Thursday, December 26, 2019

ವಾಜಪೇಯಿ ಭಾವಚಿತ್ರ ಅನಾವರಣಕ್ಕೆ ಬಾರದ ಮಮತಾ ಬ್ಯಾನರ್ಜಿ

ವಾಜಪೇಯಿ ಭಾವಚಿತ್ರ ಅನಾವರಣಕ್ಕೆ ಬಾರದ
ಮಮತಾ ಬ್ಯಾನರ್ಜಿ
ನನಗೆ ನೋವಾಗಿದೆರಾಜ್ಯಪಾಲ ಧನ್ಕರ್ ಅಸಮಾಧಾನ 

ಕೋಲ್ಕತ: ಪಶ್ಚಿಮ ಬಂಗಾಳದ ರಾಜ್ಯಪಾಲ ಜಗದೀಪ್ ಧನ್ಕರ್ ಮತ್ತು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ನಡುವಣ ಘರ್ಷಣೆಯು ಬ್ಯಾನರ್ಜಿ ಅವರು ರಾಜಭವನದಲ್ಲಿ ನಡೆದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಭಾವಚಿತ್ರ ಅನಾವರಣಗೊಳಿಸಲು ಬಾರದೇ ತಪ್ಪಿಸಿಕೊಳ್ಳುವುದರೊಂದಿಗೆ 2019 ಡಿಸೆಂಬರ್ 26ರ ಬುಧವಾರ ಹೊಸ ತಿರುವು ಪಡೆಯಿತು.

ರಾಜ್ಯಪಾಲ ಮತ್ತು ಮುಖ್ಯಮಂತ್ರಿ ನಡುವಿನ ಘರ್ಷಣೆ ಬಹಿರಂಗಕ್ಕೆ ಬಂದ ಹಲವಾರು ಘಟನೆಗಳು ಕಳೆದ ಐದು ತಿಂಗಳಲ್ಲಿ ನಡೆದಿದ್ದವು. ವಿಶ್ವ ವಿದ್ಯಾಲಯಗಳ ಕಾನೂನು ಸುವ್ಯವಸ್ಥೆ ಪರಿಸ್ಥಿತಿ ಸೇರಿದಂತೆ ಹಲವಾರು ವಿಷಯಗಳಲ್ಲಿ ಅವರು ಘರ್ಷಿಸಿದ್ದರು.

ಮಮತಾ
ಬ್ಯಾನರ್ಜಿ ಮತ್ತು ರಾಜ್ಯದ ಹಿರಿಯ ಆಡಳಿತಗಾರರಿಗೆ ಅಟಲ್ ಬಿಹಾರಿ ವಾಜಪೇಯಿ ಅವರ ಭಾವಚಿತ್ರ ಅನಾವರಣ ಕಾರ್ಯಕ್ರಮದ ಬಗ್ಗೆ ನವೆಂಬರ್ ತಿಂಗಳಲ್ಲೇ ತಿಳಿಸಿಲಾಗಿತ್ತು. ಆದರೂ ಮಮತಾ ಬ್ಯಾನರ್ಜಿ ಅವರು ಗೈರುಹಾಜರಾದದ್ದು ತಮಗೆ ನೋವುಂಟು ಮಾಡಿದೆ ಎಂದು ಧನ್ಕರ್ ಹೇಳಿದರು.

ಮುಖ್ಯಮಂತ್ರಿಯಾಗಿ ಅವರಿಗೆ (ಬ್ಯಾನರ್ಜಿ) ಹಲವಾರು ಒತ್ತಡಭರಿತ ಕಾರ್ಯಕ್ರಮಗಳು ಇರುತ್ತವೆ ಎಂಬುದನ್ನು ನಾನು ಆರ್ಥ ಮಾಡಿಕೊಳ್ಳಬಲ್ಲೆ. ಆದರೆ ಅವರು ಪ್ರತಿನಿಧಿಯನ್ನು ಕೂಡಾ ಕಳುಹಿಸಿಕೊಡಲಿಲ್ಲಎಂದು ರಾಜ್ಯಪಾಲರು ವರದಿಗಾರರ ಜೊತೆ ಮಾತನಾಡುತ್ತಾ ಹೇಳಿದರು.

ಏನಿದ್ದರೂ, ೨೦೦೧ರಿಂದ ೨೦೦೪ರ ಅವಧಿಯಲ್ಲಿ ವಾಜಪೇಯಿ ಅವರ ಸಂಪುಟದಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದ್ದ ಮಮತಾ ಬ್ಯಾನರ್ಜಿ ಅವರು ತಮ್ಮ ದಿನದ ಮೊದಲ ಟ್ವೀಟಿನಲ್ಲಿ ವಾಜಪೇಯಿ ಅವರಿಗೆ ಗೌರವ ಸಲ್ಲಿಸಿದ್ದರು.

ಅಟಲ್ ಬಿಹಾರಿ ವಾಜಪೇಯಿ ಜಿ ಅವರಿಗೆ ಅವರ ಜನ್ಮದಿನದ ಸಂದರ್ಭದಲ್ಲಿ ನನ್ನ ಗೌರವಾರ್ಪಣೆಗಳು. ಅವರು ದೇಶದ ಒಳಿತಿಗಾಗಿ ಪಕ್ಷ ರಾಜಕಾರಣದಿಂದ ಮೇಲೆದ್ದು ನಿಂತ ಮುತ್ಸದ್ದಿ. ನಾವು ಅವರನ್ನು ಕಳೆದುಕೊಂಡಿದ್ದೇವೆಎಂದು ಬ್ಯಾನರ್ಜಿ ಟ್ವೀಟ್ ಮಾಡಿದ್ದರು.

