My Blog List

Monday, March 16, 2020

ಏಡ್ಸ್ + ಮಲೇರಿಯಾ ಔಷಧ= ಕೊರೋನಾ ವಿರುದ್ಧ ಫಲಪ್ರದ

ಏಡ್ಸ್ + ಮಲೇರಿಯಾ ಔಷಧ= ಕೊರೋನಾ ವಿರುದ್ಧ ಫಲಪ್ರದ
ಜೈಪುರ: ಕೊರೋನಾ ಸೋಂಕಿನ ನಿವಾರಣೆಯಲ್ಲಿ ಮಲೇರಿಯಾ ಮತ್ತು ಏಡ್ಸ್ (ಎಚ್ಐವಿ) ಔಷಧಗಳು ಪರಿಣಾಮಕಾರಿಯಾಗಿರುವುದು ರಾಜಸ್ಥಾನದಲ್ಲಿ ಬೆಳಕಿಗೆ ಬಂದಿದೆ.

‘ಕೊರೊನಾ ಸೋಂಕು ದೃಢಪಟ್ಟವರು ಚೇತರಿಸಿಕೊಳ್ಳುವಲ್ಲಿ ಎಚ್ಐವಿ ಸೋಂಕು ತಡೆಗೆ ನೀಡುವ ಔಷಧಗಳು ಮಹತ್ವದ ಪಾತ್ರವಹಿಸಿವೆಎಂದು ರಾಜಸ್ಥಾನ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು 2020 ಮಾರ್ಚ್  16ರ ಸೋಮವಾರ ಇಲ್ಲಿ ತಿಳಿಸಿದರು.

ರಾಜ್ಯದಲ್ಲಿ ನಾಲ್ವರು ರೋಗಿಗಳಲ್ಲಿ ಮೂವರು ಸೋಂಕಿನಿಂದ ಮುಕ್ತರಾಗಿದ್ದಾರೆ. ಆರಂಭದಲ್ಲಿ ಇವರಲ್ಲಿ ಜ್ವರದ ಲಕ್ಷಣಗಳು ಕಾಣಿಸಿಕೊಂಡದ್ದರಿಂದ, ಮಲೇರಿಯಾಕ್ಕೆ ನೀಡುವ ಔಷಧ ನೀಡಲಾಯಿತು. ಕೊರೊನಾ ವೈರಸ್ಸಿನ ರಚನೆ ಬಹುತೇಕ ಎಚ್ಐವಿ ರೀತಿಯೇ ಇರುವುದರಿಂದ ಬಳಿಕ ಎಚ್ಐವಿ ತಡೆಗೆ ನೀಡುವ ಔಷಧವನ್ನು ಸಹ ಕೊಡಲಾಯಿತುಎಂದು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ವೈದ್ಯಕೀಯ ಮತ್ತು ಆರೋಗ್ಯ) ರೋಹಿತ್ ಕುಮಾರ್ ಸಿಂಗ್ ವಿವರಿಸಿದರು.

ಎರಡೂ ಔಷಧಗಳಿಂದಾಗಿಯೇ ಬಹುಶಃ ಇವರು ಚೇತರಿಸಿಕೊಂಡಿದ್ದಾರೆ.   ವಯೋಮಾನದ ವರಿಗೆ ಔಷಧಗಳು ಪರಿಣಾಮ ಬೀರಿ ಅವರು ಸೋಂಕುಮುಕ್ತರಾಗಿದ್ದು, ಮಹತ್ವದ ವಿಚಾರವಾಗಿದೆಎಂದು ಎಸ್ಎಂಎಸ್ ಆಸ್ಪತ್ರೆಯ ಸೂಪರಿಂಟೆಂಡೆಂಟ್ ಆಗಿರುವ ವೈದ್ಯ ಡಿ.ಎಸ್. ಮೀನಾ ಹೇಳಿದರು.

ಸೋಂಕು ದೃಢಪಟ್ಟಿದ್ದ ನಾಲ್ಕನೇ ವ್ಯಕ್ತಿಯನ್ನು ಜೈಪುರದ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.

No comments:

Advertisement