My Blog List

Monday, April 6, 2020

ಪ್ರಧಾನಿ, ಕೇಂದ್ರ ಸಚಿವರು, ಸಂಸದರ ವೇತನ ಶೇಕಡಾ ೩೦ರಷ್ಟು ಕಡಿತ, ಎಂಪಿಲ್ಯಾಡ್ 2 ವರ್ಷ ಅಮಾನತು

ಪ್ರಧಾನಿ, ಕೇಂದ್ರ ಸಚಿವರು, ಸಂಸದರ ವೇತನ ಶೇಕಡಾ ೩೦ರಷ್ಟು ಕಡಿತ, ಎಂಪಿಲ್ಯಾಡ್ 2 ವರ್ಷ ಅಮಾನತು: ಸುಗ್ರೀವಾಜ್ಞೆಗೆ ಕೇಂದ್ರ ಸಂಪುಟ ಅಸ್ತು


ನವದೆಹಲಿ: ಕೊರೋನಾವೈರಸ್ ಸಾಂಕ್ರಾಮಿಕ ಪಿಡುಗು ವಿರೋಧಿ ಹೋರಾಟಕ್ಕೆ ನಿಧಿ ಒದಗಿಸುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ, ಅವರ ಸಂಪುಟ ಸಚಿವರು ಮತ್ತು ಸಂಸತ್ ಸದಸ್ಯರ ವೇತನವನ್ನು ಮುಂದಿನ ಒಂದು ವರ್ಷ ಕಾಲ ಶೇಕಡಾ ೩೦ರಷ್ಟು ಕಡಿತಗೊಳಿಸುವ ಸುಗ್ರೀವಾಜ್ಞೆಗೆ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ  2020 ಏಪ್ರಿಲ್ 06ರ  ಸೋಮವಾರ ನಡೆದ ಕೇಂದ್ರ ಸಂಪುಟ ಸಭೆ ಒಪ್ಪಿಗೆ ನೀಡಿತು.

ಇದರೊಂದಿಗೆ ಕೋವಿಡ್-೧೯ ಸಾಂಕ್ರಾಮಿಕ ಪಿಡುಗಿನಿಂದ ಆರ್ಥಿPತೆಯ ಮೇಲೆ ಬಿದ್ದಿರುವ ಅಸಾಧಾರಣ  ಹೊಡೆತದಿಂದ ಚೇತರಿಸಲು ಸುದೀರ್ಘ ಕಾಲ ಬೇಕಾಗುತ್ತದೆ ಎಂಬ ಸುಳಿವನ್ನು ಕೇಂದ್ರ ಸರ್ಕಾರ ನೀಡಿತು.

ಶಾಸನಕರ್ತರ ಜೊತೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಮತ್ತು ವಿವಿಧ ರಾಜ್ಯಗಳ ರಾಜ್ಯಪಾಲರೂ ತಮ್ಮ ವೇತನದಿಂದ ಕೊಡುಗೆ ನೀಡುವ ನಿರ್ಧಾರವನ್ನು ಸ್ವತಃ ಕೈಗೊಂಡಿದ್ದಾರೆ.

ಕೇಂದ್ರ ಸಂಪುಟವು ಅಂಗೀಕರಿಸಿದ ಸುಗ್ರೀವಾಜ್ಞೆಯ ಪ್ರಕಾರ ಪ್ರಧಾನಿ, ಸಚಿವರು ಮತ್ತು ಸಂಸದರ ವೇತನ, ಭತ್ಯೆಗಳು ಮತ್ತು ಪಿಂಚಣಿಗಳು ಒಂದು ವರ್ಷ ಕಾಲ ಶೇಕಡಾ ೩೦ರಷ್ಟ ಕಡಿತವಾಗಲಿದೆ.

