Tuesday, December 10, 2019

ಅಯೋಧ್ಯಾ: ಸುಪ್ರೀಂ ಮೆಟ್ಟಿಲೇರಿದ ಹಿಂದೂ ಮಹಾಸಭಾ

ಅಯೋಧ್ಯಾ: ಸುಪ್ರೀಂ ಮೆಟ್ಟಿಲೇರಿದ ಹಿಂದೂ ಮಹಾಸಭಾ
ಮುಸ್ಲಿಮರಿಗೆ ೫ಎಕರೆ ಭೂಮಿ ಮಂಜೂರು ವಿರುದ್ಧ ಅರ್ಜಿ
ನವದೆಹಲಿ: ಅಯೋಧ್ಯಾ ರಾಮಜನ್ಮಭೂಮಿ- ಬಾಬರಿ ಮಸೀದಿ ಭೂ ವಿವಾದ ಪ್ರಕರಣದಲ್ಲಿ ಮುಸ್ಲಿಮರಿಗೆ ಪರ್ಯಾಯ ನಿವೇಶನವಾಗಿ ಎಕರೆ ಭೂಮಿ ಮಂಜೂರು ಮಾಡುವಂತೆ ಮಾಡಲಾಗಿರುವ ನವಂಬರ್ ೯ರ ಆದೇಶವನ್ನು ಪ್ರಶ್ನಿಸಿ ಅಖಿಲ ಭಾರತ ಹಿಂದೂ ಮಹಾಸಭಾ 2019 ಡಿಸೆಂಬರ್ 09ರ ಸೋಮವಾರ ಸುಪ್ರೀಂಕೋರ್ಟಿನಲ್ಲಿ ಪುನರ್ ಪರಿಶೀಲನಾ ಅರ್ಜಿಯನ್ನು ದಾಖಲಿಸಿತು.

ಮುಸ್ಲಿಮ್ ಕಕ್ಷಿದಾರರು ಎಂದೂ ಪರ್ಯಾಯ ನಿವೇಶನ ನೀಡುವಂತೆ ಪ್ರಾರ್ಥಿಸಿಲ್ಲ, ಆದ್ದರಿಂದ ಪೀಠವು ಮುಸ್ಲಿಮರಿಗೆ ಪರ್ಯಾಯ ಭೂಮಿ ಮಂಜೂರು ಮಾಡುವಲ್ಲಿ ಕಕ್ಷಿದಾರರ ಪ್ರಾರ್ಥನೆಯನ್ನು ಮೀರಿ ಮುಂದುವರೆಯಬಾರದಾಗಿತ್ತು ಎಂದು ವಕೀಲ ವಿಷ್ಣು ಶಂಕರ್ ಜೈನ್ ಮೂಲಕ ಸಲ್ಲಿಸಿದ ಪುನರ್ ಪರಿಶೀಲನಾ ಅರ್ಜಿಯಲ್ಲಿ ಹಿಂದೂ ಮಹಾಸಭಾವು ಪ್ರತಿಪಾದಿಸಿತು.

ಹಿಂದೂಗಳು ೧೯೩೪, ೧೯೪೯ ಮತ್ತು ೧೯೯೨ರಲ್ಲಿ ಕೆಲವು ತಪ್ಪು ಮಾಡಿದ್ದಾರೆಂಬ ನೆಲೆಯಲ್ಲಿ, ಸಂತೈಸುವ ಸಲುವಾಗಿ ಹಿಂದೂಗಳ ಧಾರ್ಮಿಕ ಸ್ಥಳವನ್ನು ಧ್ವಂಸಗೊಳಿಸಿದವರಿಗೆ ಇಂತಹ ಅಕ್ರಮ ಕೃತ್ಯ ಎಸಗಿದ್ದಕ್ಕಾಗಿ ಎಕರೆ ಭೂಮಿ ಮಂಜೂರು ಮಾಡಬಾರದಾಗಿತ್ತುಎಂದು ಅರ್ಜಿ ಹೇಳಿತು.

