My Blog List

Monday, March 23, 2020

ಕರ್ನಾಟಕ ಸಹಿತ 30 ರಾಜ್ಯ, ಕೇಂದ್ರಾಡಳಿತ ಪ್ರದೇಶಗಳಲ್ಲಿ ಲಾಕ್ ಡೌನ್

ಕರ್ನಾಟಕ ಸಹಿತ 30 ರಾಜ್ಯ, ಕೇಂದ್ರಾಡಳಿತ ಪ್ರದೇಶಗಳಲ್ಲಿ ಕೊರೋನಾ ಲಾಕ್ ಡೌನ್
ಮಂಗಳವಾರ ಮಧ್ಯರಾತ್ರಿಯಿಂದ ದೇಶೀಯ ವಿಮಾನಯಾನ ನಿಷೇಧ
ನವದೆಹಲಿ: ಕೊರೋನಾ ವೈರಸ್ ಸಾಂಕ್ರಾಮಿಕ ಪಿಡುಗಿನ ಹರಡುವಿಕೆಯನ್ನು ತಡೆಯುವ ಸಲುವಾಗಿ ಕರ್ನಾಟಕ ಸೇರಿದಂತೆ 30 ರಾಜ್ಯ/ ಕೇಂದ್ರಾಡಳಿತ ಪ್ರದೇಶಗಳಲ್ಲಿ 2020 ಮಾರ್ಚ್ 23ರ ಸೋಮವಾರ ಲಾಕ್ ಡೌನ್ ವಿಸ್ತರಿಸಲಾಗಿದ್ದು, ದೇಶದೊಳಗಿನ ಎಲ್ಲ ವಿಮಾನಯಾನಗಳನ್ನು 2020 ಮಾರ್ಚ್ 24ರ ಮಂಗಳವಾರ ನಡುರಾತ್ರಿಯಿಂದ ನಿಷೇಧಿಸಲಾಯಿತು.

ದೇಶಾದ್ಯಂತ ಎಲ್ಲ ವಿಮಾನಯಾನಗಳನ್ನು  2020 ಮಾರ್ಚ್ ೨೪ರ ಮಂಗಳವಾರ ಮಧ್ಯರಾತ್ರಿಯಿಂದ ಅನ್ವಯವಾಗುವಂತೆ ನಿಷೇಧಿಸಿ ಕೇಂದ್ರ ಸರ್ಕಾರವು 2020 ಮಾರ್ಚ್ 23ರ ಸೋಮವಾರ ಆದೇಶ ಹೊರಡಿಸಿತು. ಸಂಸತ್ ಅಧಿವೇಶನವನ್ನು ಕೂಡಾ ಅನಿರ್ದಿಷ್ಟ ಅವಧಿಗೆ ಮುಂದೂಡಲಾಯಿತು.