ಹಣವನ್ನು ಕೊರೋನಾವೈರಸ್ ವಿರುದ್ಧದ ಹೋರಾಟಕ್ಕೆ ಬಳಸಿಕೊಳ್ಳಲಾಗುವುದು ಎಂದು ಕೇಂದ್ರ ಸಚಿವ ಸಂಪುಟದ ಸಭೆಯ ಬಳಿಕ ಸುದ್ದಿಗಾರರ ಜೊತೆ ಮಾತನಾಡುತ್ತಾ  ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಪ್ರಕಾಶ ಜಾವಡೇಕರ್ ಅವರು ಪ್ರಕಟಿಸಿದರು.

ಸಂಸತ್ ಸದಸ್ಯರ ವೇತನ, ಭತ್ಯೆಗಳು ಮತ್ತು ಪಿಂಚಣಿ ಕಾಯ್ದೆ ೧೯೫೪ಕ್ಕೆ ತಿದ್ದುಪಡಿ ತಂದಿರುವ ಸುಗ್ರೀವಾಜ್ಞೆಯ ಪ್ರಕಾರ ೨೦೨೦ರ ಏಪ್ರಿಲ್ ೧ರಿಂದ ಒಂದು ವರ್ಷದವರೆ ವೇತನ, ಭತ್ಯೆ, ಪಿಂಚಣಿಗಳು ಕಡಿಮೆಯಾಗಲಿವೆ. ಹಣವು ಭಾರತದ ಸಂಚಿತ ನಿಧಿಗೆ ಸೇರ್ಪಡೆಯಾಗಲಿದೆ. , ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮತ್ತು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಹಾಗೂ ರಾಜ್ಯಪಾಲರುಗಳು ಕೂಡಾ ತಮ್ಮ ವೇತನದಿಂದ ಶೇಕಡಾ ೩೦ರಷ್ಟು ನಿಧಿಯ ಸಲುವಾಗಿ ಕಡಿತಗೊಳಿಸುವ ಕೊಡುಗೆ ನೀಡಿದ್ದಾರೆ ಎಂದು ಜಾವಡೇಕರ್ ಹೇಳಿದರು.

ಸಂಸತ್ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿ (ಎಂಪಿಲ್ಯಾಡ್) ನಿಧಿ ಯೋಜನೆಯನ್ನು ಕೂಢ ೨೦೨೦-೨೧ ಮತ್ತು ೨೦೨೧-೨೨ನೇ ಸಾಲಿಗೆ ತಾತ್ಕಾಲಿಕವಾಗಿ ಅಮಾನತುಗೊಳಿಸಲೂ ಸಂಪುಟ ಸಭೆ ಒಪ್ಪಿಗೆ ನೀಡಿದೆ. ನಿಧಿಯನ್ನು ಆರೋಗ್ಯ ಸೇವೆಗಳು ಮತ್ತು ರಾಷ್ಟ್ರದಲ್ಲಿ ಉದ್ಭವಿಸಿರುವ ಕೋವಿಡ್-೧೯ ಸಾಂಕ್ರಾಮಿಕ ರೋಗದ ಪ್ರತಿಕೂಲ ಪರಿಣಾಮದ ನಿಭಾವಣೆಗಾಗಿ ಬಳಸಲಾಗುವುದು ಎಂದು ಜಾವಡೇಕರ್ ನುಡಿದರು.

ಸಂಸತ್ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ನಿದಿ ಯೋಜನೆಯಿಂದ ಭಾರತದ ಸಂಚಿತ ನಿಧಿಗೆ ,೯೦೦ ಕೋಟಿ ರೂಪಾಯಿ ಲಭಿಸಲಿದೆ ಎಂದು ಸಚಿವರು ಹೇಳಿದರು.

ಕೊರೋನಾವೈರಸ್ ಸಾಂಕ್ರಾಮಿಕ ಪಿಡುಗಿನ ವಿರುದ್ಧ ಸುದೀರ್ಘ ಸಮರಕ್ಕೆ ಸಜ್ಜಾಗುವಂತೆ ಬಿಜೆಪಿ ಕಾರ್‍ಯಕರ್ತರಿಗೆ ಪ್ರಧಾನಿ ಕರೆ ನೀಡಿದ ಕೆಲವೇ ಗಂಟೆಗಳ ಬಳಿಕ ಕೇಂದ್ರ ಸಚಿವ ಸಂಪುಟವು ವೇತನ ಕಡಿತದ ನಿರ್ಧಾರವನ್ನು ಕೈಗೊಂಡಿತು.

