My Blog List

Saturday, February 8, 2020

ಅರವಿಂದ ಕೇಜ್ರಿವಾಲ್‌ಗೆ ಮತ್ತೆ ದೆಹಲಿ ಗದ್ದುಗೆ?

ಅರವಿಂದ ಕೇಜ್ರಿವಾಲ್‌ಗೆ ಮತ್ತೆ ದೆಹಲಿ ಗದ್ದುಗೆ?
ಆಪ್ ಮರಳಿ ಅಧಿಕಾರಕ್ಕೆ: ಮತಗಟ್ಟೆ ಸಮೀಕ್ಷೆಗಳ ಭವಿಷ್ಯ
ನವದೆಹಲಿ: ಇಡೀ ದೇಶದ ಗಮನ ಸೆಳೆದಿರುವ ಪ್ರತಿಷ್ಠಿತ ದೆಹಲಿ ವಿಧಾನಸಭಾ ಚುನಾವಣೆಯ ಮತದಾನ 2020 ಫೆಬ್ರುವರಿ 08ರ ಶನಿವಾರ  ಮುಕ್ತಾಯಗೊಳ್ಳುತ್ತಿದ್ದಂತೆಯೇ ರಾಷ್ಟ್ರ ರಾಜಧಾನಿಯ ಗದ್ದುಗೆಗಾಗಿ ರಾಜಕೀಯ ಪಕ್ಷಗಳ ನಡುವೆ ನಡೆಯುತ್ತಿದ್ದ ಹಣಾಹಣಿ  ನಿರ್ಣಾಯಕ ಹಂತವನ್ನು ತಲುಪಿದ್ದು, ಆಮ್ ಆದ್ಮಿ ಪಕ್ಷ (ಎಎಪಿ-ಆಪ್) ಮರಳಿ ಅಧಿಕಾರಕ್ಕೆ ಏರುವುದಾಗಿ ಮತದಾನೋತ್ತರ ಸಮೀಕ್ಷೆಗಳು ಭವಿಷ್ಯ ನುಡಿದವು.

ಆಡಳಿತಾರೂಢ ಆಮ್ ಆದ್ಮಿ ಪಕ್ಷ ಹಾಗೂ ಭಾರತೀಯ ಜನತಾ ಪಕ್ಷದ ನಡುವೆ ನೇರ ಹಣಾಹಣಿ ಏರ್ಪಟ್ಟಿದ್ದ ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷವೇ ಮರಳಿ ಅಧಿಕಾರಕ್ಕೇರುವುದಾಗಿ ಚುನಾವಣಾ ಪೂರ್ವ ಮತದಾನ ಸಮೀಕ್ಷೆಗಳು ತಿಳಿಸಿದ್ದವು. ಇದೀಗ ಮತಗಟ್ಟೆ ಸಮೀಕ್ಷೆಯ ಬಳಿವೂ ಇದೇ ಅಭಿಪ್ರಾಯ ಹೊರಹೊಮ್ಮಿತು.

ಹಾಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರೇ ಮುಖ್ಯಮಂತ್ರಿಯಾಗಿ ಪುನರಾಯ್ಕೆಗೊಳ್ಳುವ ನಿರೀಕ್ಷೆಯನ್ನೂ ಮತಗಟ್ಟೆ ಸಮೀಕ್ಷೆಗಳು ವ್ಯಕ್ತ ಪಡಿಸಿದವು.

೭೦ ಸ್ಥಾನಗಳಿಗಾಗಿ ಮುಕ್ತಾಯಗೊಂಡ ಮತದಾನದಲ್ಲಿ ದೆಹಲಿಯ ಮತದಾರರು ಆಮ್ ಆದ್ಮಿ, ಬಿಜೆಪಿ, ಕಾಂಗ್ರೆಸ್, ಇತರೇ ಸಣ್ಣ ಪಕ್ಷಗಳು ಮತ್ತು ಸ್ವತಂತ್ರ ಅಭ್ಯರ್ಥಿಗಳೂ ಸೇರಿದಂತೆ ಒಟ್ಟು ೬೭೨ ಅಭ್ಯರ್ಥಿಗಳ ಭವಿಷ್ಯವನ್ನು ಇವಿಎಂ ಯಂತ್ರದಲ್ಲಿ ಭದ್ರಪಡಿಸಿದ್ದಾರೆ. ದೆಹಲಿ ವಿಧಾನಸಭಾ ಚುನಾವಣೆಯ ಅಧಿಕೃತ ಫಲಿತಾಂಶ  2020 ಫೆಬ್ರುವರಿ ೧೧ರ ಮಂಗಳವಾರ ಹೊರಬೀಳಲಿದೆ.
೭೦ ಸ್ಥಾನಬಲದ ದೆಹಲಿ ವಿಧಾನಸಭೆಯಲ್ಲಿ ಸರಳ ಬಹುಮತಕ್ಕೆ ೩೬ ಸ್ಥಾನಗಳ ಅಗತ್ಯವಿದೆ.