ಮಾರಕ ಕೊರೋನಾ ವೈರಸ್ ಪಶ್ಚಿಮ ಬಂಗಾಳದಲ್ಲಿ ಇನ್ನೊಬ್ಬನನ್ನು ಬಲಿ ಪಡೆಯುವುದರೊಂದಿಗೆ ಮಾರಕ ವೈರಾಣುವಿಗೆ ಸಾವನ್ನಪ್ಪಿದವರ ಸಂಖ್ಯೆ ಭಾರತದಲ್ಲಿ ೯ಕ್ಕೇ ಏರಿತು. ದೇಶದಲ್ಲಿ ಸೋಂಕಿಗೆ ಒಳಗಾದವರ ಸಂಖ್ಯೆ 471ಕ್ಕೆ ತಲುಪಿತು. ಇದನ್ನು ಅನುಸರಿಸಿ ದೇಶಾದ್ಯಂತ ಕರ್ನಾಟಕವೂ ಸೇರಿದಂತೆ 30 ರಾಜ್ಯ/ ಕೇಂದ್ರಾಡಳಿತ ಪ್ರದೇಶಗಳಿಗೆ ಲಾಕ್ ಡೌನ್ ವಿಸ್ತರಣೆಯಾಯಿತು. ನವದೆಹಲಿ ಮತ್ತು ಮುಂಬೈ ಮತ್ತು ಇತರ ಹಲವಾರು ರಾಜ್ಯ ರಾಜಧಾನಿಗಳು ಸ್ತಬ್ಧ ಸ್ಥಿತಿ (ಲಾಕ್ ಡೌನ್) ಎದುರಿಸುತ್ತಿವೆ. ಮಹಾರಾಷ್ಟ್ರದ ಗಡಿಗಳನ್ನು ಮುಚ್ಚುವುದರ ಜೊತೆಗೆ ಸಂಪೂರ್ಣ ಕರ್ಫ್ಯೂ ಘೋಷಿಸಲಾಗಿದ್ದರೆ, ಅಸ್ಸಾಂ ರಾಜ್ಯ ಕೂಡಾ ಲಾಕ್ ಡೌನ್ ಘೋಷಿಸಿತು. ಕರ್ನಾಟಕದಲ್ಲೂ  ಜಿಲ್ಲೆಗಳಲ್ಲಿ ವಿಧಿಸಲಾಗಿದ್ದ ಲಾಕ್ ಡೌನ್ನ್ನು ರಾಜ್ಯಾದ್ಯಂತ ವಿಸ್ತರಿಸಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪ್ರಕಟಿಸಿದರು.

ವಿಶ್ವಾದ್ಯಂತ ಕೊರೋನಾವೈರಸ್ಸಿಗೆ ಬಲಿಯಾದವರ ಸಂಖ್ಯೆ ಸೋಮವಾರ ೧೪,೦೦೦ ಸಂಖ್ಯೆಯನ್ನು ದಾಟಿತು.
ಪ್ರಪಂಚದಾದ್ಯಂತ ,೩೦,೦೦೦ ಕ್ಕೂ ಹೆಚ್ಚು ಜನರು ಕೊರೋನವೈರಸ್ ಪೀಡಿತರಾಗಿದ್ದಾರೆ, ಅವರ ಪೈಕಿ ೯೯,೦೦೩ ಜನರು ಚೇತರಿಸಿಕೊಂಡಿದ್ದಾರೆ.

ದೇಶೀಯ ವಿಮಾನಯಾನ ರದ್ದು
ದೇಶೀಯ ವಾಣಿಜ್ಯ ವಿಮಾನಯಾನ ಸಂಸ್ಥೆಗಳ ಎಲ್ಲ ವಿಮಾನಗಳ ಹಾರಾಟ ಕಾರ್ಯಾಚರಣೆಯು ಮಾರ್ಚ್ ೨೪ರ ಮಂಗಳವಾರ ರಾತ್ರಿ ೨೩.೫೯ ರಿಂದ ಸ್ಥಗಿತಗೊಳ್ಳಲಿದೆ ಎಂದು ಸರ್ಕಾರದ ಅಧಿಸೂಚನೆ ಸೋಮವಾರ ತಿಳಿಸಿತು. "೨೪//೨೦೨೦ ರಂದು ರಾತ್ರಿ ೧೧.೫೯ ಗಂಟೆಗೆ ಮೊದಲು ವಿಮಾನಯಾನ ಸಂಸ್ಥೆಗಳು ತಮ್ಮ ಗಮ್ಯಸ್ಥಾನ ತಲುಪುವಂತೆ ವಿಮಾನಯಾನದ ವೇಳಾಪಟ್ಟಿಯನ್ನು ವಿಮಾನಯಾನ ಸಂಸ್ಥೆಗಳು ಯೋಜಿಸಬೇಕು. ಸರಕುಗಳನ್ನು ಸಾಗಿಸುವ ವಿಮಾನಗಳಿಗೆ ನಿರ್ಬಂಧಗಳು ಅನ್ವಯಿಸುವುದಿಲ್ಲ" ಎಂದು ಅಧಿಸೂಚನೆ ಹೇಳಿತು.