ಸಮರ್ಪಕ ಸಂಕೇತಗಳನ್ನು ಕಳುಹಿಸುವ ಮಹತ್ವ ಪೂರ್ಣ ನಿರ್ಧಾರ ಇದುಎಂದು ಜಾವಡೇಕರ್ ನುಡಿದರು. ಹಣಕ್ಕಿಂತ ಹೆಚ್ಚಾಗಿ, ಸಮರ್ಪಕ ಸಂದೇಶವನ್ನು ಕಳಿಸಲು ಅತ್ಯಂತ ಮಹತ್ವದ ಸೂಚನೆ ಇದು ಎಂದು ಸಚಿವರು ಹೇಳಿದರು.

ಸಂಸತ್ ಸದಸ್ಯರು ಮತ್ತು ಇತರ ಗಣ್ಯರ ವೇತವನ್ನು ಕಾನೂನು ನಿರ್ಧರಿಸುವುದರಿಂದ ಸುಗ್ರೀವಾಜ್ಞೆ ತರುವುದು ಅಗತ್ಯವಾಗಿದೆ ಎಂದು ಸಚಿವರು ವಿವರಿಸಿದರು. ’ಔದಾರ್ಯವು ಮನೆಯಲ್ಲಿಯೇ ಆರಂಭವಾಗುತ್ತದೆಎಂದು ಜಾವಡೇಕರ್ ನುಡಿದರು.

ರಾಜ್ಯಗಳ ಕ್ರಮ:

ವಿವಿಧ ಸರ್ಕಾರಗಳು ಈಗಾಗಲೇ ಕೊರೋನಾವೈರಸ್ ವಿರೋಧಿ ಹೋರಾಟಕ್ಕಾಗಿ ವೇತನ ಕಡಿತ ಮತ್ತಿತರ ಕ್ರಮಗಳನ್ನು ಕೈಗೊಳ್ಳಲು ನಿರ್ಧರಿಸಿವೆ.

ಕೇರಳ ಸರ್ಕಾರವು ವಿಪತ್ತು ಪರಿಹಾರ ನಿಧಿಗೆ ಹಣ ಕ್ರೋಡೀಕರಣಕ್ಕಾಗಿ ತನ್ನ ಎಲ್ಲ ಸಿಬ್ಬಂದಿಯ ಒಂದು ತಿಂಗಳ ವೇತನವನನು ಕಡಿತಗೊಳಿಸಲು ಬುಧವಾರ ನಿರ್ಧರಿಸಿತ್ತು. ಕರ್ನಾಟಕದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ತಮ್ಮ ಒಂದು ವರ್ಷದ ವೇತನವನ್ನು ಕೋವಿಡ್-೧೯ ಬಿಕ್ಕಟ್ಟಿನ ಹೋರಾಟಕ್ಕಾಗಿ ನೀಡಿದ್ದಾರೆ.

ತೆಲಂಗಾಣ, ಆಂಧ್ರಪ್ರದೇಶ, ಒಡಿಶಾ ಮತ್ತು ರಾಜಸ್ಥಾನ ಕೂಡಾ ತಮ್ಮ ಸರ್ಕಾರಿ ನೌಕರರ ವೇತನವನ್ನು ಅವರು ಶ್ರೇಣಿಗಳಿಗೆ ಅನುಗುಣವಾಗಿ ಕಡಿತಗೊಳಿಸಿವೆ.

ಸುಮಾರು ೮೦೦೦ ಸೋಂಕಿನ ಪ್ರಕರಣಗಳೊಂದಿಗೆ ದೇಶದಲ್ಲೇ ಹೆಚ್ಚಿನ ಪ್ರಮಾಣದಲ್ಲಿ ಕೊರೋನಾವೈರಸ್ಸಿನ ಕೆಂಗಣ್ಣಿಗೆ ಗುರಿಯಾಗಿರುವ ಮಹಾರಾಷ್ಟ್ರ ಸರ್ಕಾರವು ವೇತನಗಳನ್ನು ಕಂತುಗಳಲ್ಲಿ ಪಾವತಿ ಮಾಡುವ ನಿರ್ಧಾರ ಕೈಗೊಂಡಿದೆ.