ಬಹುತೇಕ
  ಮತದಾನೋತ್ತರ ಸಮೀಕ್ಷೆಗಳ ಪ್ರಕಾರ ಕೇಜ್ರಿವಾಲ್ ನಾಯಕತ್ವದ ಆಮ್ ಆದ್ಮಿ ಪಕ್ಷ ಸ್ಪಷ್ಟ ಬಹುಮತವನ್ನು ಪಡೆಯುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

೨೦೧೫ರ ವಿಧಾನಸಭಾ ಚುನಾವಣೆಯ ಫಲಿತಾಂಶದಲ್ಲಿ ೬೭ ಸ್ಥಾನಗಳನ್ನು ಗೆದ್ದಿದ್ದ ಆಮ್ ಆದ್ಮಿ ಪಕ್ಷವು ಪ್ರಚಂಡ  ಬಹುಮತದೊಂದಿಗೆ ದೆಹಲಿಯ ಅಧಿಕಾರದ ಗದ್ದುಗೆಯನ್ನೇರಿತ್ತು. ಭಾರತೀಯ ಜನತಾ ಪಕ್ಷ ಕೇವಲ ಸ್ಥಾನಗಳಿಗೆ ತೃಪ್ತಿ ಪಟ್ಟುಕೊಂಡಿದ್ದರೆ ಸುದೀರ್ಘ ಕಾಲ ದೆಹಲಿ ರಾಜ್ಯದಲ್ಲಿ ಆಳ್ವಿಕೆ ನಡೆಸಿದ್ದ ಕಾಂಗ್ರೆಸ್ ಶೂನ್ಯ ಸಂಪಾದನೆ ಮಾಡಿತ್ತು.

ಇದೀಗ ಶನಿವಾರ ನಡೆದಿರುವ ಮತಗಟ್ಟೆ ಸಮೀಕ್ಷೆಗಳಲ್ಲಿ ಬಿಜೆಪಿಯ ಬಲ ಸುಧಾರಿಸಿದರೂ, ಅಧಿಕಾರ ಪಡೆಯುವಲ್ಲಿ ಪಕ್ಷ ಮುಗ್ಗರಿಸಲಿದೆ ಎಂದು ಹೇಳಲಾಗಿದ್ದು, ತನ್ನ ಬಲವನ್ನು ಕಳೆದುಕೊಂಡರೂ ಆಮ್ ಆದ್ಮಿ ಪಕ್ಷವು ಮರಳಿ ಅಧಿಕಾರವನ್ನು ಹಿಡಿಯಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಯಾವ ಸಮೀಕ್ಷೆ ಏನು ಹೇಳುತ್ತದೆ?

ಟೈಮ್ಸ್ ನೌ-.ಪಿ.ಎಸ್..ಎಸ್ ನಡೆಸಿದ ಮತದಾನೋತ್ತರ ಸಮೀಕ್ಷೆಯಲ್ಲಿ ಆಮ್ ಆದ್ಮಿ ಪಕ್ಷ ೪೪ ಸ್ಥಾನಗಳನ್ನು ಗೆಲ್ಲಬಹುದೆಂದು ಅಂದಾಜು ಮಾಡಲಾಗಿದೆ. ಕೇಜ್ರಿವಾಲ್ ಅವರಿಗೆ ಭರ್ಜರಿ ಸ್ಪರ್ಧೆ ನೀಡಿರುವ ಭಾರತೀಯ ಜನತಾ ಪಕ್ಷ ಬಾರಿ ೨೬ ಸ್ಥಾನಗಳಲ್ಲಿ ಗೆಲ್ಲುವ ನಿರೀಕ್ಷೆ ಇದೆ ಎಂದು ಸಮೀಕ್ಷೆ ಹೇಳಿದೆ. ಸಮೀಕ್ಷೆಯ ಪ್ರಕಾರ ಕಾಂಗ್ರೆಸ್ ಬಾರಿಯೂ ಶೂನ್ಯ ಸಂಪಾದನೆಯನ್ನೇ ಮಾಡಲಿದೆ.