ವಾಜಪೇಯಿ ಅವರು ಬ್ಯಾನರ್ಜಿ ಅವರ ದಕ್ಷಿಣ ಕೋಲ್ಕತಾದ ಕಾಳಿಘಾಟ್ ನಿವಾಸಕ್ಕೆ ಭೇಟಿ ನೀಡಿ ಅವರ ತಾಯಿಯನ್ನು ಭೇಟಿ ಮಾಡಿದ್ದ ದಿನವನ್ನು ಕೂಡಾ ರಾಜ್ಯಪಾಲ ಧನ್ಕರ್ ಅವರು ಉಲ್ಲೇಖಿಸಿದರು.

ಅಟಲ್ ಜಿ ಯಾವಾಗಲೂ ಹೇಳುತ್ತಿದ್ದರು.. ನೀವು ಪ್ರತಿಯೊಂದು ವಿಚಾರದಲ್ಲೂ ಒಪ್ಪದೇ ಇರಬಹುದು. ಆದರೆ ಒಪ್ಪದೇ ಇರುವುದು ನಿಮ್ಮನ್ನು ವೈರಿಗಳನ್ನಾಗಿ ಮಾಡುವುದಿಲ್ಲಎಂದು ರಾಜ್ಯಪಾಲರು ನುಡಿದರು.

೨೦೦೧ರಿಂದ ೨೦೧೪ರ ನಡುವಣ ಅವಧಿಯಲ್ಲಿ ಅಟಲ್ ಜಿ ಅವರು ಗೌರವಾನ್ವಿತ ಮುಖ್ಯಮಂತ್ರಿಯವರ ವೃತ್ತಿ ಭವಿಷ್ಯಕ್ಕೆ ದೊಡ್ಡ ಪ್ರಮಾಣದ ಕಾಣಿಕೆ ಕೊಟ್ಟಿದ್ದಾರೆ ಎಂಬುದು ನನಗೆ ವೈಯಕ್ತಿಕವಾಗಿ ಗೊತ್ತುಎಂದು ಧನ್ಕರ್ ಹೇಳಿದರು.

ಮಮತಾ
ಬ್ಯಾನರ್ಜಿ ಅವರ ಗೈರುಹಾಜರಿ ವಿಚಾರ ತಮಗೆ ಚಿಂತೆ ಉಂಟುಮಾಡಿದ್ದಕ್ಕೆ ಕಾರಣಗಳನ್ನೂ ಅವರು ಪಟ್ಟಿ ಮಾಡಿದರು.

ಅವರು (ಬ್ಯಾನರ್ಜಿ) ಚಿತ್ರ ಅನಾವರಣಕ್ಕಾಗಿ ಇಲ್ಲಿ ಇರಬೇಕಾಗಿತ್ತು ಎಂದು ಕ್ಷಣದಲ್ಲಿ ನಾನು ಹೇಳುತ್ತಿಲ್ಲ. ಮುಖ್ಯಮಂತ್ರಿಯಾಗಿ, ಅವರಿಗೆ ಹಲವಾರು ಕಾರ್ಯಕ್ರಮಗಳು ಇರಬಹುದು. ಆದರೆ ಸ್ವೀಕೃತಿಯ ಕೊರತೆ ನನಗೆ ನೋವುಂಟು ಮಾಡಿದೆ. ಸರ್ಕಾರ ಮತ್ತು ಆಡಳಿತ ಯಂತ್ರದ ಕಡೆಯಿಂದ ಪ್ರಾತಿನಿಧ್ಯದ ಕೊರತೆ ನನಗೆ ಘಾಸಿ ಮಾಡಿದೆಎಂದು ರಾಜ್ಯಪಾಲರು ಹೇಳಿದರು.

ವ್ಯಕ್ತಿಗಳು ಭೂತಕಾಲದ ಹೊರೆಯನ್ನು ಹೊತ್ತುಕೊಂಡು ಹೋಗಬಹುದು. ಒಬ್ಬ ರಾಜ್ಯಪಾಲರು ಮತ್ತು ಒಬ್ಬ ಮುಖ್ಯಮಂತ್ರಿ ಭೂತಕಾಲದ ಹೊರೆಯನ್ನು ಹೊತ್ತುಕೊಂಡು ಹೋಗಲು ಸಾಧ್ಯವಿಲ್ಲಎಂದು ಹೇಳಿದ ಧನ್ಕರ್ ಇತ್ತೀಚಿನ ಕೆಲವು ಘಟನೆಗಳು ಸರ್ಕಾರ ಮತ್ತು ರಾಜಭವನದ ಮಧ್ಯೆ ತೀವ್ರ ಭಿನ್ನಾಭಿಪ್ರಾಯಗಳಿಗೆ ಎಡೆ ಮಾಡಿದ್ದವು ಎಂದು ನುಡಿದರು.

ರಾಜಭವನದ ಕಿಂಗ್ ರೂಮ್ ನಲ್ಲಿ ಅನಾವರಣಗೊಳಿಸಲಾಗಿರುವ ಅಟಲ್ ಬಿಹಾರಿ ವಾಜಪೇಯಿ ಅವರ ಭಾವಚಿತ್ರವು ೩ಡಿ (ಮೂರು ಆಯಾಮಗಳ) ಭಾವಚಿತ್ರವಾಗಿದೆ.

ಕಲಾವಿದ ಅಧ್ಭುತ ಕೆಲಸ ಮಾಡಿದ್ದಾನೆಎಂದು ಧನ್ಕರ್  ಹೇಳಿದರು

No comments:

Advertisement