ವಂಚಕರಿಗೇ ಚಳ್ಳೆಹಣ್ಣು ತಿನ್ನಿಸಿದ ಕಾನ್ಪುರದ 'ರಿಯಲ್ ಹೀರೋ'!
ವಂಚಿಸುವ ವಂಚಕರನ್ನೇ
ವಂಚಿಸಿದ ಈ ರೋಚಕ ಕಥೆ ಹುಟ್ಟಿದ್ದು ಉತ್ತರ ಪ್ರದೇಶದ ಕಾನ್ಪುರದಲ್ಲಿ. ಇತ್ತೀಚೆಗೆ ಹೆಚ್ಚಾಗುತ್ತಿರುವ 'ಡಿಜಿಟಲ್ ಅರೆಸ್ಟ್'
ನಂತಹ ಸೈಬರ್ ಅಪರಾಧಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಉತ್ತರ
ಪ್ರದೇಶ ಪೊಲೀಸರು
೫ ನಿಮಿಷ ೨೬ ಸೆಕೆಂಡುಗಳ ಕಿರುಚಿತ್ರವನ್ನು
ನಿರ್ಮಿಸಿದ್ದಾರೆ.
ಚಿತ್ರದ
ವಿಶೇಷತೆಗಳು:
- ಈ ಚಿತ್ರದಲ್ಲಿ ಖ್ಯಾತ ನಟ ನಾನಾ ಪಾಟೇಕರ್ ಒಬ್ಬ ನಿವೃತ್ತ
ರೈಲ್ವೆ ಗಾರ್ಡ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
- ಮುಂಬೈ ಪೊಲೀಸ್ ಇನ್ಸ್‌ಪೆಕ್ಟರ್
ಸೋಗಿನಲ್ಲಿ ಬರುವ ಸೈಬರ್ ವಂಚಕನೊಬ್ಬ, ನಾನಾ ಪಾಟೇಕರ್
ಅವರಿಗೆ ಕರೆ ಮಾಡಿ FIR
ದಾಖಲಿಸುವ ಬೆದರಿಕೆ ಹಾಕಿ ೧೫ ಲಕ್ಷ ರೂಪಾಯಿ ಬೇಡಿಕೆಯಿಡುತ್ತಾನೆ.
- ಆದರೆ ನಾನಾ ಪಾಟೇಕರ್, ಬಹಳ ಮುಗ್ದನಂತೆ ನಟಿಸುತ್ತಾ ಆ ವಂಚಕನಿಗೇ ದೊಡ್ಡ ಪಂಗನಾಮ ಹಾಕುತ್ತಾರೆ!
ಇದು ಕೇವಲ ಸಿನಿಮಾ ಕಥೆಯಲ್ಲ, ನೈಜ ಘಟನೆ! 😲 ಸಿನಿಮಾದಲ್ಲಿ ನಾನಾ ಪಾಟೇಕರ್ ನಿರ್ವಹಿಸಿದ ಪಾತ್ರದ ಹಿಂದಿರುವುದು ಕಾನ್ಪುರದ ವಿಶ್ವ ಬ್ಯಾಂಕ್ ಬರ್ರಾ ನಿವಾಸಿ ಭೂಪೇಂದ್ರ ಸಿಂಗ್ ಎಂಬುವವರ ಸಾಹಸಗಾಥೆ. ಇದನ್ನು ನೋಡಲು ಕೆಳಗೆ ಕ್ಲಿಕ್ ಮಾಡಿ ಅಥವಾ ಯೂ ಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: Video link: https://youtu.be/w5zx4r2scyA
ನಡೆದಿದ್ದೇನು? ಭೂಪೇಂದ್ರ ಅವರಿಗೂ ಒಮ್ಮೆ ಸೈಬರ್ ವಂಚಕನಿಂದ ಬೆದರಿಕೆ ಕರೆ ಬಂದಿತ್ತು. ಅದು ವಂಚಕನ ಕರೆ ಎಂದು ತಕ್ಷಣವೇ ಅರಿತ ಭೂಪೇಂದ್ರ, ಕಿಂಚಿತ್ತೂ ಎದರದೆ ಅಪ್ಪಟ ನಾನಾ ಪಾಟೇಕರ್ ಶೈಲಿಯಲ್ಲಿ ಮಾತನಾಡತೊಡಗಿದರು. ತಾನೊಬ್ಬ ೧೬ ವರ್ಷದ ಹುಡುಗನೆಂದು ನಂಬಿಸಿ, ಅದೇ ವಂಚಕನಿಂದ ತಮ್ಮ ಖಾತೆಗೆ ೧೦,೦೦೦ ರೂಪಾಯಿ ಜಮಾ ಮಾಡಿಸಿಕೊಂಡರು! ಹಣ ಕಳೆದುಕೊಂಡ ವಂಚಕ, ಅದನ್ನು ಮರಳಿ ಪಡೆಯಲು ಹಲವು ದಿನಗಳ ಕಾಲ ಭೂಪೇಂದ್ರ ಅವರಿಗೆ ಕಾಡಿಬೇಡಿ ಕರೆ ಮಾಡುತ್ತಲೇ ಇದ್ದನಂತೆ.
ಭೂಪೇಂದ್ರ ಅವರ ಈ
ಸಮಯಪ್ರಜ್ಞೆ ಮತ್ತು ಚಾಣಾಕ್ಷತನವನ್ನು ಮೆಚ್ಚಿ, ಅಂದಿನ DGP ಪ್ರಶಾಂತ್ ಕುಮಾರ್ ಅವರು ಕಾನ್ಪುರದಲ್ಲಿ ನಡೆದ ಸಮಾರಂಭವೊಂದರಲ್ಲಿ
ಅವರನ್ನು ಸನ್ಮಾನಿಸಿ ಗೌರವಿಸಿದರು.
ಗಮನಿಸಿ: ಸೈಬರ್ ವಂಚಕರ ಬಗ್ಗೆ ಎಚ್ಚರವಿರಲಿ. ನಾನಾ ಪಾಟೇಕರ್ ನಟಿಸಿದ ಈ ಅದ್ಭುತ ಕಿರುಚಿತ್ರ ಕೆಳಗಿದೆ. ನೀವೂ ಒಮ್ಮೆ ತಪ್ಪದೇ ವೀಕ್ಷಿಸಿ!

No comments:
Post a Comment