ಪಶ್ಚಿಮ ಬಂಗಾಳದಲ್ಲಿ ಮೊದಲ ಸಾವು
ಪಶ್ಚಿಮ ಬಂಗಾಳದ ಉತ್ತರ ಕೊಲ್ಕತ್ತಾದ ಡಂಡಂನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ೫೫ ವರ್ಷದ ರೋಗಿಯು ಹೃದಯ ಸ್ತಂಭನದಿಂದ ಮಧ್ಯಾಹ್ನ .೩೫ ಸುಮಾರಿಗೆ ಸಾವನ್ನಪ್ಪಿದ ನಂತರ ಪಶ್ಚಿಮ ಬಂಗಾಳವು ರಾಜ್ಯದ ಮೊದಲ ಕೊರೋನವೈರಸ್ ಸಾವು ಸಂಭವಿಸಿದ್ದನ್ನು ವರದಿ ಮಾಡಿತು. ರೋಗಿಯು ಜೀವ ರಕ್ಷಕದ ವ್ಯವಸ್ಥೆಯ ಅಡಿಯಲ್ಲಿ ಇದ್ದರು ಮತು ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದರು ಎಂದು ವರದಿ ಹೇಳಿತು.

30 ರಾಜ್ಯಗಳಲ್ಲಿ ಲಾಕ್ ಡೌನ್, ಸಂಸತ್ ಮುಂದೂಡಿಕೆ
ಸಂಸತ್ತಿನ ಉಭಯ ಸದನಗಳು ಹಣಕಾಸು ಮಸೂದೆ ಅಂಗೀಕಾರವಾದ ನಂತರ ಸೋಮವಾರ ಅನಿರ್ದಿಷ್ಟ ಅವಧಿಗೆ ಮುಂದೂಡಲ್ಪಟ್ಟವು.

ಸಂಸತ್ ಅಧಿವೇಶನವನ್ನು ಏಪ್ರಿಲ್ ರಂದು ಮುಕ್ತಾಯಗೊಳಿಸಲು ಹಿಂದೆ ನಿರ್ಧರಿಸಲಾಗಿತ್ತು. ಆದರೆ ಕೋವಿಡ್-೧೯ರ ಬೆದರಿಕೆಯಿಂದಾಗಿ ಅಧಿವೇಶನವು ನಿಗದಿತ ಸಮಯಕ್ಕಿಂತ ಸುಮಾರು ೧೨ ದಿನಗಳ ಮುಂಚಿತವಾಗಿ ಮುಂದೂಡಿಕೆಯಾಯಿತು.

30 ರಾಜ್ಯ/ ಕೇಂದ್ರಾಡಳಿತ ಪ್ರದೇಶಗಳಲ್ಲಿ ತಮಿಳುನಾಡಿನಲ್ಲಿ ಲಾಕ್ ಡೌನ್ ಘೋಷಿಸುವುದರೊಂದಿಗೆ ಅದು ಲಾಕ್ ಡೌನ್ ಘೋಷಿಸಿದ ದೇಶದ ೧೫ನೇ ರಾಜ್ಯವಾಯಿತು.