ರಿಪಬ್ಲಿಕ್-ಜನ್ ಕೀ ಬಾತ್ ನಡೆಸಿರುವ ಮತದಾನೋತ್ತರ ಸಮೀಕ್ಷೆಯ ಪ್ರಕಾರ ಆಮ್ ಆದ್ಮಿ ಪಕ್ಷ ೪೮ ರಿಂದ ೬೧ ಸ್ಥಾನಗಳಲ್ಲಿ ಜಯಗಳಿಸುವ ನಿರೀಕ್ಷೆಯಿದ್ದರೆ, ಭಾರತೀಯ ಜನತಾ ಪಕ್ಷ ರಿಂದ ೨೧ ಸ್ಥಾನಗಳಲ್ಲಿ ಜಯಗಳಿಸುವ ನಿರೀಕ್ಷೆ ಇದೆ ಇನ್ನು ಕಾಂಗ್ರೆಸ್ - ಸ್ಥಾನ ಗೆಲ್ಲಬಹುದು ಎಂದು ಎನ್ನಲಾಗಿದೆ.

ನ್ಯೂಸ್ ಎಕ್ಸ್-ನೇತಾ ಆಪ್ ನಡೆಸಿರುವ ಮತದಾನೋತ್ತರ ಸಮೀಕ್ಷೆಯಲ್ಲೂ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷವೇ ಅಧಿಕಾರಕ್ಕೇರುವ ಸಾಧ್ಯತೆಗಳಿವೆ. ಆಮ್ ಆದ್ಮಿ ಪಕ್ಷ ೫೦-೫೬ ಸ್ಥಾನಗಳನ್ನು ಗಳಿಸುವ ನಿರೀಕ್ಷೆಯಿದ್ದರೆ, ಭಾರತೀಯ ಜನತಾ ಪಕ್ಷ ೧೦-೧೪ ಸ್ಥಾನಗಳನ್ನು ಗೆಲ್ಲಬಹುದು ಎಂದು ಸಮೀಕ್ಷೆ ಹೇಳಿದೆ. ಕಾಂಗ್ರೆಸ್ ಪಕ್ಷ ಯಾವುದೇ ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆ ಇಲ್ಲ ಎಂದು ಸಮೀಕ್ಷೆ ಹೇಳಿದೆ.

ಪೋಲ್ ಆಫ್ ಪೋಲ್ಸ್ ಮತದಾನೋತ್ತರ ಸಮೀಕ್ಷಾ ಫಲಿತಾಂಶದಲ್ಲಿ ಆಮ್ ಆದ್ಮಿ ಪಕ್ಷಕ್ಕೆ ೫೧ ಸ್ಥಾನಗಳು ಸಿಗುವ ಸಾಧ್ಯತೆ ಇದೆ. ಭಾರತೀಯ ಜನತಾ ಪಕ್ಷ ೧೮ ಸ್ಥಾನಗಳಲ್ಲಿ ಗೆಲ್ಲುವ ನಿರೀಕ್ಷೆ ಇದ್ದರೆ, ಕಾಂಗ್ರೆಸ್ ಪಕ್ಷ ಕೇವಲ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಗಬಹುದು ಎಂದು ಸಮೀಕ್ಷೆ ತಿಳಿಸಿದೆ.

ಹಿಂದಿನ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಸ್ವಾತಂತ್ರ್ಯ ಹೋರಾಟಗಾರ ಅಣ್ಣಾ ಹಜಾರೆ ಸಂಘಟಿಸಿದ ಭ್ರಷ್ಟಾಚಾರ ವಿರೋಧಿ ಆಂದೋಲನದಿಂದ ಹುಟ್ಟಿದ "ಅಮ್ ಆದ್ಮಿ" ಪಕ್ಷ ತಾನು ಎದುರಿಸಿದ ಮೊದಲ ಚುನಾವಣೆಯಲ್ಲೇ ದೆಹಲಿಯ ಗದ್ದುಗೆಗೆ ಏರಿತ್ತು. ೨೦೧೫ರಲ್ಲಿ ನಡೆದ ವಿಧಾನಸಣಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷಕ್ಕೆ ದೆಹಲಿ ಮತದಾgರು ೭೦ ಕ್ಷೇತ್ರಗಳ ಪೈಕಿ ೬೭ ಕ್ಷೇತ್ರಗಳಲ್ಲಿ ಆಪ್ ಗೆ ಮಣೆ ಹಾಕಿದ್ದರು. ಆದರೆ, ಬಾರಿಯ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಆಮ್ ಆದ್ಮಿಗೆ ಪ್ರಬಲ ಪೈಪೋಟಿ ನೀಡುವ ಎಲ್ಲಾ ಸಾಧ್ಯತೆಯೂ ಇದೆ ಎನ್ನಲಾಗಿತ್ತು.

