ಗ್ರಾಹಕರ ಸುಖ-ದುಃಖ

My Blog List

Monday, March 2, 2020

ಭಾರತಕ್ಕೂ ಅಡಿಯಿಟ್ಟ ಕೊರೋನಾವೈರಸ್

ಭಾರತಕ್ಕೂ  ಅಡಿಯಿಟ್ಟ ಕೊರೋನಾವೈರಸ್
ನವದೆಹಲಿ, ತೆಲಂಗಾಣದಲ್ಲಿ ಪ್ರಕರಣ ಖಚಿತ
ನವದೆಹಲಿ: ಕೊರೋನವೈರಸ್ ಇಬ್ಬರಿಗೆ ತಗುಲಿರುವುದು ಖಚಿತವಾಗಿದೆ ಎಂದು ಸರ್ಕಾರ 2020 ಮಾರ್ಚ್ 02ರ ಸೋಮವಾರ ಪ್ರಕಟಿಸುವುದರೊಂದಿಗೆ ಜಗತ್ತನ್ನೇ ನಡುಗಿಸುತ್ತಿರುವ ಮಾರಕ ವ್ಯಾಧಿ ಭಾರತಕ್ಕೂ ಅಡಿ ಇಟ್ಟಿತು.

ನವದೆಹಲಿ ಮತ್ತು ತೆಲಂಗಾಣದಿಂದ ವರದಿಯಾಗಿರುವ ಪ್ರಕರಣಗಳಲ್ಲಿ ಕೊರೋನಾವೈರಸ್ ಸೋಂಕು ತಗುಲಿರುವುದು ದೃಢ ಪಟ್ಟಿದೆ ಎಂದು ಎಂದು ಸರ್ಕಾರ ಸೋಮವಾರ ಹೇಳಿತು..

ಕೊರೋನಾವೈರಸ್ ಹರಡಿರುವ ರಾಷ್ಟ್ರಗಳಲ್ಲಿ ಭಾರತ ಐದನೇ ಸ್ಥಾನದಲ್ಲಿದೆ.

"ನವದೆಹಲಿಯಲ್ಲಿ ಮತ್ತು ತೆಲಂಗಾಣದಲ್ಲಿ ಕೋವಿಡ್-೧೯ ಖಚಿತಗೊಂಡಿರುವ ತಲಾ ಒಂದು ಪ್ರಕರಣ ವರದಿಯಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸೋಮವಾರ ಪ್ರಕಟಣೆಯಲ್ಲಿ ತಿಳಿಸಿತು.

"ದೆಹಲಿಯ ವ್ಯಕ್ತಿಯು ಇಟಲಿಯಿಂದ ಪ್ರಯಾಣಿಸಿದ್ದರೆ, ತೆಲಂಗಾಣದ ವ್ಯಕ್ತಿ ದುಬೈಯಿಂದ ಪ್ರಯಾಣ ಮಾಡಿದ್ದಾನೆ. ಅವರ ಪ್ರಯಾಣದ ಹೆಚ್ಚಿನ ವಿವರಗಳನ್ನು ತಿಳಿದುಕೊಳ್ಳಲಾಗುತ್ತಿದೆ ಆರೋಗ್ಯ ಸಚಿವಾಲಯ ಹೇಳಿತು.

ಇಬ್ಬರು ರೋಗಿಗಳ ದೇಹಸ್ಥಿತಿಯೂ ಸ್ಥಿರವಾಗಿದೆ. ಅವರ ಮೇಲೆ ಸೂಕ್ಷ್ಮ ನಿಗಾ ಇಡಲಾಗಿದೆ ಎಂದು ಸಚಿವಾಲಯ ಹೇಳಿತು.

ದೇಶದಲ್ಲಿ ಕೊರೋನವೈರಸ್ ಸೋಂಕು ಉಲ್ಬಣಗೊಂಡಿರುವ ಬಗೆಗಿನ ಸಂಖ್ಯೆಗಳನ್ನು ಇಟಲಿ ವರದಿ ಮಾಡಿದೆ.

ಕೇವಲ ೨೪ ಗಂಟೆಗಳಲ್ಲಿ ದೇಶದಲ್ಲಿ ಸೋಂಕು ಶಂಕಿತರ ಸಂಖ್ಯೆ ೫೦% ರಷ್ಟು ಅಂದರೆ ೧೬೯೪ ಕ್ಕೆ ಏರಿದೆ ಎಂದು ಇಟಲಿ  ಅಧಿಕಾರಿಗಳು ಪ್ರಕಟಿಸಿದ್ದಾರೆ. ಇನ್ನೂ ಐದು ಮಂದಿ ಸಾವನ್ನಪ್ಪಿದ್ದು, ಇದರಿಂದಾಗಿ ಸಾವಿನ ಸಂಖ್ಯೆ ೩೪ ಕ್ಕೆ ತಲುಪಿದೆ.

