My Blog List

Wednesday, December 11, 2019

ರಾಜ್ಯಸಭೆಯಲ್ಲಿ ಡಿಸೆಂಬರ್ 10ರ ಬುಧವಾರ ‘ಪೌರತ್ವ’ ಪರೀಕ್ಷೆ..!

ರಾಜ್ಯಸಭೆಯಲ್ಲಿ ಡಿಸೆಂಬರ್ 10ರ ಬುಧವಾರಪೌರತ್ವ’ ಪರೀಕ್ಷೆ..!
ನವದೆಹಲಿ: ಲೋಕಸಭೆಯಲ್ಲಿ ಬೆಂಬಲ ನೀಡಿದ್ದ ಶಿವಸೇನೆಯಯು ಟರ್ನ್ಸುಳಿವು, ಈಶಾನ್ಯ ರಾಜ್ಯಗಳಲ್ಲಿ ಪ್ರತಿಭಟನೆ, ಬಂದ್ ಹಾಗೂ ೬೦೦ಕ್ಕೂ ಹೆಚ್ಚು ಬುದ್ಧಿ ಜೀವಿಗಳಿಗಳಿಂದ ಮಸೂದೆ ವಿರುದ್ಧ ಮನವಿಯ ಮಧ್ಯೆ, ರಾಜ್ಯಸಭೆಯಲ್ಲಿ 2019 ಡಿಸೆಂಬರ್ 11ರ ಬುಧವಾರ ಮಧ್ಯಾಹ್ನ ಗಂಟೆಗೆ ಪೌರತ್ವ (ತಿದ್ದುಪಡಿ) ಮಸೂದೆಯನ್ನು ಮಂಡಿಸಲು ಕೇಂದ್ರ  ಸರ್ಕಾರವು ಸಜ್ಜಾಗಿದೆ.

ವಿರೋಧ ಪಕ್ಷಗಳ ವಿರೋಧದ ನಡುವೆ 2019 ಡಿಸೆಂಬರ್ 9ರ ಸೋಮವಾರ ಮಧ್ಯರಾತ್ರಿಯ ವೇಳೆಗೆ ಲೋಕಸಭೆ ಅನುಮೋದನೆ ನೀಡಿದ್ದ ಪೌರತ್ವ (ತಿದ್ದುಪಡಿ) ಮಸೂದೆಯನ್ನು ಬುಧವಾರ ರಾಜ್ಯಸಭೆಯಲ್ಲಿ ಮಂಡಿಸಲು ಕೇಂದ್ರ ಸರ್ಕಾರವು 2019 ಡಿಸೆಂಬರ್ 10ರ ಮಂಗಳವಾರ ನಿರ್ಧರಿಸಿದ್ದು, ಭಾರತೀಯ ಜನತಾ ಪಕ್ಷ ಮತ್ತು ಕಾಂಗ್ರೆಸ್ ಸದನದಲ್ಲಿ ಕಡ್ಡಾಯವಾಗಿ ಹಾಜರು ಇರುವಂತೆ ತಮ್ಮ ಸದಸ್ಯರಿಗೆ ವಿಪ್ ಜಾರಿ ಮಾಡಿದವು.

ಉದ್ಧವ್ ಠಾಕ್ರೆ ತಿಪ್ಪರಲಾಗ: ಲೋಕಸಭೆಯಲ್ಲಿ ಮಸೂದೆಯನ್ನು ಬೆಂಬಲಿಸಿದ್ದ ಶಿವಸೇನೆ ಮುಖ್ಯಸ್ಥ, ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಇದೀಗ ತಿಪ್ಪರಲಾಗ ಹೊಡೆದಿದ್ದು, ತನ್ನ ಸಲಹೆಗಳನ್ನು ಅಂಗೀಕರಿಸುವವರೆಗೆ ಮಸೂದೆಗೆ ರಾಜ್ಯಸಭೆಯಲ್ಲಿ ಬೆಂಬಲ ನೀಡುವುದಿಲ್ಲ ಎಂದು ಮಂಗಳವಾರ ಹೇಳಿದರು.

