My Blog List

Sunday, November 17, 2019

ಭಾರತೀಯ ನೌಕಾಪಡೆಯ ತರಬೇತಿ ಮಿಗ್ ಅಪಘಾತ

ಭಾರತೀಯ ನೌಕಾಪಡೆಯ ತರಬೇತಿ ಮಿಗ್ ಅಪಘಾತ
ಪಣಜಿ: ಭಾರತೀಯ ನೌಕಾಪಡೆಯ ಮಿಗ್ 29ಕೆ ವಿಮಾನ 2019 ನವೆಂಬರ್ 16ರ ಶನಿವಾರ ಗಗನಕ್ಕೆ ಏರಿದ ಕೆಲವೇ ಕ್ಷಣಗಳಲ್ಲಿ ಗೋವಾದ ಡಾಬೋಲಿಮ್ನಲ್ಲಿ ಅಪಘಾತಕ್ಕೀಡಾಗಿದ್ದು, ಅದೃಷ್ಟವಶಾತ್ ಇಬ್ಬರು ತರಬೇತಿ ಪಡೆಯುತ್ತಿದ್ದ  ಪೈಲಟ್ ಗಳು ಪ್ರಾಣಾಪಾಯದಿಂದ ಪಾರಾದರು.

ತರಬೇತಿಗಾಗಿ ಬಳಸುವ ಮಿಗ್ 29 ಕೆ ವಿಮಾನದಲ್ಲಿದ್ದ ಪೈಲಟ್ ಗಳಾದ ಕ್ಯಾಪ್ಟನ್ ಎಂ.ಶಿಯೋಖಂದ್ ಮತ್ತು ಲೆಫ್ಟಿನೆಂಟ್ ಕಮಾಂಡರ್ ದೀಪಕ್ ಯಾದವ್ ಪವಾಡಸದೃಶವಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ನೌಕದಳ  ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿತು.
ತರಬೇತಿಯ ಮಿಗ್ 29ಕೆ ಟೇಕ್ ಗಗನಕ್ಕೇರಿದ ಹೊತ್ತಿನಲ್ಲಿಯೇ ಹಕ್ಕಿಗಳ ಹಿಂಡು ಬಂದು ಬಡಿದ ಪರಿಣಾಮ ಬಲಭಾಗದ ಎಂಜಿನ್ನಿನಲ್ಲಿ ಬೆಂಕಿ ಹೊತ್ತಿಕೊಂಡಿತ್ತು. ನಂತರ ಎಡಭಾಗದ ಎಂಜಿನ್ ಸ್ಥಗಿತವಾಗಿರುವುದಾಗಿ ವರದಿ ವಿವರಿಸಿತು.
ಗೋವಾದ ನೌಕಾನೆಲೆ ಡಾಬೋಲಿಮ್ ನಲ್ಲಿರುವ ಐಎನ್ ಎಸ್ ಹನ್ಸ್ ನಿಂದ ಮಿಗ್ 29ಕೆ ಗಗನಕ್ಕೆ ಏರಿದಾಗ  ಹಕ್ಕಿಗಳ ಹಿಂಡು ಬಡಿದಿತ್ತು. ಸಂದರ್ಭದಲ್ಲಿ ಎಂಜಿನ್ನಿಗೆ ಬೆಂಕಿ ಹೊತ್ತಿಕೊಂಡಿರುವುದನ್ನು ಗಮನಿಸಿದ ಪೈಲಟ್ಗಳು  ಇಬ್ಬರು ಧೈರ್ಯಗೆಡದೆ ಪರಿಸ್ಥಿತಿಯನ್ನು ನಿಭಾಯಿಸಿರುವುದಾಗಿ ನೌಕಾದಳದ ಪ್ರಕಟಣೆ ವಿವರಿಸಿತು.
ಬೆಂಕಿ ಹೊತ್ತಿಕೊಂಡ ಮಿಗ್ 29ಕೆ ಜನನಿಭಿಡ ಪ್ರದೇಶದಿಂದ ದೂರದಲ್ಲಿ ತೆರೆದ ಜಾಗದಲ್ಲಿ ಅಪಘಾತಕ್ಕೀಡಾಗಿತ್ತು ಎಂದು ವರದಿ ತಿಳಿಸಿತು.

No comments:

Advertisement