ಯುಎಸ್ ಏಡ್ ನೆರವು:

ಇದೇ ವೇಳೆಗೆ ಅಮೆರಿಕದ ಅಂತಾರಾಷ್ಟ್ರೀಯ ಅಭಿವೃದ್ಧಿ ಸಂಸ್ಥೆಯು (ಯುಎಸ್‌ಎಐಡಿ) ಕೋವಿಡ್-೧೯ರ ವಿರುದ್ಧದ ಹೋರಾಟದಲ್ಲಿ ಭಾರತಕ್ಕೆ ನೆರವಾಗಲು ಒಂದು ಆರೋಗ್ಯ ಸಂಸ್ಥೆ ಮತ್ತು ವಿಶ್ವ ಆರೋಗ್ಯ ಸಂಸ್ಥೆಗೆ (ಡಬ್ಲ್ಹೂಎಚ್‌ಒ) . ಮಿಲಿಯನ್ ಡಾಲರ್ (೨೯ ಲಕ್ಷ ಡಾಲರ್) ನೀಡುವುದಾಗಿ ಪ್ರಕಟಿಸಿದೆ.

ನೆರವಿನಲ್ಲಿ ೨೪ ಲಕ್ಷ ಡಾಲರ್ ಮೊತ್ತವು ಜಾನ್ಸ್ ಹಾಪ್ ಕಿನ್ಸ್ ವಿಶ್ವವಿದ್ಯಾಲಯಕ್ಕೆ ಸಂಯೋಜಿತವಾದ ಅಂತಾರಾಷ್ಟ್ರೀಯ ಲಾಭರಹಿತ ಸಂಸ್ಥೆಯಾದ ಜಿಪಿಯಾಗೋ ಅನುಷ್ಠಾನಗೊಳಿಸಿದ ಯುಎಸ್ ಏಡ್ಸ್‌ನ ಆರೋಗ್ಯ ಬಲವರ್ಧನಾ ಯೋಜನೆಗೆ ಹೋಗುವುದು ಮತ್ತು ಲಕ್ಷ ಡಾಲರ್ ವಿಶ್ವ ಆರೋಗ್ಯ ಸಂಸ್ಥೆಗೆ ಹೋಗುವುದು ಎಂದು ಅಮೆರಿಕದ ರಾಯಭಾರ ಕಚೇರಿ ಸೋಮವಾರ ಹೇಳಿಕೆಯೊಂದರಲ್ಲಿ ತಿಳಿಸಿತು.

ಹೊಸ ನೆರವಿನ ನಿಧಿಯು ಭಾರತ ಸರ್ಕಾರಕ್ಕೆ ಕೋವಿಡ್ -೧೯ ಹರಡಗುವ ವೇಗವನ್ನು ನಿಧಾನಗೊಳಿಲು, ರೋಗ ಸಂತ್ರಸ್ಥರ ಕಾಳಜಿ ಮತ್ತು ರೋಗ ತಡೆಗಾಗಿ ಅಗತ್ಯ ಸಲಕರಣೆಗೊಂದಿಗೆ ಸ್ಥಳೀಯ ಸಮುದಾಯಗಳಿಗೆ ನೆರವಾಗಲು ಅನುಕೂಲ ಒದಗಿಸಲಿದೆ ಎಂದು ಹೇಳಿಕೆ ತಿಳಿಸಿತು.

ಕಳೆದ ೨೦ ವರ್ಷಗಳಲ್ಲಿ ಅಮೆರಿಕವು  ಭಾರತಕ್ಕೆ ಒದಗಿಸಿರುವ ಸುಮಾರು ಬಿಲಿಯನ್ ಡಾಲರ್ (೩೦೦ ಕೋಟಿ ಡಾಲರ್) ನೆರವಿನೊಂದಿಗೆ, . ಬಿಲಿಯನ್ (೧೪೦ ಕೋಟಿ) ಡಾಲರ್ ನೆರವು ಭಾರತದಲ್ಲಿ ಆರೋಗ್ಯ ಸಹಾಯದ ಅಡಿಪಾಯಕ್ಕೆ ಅಕೂಲ ಕಲ್ಪಿಸುತ್ತದೆ.