ಶ್ರೀಲಂಕೆಯ ನಿರಾಶ್ರಿತರು ಸೇರಿದಂತೆ ಹೊಸದಾಗಿ ರಾಷ್ಟ್ರದ ಪೌರತ್ವ ಪಡೆಯುವವರಿಗೆ ೨೫ ವರ್ಷಗಳ ಕಾಲ ಮತದಾನದ ಹಕ್ಕು ತಡೆ ಹಿಡಿಯಬೇಕು ಮತ್ತು ಮಸೂದೆಯ ಬಗ್ಗೆ ಯಾರಾದರೂ ನಾಗರಿಕರು ಭಯ ವ್ಯಕ್ತ ಪಡಿಸಿದರೆ ಅವರ ಸಂಶಯಗಳನ್ನು ನಿವಾರಿಸಬೇಕು ,ಅವರಿಗೆ ಕಡ್ಡಾಯವಾಗಿ ಉತ್ತರ ನೀಡಲೇಬೇಕು. ಬಗ್ಗೆ ಸರ್ಕಾರದ ನಿಲುವು ಸ್ಪಷ್ಟವಾಗುವವರೆಗೆ ನಾವು ರಾಜ್ಯಸಭೆಯಲ್ಲಿ ಮಸೂದೆಗೆ ಬೆಂಬಲ ನೀಡುವುದಿಲ್ಲ ಎಂದು ಉದ್ಧವ್ ಠಾಕ್ರೆ ವರದಿಗಾರರ ಜೊತೆ ಮಾತನಾಡುತ್ತಾ ಹೇಳಿದರು. ಬಿಜೆಪಿಗೆ ಮಾತ್ರವೇ ರಾಷ್ಟ್ರದ ಬಗೆ ಕಾಳಜಿ ಇದೆ ಎಂಬುದು ಭ್ರಮೆ ಮಾತ್ರ ಎಂದು ಅವರು ನುಡಿದರು.

ಜೆಡಿಯು ನಾಯಕರ ಮನವಿ: ಮಧ್ಯೆ ವಿವಾದಿತ ಪೌರತ್ವ ತಿದ್ದುಪಡಿ ಮಸೂದೆಗೆ ಸಂಬಂಧಿಸಿದಂತೆ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಹಿರಿಯ ಮುಖಂಡರಾದ ಪ್ರಶಾಂತ್ ಕಿಶೋರ್ ಹಾಗೂ ಪವನ್ ವರ್ಮಾ ಮಂಗಳವಾರ ಅಸಮಾಧಾನ ವ್ಯಕ್ತಪಡಿಸಿ, ರಾಜ್ಯಸಭೆಯಲ್ಲಿ ಮಸೂದೆ ಮಂಡನೆ ವೇಳೆಯಲ್ಲಿ ಪಕ್ಷದ ನಿಲುವನ್ನು ಮರುಪರಿಶೀಲಿಸಬೇಕು ಎಂದು ನಾಯಕ ನಿತೀಶ್ ಕುಮಾರ್ ಅವರನ್ನು ಆಗ್ರಹಿಸಿದರು.

ಪೌರತ್ವ ತಿದ್ದುಪಡಿ ಮಸೂದೆಗೆ ಸಂಬಂಧಿಸಿದಂತೆ ಪಕ್ಷದ ನಿಲುವಿಗೆ ಅಸಮಾಧಾನ ವ್ಯಕ್ತಪಡಿಸಿ ಟ್ವೀಟ್ ಮಾಡಿರುವ ಪ್ರಶಾಂತ ಕಿಶೋರ್ಸಂವಿಧಾನದ ಚೌಕಟ್ಟಿನಲ್ಲಿ ನಾವು ಜಾತ್ಯತೀತತೆ ಮತ್ತು ಗಾಂಧಿ ವಿಚಾರಧಾರೆಯನ್ನು ಅನುಸರಿಸಬೇಕಾಗಿದೆಎಂದು ಹೇಳಿದರು.