ಹಾಗಿದ್ದರೂ, ಕಳೆದ ಐದು ವರ್ಷದ ಆಡಳಿತ ಅವಧಿಯಲ್ಲಿ ಶಿಕ್ಷಣ ಕ್ಷೇತ್ರ ಸೇರಿದಂತೆ ದೆಹಲಿಯ ಮೂಲಭೂತ ಸೌಲಭ್ಯ ವಿಭಾಗದಲ್ಲಿ ಆಮ್ ಆದ್ಮಿ ಅಕ್ಷರಶಃ  ಕ್ರಾಂತಿಯನ್ನೇ ನಡೆಸಿದ್ದು, ಇದರ ಪರಿಣಾಮ ಮಧ್ಯಮ ವರ್ಗದ ಸಮಾಜ ಮತ್ತೊಮ್ಮೆ ಆಪ್ ಸರ್ಕಾರವನ್ನೇ ಬಯಸಿದೆ ಎಂದು ಮತಗಟೆ ಸಮೀಕ್ಷೆಗಳು ಹೇಳಿವೆ.

ವಿವಿಧ ಸಮೀಕ್ಷಾ ಸಂಸ್ಥೆಗಳ ಮತಗಟ್ಟೆ ಸಮೀಕ್ಷಾ ಫಲಿತಾಂಶ
ಟೈಮ್ಸ್ ನೌ : ಎಎಪಿ-೪೪, ಬಿಜೆಪಿ- ೨೬, ಕಾಂಗ್ರೆಸ್ -೦೦.
ಇಂಡಿಯಾ ನ್ಯೂಸ್ : ಎಎಪಿ- ೫೩-೫೭, ಬಿಜೆಪಿ- ೧೧-೧೭, ಕಾಂಗ್ರೆಸ್- ೦೦-೦೨
ರಿಪಬ್ಲಿಕ್ : ಎಎಪಿ -೪೮-೬೧, ಬಿಜೆಪಿ-೦೯-೨೧, ಕಾಂಗ್ರೆಸ್--
ಎಬಿಪಿ-ಸಿ ವೋಟರ್ : ಎಎಪಿ- ೪೯-೬೩, ಬಿಜೆಪಿ-: -೧೯, ಕಾಂಗ್ರೆಸ್: , ಇತರರು:
ಟೈಮ್ಸ್ ನೌ:-ಐಪಿಎಸ್‌ಒಎಸ್ : ಎಎಪಿ- ೪೪, ಬಿಜೆಪಿ- ೨೬, ಕಾಂಗ್ರೆಸ್- , ಇತರರು-
ಜನ್ ಕಿ ಬಾತ್: ಎಎಪಿ- ೫೫, ಬಿಜೆಪಿ- ೧೫, ಕಾಂಗ್ರೆಸ್- , ಇತರರು-
ನ್ಯೂಸ್ ಎಕ್ಸ್: ಎಎಪಿ- ೫೫, ಬಿಜೆಪಿ- ೧೪, ಕಾಂಗ್ರೆಸ್- , ಇತರರು-
ಸುದರ್ಶನ್ ನ್ಯೂಸ್: ಎಎಪಿ- ೪೨, ಬಿಜೆಪಿ- ೨೬, ಕಾಂಗ್ರೆಸ್- , ಇತರರು-
ಇಂಡಿಯಾ ನ್ಯೂಸ್ ನೇಷನ್: ಎಎಪಿ- ೫೫, ಬಿಜೆಪಿ- ೧೪, ಕಾಂಗ್ರೆಸ್- , ಇತರರು-
ಇಂಡಿಯಾ ಟಿವಿ: ಎಎಪಿ- ೪೪, ಬಿಜೆಪಿ- ೨೬, ಕಾಂಗ್ರೆಸ್- , ಇತರರು-
ಟಿವಿ೯-ಭಾರತ್ ವರ್ಷ್- ಸಿಸಿರೋ: ಎಎಪಿ- ೫೪, ಬಿಜೆಪಿ- ೧೫, ಕಾಂಗ್ರೆಸ್- ೦೧, ಇತರರು- ೦೦

No comments:

Advertisement