ಗ್ರಾಹಕರ ಸುಖ-ದುಃಖ

My Blog List

Friday, December 13, 2019

ರಾಷ್ಟ್ರಪತಿ ಅಂಕಿತ, ಕಾನೂನು ಆಯಿತು ಪೌರತ್ವ (ತಿದ್ದುಪಡಿ) ಮಸೂದೆ

ರಾಷ್ಟ್ರಪತಿ ಅಂಕಿತ, ಕಾನೂನು ಆಯಿತು ಪೌರತ್ವ (ತಿದ್ದುಪಡಿ) ಮಸೂದೆ
ನವದೆಹಲಿ:  ಸಂಸತ್ತಿನ ಉಭಯ ಸದನಗಳಲ್ಲಿ ಪ್ರಚಂಡ ಬಹುಮತದೊಂದಿಗೆ ಅಂಗೀಕಾರಗೊಂಡಿರುವ  ‘ಪೌರತ್ವ (ತಿದ್ದುಪಡಿ) ಮಸೂದೆಗೆ (ಸಿಎಬಿ) ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು 2019 ಡಿಸೆಂಬರ್ 12ರ ಗುರುವಾರ ರಾತ್ರಿ ತಮ್ಮ ಅಂಕಿತ ಹಾಕಿದ್ದು, ಅದು ಕಾನೂನು ಆಗಿ ಜಾರಿಯಾಯಿತು.

ಅಸ್ಸಾಮ್, ಮೇಘಾಲಯ, ತ್ರಿಪುರ ಸೇರಿದಂತೆ ಈಶಾನ್ಯ ರಾಜ್ಯಗಳಲ್ಲಿ ಭಾರೀ ವಿರೋಧ, ಹಿಂಸಾತ್ಮಕ ಪ್ರತಿಭಟನೆಗಳ ನಡುವೆಯೇ  ಮುಸ್ಲಿಮ್ ಪ್ರಾಬಲ್ಯದ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಆಫ್ಘಾನಿಸ್ಥಾನ ದೇಶಗಳಿಂದ ಧಾರ್ಮಿಕ ಕಿರುಕುಳಕ್ಕೆ ಗುರಿಯಾಗಿ ಭಾರತಕ್ಕೆ ವಲಸೆ ಬಂದಿರುವ ಧಾರ್ಮಿಕ ಅಲ್ಪಸಂಖ್ಯಾತ ನಿರಾಶ್ರಿತರಿಗೆ ಭಾರತದ ಪೌರತ್ವವು ಕಾನೂನಿನ ಜಾರಿಯೊಂದಿಗೆ ಲಭಿಸಿತು.

ಇದೇ ಮೊದಲ ಬಾರಿಗೆ ಧಾರ್ಮಿಕ ನೆಲೆಯಲ್ಲಿ ಪೌರತ್ವ ಒದಗಿಸುವ ಮಸೂದೆಯನ್ನು ಬಿಜೆಪಿ ನೇತೃತ್ವದ  ಎನ್ ಡಿಎ ಸರ್ಕಾರವು 2019 ಡಿಸೆಂಬರ್ 9ರ ಸೋಮವಾರ ಲೋಕಸಭೆಯಲ್ಲಿ ಮತ್ತು 2019 ಡಿಸೆಂಬರ್ 11ರ ಬುಧವಾರ ರಾಜ್ಯಸಭೆಯಲ್ಲಿ ಮಂಡಿಸಿ , ವಿರೋಧ ಪಕ್ಷಗಳ ತೀವ್ರ ವಿರೋಧ ಹಾಗೂ ಗೃಹ ಸಚಿವ ಅಮಿತ್ ಶಾ ಅವರ ಪ್ರಬಲ ಸಮರ್ಥನೆಯ ಬಳಿಕ ಪ್ರಚಂಡ ಬಹುಮತದೊಂದಿಗೆ ಉಭಯ ಸದನಗಳ ಅನುಮೋದನೆಯನ್ನೂ ಪಡೆದಿತ್ತು.

No comments:

Advertisement