ಯಪಾಲ ಕೋಶಿಯಾರಿ ಜೊತೆಗಿನ ಶಿವಸೇನಾ-ಎನ್ಸಿಪಿ- ಕಾಂಗ್ರೆಸ್ ನಾಯಕರ ಭೇಟಿ ಮುಂದೂಡಿಕೆಯಾಗಿದ್ದು, ಮುಂದಿನ ಭೇಟಿಗೆ ರಾಜ್ಯಪಾಲರಿಂದ ಇನ್ನೂ ಸಮಯ ಲಭಿಸಿಲ್ಲ ಎಂದು ಮೂಲಗಳು ಹೇಳಿವೆ.

ತಾವು ರಾಜ್ಯಪಾಲರನ್ನು ಭೇಟಿ ಮಾಡುತ್ತಿರುವುದು ರಾಜ್ಯದ ಗ್ರಾಮೀಣ ಸಂಕಷ್ಟಕ್ಕೆ ಸಂಬಂಧಿಸಿದಂತೆ ಚರ್ಚಿಸಲು ಹೊರತು ಸರ್ಕಾರ ರಚನೆಯ ಹಕ್ಕು ಮಂಡನೆಗಾಗಿ ಅಲ್ಲ ಎಂದು ಪಕ್ಷಗಳು ಪ್ರತಿಪಾದಿಸಿದ್ದವು.

ಮಳೆಯಿಂದ ತೊಂದರೆಗೆ ಒಳಗಾದ ರೈತರಿಗೆ ತುರ್ತು ನೆರವು ನೀಡಿಕೆ ಸಂಬಂಧವಾಗಿ ಚರ್ಚಿಸಲು ರಾಜ್ಯಪಾಲ ಕೋಶಿಯಾರಿ ಅವರನ್ನು ತಾವು ಭೇಟಿ ಮಾಡುತ್ತಿದ್ದೇವೆ ಹೊರತು ಸರ್ಕಾರ ರಚನೆಯ ವಿಷಯ ಮಾತನಾಡಲು ಅಲ್ಲಎಂದು ಮೈತ್ರಿಕೂಟದ ಮೂಲಗಳು ಇದಕ್ಕೆ ಮುನ್ನ ಹೇಳಿದ್ದವು.
ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿ ನಾಯಕ ದೇವೇಂದ್ರ ಫಡ್ನವಿಸ್ ಅವರು ಶುಕ್ರವಾರ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರನ್ನು ಭೇಟಿ ಮಾಡಿ ರೈತರ ವಿಷಯಗಳ ಬಗ್ಗೆ ಚರ್ಚಿಸಿದ್ದರು.

ಬಿಜೆಪಿ ಜೊತೆಗಿನ ಮೈತ್ರಿ ಕಡಿದುಕೊಂಡು ತನ್ನ ರಾಜಕೀಯ ಪ್ರತಿಸ್ಪರ್ಧಿಗಳಾದ ಎನ್ಸಿಪಿ ಮತ್ತು ಕಾಂಗ್ರೆಸ್ ನೆರವಿನೊಂದಿಗೆ ಸರ್ಕಾರ ರಚನೆಗೆ ಶಿವಸೇನೆಯು ಯತ್ನಗಳನ್ನು ನಡೆಸುತ್ತಿದ್ದ ವೇಳೆಯಲ್ಲಿ ಫಡ್ನವಿಸ್ ಅವರು ರಾಜ್ಯಪಾಲರನ್ನು ಭೇಟಿ ಮಾಡಿದ್ದರು.

ಬೆನ್ನಲ್ಲೇ ಶಿವಸೇನೆ, ಎನ್ಸಿಪಿ ಮತ್ತು ಕಾಂಗ್ರೆಸ್ ಕೂಡಾ ರೈತರ ಸಂಕಷ್ಟ ಬಗ್ಗೆ ಚರ್ಚಿಸುವ ಸಲುವಾಗಿ ರಾಜ್ಯಪಾಲರ ಜೊತೆ ಭೇಟಿಗೆ ಸಮಯ ನಿಗದಿಪಡಿಸಿಕೊಂಡಿದ್ದವು.