ಜೆಡಿಯು ಹಿರಿಯ ಮುಖಂಡ, ಮಾಜಿ ರಾಯಭಾರಿ ಕೂಡಾ, ಪೌರತ್ವ ತಿದ್ದುಪಡಿ ಮಸೂದೆ ಸಂವಿಧಾನ ಬಾಹಿರವಾದದ್ದು, ತಾರತಮ್ಯದಿಂದ ಕೂಡಿದ್ದು, ದೇಶದ ಒಗ್ಗಟ್ಟು ಮತ್ತು ಐಕ್ಯತೆಯ ವಿರೋಧಿಯಾಗಿದೆ ಎಂದು ಅಭಿಪ್ರಾಯವ್ಯಕ್ತಪಡಿಸಿ, ನಿತೀಶ್ ಕುಮಾರ್ ಜೀ ಪೌರತ್ವ ತಿದ್ದುಪಡಿ ಮಸೂದೆ ರಾಜ್ಯಸಭೆಯಲ್ಲಿ ಮಂಡನೆಯಾಗುವ ವೇಳೆ ಬಗ್ಗೆ ಮರುಪರಿಶೀಲಿಸಬೇಕು ಎಂದು ಮನವಿ ಮಾಡಿದರು.

ರಾಜ್ಯಸಭೆಯಲ್ಲಿ ಬಲ ಎಷ್ಟಿದೆ: ೨೪೫ ಸದಸ್ಯ ಬಲ ಇರುವ ರಾಜ್ಯಸಭೆಯಲ್ಲಿ ಮಸೂದೆ ಅಂಗೀಕಾರಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಸರ್ಕಾರಕ್ಕೆ ಕನಿಷ್ಠ ೧೨೩ ಮಂದಿ ಸಂಸತ್ ಸದಸ್ಯರ ಬೆಂಬಲ ಬೇಕಾಗುತ್ತದೆ. ಬಿಜೆಪಿ ಸದನ ನಿರ್ವಾಹಕರ ಪ್ರಸ್ತುತ ಲೆಕ್ಕಾಚಾರಗಳ ಪ್ರಕಾರ ರಾಜ್ಯಸಭೆಯ ಈಗಿನ ಬಲ ೨೩೮. ಎನ್ಡಿಎ ಸದನದಲ್ಲಿ ೧೦೫ ಸದಸ್ಯ ಬಲವನ್ನು ಹೊಂದಿದೆ. ಇವರಲ್ಲಿ ಬಿಜೆಪಿಯ ೮೩, ಜನತಾದಳದ (ಯು) , ಶಿರೋಮಣಿ ಅಕಾಲಿ ದಳದ(ಎಸ್ಎಡಿ) , ಎಲ್ಜೆಪಿ ಮತ್ತು ಆರ್ಪಿಐ ಪಕ್ಷಗಳ ತಲಾ ಒಬ್ಬರು ಹಾಗೂ ೧೧ ಮಂದಿ ನಾಮನಿರ್ದೇಶಿತ ಸಂಸದರು ಸೇರಿದ್ದಾರೆ.

ಇದರ
ಹೊರತಾಗಿ ೧೧ ಸದಸ್ಯರನ್ನು ಹೊಂದಿರುವ ಎಐಎಡಿಎಂಕೆ, ಸದಸ್ಯರನ್ನು ಹೊಂದಿರುವ ಬಿಜು ಜನತಾದಳ (ಬಿಜೆಡಿ), ತಲಾ ಇಬ್ಬರು ಸದಸ್ಯರನ್ನು ಹೊಂದಿರುವ ವೈಎಸ್ಆರ್ ಕಾಂಗ್ರೆಸ್ ಮತ್ತು ತೆಲುಗುದೇಶಂ ಪಕ್ಷಗಳ (ಟಿಡಿಪಿ) ಜೊತೆಗೆ ಬಿಜೆಪಿಯು ಮಾತುಕತೆ ನಡೆಸಿದೆ. ಎಲ್ಲ ಪಕ್ಷಗಳೂ ಲೋಕಸಭೆಯಲ್ಲಿ ಮಸೂದೆಯನ್ನು ಬೆಂಬಲಿಸಿರುವುದರಿಂದ ರಾಜ್ಯಸಭೆಯಲ್ಲಿ ಅವುಗಳ ಬೆಂಬಲ ಲಭಿಸುವ ಬಗ್ಗೆ ಕೇಸರಿ ಪಕ್ಷ ವಿಶ್ವಾಸ ಹೊಂದಿದೆ.