ಇಟಲಿ, ಅಮೆರಿಕ ಸ್ಫೇನಿನಲ್ಲಿ ಹೊಸ ಪ್ರಕರಣ
ಇಟಲಿ, ಅಮೆರಿಕ ಮತ್ತು ಸ್ಪೇನ್ ಕೋವಿಡ್-೧೯ರ ಹೊಸ ಪ್ರಕರಣಗಳು ವರದಿಯಾಗುವುದರೊಂದಿಗೆ ಸಾಂಕ್ರಾಮಿಕ ಪಿಡುಗು ಪಶ್ಚಿಮ ಗೋಳಾರ್ಧದಲ್ಲಿ ಸೋಮವಾರ ಹೆಚ್ಚಿತು. ಅಮೆರಿಕದಲ್ಲಿ ಕೊರೋನಾ ವೈರಸ್ ಸೋಂಕಿನ ,೩೭೩ ಹೊಸ ಪ್ರಕರಣಗಳು ವರದಿಯಾಗಿದ್ದು, ನ್ಯೂಯಾರ್ಕ್, ಕ್ಯಾಲಿಫೋರ್ನಿಯಾ ಮತ್ತು ವಾಷಿಂಗ್ಟನ್ಗೆ ಒಕ್ಕೂಟದ ಬೆಂಬಲ ಒದಗಿಸಲಾಗುವುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದರು.

ಅಮೆರಿಕ, ಸ್ಪೇನ್ ಮತ್ತು ಇಟಲಿಯಲ್ಲಿ ಕೊರೊನಾವೈರಸ್ ಸೋಂಕಿನ ಪ್ರಕರಣಗಳು ಕ್ಷಿಪ್ರಗತಿಯಲ್ಲಿ ಏರಿದವು. ಹಿನ್ನೆಲೆಯಲ್ಲಿ  ವಿಶ್ವದ ಬಹುತೇಕ ರಾಷ್ಟ್ರಗಳು ಲಾಕ್ ಡೌನ್ ಮಾಡಿಕೊಂಡವು ಸ್ಪೇನ್ ಏಪ್ರಿಲ್ ೧೧ ರವರೆಗೆ ತುರ್ತು ಪರಿಸ್ಥಿತಿ ವಿಧಿಸಿತು. ಕಳೆದ ೨೪ ಗಂಟೆಗಳಲ್ಲಿ ಇಟಲಿಯಲ್ಲಿ  ೬೫೧ ಹೊಸ ಸಾವುಗಳು ಸಂಭವಿಸಿದ್ದು ಒಟ್ಟು ಸಾವಿನ ಸಂಖ್ಯೆ ,೪೭೬ನ್ನು ಮೀರಿ ದೇಶವು ಚೀನಾವನ್ನು ಹಿಂದಕ್ಕೆ ಹಾಕಿತು.

ವಿದೇಶಗಳಲ್ಲಿನ ಭಾರತೀಯರು
ಮಧ್ಯೆ, ಕೆಲವೇ ಕೆಲವು ಭಾರತೀಯ ಪ್ರಯಾಣಿಕರು ವಿಶ್ವಾದ್ಯಂತ ಕೊರೋನಾಪೀಡಿತ ದೇಶಗಳಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ.  ಲಂಡನ್ ಮತ್ತು ಕೌಲಾಲಂಪುರದಲ್ಲಿ  ಕೆಲವು ಭಾರತೀಯ ಪ್ರಯಾಣಿಕರು ಸಿಲುಕಿಕೊಂಡಿರುವ ವರದಿಗಳು ಬಂದಿದ್ದು, ಸೋಮವಾರ ರಾತ್ರಿ ಗಂಟೆಗೆ ಕೌಲಾಲಂಪುರದಿಂದ ಪ್ರಯಾಣಿಕರನ್ನು ಕರೆತರಲು ಏರ್ ಏಷ್ಯಾ ನಿರ್ಧರಿಸಿದೆ ಎಂದು ಆರೋಗ್ಯ ಸಚಿವಾಲಯದ ಅಧಿಕಾರಿ ತಿಳಿಸಿದರು.