ಮಧ್ಯೆ ಪತ್ರಕರ್ತರ ಜೊತೆ ಮಾತನಾಡಿದ ಶಿವಸೇನಾ ವಕ್ತಾರ ಸಂಜಯ್ ರಾವತ್ ಅವರು ಶಿವಸೇನೆಯು ಎನ್ಸಿಪಿ ಮತ್ತು ಕಾಂಗ್ರೆಸ್ ಜೊತೆಗೆ ಮುಖ್ಯಮಂತ್ರಿ ಹುದ್ದೆಯನ್ನು ಹಂಚಿಕೊಳ್ಳಲಿದೆಯೇ ಎಂಬ ಪ್ರಶ್ನೆಗೆ ಉತ್ತರವಾಗಿ ತಮ್ಮ ಪಕ್ಷವು ಮುಂದಿನ೨೫ ವರ್ಷಗಳ ಕಾಲಮಹಾರಾಷ್ಟ್ರದಲ್ಲಿ ಸರ್ಕಾರವನ್ನು ಮುನ್ನಡೆಸಲಿದೆ, ಕೇವಲ ವರ್ಷಗಳ ಅವಧಿಗೆ ಅಲ್ಲ ಎಂದು ಹೇಳಿದರು.

ಮಹಾರಾಷ್ಟ್ರದ ಮುಂದಿನ ಸರ್ಕಾರಕ್ಕೆ ಶಿವಸೇನೆಯೇ ನೇತೃತ್ವ ವಹಿಸಲಿದೆ. ರಾಜ್ಯದ ಹಿತಾಸಕ್ತಿ ಸಲುವಾಗಿ ಸರ್ಕಾರ ರಚನೆಗೆ ಮುನ್ನವೇ ಕಾಂಗ್ರೆಸ್ ಮತ್ತು ಎನ್ಸಿಪಿ ಜೊತೆಗೆ ಸಾಮಾನ್ಯ ಕನಿಷ್ಠ ಕಾರ್ಯಕ್ರಮವನ್ನು (ಸಿಎಂಪಿ) ರೂಪಿಸಲಾಗುತ್ತಿದೆ ಎಂದು ರಾವತ್ ಹೇಳಿದರು.

ಇದಕ್ಕೆ ಮುನ್ನ ಸರ್ಕಾರ ರಚನೆಗೆ ಮೊದಲಿಗೆ ಹಿಂದೇಟು ಹಾಕಿದ ಬಳಿಕ ತಾನೇ ಸರ್ಕಾರ ರಚಿಸುವುದಾಗಿ ವಿಶ್ವಾಸ ವ್ಯಕ್ತ ಪಡಿಸಿರುವ ಬಿಜೆಪಿಯ ವರ್ತನೆಯು ರಾಷ್ಟ್ರಪತಿ ಆಳ್ವಿಕೆಯ ಅಡಿಯಲ್ಲಿ ಕುದುರೆ ವ್ಯಾಪಾರ ನಡೆಸುವ ಅದರ ಇರಾದೆಯನ್ನು ಖಚಿತ ಪಡಿಸಿದೆ ಎಂದು ಶಿವಸೇನೆ ಆಪಾದಿಸಿತ್ತು.

ಶಿವಸೇನಾ-ಎನ್ಸಿಪಿ- ಕಾಂಗ್ರೆಸ್ ಮೈತ್ರಿಕೂಟವು ಆರು ತಿಂಗಳಿಗಿಂತ ಹೆಚ್ಚುಕಾಲ ಬದುಕುವುದಿಲ್ಲ ಎಂದು ಹೇಳಿದ್ದಕ್ಕಾಗಿ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ವಿರುದ್ಧ ಶಿವಸೇನಾ ಮುಖವಾಣಿಸಾಮ್ನಾಹರಿ ಹಾಯ್ದಿತ್ತು.