ರೋಗವನ್ನು ಎದುರಿಸಲು ಭಾರತ ಕೈಗೊಂಡಿರುವ ಪ್ರಯತ್ನಗಳನ್ನು ಶ್ಲಾಘಿಸಿದ ಅಮೆರಿಕದ  ರಾಯಭಾರಿ ಕೆನ್ನೆತ್ ಜಸ್ಟರ್, ಯುಎಸ್ ಏಡ್ ನೆರವು  ಭಾರತದ ಪ್ರಯತ್ನಗಳಿಗೆ ಮತ್ತಷ್ಟು ಬೆಂಬಲ ನೀಡುತ್ತದೆ ಎಂದು ಹೇಳಿದರು.

"ಕೋವಿಡ್ -೧೯ ಜಾಗತಿಕ ಸಾರ್ವಜನಿಕ ಆರೋಗ್ಯ ಬೆದರಿಕೆಯಾಗಿದ್ದು, ಸರ್ಕಾರಗಳು ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳ ನಡುವಿನ ನಿಕಟ ಸಹಯೋಗದಿಂದ ಇದನ್ನು ಚೆನ್ನಾಗಿ ನಿಭಾಯಿಸಬಹುದು. ಅಮೆರಿಕ ಸರ್ಕಾರವು  ಯುಎಸ್‌ಏಡ್, ರೋಗ ನಿಯಂತ್ರಣ ಮತ್ತು ತಡೆ ಕೇಂದ್ರಗಳು ಹಾಗೂ ಅಮೆರಿಕದ ಇತರ ಆರೋಗ್ಯ ಮತ್ತು ಮಾನವ ಸೇವೆಗಳ ಏಜೆನ್ಸಿಗಳ ಮೂಲಕ ಜಾಗತಿಕ ಸಾಂಕ್ರಾಮಿಕ ರೋಗ ತಡೆಯುವ ನಿಟ್ಟಿನಲ್ಲಿ ಭಾರತ ನಡೆಸುತ್ತಿರುವ ಪ್ರಯತ್ನಗಳನ್ನು  ಬೆಂಬಲಿಸುವ ಸಲುವಾಗಿ ಭಾರತ ಸರ್ಕಾರ ಮತ್ತು ಬಹುರಾಷ್ಟ್ರೀಯ ಸಂಸ್ಥೆಗಳೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತಿದೆಎಂದು ಬಸ್ಟರ್ ಹೇಳಿದರು.

ಹಲವಾರು ದಶಕಗಳಿಂದ ಅಮೆರಿಕವು ಸಾರ್ವಜನಿಕ ಆರೋಗ್ಯಕ್ಕೆ ಸಂಬಂಧಿಸಿದಂತೆ ದ್ವಿಪಕ್ಷೀಯ ನೆರವು ನೀಡುವ ವಿಶ್ವದ ಅತಿದೊಡ್ಡ ರಾಷ್ಟ್ರವಾಗಿದ್ದು, ೨೦೦೯ ರಿಂದೀಚೆಗೆ, ಅಮೆರಿಕಾದ ತೆರಿಗೆದಾರರು ಆರೋಗ್ಯ ಸಹಾಯಕ್ಕೆ  ೧೦೦ ಶತಕೋಟಿ ಡಾಲರುಗಳಿಗಿಂತ ಹೆಚ್ಚಿ ನೆರವು ಮತ್ತು ಮಾನವೀಯ ನೆರವಿಗಾಗಿ ಜಾಗತಿಕವಾಗಿ ಸುಮಾರು ೭೦ ಶತಕೋಟಿ ಡಾಲರುಗಳನ್ನು ಒದಗಿಸಿದ್ದಾರೆ.

No comments:

Advertisement