ಮೊದಲ ಮೂರು ಪ್ರಕರಣ: ಭಾರತದಲ್ಲಿ ಕೋವಿಡ್-೧೯ ಮೊದಲ ಮೂರು ಪ್ರಕರಣಗಳು, ಕೊರೋನಾವೈರಸ್ ಕೇಂದ್ರವಾದ, ಚೀನಾದ ವುಹಾನ್‌ನಿಂದ ಹಿಂದಿರುಗಿದ ಕೇರಳದ ವಿದ್ಯಾರ್ಥಿಗಳಲ್ಲಿ ಕಂಡು ಬಂದ ಬಗ್ಗೆ ವರದಿಯಾಗಿತ್ತು.

ಮೂರನೆಯ ಪ್ರಕರಣ ವರದಿಯಾದ ನಂತರ, ದಕ್ಷಿಣ ಭಾರತದ ಕೇರಳ ರಾಜ್ಯವು ಕಳೆದ ತಿಂಗಳು ವೈದ್ಯಕೀಯ ವಿಪತ್ತು ಘೋಷಣೆ ಮಾಡಿ, ಸಭೆ ಸಮಾರಂಭ, ವಿಹಾರಗಳಿಗೆ ನಿರ್ಬಂಧ ಹೇರಿತ್ತು.

ಉತ್ತರ ಕೇರಳದ ಕಾಸರಗೋಡಿನಲ್ಲಿ ಮೂರನೇ ರೋಗಿಯನ್ನು ಪತ್ತೆ ಮಾಡಿದ ನಂತರ ಫೆಬ್ರವರಿ ರಂದು ಕೇರಳ ವೈದ್ಯಕೀಯ ತುರ್ತುಸ್ಥಿತಿ  ಗುಂಡಿಯನ್ನು ಅದುಮಿತ್ತು. ಮೂವರು ವಿದ್ಯಾರ್ಥಿಗಳನ್ನು ಯಶಸ್ವಿಯಾಗಿ ನಿರ್ಬಂಧಿಸಿ, ಸೋಂಕುಮುಕ್ತಗೊಳಿಸಿದ ಕೇರಳವು  ವಿಪತು ಎಚ್ಚರಿಕೆಯನ್ನು ಹಿಂತೆಗೆದುಕೊಂಡಿತ್ತು.

ಬಳಿಕ ಮೂರೂ ಮಂದಿ ವಿದ್ಯಾರ್ಥಿಗಳನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿತ್ತು.
ಚೀನಾದಿಂದ ಸ್ಥಳಾಂತರ: ಭಾರತವು ಕೊರೋನಾವೈರಸ್ ಸೋಂಕು ಪೀಡಿತ ಚೀನಾದಿಂದ ನೂರಾರು ಮಂದಿ ಭಾರತೀಯರನ್ನು ಸ್ಥಳಾಂತರಿಸಿ ಭಾರತಕ್ಕೆ ವಾಪಸ್ ಕರೆತಂದಿದೆ.

ಜೊತೆಗೆ ದೇಶಾದ್ಯಂತ ವಿಮಾನ ನಿಲ್ದಾಣಗಳಲ್ಲಿ ದೇಶಕ್ಕೆ ಬರುವ ಎಲ್ಲರ ಮೇಲೆ ಕಣ್ಣಿಟ್ಟಿದೆ. ಹಲವಾರು ನಗರಗಳಲ್ಲಿನ ವಿವಿಧ ಆಸ್ಪತ್ರೆಗಳಲ್ಲಿ ಅನೇಕ ಶಂಕಿತರನ್ನು ಎಕಾಂಗಿ ವಾಸ ವಾರ್ಡುಗಳಿಗೆ ಸೇರಿಸಿ ನಿರ್ಬಂಧದಲ್ಲಿ ಇರಿಸಲಾಗಿದೆ.

sಬ್ರುವರಿ ಮೊದಲ ವಾರದಲ್ಲಿ, ಭಾರತವು ತನ್ನ ೬೦೦ ಕ್ಕೂ ಹೆಚ್ಚು ನಾಗರಿಕರನ್ನು ಮಾರಕ ವ್ಯಾಧಿಯ ಕೇಂದ್ರವಾದ ವುಹಾನ್ ನಗರದಿಂದ ಸ್ಥಳಾಂತರಿಸಿದೆ.

ದೆಹಲಿಯಲ್ಲಿ, ಕೊರೋನಾವೈರಸ್ ಭೀತಿಯ ಮಧ್ಯೆ ಚೀನಾದಿಂದ ಭಾರತಕ್ಕೆ ಸ್ಥಳಾಂತರಿಸಲಾಗುತ್ತಿರುವ ಎರಡನೇ ತಂಡದ ಮೇಲೆ ಹೆಚ್ಚಿನ ನಿಗಾ ಇಡುತ್ತಿದ್ದೇವೆ ಎಂದು ವೈದ್ಯರು ಹೇಳಿದ್ದಾರೆ.

