My Blog List

Monday, March 16, 2020

ನಿರ್ಭಯಾ ಪ್ರಕರಣ: ಅಂತಾರಾಷ್ಟ್ರೀಯ ಕೋರ್ಟ್ ಅಂಗಳಕ್ಕೆ ಹಂತಕರು

ನಿರ್ಭಯಾ ಪ್ರಕರಣ: ಅಂತಾರಾಷ್ಟ್ರೀಯ ಕೋರ್ಟ್ ಅಂಗಳಕ್ಕೆ ಹಂತಕರು
ನವದೆಹಲಿ: ನೇಣು ಕುಣಿಕೆಯಿಂದ ತಪ್ಪಿಸಿಕೊಳ್ಳಲು ಶತಾಯಗತಾಯ ಯತ್ನಿಸುತ್ತಿರುವ ದೆಹಲಿಯ ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ಶಿಕ್ಷಿತ ಅಪರಾಧಿಗಳ ಪೈಕಿ ಅಕ್ಷಯ್ ಸಿಂಗ್, ಪವನ್ ಗುಪ್ತ ಮತ್ತ ವಿನಯ್ ಶರ್ಮ ಮೂವರು ತಮ್ಮ ಗಲ್ಲು ಜಾರಿಗೆ ತಡೆ ಕೋರಿ 2020 ಮಾರ್ಚ್  16ರ ಸೋಮವಾರ ನೆದರ್ಲ್ಯಾಂಡ್ಸ್ ಹೇಗ್ನಲ್ಲಿರುವ  ಆಂತಾರಾಷ್ಟ್ರೀಯ ನ್ಯಾಯಾಲಯದ (ಐಸಿಜೆ) ಮೊರೆ ಹೊಕ್ಕಿದ್ದಾರೆ.

ವಿಚಾರಣಾ ನ್ಯಾಯಾಲಯವು ಮುಕೇಶ್ ಸಿಂಗ್ (೩೨), ಪವನ್ ಗುಪ್ತ (೨೫), ವಿನಯ್ ಶರ್ಮ (೨೬) ಮತ್ತು ಅಕ್ಷಯ್ ಸಿಂಗ್ (೩೧) ನಾಲ್ಕೂ ಮಂದಿ ಅಪರಾಧಿಗಳನ್ನು ಮಾರ್ಚ್ ೨೦ರಂದು ಬೆಳಗ್ಗೆ .೩೦ಕ್ಕೆ ಗಲ್ಲಿಗೇರಿಸಬೇಕು ಎಂದು ದಿನ ಮತ್ತು ಸಮಯ ನಿಗದಿ ಪಡಿಸಿ ಮಾರ್ಚ್ ೫ರಂದು ಹೊಸದಾಗಿ ವಾರಂಟ್ಗಳನ್ನು ಜಾರಿಗೊಳಿಸಿತ್ತು.

ಈಮಧ್ಯೆ, ತನ್ನ ಶಾಸನಬದ್ಧ ಪರಿಹಾರಗಳನ್ನು ಪುನಸ್ಥಾಪಿಸಬೇಕು ಎಂಬುದಾಗಿ ಕೋರಿ ಮುಕೇಶ್ ಸಿಂಗ್ ಸಲ್ಲಿಸಿದ್ದ ಮನವಿಯನ್ನು ಸುಪ್ರೀಂಕೋರ್ಟ್ ಸೋಮವಾರ ತಿರಸ್ಕರಿಸಿತು.  ತನ್ನ ವಕೀಲರು ತನ್ನನ್ನು ದಾರಿತಪ್ಪಿಸಿದರು ಎಂಬುದಾಗಿ ಆಪಾದಿಸಿ ಮುಕೇಶ್ ಸಿಂಗ್ ತನ್ನ ಶಾಸನಬದ್ಧ ಪರಿಹಾರಗಳನ್ನು ಪುನಃಸ್ಥಾಪನೆ ಮಾಡುವಂತೆ ಕೋರಿದ್ದ. ಪ್ರಕರಣದಲ್ಲಿ ಪುನರ್ ಪರಿಶೀಲನಾ ಅರ್ಜಿ ಮತ್ತು ಕ್ಯುರೇಟಿವ್ ಅರ್ಜಿಗಳನ್ನು ಈಗಾಗಲೇ ತಿರಸ್ಕರಿಸಲಾಗಿರುವುದರಿಂದ ಮುಕೇಶ್ ಸಿಂಗ್ ಅರ್ಜಿಗಳನ್ನು ವಿಚಾರಣೆಗೆ ಎತ್ತಿಕೊಳ್ಳಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿತು.

ನಿರ್ಭಯಾ ಪ್ರಕರಣದ ನಾಲ್ವರು ಅಪರಾಧಿಗಳ ಡೆತ್ ವಾರಂಟ್ ಜಾರಿಯನ್ನು ಹಿಂದೆ ಕಾನೂನುಬದ್ಧ ಪರಿಹಾರಗಳನನ್ನು ಬಳಸಿಕೊಳ್ಳುವಲ್ಲಿನ ವಿಳಂಬ ಕಾರಣಕ್ಕಾಗಿ ಮೂರು ಬಾರಿ ಮುಂದೂಡಲಾಗಿತ್ತು.