ಕಕ್ಷಿದಾರರು ಕೇಳದೇ ಇದ್ದ ಪರಿಹಾರವನ್ನು ನೀಡಲು ೧೪೨ನೇ ವಿಧಿಯ ಅಡಿಯಲ್ಲಿ ಸುಪ್ರೀಂಕೋರ್ಟ್ ತನ್ನ ಅಧಿಕಾರಗಳನ್ನು ಚಲಾಯಿಸಬಾರದಾಗಿತ್ತು ಎಂದು ಅರ್ಜಿದಾರರು ಹೇಳಿದರು. ೧೪೨ನೇ ವಿಧಿಯು ಸುಪ್ರೀಂಕೋರ್ಟಿಗೆ ಸಂಪೂರ್ಣ ನ್ಯಾಯ ಒದಗಿಸಲು ಯಾವುದೇ ಆದೇಶ ನೀಡುವ ಅಧಿಕಾರವನ್ನು ನೀಡಿದೆ.

ಜಮೀಯತ್-ಉಲೇಮಾ- ಹಿಂದ್ ಸೇರಿದಂತೆ ಮುಸ್ಲಿಮ್ ಕಕ್ಷಿದಾರರು ಮತ್ತು ಆಲ್ ಇಂಡಿಯಾ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿಯ ಬೆಂಬಲದೊಂದಿಗೆ ವೈಯಕ್ತಿಕ ಅರ್ಜಿದಾರರು ಈ ಮೊದಲೇ ತೀರ್ಪಿನ ವಿರುದ್ಧ ತಮ್ಮ ಪುನರ್ ಪರಿಶೀಲನಾ ಅರ್ಜಿಗಳನ್ನು ಸಲ್ಲಿಸಿದ್ದರು.

ಭಾರತದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯಿ ನೇತೃತ್ವದ ಸುಪ್ರೀಂಕೋರ್ಟಿನ ಪಂಚ ಸದಸ್ಯ ಸಂವಿಧಾನ ಪೀಠವು ನವೆಂಬರ್ ೯ರಂದು ನೀಡಿದ ತನ್ನ ತೀರ್ಪಿನಲ್ಲಿ .೭೭ ಎಕರೆ ವಿವಾದಿತ ಭೂಮಿಯನ್ನು ರಾಮಲಲ್ಲಾ ವಿರಾಜಮಾನ್ಗೆ (ಬಾಲರಾಮನಿಗೆ) ನೀಡಿದ್ದಲ್ಲದೆ, ಪರ್ಯಾಯ ಮಸೀದಿ ನಿರ್ಮಾಣಕ್ಕಾಗಿ ಮುಸ್ಲಿಮರಿಗೆ ಎಕರೆ ಭೂಮಿಯನ್ನು ಮಂಜೂರು ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಆಜ್ಞಾಪಿಸಿತ್ತು.

ರಾಮಮಂದಿರ ನಿರ್ಮಾಣ ಮತ್ತು ವಿವಾದಿತ ನಿವೇಶನದ ನಿರ್ವಹಣೆಗಾಗಿ ಟ್ರಸ್ಟ್ ಒಂದನ್ನು ರಚಿಸುವಂತೆಯೂ ಕೇಂದ್ರ ಸರ್ಕಾರಕ್ಕೆ ನ್ಯಾಯಾಲಯ ಆದೇಶ ನೀಡಿತ್ತು.

ವಿವಾದಿತ ನಿವೇಶನದಲ್ಲಿ ಶಾಸನಬದ್ಧವಾದ ಮಸೀದಿ ಇತ್ತು ಎಂಬುದಾಗಿ ಸುಪ್ರೀಂಕೋರ್ಟ್ ಪೀಠ ಹೇಳಿದ್ದನ್ನು ಅರ್ಜಿದಾರರು ಪ್ರಶ್ನಿಸಿದ್ದಾರೆ. ವಿವಾದಿತ ನಿವೇಶನದಲ್ಲಿ ರಾಮಲಲ್ಲಾ ಪೂಜೆ ಹಲವಾರು ಅನಾದಿ ಕಾಲದಿಂದ ನಡೆದುಬಂದಿತ್ತು ಮತ್ತು ಸ್ಥಳ ರಾಮಲಲ್ಲಾ ದೇವರಿಗೇ ಸೇರಿದ್ದು ಎಂದು ಅರ್ಜಿ ಪ್ರತಿಪಾದಿಸಿದೆ.