ರಾಹುಲ್ ಟೀಕೆ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಲೋಕಸಭೆಯಲ್ಲಿ ಮಸೂದೆಯನ್ನು ಬೆಂಬಲಿಸಿದ ಪಕ್ಷಗಳನ್ನು ತೀವ್ರವಾಗಿ ಟೀಕಿಸಿದ್ದಾರೆ.  ಪೌರತ್ವ  ತಿದ್ದುಪಡಿ ಮಸೂದೆಯು (ಸಿಎಬಿ) ಭಾರತೀಯ ಸಂವಿಧಾನದ ಮೇಲಿನ ದಾಳಿ. ಅದನ್ನು ಬೆಂಬಲಿಸುವ ಯಾರೇ ವ್ಯಕ್ತಿ ನಮ್ಮ ದೇಶದ ಅಡಿಪಾಯವನ್ನೇ ನಾಶಗೊಳಿಸಲು ಯತ್ನಿಸುತ್ತಿದ್ದಾನೆ ಎಂದೇ ಅರ್ಥಎಂದು ರಾಹುಲ್ ಮಂಗಳವಾರ ಟ್ವೀಟ್ ಮಾಡಿದ್ದಾರೆ.

ಮಹಾರಾಷ್ಟ್ರದಲ್ಲಿ ಎನ್ಸಿಪಿ ಮತ್ತು ಕಾಂಗ್ರೆಸ್ ಜೊತೆ ಸೇರಿ ಸರ್ಕಾರ ರಚಿಸುವ ಸಲುವಾಗಿ ಬಿಜೆಪಿ ನೇತೃತ್ವದ ಎನ್ಡಿಎಯಿಂದ ಹೊರಬಂದಿದ್ದ ಶಿವಸೇನೆ ಲೋಕಸಭೆಯಲ್ಲಿ ಜೆಡಿ(ಯು), ಎಲ್ ಜೆಪಿ, ಬಿಜೆಡಿ ಮತ್ತು ವೈಎಸ್ ಆರ್ ಕಾಂಗ್ರೆಸ್ ಪಕ್ಷದ ಜೊತೆಗೆ ಮಸೂದೆಗೆ ಬೆಂಬಲ ನೀಡಿತ್ತು.

ಆದರೆ ಪೌರತ್ವ ಮಸೂದೆಗೆ ನೀಡಿದ ಬೆಂಬಲವು ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಗಾಗಿ ಒಪ್ಪಿಕೊಳ್ಳಲಾಗಿರುವ ಕನಿಷ್ಠ ಸಾಮಾನ್ಯ ಕಾರ್ಯಕ್ರಮದ ಜೊತೆಗೆ ಯಾವುದೇ ರಾಜಿಯಲ್ಲ ಎಂದೂ ಶಿವಸೇನೆ ಸ್ಪಷ್ಟ ಪಡಿಸಿತ್ತು.

ಲೋಕಸಭೆಯಲ್ಲಿ ಹಾಜರಿದ್ದು ಮತ ಚಲಾಯಿಸಿದ ೩೯೧ ಸದಸ್ಯರ ಪೈಕಿ ಮಸೂದೆಯ ಪರವಾರಿ ೩೧೧ ಮತ್ತು ವಿರುದ್ಧವಾಗಿ ೮೦ ಚಲಾಯಿಸಿದ್ದರು.