ನಾಲ್ಕನೇ ಬಾರಿ ಹೊಸದಾಗಿ ಡೆತ್ ವಾರಂಟ್ ಜಾರಿಗೊಳಿಸಿದ ಬಳಿಕ, ತಿಹಾರ್ ಸೆರೆಮನೆ ಅಧಿಕಾರಿಗಳು ಉತ್ತರ ಪ್ರದೇಶದ ಸೆರೆಮನೆ ಅಧಿಕಾರಿಗಳಿಗೆ ಪತ್ರ ಬರೆದು ವಧಕಾರ (ಹ್ಯಾಂಗ್ಮನ್) ಪವನ್ ಜಲ್ಲದ್ ಸೇವೆಯನ್ನು ತಮಗೆ ಒದಗಿಸುವಂತೆ ಮನವಿ ಮಾಡಿದ್ದರು. ಜಲ್ಲದ್ ಆಗಮನದ ಬಳಿಕಗಲ್ಲಿಗೇರಿಸುವ ಅಣಕು ಪ್ರದರ್ಶನವನ್ನು ನಡೆಸಲಾಗುವುದು ಎಂದು ಸೆರೆಮನೆ ಅಧಿಕಾರಿಗಳು ಹೇಳಿದ್ದಾರೆ.

ನಾಲ್ವರು ಅಪರಾಧಿಗಳ ಪೈಕಿ ಮುಕೇಶ್, ಪವನ್ ಮತ್ತು ವಿನಯ್ ತಮ್ಮ ಕುಟುಂಬ ಸದಸ್ಯರನ್ನು ಕೊನೆಯದಾಗಿ ಮುಖಾಮುಖಿ ಭೇಟಿ ಮಾಡಿದ್ದಾರೆ. ಅಧಿಕಾರಿಗಳು ಅಕ್ಷಯ್ ಕುಟುಂಬಕ್ಕೂ ಅಂತಿಮ ಭೇಟಿಗೆ ದಿನಾಂಕ ನಿಗದಿ ಪಡಿಸಿ ಪತ್ರಗಳನ್ನು ಬರೆದಿದ್ದಾರೆ. ಶಿಕ್ಷಿತ ಅಪರಾಧಿಗಳ ಜೊತೆಗಿನ ಕುಟುಂಬಗಳ ವಾರದ ಸಭೆಗಳನ್ನೂ ಸೆರೆಮನೆ ಅಧಿಕಾರಿಗಳು ಸ್ಥಗಿತಗೊಳಿಸಿಲ್ಲ.

ಮಾಧ್ಯಮಗಳುನಿರ್ಭಯಾಎಂಬುದಾಗಿ ಗುರುತಿಸಿದ್ದ ೨೩ರ ಹರೆಯದ ಫಿಸಿಯೋ ಥೆರೆಪಿ ವಿದ್ಯಾರ್ಥಿನಿಯ ಮೇಲೆ ದಕ್ಷಿಣ ದೆಹಲಿಯ ಚಲಿಸುವ ಬಸ್ಸಿನಲ್ಲಿ ಮಂದಿ ಸಾಮೂಹಿಕ ಅತ್ಯಾಚಾರ ಎಸಗಿ ಅತಿ ಕ್ರೂರವಾಗಿ ಹಲ್ಲೆ ನಡೆಸಿ ಬಸ್ಸಿನಿಂದ ಹೊರಕ್ಕೆ ಎಸೆದಿದ್ದರು. ಮಾರಣಾಂತಿಕವಾಗಿ ಗಾಯಗೊಂಡಿದ್ದ ಆಕೆ ೧೪ ದಿನಗಳ ಜೀವನ್ಮರಣ ಹೋರಾಟದ ಬಳಿಕ ಸಿಂಗಾಪುರದ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು.

ಒಬ್ಬ ಬಾಲಾಪರಾಧಿ ಮತ್ತು ನಾಲ್ವರು ಶಿಕ್ಷಿತರು ಸೇರಿದಂತೆ ಮಂದಿಯನ್ನು ಅರೋಪಿಗಳು ಎಂಬುದಾಗಿ ಹೆಸರಿಸಲಾಗಿತ್ತು. ಆರನೇ ಆರೋಪಿ ರಾಮ್ ಸಿಂಗ್ ಪ್ರಕರಣದ ವಿಚಾರಣೆ ಆರಂಭವಾದ ಬಳಿಕ ತಿಹಾರ್ ಸೆರೆಮನೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದ.

ಬಾಲಾಪರಾಧಿಯನ್ನು ಮೂರು ವರ್ಷಗಳ ಸುಧಾರಣಾ ವಾಸದ ಬಳಿಕ ಅಜ್ಞಾತ ಸ್ಥಳದಲ್ಲಿ ಬಿಡುಗಡೆ ಮಾಡಲಾಗಿತ್ತು.

No comments:

Advertisement