ಗಂಭೀರ ಪರಿಗಣನೆ ಅಗತ್ಯ
ಕರ್ಫ್ಯೂ ಮತ್ತು ಲಾಕ್ ಡೌನ್ ಸೇರಿದಂತೆ ಎಲ್ಲಾ ಸರ್ಕಾg ಸೂಚಿಸುವ ಎಲ್ಲ ನಿರ್ಧಾರಗಳನ್ನು ಗಂಭೀರವಾಗಿ ಪರಿಗಣಿಸಿದರೆ, ಕೊರೋನಾ ಪಿಡುಗನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬಹುದು ಎಂದು ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ ಅಗರ್ವಾಲ್ ಹೇಳಿದರು.

೧೯ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸಂಪೂರ್ಣ ಲಾಕ್ಡೌನ್ ಘೋಷಿಸಲಾಗಿದೆ. ಇತರ ಆರು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ, ಕೆಲವು ಪ್ರದೇಶಗಳನ್ನು ಮಾತ್ರ  ಸ್ಥಗಿತಗೊಳಿಸಲಾಗಿದೆ ಎಂದು ಲವ  ಅಗರ್ವಾಲ್ ನುಡಿದರು.

ಇಲ್ಲಿಯವರೆಗೆ  ೪೫೭ ಶಂಕಿತ ಕೊರೋನಾವೈರಸ್ ಪ್ರಕರಣಗಳು ವರದಿಯಾಗಿದ್ದು, ೪೧೫ ಪ್ರಕರಣಗಳು ದೃಢಪಟ್ಟಿವೆ. ಪೈಕಿ ಪ್ರಕರಣಗಳಲ್ಲಿ ಸಾವುಗಳು ಸಂಭವಿಸಿವೆ. ೨೩ ರೋಗಿಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಅವರು ನುಡಿದರು.

ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲಾವ್ ಅಗರ್ವಾಲ್ ಹೇಳುತ್ತಾರೆ
ಕೋವಿಡ್ -೧೯ರ ಪರೀಕ್ಷೆಗಾಗಿ ದೇಶಾದ್ಯಂತ ಹನ್ನೆರಡು ಸರಣಿ ಪ್ರಯೋಗಾಲಯಗಳನ್ನು ಸ್ಥಾಪಿಸಲಾಗಿದೆ. ೧೨ ಪ್ರಯೋಗಾಲಯಗಳಲ್ಲಿ ೧೫,೦೦೦ ಸಂಗ್ರಹ ಕೇಂದ್ರಗಳಿವೆ ಎಂದು ಐಸಿಎಂಆರ್ ಮಹಾನಿರ್ದೇಶಕ ಬಲರಾಮ್ ಭಾರ್ಗವ ಹೇಳಿದರು.
  
ಕೋವಿಡ್-೧೯ ಜೀವಮಾನದ ಸವಾಲು: ಮೋದಿ
ಈಮಧ್ಯೆ, ಕೊರೋನಾವೈರಸ್ ಒಂದು ಜೀವಮಾನದ ಸವಾಲು, ಇದನ್ನು ಹೊಸ ಮತ್ತು ನವೀನ ಪರಿಹಾರಗಳ ಮೂಲಕ ನಿಭಾಯಿಸಬೇಕಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಟೆಲಿವಿಷನ್ ಮಾಧ್ಯಮಗಳ ಪ್ರತಿನಿಧಿಗಳೊಂದಿಗೆ ವೀಡಿಯೊ-ಕಾನ್ಫರೆನ್ಸ್ ಮೂಲಕ ಮಾತನಾಡುತ್ತಾ ಹೇಳಿದರು.

ತೆಲಂಗಾಣದಲ್ಲಿ ಕೊರೋನಾವೈರಸ್ ಸೋಂಕು ಖಚಿತಪಟ್ಟ ೩೩  ಪ್ರಕರಣಗಳು ವರದಿಯಾಗಿವೆ ಎಂದು ತೆಲಂಗಾಣ ಆರೋಗ್ಯ ಸಚಿವ ಈತಲಾ ರಾಜೇಂದ್ರ ಟ್ವೀಟ್ ಮಾಡಿದರು.

No comments:

Advertisement