My Blog List

Wednesday, December 25, 2019

ಭಾರತದ ಪ್ರಪ್ರಥಮ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ (ಸಿಡಿಎಸ್) ನೇಮಕಕ್ಕೆ ಸಂಪುಟ ಅಸ್ತು

ಭಾರತದ ಪ್ರಪ್ರಥಮ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ (ಸಿಡಿಎಸ್) ನೇಮಕಕ್ಕೆ ಸಂಪುಟ ಅಸ್ತು
ನವದೆಹಲಿ: ಭಾರತದ ಪ್ರಪ್ರಥಮ ರಕ್ಷಣಾ ಸಿಬ್ಬಂದಿ ಮುಖ್ಯಸ್ಥರ (ಸಿಡಿಎಸ್) ನೇಮಕಕ್ಕೆ ಕೇಂದ್ರ ಸಚಿವ ಸಂಪುಟವು ಮಂಗಳವಾರ ದಾರಿ ಸುಗಮಗೊಳಿಸಿತು. ರಕ್ಷಣಾ ಸಿಬ್ಬಂದಿ ಮುಖ್ಯಸ್ಥರು (ಸಿಡಿಎಸ್) ನಾಲ್ಕು ಸ್ಟಾರ್ ಜನರಲ್ ಆಗಿರಲಿದ್ದು, ರಕ್ಷಣಾ ಸಚಿವಾಲಯದಲ್ಲಿ ಸೇನಾ ವ್ಯವಹಾರಗಳ ಇಲಾಖೆಯ ಮುಖ್ಯಸ್ಥರಾಗಲಿದ್ದಾರೆ ಎಂದು ಕೇಂದ್ರ ಸಚಿವ ಪ್ರಕಾಶ ಜಾವಡೇಕರ್ ಅವರು 2019 ಡಿಸೆಂಬರ್ 24ರ ಮಂಗಳವಾರ ಇಲ್ಲಿ ಪ್ರಕಟಿಸಿದರು.

ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಾವಡೇಕರ್ ಅವರುಸಿಡಿಎಸ್ ನೇಮಕಾತಿಯು ಭಾರತದ ಉನ್ನತ ರಕ್ಷಣಾ ನಿರ್ವಹಣೆಯಲ್ಲಿ ಪ್ರಮುಖ ಸುಧಾರಣೆಯಾಗಿದೆಎಂದು ಹೇಳಿದರು. ಸಿಡಿಎಸ್ ಅವರು ಸೇವಾ ಮುಖ್ಯಸ್ಥರಿಗೆ ಸಮಾನವಾದ ವೇತನ ಮತ್ತು ಭತ್ಯೆಗಳನ್ನು ಪಡೆಯಲಿದ್ದಾರೆ.

ಚೊಚ್ಚಲ ಸಿಡಿಎಸ್ ಹೆಸರನ್ನು ಸರ್ಕಾರ ಇನ್ನೂ ಪ್ರಕಟಿಸಿಲ್ಲವಾದರೂ, ಸೇನಾ ದಂಡನಾಯಕ ಬಿಪಿನ್ ರಾವತ್ ಹೆಸರು ಹುದ್ದೆಗೆ ಮುಂಚೂಣಿ ಹರಿದಾಡುತ್ತಿದೆ. ಅವರು ಸೇನಾ ಮುಖ್ಯಸ್ಥರಾಗಿ ಡಿಸೆಂಬರ್ ೩೧ರಂದು ನಿವೃತ್ತರಾಗಲಿದ್ದಾರೆ.

ಸಿಡಿಎಸ್ ಅವರು ಮೂರೂ (ಭೂ, ವಾಯು, ಜಲ) ಸೇವಾ ಮುಖ್ಯಸ್ಥರಿಗೆ ಮಾರ್ಗದರ್ಶನ ಮಾಡಲಿದ್ದಾರೆ ಮತ್ತು ಘರ್ಷಣೆಗಳ ವೇಳೆಯಲ್ಲಿ ಹೊಸ ಆದೇಶಗಳನ್ನು ನೀಡಬಹುದು.