ಮಹಾರಾಷ್ಟ್ರದ ಬಿಜೆಪಿ ಮುಖ್ಯಸ್ಥ ಚಂದ್ರಕಾಂತ ಪಾಟೀಲ್ ಅವರು ಶುಕ್ರವಾರ ತಮ್ಮ ಪಕ್ಷವು ಶೀಘ್ರದಲ್ಲೇ ರಾಜ್ಯದಲ್ಲಿ ಸರ್ಕಾರ ರಚಿಸಲಿದೆ, ೨೮೮ ಸದಸ್ಯ ಬಲದ ವಿಧಾನಸಭೆಯಲ್ಲಿ ಪಕ್ಷವು ೧೧೯ ಶಾಸಕರ ಬೆಂಬಲವನ್ನು ಹೊಂದಿದೆ ಎಂದು ಹೇಳಿದ್ದರು.

ಯಾವುದೇ ಪಕ್ಷ ಅಥವಾ ಮೈತ್ರಿಕೂಟ ಸರ್ಕಾರ ರಚನೆಯ ಹಕ್ಕುಮಂಡನೆ ಮಾಡದ ಹಾಗೂ ಶಾಸಕರ ಅಗತ್ಯ ಸಂಖ್ಯಾಬಲ ಇರುವುದನ್ನು ಸಾಬೀತು ಪಡಿಸದ ಹಿನ್ನೆಲೆಯಲ್ಲಿ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರು ನೀಡಿದ್ದ ವರದಿಯನ್ನು ಆಧರಿಸಿ ಕೇಂದ್ರ ಸರ್ಕಾರವು ಮಹಾರಾಷ್ಟ್ರದಲ್ಲಿ  ರಾಜ್ಯಪಾಲ ಆಡಳಿತವನ್ನುಜಾರಿಗೊಳಿಸಿತ್ತು.

ರಾಷ್ಟ್ರಪತಿ ಆಳ್ವಿಕೆ ಜಾರಿಯ ಬಳಿಕ ನೂತನ ಅಸಂಗತ ತ್ರಿಪಕ್ಷ ಮೈತ್ರಿಕೂಟ ರಚನೆಯ ನಿಟ್ಟಿನಲ್ಲಿ ಯತ್ನಗಳನ್ನು  ನಡೆಸುತ್ತಿರುವ ಸೇನಾ-ಎನ್ಸಿಪಿ-ಕಾಂಗ್ರೆಸ್ ಪಕ್ಷಗಳು ಈಗಾಗಲೇ ಸಾಮಾನ್ಯ ಕನಿಷ್ಠ ಕಾರ್ಯಕ್ರಮವನ್ನು ರೂಪಿಸಿವೆ ಎಂದು ಹೇಳಲಾಗುತ್ತಿದೆ.

ಎನ್ಸಿಪಿ ಮುಖಂಡ ಶರದ್ ಪವಾರ್ ಅವರು ಶಿವಸೇನಾ-ಎನ್ಸಿಪಿ-ಕಾಂಗ್ರೆಸ್ ಮೈತ್ರಿಕೂಟದ ಸರ್ಕಾರ ರಚಿಸಲಾಗುವುದು ಮತ್ತು ಅದು ಐದು ವರ್ಷಗಳ ಪೂರ್ಣಾವಧಿಯನ್ನು ಪೂರೈಸುವುದು ಎಂದು ಹೇಳಿ, ಮಧ್ಯಂತರ ಚುನಾವಣಾ ಸಾಧ್ಯತೆಗಳನ್ನು ತಳ್ಳಿಹಾಕಿದ್ದರು. ಎನ್ಸಿಪಿಯ ಮುಖ್ಯ ವಕ್ತಾರ ನವಾಬ್ ಮಲಿಕ್ ಅವರು ಮುಖ್ಯಮಂತ್ರಿ ಸ್ಥಾನವು ಶಿವಸೇನೆಗೆ ಹೋಗಲಿದೆ ಎಂದು ಹೇಳಿದ್ದರು.

