ಗ್ರಾಹಕರ ಸುಖ-ದುಃಖ

My Blog List

Monday, April 6, 2020

ಕೊರೋನಾ ವಿರೋಧಿ ಸಮರ ಸುದೀರ್ಘ; ಬಳಲಿಕೆ, ವಿರಾಮಕ್ಕೆ ಆಸ್ಪದವಿಲ್ಲ: ಪ್ರಧಾನಿ ಮೋದಿ

ಕೊರೋನಾ ವಿರೋಧಿ ಸಮರ ಸುದೀರ್ಘ; ಬಳಲಿಕೆ, ವಿರಾಮಕ್ಕೆ ಆಸ್ಪದವಿಲ್ಲ:  ಪ್ರಧಾನಿ ಮೋದಿ

ನವದೆಹಲಿ: ಕೊರೋನಾವೈರಸ್ ವಿರುದ್ಧದ ಸಮರ ಸುದೀರ್ಘವಾದದ್ದು ಎಂದು 2020 ಏಪ್ರಿಲ್ 06ರ ಸೋಮವಾರ ಇಲ್ಲಿ ಹೇಳಿದ ಪ್ರಧಾನಿ ನರೇಂದ್ರ ಮೋದಿ ಅವರು, ’ ಸಮರದಲ್ಲಿ ಜಯಶಾಲಿಗಳಾಗಲೇಬೇಕಿರುವುದರಿಂದ ಬಳಲಬೇಡಿ ಅಥವಾ ವಿಶ್ರಮಿಸಬೇಡಿಎಂದು ಜನತೆಗೆ ಕರೆ ನೀಡಿದರು.

ಸಂಪೂರ್ಣ ಜವಾಬ್ದಾರಿಯೊಂದಿಗೆ ನಾನು ಹೇಳುತ್ತಿದ್ದೇನೆ. ಕೊರೋನಾವೈರಸ್ ಸಾಂಕ್ರಾಮಿಕ ಪಿಡುಗಿನ ವಿರುದ್ಧದ ಸಮರ ಸುದೀರ್ಘವಾದದ್ದು. ಆದರೆ ಯುದ್ಧದಲ್ಲಿ ನಾವು ಬಳಲುವಂತಿಲ್ಲ ಅಥವಾ ವಿಶ್ರಾಂತಿ ಪಡೆಯುವಂತಿಲ್ಲ, ನಾವು ವಿಜಯಶಾಲಿಗಳಾಗಲೇಬೇಕು. ಇಂದು ರಾಷ್ಟ್ರದ ಮುಂದಿರುವುದು ಒಂದೇ ಗುರಿ ಮತ್ತು ಒಂದೇ ತೀಮಾನ- ಅದು ಸಮರವನ್ನು ಗೆಲ್ಲುವುದುಎಂದು ಪಕ್ಷದ ಸಂಸ್ಥಾಪನಾ ದಿನದ ಅಂಗವಾಗಿ ಬಿಜೆಪಿ ಕಾರ್‍ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಭಾಷಣದಲ್ಲಿ ಪ್ರಧಾನಿ ನುಡಿದರು.

ಭಾರತವು ರೋಗದ ಗಂಭೀರತೆಯನ್ನು ಹೇಗೆ ಅರ್ಥ ಮಾಡಿಕೊಂಡಿದೆ ಮತ್ತು ಅದರ ವಿರುದ್ಧ ಸಕಾಲಿಕ ಸಮರ ಸಾರಿದೆಎಂಬುದನ್ನು ಪ್ರಧಾನಿ ವಿವರಿಸಿದರು. ’ಭಾರತದ ಪ್ರಯತ್ನಗಳು ಇಡೀ ವಿಶ್ವಕ್ಕೆ ಮಾದರಿಯನ್ನು ಹಾಕಿಕೊಟ್ಟಿವೆಎಂದು ಮೋದಿ ನುಡಿದರು. ಪ್ರಸ್ತುತ ದಿಗ್ಬಂಧನ (ಲಾಕ್ ಡೌನ್) ವೇಳೆಯಲ್ಲಿ ೧೨೦ ಕೋಟಿ ಭಾರತೀಯರು ತೋರಿಸಿರುವ ಪ್ರೌಢಿಮೆಯನ್ನೂ ಪ್ರಧಾನಿ ಶ್ಲಾಘಿಸಿದರು.