೨೦೨೦ರ ಫೆಬ್ರುವರಿ ೨೭ರಂದು ಚೀನಾದಿಂದ ಕರೆತಂದ ೧೧೨ ಜನರನ್ನು ರಾಷ್ಟ್ರ ರಾಜಧಾನಿಯಲ್ಲಿ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸರ ಚಾವ್ಲಾ ಶಿಬಿರದಲ್ಲಿ ನಿರ್ಮಿಸಲಾದ ಏಕಾಂಗಿವಾಸ ವಾರ್ಡಿನಲ್ಲಿ  ಇರಿಸಲಾಗಿದೆ.

ಅವರೆಲ್ಲರೂ ಕೋವಿಡ್ -೧೯ ಸೋಂಕಿನಿಂದ ಮುಕ್ತರಾಗಿರುವುದಾಗಿ ಕಂಡು ಬಂದಿದ್ದರೂ, ಅವರನ್ನು ಇನ್ನೂ ಕಟ್ಟು ನಿಟ್ಟಿನ ಪರಿಶೀಲನೆಗೆ ಒಳಪಡಿಸಲಾಗಿದೆ.

ಸ್ಥಳಾಂತರಿಸಿದವರಲ್ಲಿ ೭೬ ಭಾರತೀಯರು ಮತ್ತು ೩೬ ವಿದೇಶಿ ಪ್ರಜೆಗಳು ಸೇರಿದ್ದಾರೆ.

ವಿಶ್ವಾದ್ಯಂತ ಬೆದರಿಕೆ:  ಚೀನಾದ ಜೊತೆ ಯಾವುದೇ ಸ್ಪಷ್ಟ ಸಂಪರ್ಕವಿಲ್ಲದ ಕಡೆಗಳಲ್ಲಿ ಕೂಡಾ ಸೋಂಕಿನ ಪ್ರಕರಣUಳು ಪತ್ತೆಯಾಗುವುದರೊಂದಿಗೆ ವಿಶ್ವಾದ್ಯಂತ ಸಾಂಕ್ರಾಮಿಕ ರೋಗದ ಭೀತಿ ಇನ್ನಷ್ಟು ಹೆಚ್ಚಾಗಿದೆ, ಇದು ಸೋಂಕಿನ ಲಕ್ಷಣರಹಿತ ಹರಡುವಿಕೆಯನ್ನು ದೃಢ ಪಡಿಸಿದೆ, ಸೋಂಕು ಈಗ ವಿಶ್ವಾದ್ಯಂತ ಕನಿಷ್ಠ ೬೪ ದೇಶಗಳಿಂದ ವರದಿಯಾಗಿದೆ.

ಕಳೆದ ೨೪ ಗಂಟೆಗಳಲ್ಲಿ ಚೀನಾದಲ್ಲಿ ಸೋಂಕು ಖಚಿತಗೊಂಡರುವ ಹೊಸ ೨೦೨ ಕೊರೋನಾವೈರಸ್ ಪ್ರಕರಣಗಳು ಮತ್ತು ೪೨ ಸಾವುಗಳು ವರದಿಯಾಗಿವೆ ಎಂದು ವರದಿಗಳು ಹೇಳಿವೆ. ಏಕಾಏಕಿ ಸೋಂಕು ಕ್ಷಿಪ್ರವಾಗಿ ವಿಶ್ಯಾದ್ಯಂತ ಹರಡುತ್ತಿರುವುದರಿಂದ ವಿದೇಶಗಳಿಂದ ಬರಬಹುದಾದ ಸೋಂಕಿನ ವಿರುದ್ಧ ಚೀನೀ ಅಧಿಕಾರಿಗಳು ಬಿಗಿ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ.

ಕೋವಿಡ್ -೧೯ ಸಾಂಕ್ರಾಮಿಕ ರೋಗದಿಂದ ಚೀನಾದ ಮುಖ್ಯ ಭೂಭಾಗದಲ್ಲಿ ಭಾನುವಾರದ ಅಂತ್ಯದ ವೇಳೆಗೆ ೨೯೧೨ ಜನರು ಸಾವನ್ನಪಿದ್ದು, ಸೋಂಕು ಪೀಡಿತರ ಶಂಕೆ ೮೦,೦೨೬ಕ್ಕೆ  ತಲುಪಿದೆ ಎಂದು ರಾಷ್ಟ್ರೀಯ ಆರೋಗ್ಯ ಆಯೋಗದ (ಎನ್‌ಎಚ್‌ಸಿ) ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ವೈರಸ್ ಪೀಡಿತ ದೇಶಗಳ ಸಂಖ್ಯೆ ಭಾನುವಾರ ೬೪ ಕ್ಕೆ ಏರಿದೆ ಮತ್ತು ವಿಶ್ವಾದ್ಯಂತ ಸಾವಿನ ಸಂಖ್ಯೆ ಕನಿಷ್ಠ ೩೦೦೦ ಕ್ಕೆ ತಲುಪಿದೆ.

No comments:

Advertisement