ಪ್ರಧಾನಿ ನರೇಂದ್ರ ಮೋದಿ ಅವರಿಂದ ನೇಮಕಗೊಂಡ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ನೇತೃತ್ವದ ಅನುಷ್ಠಾನ ಸಮಿತಿಯು ಸಿಡಿಎಸ್ಗಾಗಿ ಚಾರ್ಟರ್ನ್ನು ಸಿದ್ಧ ಪಡಿಸಿದ್ದು ಸಿಡಿಎಸ್ ಅವರು ಸರ್ಕಾರಕ್ಕೆ ಸೇನಾ ವಿಷಯಗಳಲ್ಲಿ ಸಲಹೆ ನೀಡಲಿರುವ ಏಕ ವ್ಯಕ್ತಿಯಾಗಲಿದ್ದಾರೆ ಎಂದು ವಿವರಿಸಿದೆ. ಕೆ. ಸುಬ್ರಮಣ್ಯಮ್ ನೇತೃತ್ವದ ಕಾರ್ಗಿಲ್ ಪುನರ್ ಪರಿಶೀಲನಾ ಸಮಿತಿಯು ಮಾಡಿದ ಶಿಫಾರಸಿಗೆ ಅನುಗುಣವಾಗಿ ನೇಮಕಾತಿ ಪ್ರಕ್ರಿಯೆ ನಡೆದಿದೆ.

ಕೆ
. ಸುಬ್ರಹ್ಮಣ್ಯಮ್ ಸಮಿತಿಯು ೨೦೦೦ನೇ ಇಸವಿಯ ಫೆಬ್ರುವರಿಯಲ್ಲಿ ಸಂಸತ್ತಿಗೆ ತನ್ನ ವರದಿಯನ್ನು ಸಲ್ಲಿಸಿತ್ತು. ಸುಬ್ರಹ್ಮಣ್ಯಮ್ ಅವರು ಭಾರತದ ಹಾಲಿ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಅವರ ಅವರ ತಂದೆ.

ಸಿಡಿಎಸ್
ನೇಮಕಾತಿ ಎಂದರೆ ರಾಜಕೀಯ ನಾಯಕತ್ವಕ್ಕೆ  ಏಕ ಬಿಂದು ವೃತ್ತಿ ನಿರತ ಸೇನಾ ಸಲಹೆ ನೀಡುವ ವ್ಯವಸ್ಥೆ ಎಂದು ಕಾರ್ಗಿಲ್ ಪುನರ್ ಪರಿಶೀಲನಾ ಸಮಿತಿ (ಕೆಆರ್ಸಿ) ಶಿಫಾರಸು ಮಾಡಿತ್ತು.

 ೧೯೯೯ರ ಜುಲೈ ೨೬ರಂದು ಭಾರತವು ವೈರಿಯನ್ನು ಸಂಪೂರ್ಣವಾಗಿ ಕಾರ್ಗಿಲ್ ನಿಂದ ತೆರವುಗೊಳಿಸಲಾಗಿದೆ ಎಂದು ಪ್ರಕಟಿಸಿದ ಬೆನ್ನಲ್ಲೇ ನಿಟ್ಟಿನಲ್ಲಿ ನಾಲ್ಕು ಸದಸ್ಯರ ಸಮಿತಿಯನ್ನು ನೇಮಿಸಲಾಗಿತ್ತು. ಸಮಿತಿಯು ಭಾರತದ ಆಯಕಟ್ಟಿನ ಎತ್ತರ ಪ್ರದೇಶದಲ್ಲಿ ಪಾಕಿಸ್ತಾನಿ ಸೈನಿಕರು ನುಸುಳಲು ಕಾರಣವಾದ ಲೋಪದೋಷಗಳ ಬಗ್ಗೆಪರಿಶೀಲಿಸಿ ತನ್ನ ವರದಿಯನ್ನು ಸಲ್ಲಿಸಿತ್ತು.

ಕಾರ್ಗಿಲ್
ಸಮರದ ಬಳಿಕ, ಸಚಿವರ ತಂಡ (ಜಿಒಎಂ) ಕೂಡಾ ಆಯಕಟ್ಟಿನ ಪಡೆಗಳನ್ನು ನಿರ್ವಹಿಸುವ ಮತ್ತು ನಿಯಂತ್ರಿಸುವ, ರಕ್ಷಣಾ ಯೋಜನೆಯ ಆದ್ಯತೆಯ ಖಾತರಿ ನೀಡುವ ಮತ್ತು ಸಶಸ್ತ್ರ ಪಡೆಗಳ ಮಧ್ಯೆ ಏಕತೆಯನ್ನು ತರಬಲ್ಲಂತಹ ಸಿಡಿಎಸ್ ಸೃಷ್ಟಿಗೆ ಬಲವಾದ ಶಿಫಾರಸು ಮಾಡಿತ್ತು.