ಭಾರತದ ಪ್ರಯತ್ನಗಳು ಇಡೀ ವಿಶ್ವದ ಮುಂದೆ ಮಾದರಿಯೊಂದನ್ನು ಹಾಕಿಕೊಟ್ಟಿವೆ. ರೋಗದ ಗಂಭೀರತೆಯನ್ನು ಅರ್ಥ ಮಾಡಿಕೊಂಡಿರುವ ಮತ್ತು ಸಕಾಲಿಕ ಸಮಯದಲ್ಲಿ ಸಮರ ಸಾರಿದ ರಾಷ್ಟ್ರಗಳಲ್ಲಿ ಭಾರತ ಸೇರಿದೆ. ಭಾರತವು ಹಲವಾರು ನಿರ್ಣಯಗಳನ್ನು ಕೈಗೊಂಡಿದೆ ಮತ್ತು ಅವುಗಳ ಜಾರಿಗೆ ಸರ್ವ ಪ್ರಯತ್ನ ಮಾಡುತ್ತಿದೆಎಂದು ಬಿಜೆಪಿ ಸದಸ್ಯರನ್ನು ಉದ್ದೇಶಿಸಿದ ವಿಡಿಯೋದಲ್ಲಿ ಮೋದಿ ವಿವರಿಸಿದರು.

ಭಾರತದಲ್ಲಿ ಕೊರೋನಾವೈರಸ್ ಸೋಂಕಿಗೆ ಬಲಿಯಾದವರ ಸಂಖ್ಯೆ ಸೋಮವಾರ ೧೦೯ಕ್ಕೇ ಏರಿದ್ದು, ಸೋಂಕಿನ ಪ್ರಕರಣಗಳ ಸಂಖ್ಯೆ ೪೦,೬೭ಕ್ಕೆ ಏರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಮಹರಾಷ್ಟ್ರದಿಂದ ಅತ್ಯಂತ ಹೆಚ್ಚು - ೪೫ ಕೊರೋನಾವೈರಸ್ ಸಾವುಗಳು ವರದಿಯಾಗಿದ್ದು, ೧೧ ಸಾವಿನೊಂದಿಗೆ ಗುಜರಾತ್ ಎರಡನೇ ಸ್ಥಾನದಲ್ಲಿದೆ. ಮಧ್ಯಪ್ರದೇಶದಲ್ಲಿ ಸಾವುಗಳು ಸಂಭವಿಸಿದ್ದು, ತೆಲಂಗಾಣ ಮತ್ತು ದೆಹಲಿಯಲ್ಲಿ ತಲಾ ಸಾವುಗಳು, ತಮಿಳುನಾಡಿನಲ್ಲಿ ಮತ್ತು ಪಂಜಾಬಿನಲ್ಲಿ ಸಾವುಗಳು ಸಂಭವಿಸಿವೆ. ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಸೋಂಕು ದೃಢ ಪಟ್ಟ ಪ್ರಕರಣಗಳು ಮಹಾರಾಷ್ಟ್ರದಿಂದ ವರದಿಯಾಗಿದ್ದು ಸೋಂಕು ದೃಢಪಟ್ಟವರ ಸಂಖ್ಯೆ ೬೯೦ಕ್ಕೆ ಏರಿದೆ. ೫೭೧ ಸೋಂಕು ದೃಢಪಟ್ಟ ಪ್ರಕರಣಗಳೊಂದಿಗೆ ತಮಿಳುನಾಡು ಎರಡನೇ ಸ್ಥಾನದಲ್ಲಿದೆ. ದೆಹಲಿಯಲ್ಲಿ ೫೦೩ ಪ್ರಕರಣಗಳಲ್ಲಿ ಸೋಂಕು ದೃಢಪಟ್ಟಿದೆ. ತೆಲಂಗಾಣದಲ್ಲಿ ಸೋಂಕು ದೃಡಪಟ್ಟ ಪ್ರಕರಣಗಳ ಸಂಖ್ಯೆ ೩೨೧ಕ್ಕೆ ಏರಿದೆ. ಕೇರಳದಲ್ಲಿ ಸೋಂಕು ದೃಢಪಟ್ಟ ಪ್ರಕರಣಗಳ ಸಂಖ್ಯೆ ೩೧೪ ಆಗಿದ್ದರೆ, ರಾಜಸ್ಥಾನದಲ್ಲಿ ಸೋಂಕು ದೃಢಪಟ್ಟ ಪ್ರಕರಣ ೨೫೩ಕ್ಕೇ ಏರಿದೆ.