ಮಧ್ಯೆ, ಬಿಜೆಪಿಯು ತಾನು ಸರ್ಕಾರ ರಚಿಸುವುದಾಗಿ ಪ್ರತಿಪಾದಿಸಿತ್ತು. ಆದರೆ ೨೮೮ ಸದಸ್ಯಬಲದ ವಿಧಾನಸಭೆಯಲ್ಲಿ ತಾನು ಬಹುಮತದ ಮ್ಯಾಜಿಕ್ ಸಂಖ್ಯೆಯಾದ ೧೪೫ನ್ನು ತಾನು ದಾಟುವುದು ಹೇಗೆ ಎಂಬುದನ್ನು ಬಿಜೆಪಿ ಬಹಿರಂಗ ಪಡಿಸಿರಲಿಲ್ಲ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ಬಿಜೆಪಿ ನಾಯಕ ಚಂದ್ರಕಾಂತ ಪಾಟೀಲ್ ಅವರುಬಿಜೆಪಿಯು ಏಕೈಕ ದೊಡ್ಡ ಪಕ್ಷವಾಗಿದೆ ಮತ್ತು ಪಕ್ಷೇತರರ ಬೆಂಬಲದೊಂದಿಗೆ ನಮ್ಮ ಬಲ ೧೧೯ ಆಗುತ್ತದೆ. ಸಂಖ್ಯೆಯೊಂದಿಗೆ ಬಿಜೆಪಿಯು ಸರ್ಕಾರ ರಚಿಸಲಿದೆಎಂದು ಹೇಳಿದ್ದರು.

ಸೇನಾ ನಾಯಕ ಸಂಜಯ್ ರಾವತ್ ಅವರು ಮಹಾರಾಷ್ಟ್ರದ ಮುಂದಿನ ಸರ್ಕಾರದ ನೇತೃತ್ವವನ್ನು ತಮ್ಮ ಪಕ್ಷವೇ ವಹಿಸುವುದು ಎಂದು ಹೇಳಿದ್ದರು. ಪಕ್ಷವು ಮುಖ್ಯಮಂತ್ರಿ ಸ್ಥಾನವನ್ನು ಎನ್ಸಿಪಿ ಮತ್ತು ಕಾಂಗ್ರೆಸ್ ಜೊತೆ ಹಂಚಿಕೊಳ್ಳಲಿದೆಯೇ ಎಂಬ ಪ್ರಶ್ನೆಗೆ ರಾಜ್ಯಸಭಾ ಸದಸ್ಯರಾಗಿರುವ ಮಲಿಕ್ ಉತ್ತರ ನೀಡಿದ್ದರು.

ಏಕ ಪಕ್ಷ ಸರ್ಕಾರವಿರಲಿ ಅಥವಾ ಮೈತ್ರಿಕೂಟವಿರಲಿ ಆಡಳಿತಕ್ಕೆ ಕಾರ್ಯಸೂಚಿ ಅತ್ಯಗತ್ಯ. ಮುಂದಕ್ಕೆ ಒಯ್ಯಬೇಕಾದ ಮೂಲಸವಲತ್ತು ಯೋಜನೆಗಳಿವೆ, ಬರ, ಅಕಾಲಿಕ ಮಳೆಗೆ ಸಂಬಂಧಿಸಿದ ವಿಷಯಗಳಿವೆ. ನಮ್ಮ ಜೊತೆಗೆ ಬರುತ್ತಿರುವವರು ಅನುಭವೀ ಆಡಳಿತಗಾರರು. ಅವರ ಅನುಭವದಿಂದ ನಮಗೆ ಲಾಭವಾಗಲಿದೆಎಂದು ರಾವತ್ ಹೇಳಿದ್ದರು.