ಆದರೆ
, ಬಳಿಕದ ಸರ್ಕಾರಗಳು ನಿರಂತರವಾಗಿ ವಿಚಾರದಲ್ಲಿ ರಾಜಕೀಯ ಸಹಮತ ಮೂಡಿಸುವಲ್ಲಿ ವಿಫಲವಾದವು. ಆದಾಗ್ಯೂ ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್ ೧೫ರಂದು ಮೂರೂ ಸಶಸ್ತ್ರ ಪಡೆಗಳ ಪರಿಣಾಮಕಾರಿ ಸಮನ್ವಯಕ್ಕಾಗಿ ಸಿಡಿಎಸ್ ಹುದ್ದೆಯನ್ನು ಸೃಷ್ಟಿಸಲಾಗುವುದು ಎಂದು ಪ್ರಕಟಿಸಿದ್ದರು.

ಸಂಪನ್ಮೂಲ ಗರಿಷ್ಠಗೊಳಿಸುವಿಕೆ, ಏಕತೆ ಮತ್ತು ಸೇನೆಯ ಸಾಮರ್ಥ್ಯ ವಿಸ್ತರಣೆ ನಿಟ್ಟಿನಲ್ಲಿ ಸಿಡಿಎಸ್ ಸೃಷ್ಟಿಯು ಆಟ ಪರಿವರ್ತಕವಾಗಲಿದೆ. ಹೊಸ ಪಾತ್ರವಾಗಿರುವುದರಿಂದ ಪ್ರಾರಂಭದಲ್ಲಿ ಕೆಲವು ಸಣ್ಣ ಪುಟ್ಟ ಸಮಸ್ಯೆಗಳು ಎದುರಾಗಬಹುದಾದರೂ, ಕ್ರಮೇಣ ಸ್ಥಿತಿ ಸುಧಾರಿಸುವುದು. ಇತರ ಸೇನೆಗಳು ಕೂಡಾ ಇಂತಹ ಸವಾಲುಗಳನ್ನು ಎದುರಿಸಿದ್ದವು. ಸಿಡಿಎಸ್ ಆಡಳಿತ ಶಾಹಿಯ ಜೊತೆಗೆ ಉತ್ತಮ ಸಮನ್ವಯ ಸೃಷ್ಟಿಸಲಿದೆಎಂದು ಲೆಫ್ಟಿನೆಂಟ್ ಜನರಲ್ ಸತೀಶ್ ದುವಾ (ನಿವೃತ್ತ) ಹೇಳಿದರು. ದುವಾ ಅವರು ೨೦೧೮ರವರೆಗೆ ಮೂರೂ ಪಡೆಗಳ ವ್ಯವಹಾರಗಳನ್ನು ನಿಭಾಯಿಸಿದ್ದ ಅತ್ಯಂತ ಹಿರಿಯ ಸೇನಾ ಅಧಿಕಾರಿ.

ದುವಾ
ಅವರು ೨೦೧೮ರ ಅಕ್ಟೋಬರ್ ೩೧ರಂದು ಸಮಗ್ರ ರಕ್ಷಣಾ ಸಿಬ್ಬಂದಿ ಮುಖ್ಯಸ್ಥೃರಾಗಿ ನಿವೃತ್ತರಾಗಿದ್ದರು.

ನಾಲ್ಕು
ನಕ್ಷತ್ರಗಳನ್ನು ಹೊಂದಿದ ಸಿಡಿಎಸ್ ಅವರು ಸಮಾನರಲ್ಲಿ ಮೊದಲಿಗರಾಗಲಿದ್ದು, ಭವಿಷ್ಯದ ಭಾರತೀಯ ಸೇನೆಯ ಅಗತ್ಯಗಳ ಆದ್ಯತೆ ನಿರ್ಧರಿಸುವರು. ಮೂರೂ ಸೇವೆಗಳಿಗೆ ಸಂಪನ್ಮೂಲ ಹಂಚಿಕೆ ಮಾಡುವರು ಮತ್ತು ಕೆಲಸಗಳನ್ನು ನಿಯೋಜಿಸುವರು.

ಮೂರೂ
ಸೇವೆಗಳ ಮಧ್ಯೆ ಸಹಕಾರ ಸಮನ್ವಯ ಸಾಧಿಸುವ ಸಲುವಾಗಿ ಪ್ರಸ್ತುತ ಇರುವ ಸಿಬ್ಬಂದಿ ಸಮಿತಿಯ ಮುಖ್ಯಸ್ಥರ ಅಧ್ಯಕ್ಷ (ಸಿಒಎಸ್ ಸಿ) ಸ್ಥಾನವು ಅತ್ಯಂತ ದುರ್ಬಲ ವ್ಯವಸ್ಥೆಯಾಗಿದ್ದು ಒತ್ತಡಗಳಿಗೆ ಒಳಗಾಗುವ ಸಾಧ್ಯತೆ ಇತ್ತು.

No comments:

Advertisement