ವಿವಾದಿತ ಭೂಮಿಯ ಹಕ್ಕು ಮತ್ತು ಸ್ವಾಮ್ಯ ಯಾವಾಗಲೂ ರಾಮಲಲಾ ದೇವರಲ್ಲೇ ಇತ್ತು. ಸ್ಥಳಕ್ಕೆ ಸಂಬಂಧಿಸಿದಂತೆ ಕಾನೂನುಬದ್ಧವಾದ ವಕ್ಫ್ ನ್ನು ಎಂದೂ ರಚಿಸಿರಲೇ ಇಲ್ಲ  ಎಂದೂ ಹಿಂದೂ ಮಹಾಸಭಾ ತನ್ನ ಅರ್ಜಿಯಲ್ಲಿ ಹೇಳಿತು.
ಹೀಗಾಗಿ ತೀರ್ಪಿನಲ್ಲಿಮಸೀದಿಎಂಬುದಾಗಿ ಮಾಡಲಾಗಿರುವ ಉಲ್ಲೇಖಗಳನ್ನುವಿವಾದಿತ ರಚನೆಎಂಬುದಾಗಿ ಬದಲಾಯಿಸಬೇಕು ಎಂದೂ ಅರ್ಜಿ ಪ್ರಾರ್ಥಿಸಿತು.
೧೯೪೯ ಮತ್ತು ೧೯೯೨ರಲ್ಲಿ ಮಾಡಿದ ಕೃತ್ಯಗಳಿಗಾಗಿ ಹಿಂದೂಗಳ ವಿರುದ್ಧ ವ್ಯಕ್ತ ಪಡಿಸಿದ ಕೆಲವು ಅಭಿಪ್ರಾಯಗಳನ್ನು ಕಿತ್ತು ಹಾಕಬೇಕು ಎಂಬುದಾಗಿಯೂ ಅರ್ಜಿದಾರರು ಕೋರಿದ್ದಾರೆ. ೧೯೪೯ರಲ್ಲಿ ಮಸೀದಿಯ ಒಳಗೆ ವಿಗ್ರಹಗಳನ್ನು ಇರಿಸಿದ್ದು ಮತ್ತು ೧೯೯೨ರಲ್ಲಿ ಮಸೀದಿಯನ್ನು ನಾಶಪಡಿಸಿದ್ದು ಅಕ್ರಮ ಎಂಬುದಾಗಿ ಸುಪ್ರೀಂಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿತ್ತು.

ಏನಿದ್ದರೂ ೧೯೪೯ ಮತ್ತು ೧೯೯೨ರ ಕೃತ್ಯಗಳ ಬಗೆಗಿನ ತಮ್ಮ ಸ್ಥಾನವನ್ನು ಸ್ಪಷ್ಟ ಪಡಿಸುವಂತೆ ಹಿಂದೂಗಳು ಎಂದೂ ಮನವಿ ಮಾಡಿರಲಿಲ್ಲ ಎಂದು ಹಿಂದೂ ಮಹಾಸಭಾ ಪ್ರತಿಪಾದಿಸಿದೆ. ಕಾರಣದಿಂದ ತೀರ್ಪಿನಲ್ಲಿ ಹಿಂದೂಗಳ ವಿರುದ್ಧದ ಅಭಿಪ್ರಾಯಗಳನ್ನು ಕಿತ್ತು ಹಾಕಬೇಕು ಎಂದು ಮಹಾಸಭಾ ಕೋರಿತು.

No comments:

Advertisement