ಇತ್ತೀಚಿನವರೆಗೂ ಕಡುವೈರಿಯಾಗಿದ್ದ ಕಾಂಗ್ರೆಸ್ ಜೊತೆಗೆ ಮೈತ್ರಿ ಮಾಡಿಕೊಳ್ಳುವುದು ಆಭಾಸವಲ್ಲವೇ ಎಂಬ ಪ್ರಶ್ನೆಗೆ ರಾವತ್ ಅವರುಅತ್ಯಂತ ಹಳೆಯ ಪಕ್ಷದ ನಾಯಕರು ಸ್ವಾತಂತ್ರ್ಯ ಹೋರಾಟಕ್ಕೆ ಮತ್ತು ರಾಜ್ಯದ ಅಭಿವೃದ್ಧಿಗೆ ಕಾಣಿಕೆ ನೀಡಿದ್ದಾರೆಎಂದು ಉತ್ತರಿಸಿದ್ದರು.

ಹಿಂದುತ್ವದ ನಾಯಕ ವೀರ ಸಾವರ್ಕರ್ ಅವರಿಗೆಭಾರತ ರತ್ನನೀಡಬೇಕು ಎಂಬ ತನ್ನ ಬೇಡಿಕೆಯನ್ನು ಶಿವಸೇನೆಯು ತ್ಯಜಿಸಲಿದೆಯೇ ಮತ್ತು ಮುಸ್ಲಿಮ್ ಮೀಸಲಾತಿಯನ್ನು ಅಂಗೀಕರಿಸಲಿದೆಯೇ ಎಂಬ ಪ್ರಶ್ನೆಗೆ ನೇರ ಉತ್ತರ ನೀಡದೆ ನುಣುಚಿಕೊಂಡ ರಾವತ್ಇಂತಹ ಊಹಾಪೋಹದ ಮೂಲ ಯಾವುದು ಎಂಬುದು ನಮಗೆ ಗೊತ್ತಿದೆಎಂದು ಹೇಳಿದ್ದರು.

ವಾಜಪೇಯಿ (ಬಿಜೆಪಿ ನಾಯಕ ಮತ್ತು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ) ಹಲವು ಪಕ್ಷಗಳ ಮೈತ್ರಿಕೂಟದ ನೇತೃತ್ವ ವಹಿಸಿದ್ದರು. ಅವರು ಸಾಮಾನ್ಯ ಕನಿಷ್ಠ ಕಾರ್ಯಕ್ರಮದ ಆಧಾರದಲ್ಲಿ ಒಂದಾಗಿದ್ದರು. ಮಹಾರಾಷ್ಟ್ರದಲ್ಲಿ ಶರದ್ ಪವಾರ್ ಅವರು ಪ್ರಜಾತಾಂತ್ರಿಕ ಪ್ರಗತಿಪರ ರಂಗ ಸರ್ಕಾರವನ್ನು (೧೯೭೮-೮೦) ಮುನ್ನಡೆಸಿದ್ದರು. ಅದರಲ್ಲಿ ಬಿಜೆಪಿಯ ಹಿಂದಿನ ಅವತಾರವಾದ ಜನಸಂಘವೂ ಭಾಗಿಯಾಗಿತ್ತು ಎಂದು ರಾವತ್ ಪ್ರತಿಪಾದಿಸಿದ್ದರು.

ಪವಾರ್ ಅವರು ನವೆಂಬರ್ ೧೭ರಂದು ನವದೆಹಲಿಯಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಲಿದ್ದು, ಅಲ್ಲಿ ಸರ್ಕಾರ ರಚನೆ ಬಗ್ಗೆ  ಅಂತಿಮ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

No comments:

Advertisement