ಮಾರ್ಚ್ ತಿಂಗಳಲ್ಲಿ ಸಾರ್ಕ್ ರಾಷ್ಟ್ರಗಳ ನಾಯಕರು ಮತ್ತು ಪ್ರತಿನಿಧಿಗಳ ಜೊತೆಗೆ ವಿಡಿಯೋ ಕಾನ್ಫರೆನ್ಸ್ ನಡೆಸಿದ್ದ ಪ್ರಧಾನಿ ಮೋದಿ ಕೊರೋನಾವೈರಸ್ ಸಾಂಕ್ರಾಮಿಕ ಪಿಡುಗಿನ ವಿರುದ್ಧ ಹೋರಾಟಕ್ಕೆ ಜಂಟಿ ಕಾರ್‍ಯತಂತ್ರ ರೂಪಿಸಲು ಕರೆ ಕೊಟ್ಟಿದ್ದರು. ’ಸಿದ್ಧರಾಗಿರಿ, ಆದರೆ ಭಯಭೀತರಾಗಬೇಡಿ ಎಂಬುದು ಸಾಂಕ್ರಾಮಿಕದ ಜೊತೆಗೆ ವ್ಯವಹರಿಸುವಲ್ಲಿ ಭಾರತದ ಮಾರ್ಗದರ್ಶಿ ಮಂತ್ರವಾಗಿದೆ ಎಂದು ಪ್ರಧಾನಿ ಹೇಳಿದ್ದರು.

ಭಾರತ ಪ್ರವೇಶಿಸುವ ಜನರನ್ನು ತಪಾಸಣೆ ಮಾಡುವ ಕಾರ್‍ಯವನ್ನು ನಾವು ಜನವರಿ ಮಧ್ಯದಿಂದಲೇ ಆರಂಭಿಸಿದ್ದೆವು ಮತ್ತು ಪ್ರಯಾಣದ ಮೇಲಿನ ನಿರ್ಬಂಧಗಳನ್ನು ಕ್ರಮೇಣ ಹೆಚ್ಚಿಸುತ್ತಾ ಹೋದೆವು ಎಂದು ಮೋದಿ ಸಾರ್ಕ್ ನಾಯಕರಿಗೆ ತಿಳಿಸಿದ್ದರು.

ಭಾರತದಲ್ಲಿ ಈಗ ರೋಗ ಪತ್ತೆಗಾಗಿ ಪರೀಕ್ಷಾ ಪ್ರಕ್ರಿಯೆಯು ವ್ಯಾಪಕಗೊಂಡಿದ್ದು, ಕನಿಷ್ಠ ಕೆಲವು ರಾಜ್ಯಗಳಲ್ಲಿ ಸಮೂಹಗಳಲ್ಲಿ ಅತ್ಯಂತ ತೀವ್ರ ಸ್ವರೂಪದ ಪರೀಕ್ಷೆಗಳು ನಡೆಯುತ್ತಿವೆ. ಪ್ರತಿಜೀವಕ ಪರೀಕ್ಷಾ ಕಿಟ್ ಗಳನ್ನು ಪಡೆಯಲು ಕೆಲವು ರಾಜ್ಯಗಳಿಗೆ ಅನುಮತಿ ನೀಡಲಾಗಿದ್ದು, ಅವುಗಳು ಬರುತ್ತಿದ್ದಂತೆಯೇ ಪರೀಕ್ಷೆಗಳು ಇನ್ನಷ್ಟು ವ್ಯಾಪಕಗೊಳ್ಳಲಿವೆ.

ಶನಿವಾರ ಸರ್ಕಾರ ಪ್ರಕಟಿಸಿದ ಒಂದು ದಾಖಲೆ ಮತ್ತು ಹಂತ ಹಂತವಾಗಿ ದಿಗ್ಬಂಧನ (ಲಾಕ್ ಡೌನ್)  ಸ್ಥಿತಿಯಿಂದ ನಿರ್ಗಮಿಸುವ ಬಗ್ಗೆ ಸಲಹೆಗಳನ್ನು ನೀಡುವಂತೆ ಮತ್ತು ದೇಶದ ಕೆಲವು ಭಾಗಗಳಲ್ಲಾದರೂ ನಿಯಂತ್ರಗಳನ್ನು ಮುಂದುವರೆಸುವ ಬಗ್ಗೆ ಸಲಹೆಗಳನ್ನು ನೀಡುವಂತೆ ಪ್ರಧಾನಿಯವರು ಮುಖುಮಂತ್ರಿಗಳ ಜೊತೆಗಿನ ಸಭೆಯಲ್ಲಿ ಮನವಿ ಮಾಡಿದ್ದರು.

No comments:

Advertisement