ಈಶಾನ್ಯ ಭಾರತ ಕೊತಕೊತ: ಏತನ್ಮಧ್ಯೆ, ಪೌರತ್ವ (ತಿದ್ದುಪಡಿ) ಮಸೂದೆಯ ವಿರುದ್ಧ ನಡೆಯುತ್ತಿರುವ ಭಾರೀ ಪ್ರತಿಭಟನೆ ಹಾಗೂ ಬಂದ್ ಹಿನ್ನೆಲೆಯಲ್ಲಿ ತ್ರಿಪುರ ಆಡಳಿತವು ಮಂಗಳವಾರ ಇಂಟರ್ ನೆಟ್ ಸೇವೆಗಳನ್ನು ೪೮ ಗಂಟೆಗಳ ಕಾಲ ಸ್ಥಗಿತಗೊಳಿಸಿತು.

ರಾಜ್ಯದ ಮನು ಮತ್ತು ಕಂಚನಪುರ ಪ್ರದೇಶಗಳಲ್ಲಿ ಬುಡಕಟ್ಟು ಮತ್ತು ಬುಡಕಟ್ಟೇತರರ ಮಧ್ಯೆ ಜನಾಂಗೀಯ ಘರ್ಷಣೆಗಳು ನಡೆಯುತ್ತಿವೆ ಎಂಬುದಾಗಿ ಎಸ್ ಎಂಎಸ್, ವಾಟ್ಸಪ್ ಮತ್ತು ಟ್ವಿಟ್ಟರ್, ಫೇಸ್ ಬುಕ್ ಹಾಗೂ  ಯೂ ಟ್ಯೂಬ್ ನಂತಹ ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ಸಂದೇಶಗಳು ಹರಿದಾಡುತ್ತಿರುವುದು ಗಮನಕ್ಕೆ ಬಂದಿದ್ದು, ಇದು ಹಿಂಸಾಚಾರಗಳಿಗೆ ಕಾರಣವಾಗಿದೆ. ಆದ್ದರಿಂದ ತ್ರಿಪುರ ಸರ್ಕಾರವು ೪೮ ಗಂಟೆಗಳ ಅವಧಿಗೆ ಇವೆಲ್ಲವನ್ನೂ ನಿಷೇಧಿಸಿದೆ ಎಂದು ತ್ರಿಪುರಾ ಪೊಲೀಸ್ ಮಹಾನಿರ್ದೇಶಕರು ತಿಳಿಸಿದರು.

ಅಸ್ಸಾಂ ಸೇರಿದಂತೆ ಈಶಾನ್ಯ ಭಾರತದ ಇತರ ರಾಜ್ಯಗಳಲ್ಲೂ ಹಲವೆಡೆ ಬಂದ್ ಹಿಂಸೆ ತಿರುಗಿದ್ದು, ಬಂದ್ನಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ ಎಂದು ವರದಿಗಳು ಬಂದಿವೆ. ಗುವಾಹಟಿಯ ಹಲವಡೆಗಳಲ್ಲಿ ಮಂಗಳವಾರ ಪ್ರತಿಭಟನೆಗಳು ನಡೆದಿದ್ದು, ಹಲವಡೆ ಭದ್ರತಾ ಪಡೆ, ಪೊಲೀಸರ  ಜೊತೆ ಘರ್ಷಿಸಿದರು ಎಂದು ವರದಿಗಳು ಹೇಳಿದವು.
ಬುದ್ಧಿ ಜೀವಿಗಳ ಮನವಿ: ಮಧ್ಯೆ ಬರಹಗಾರರು,  ಕಲಾವಿದರು, ಮಾಜಿ ನ್ಯಾಯಾಧೀಶರು ಮತ್ತು ಮಾಜಿ ಅಧಿಕಾರಿಗಳು ಸೇರಿದಂತೆ ಸುಮಾರು ೬೦೦ಕ್ಕೂ ಹೆಚ್ಚು ಗಣ್ಯರು ಪೌರತ್ವ (ತಿದ್ದುಪಡಿ) ಮಸೂದೆಯನ್ನು ವಿಭಜನಕಾರಿ, ತಾರತಮ್ಯದ್ದು ಮತ್ತು ಸಂವಿಧಾನಬಾಹಿರ ಎಂಬುದಾಗಿ ಬಣ್ಣಿಸಿ ಅದನ್ನು ಹಿಂತೆಗೆದುಕೊಳ್ಳುವಂತೆ ಸರ್ಕಾರವನ್ನು ಆಗ್ರಹಿಸಿದರು.

ಮನವಿಪತ್ರಕ್ಕೆ ಬರಹಗಾರರಾದ ನಯನತಾರಾ ಸೆಹಗಲ್, ಅರುಂಧತಿ ರಾಯ್, ಅಮಿತವ್ ಘೋಷ್, ಕಲಾವಿದರಾದ ಟಿಎಂ ಕೃಷ್ಣ, ಸುಧೀರ್ ಪಟವಧನ್, ವಿಧ್ವಾಂಸರಾದ ರೊಮೀಲಾ ಥಾಪರ್, ಪ್ರಭಾತ್ ಪಟ್ನಾಯಿಕ್ ಮತ್ತು ರಾಮಚಂದ್ರ ಗುಹ, ಸಾಮಾಜಿಕ ಕಾರ್ಯಕರ್ತರಾದ ತೀಸ್ತಾ ಸೆಟಲ್ವಾಡ್, ಹರ್ಷ ಮಂದೆರ್, ಅರುಣಾ ರಾಯ್ ಮತ್ತು ಬೆಝ್ವಾಡ ವಿಲ್ಸನ್, ನಿವೃತ್ತ ನ್ಯಾಯಮೂರ್ತಿ ಎಪಿ ಶಾ, ಯೋಗೇಂದ್ರ ಯಾದವ್, ಜಿಎನ್ ದೇವಿ, ನಂದಿನಿ ಸುಂದರ್ ಮತ್ತು ವಜಾಹತ್ ಹಬೀಬುಲ್ಲಾ ಮತ್ತಿತರು ಸಹಿ ಮಾಡಿದ್ದಾರೆ.

ಭಾರತದ ಸಂವಿಧಾನವು ಲಿಂಗ, ಜಾತಿ, ಧರ್ಮ, ವರ್ಗ, ಸಮುದಾಯ ಅಥವಾ ಭಾಷೆ ರಹಿತವಾಗಿ ಸಮಾನತೆಯನ್ನು ಪ್ರತಿಪಾದಿಸಿದೆ ಎಂದು ಒತ್ತಿಹೇಳಿದ ಬುದ್ಧಿಜೀವಿಗಳುಪೌರತ್ವ (ತಿದ್ದುಪಡಿ) ಮಸೂದೆ ಮತ್ತು ರಾಷ್ಟ್ರವ್ಯಾಪಿ ಎನ್ಆರ್ಸಿಯು (ರಾಷ್ಟ್ರೀಯ ಪೌರತ್ವ ನೋಂದಣಿ)  ದೇಶಾದ್ಯಂತ ಜನರಿಗೆ ಹೇಳಲಾಗದಂತಹ ತೊಂದರೆಗಳನ್ನು ಉಂಟು ಮಾಡಲಿದೆ. ಇವುಗಳು ಭಾರತೀಯ ಗಣರಾಜ್ಯದ ಸ್ವರೂಪಕ್ಕೆ ಮೂಲಭೂತವಾದ, ದುರಸ್ತಿ ಪಡಿಸಲಾಗದಂತಹ ಹಾನಿಯನ್ನು ಉಂಟು ಮಾಡಲಿವೆ ಎಂದೂ ಎಚ್ಚರಿಕೆ ನೀಡಿದ್ದಾರೆ.

ಕಾರಣಕ್ಕಾಗಿಯೇ ಸಮಾಜದ ಎಲ್ಲ ಪ್ರಜ್ಞಾವಂತ ನಾಗರಿಕರು ಮಸೂದೆಯನ್ನು ಹಿಂಪಡೆಯುವಂತೆ ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ. ಸಂವಿಧಾನಕ್ಕೆ ದ್ರೋಹ ಬಗೆಯಬೇಡಿ ಎಂದು ಇದೇ ಕಾರಣಕ್ಕೆ ಒತ್ತಾಯಿಸುತ್ತಿದ್ದಾರೆ ಎಂದು ಹೇಳಿಕೆ ತಿಳಿಸಿದೆ.

No comments:

Advertisement