My Blog List

Monday, April 6, 2020

ಏಪ್ರಿಲ್ ೧೪ರ ಬಳಿಕ ’ಹಾಟ್‌ಸ್ಪಾಟ್’ ಮಾತ್ರ ಲಾಕ್‌ಡೌನ್, ಉಳಿದ ಕಡೆ ನಿರ್ಬಂಧ ರದ್ದು ಸಂಭವ

 ಏಪ್ರಿಲ್ ೧೪ರ ಬಳಿಕ ಹಾಟ್‌ಸ್ಪಾಟ್ಮಾತ್ರ  ಲಾಕ್‌ಡೌನ್,  ಉಳಿದ ಕಡೆ ನಿರ್ಬಂಧ ರದ್ದು ಸಂಭವ

ನವದೆಹಲಿ: ಕೊರೋನಾವೈರಸ್ ಸೋಂಕು ಹರಡದಂತೆ ತಡೆಯುವ ಸಲುವಾಗಿ ವಿಧಿಸಲಾಗಿರುವ ೨೧ ದಿನಗಳ ರಾಷ್ಟ್ರವ್ಯಾಪಿ ದಿಗ್ಬಂಧನ (ಲಾಕ್ ಔಟ್) ಏಪ್ರಿಲ್ ೧೪ರಂದು ಮುಕ್ತಾಯವಾದ ಬಳಿಕ, ಕಟ್ಟು ನಿಟ್ಟಿನ ನಿರ್ಬಂಧ ಕ್ರಮಗಳುಕೊರೋನಾವೈರಸ್ ಹಾಟ್‌ಸ್ಪಾಟ್‌ಗಳಲ್ಲಿಮಾತ್ರ ಮುಂದುವರೆಯಬಹುದುಎಂದು ಸರ್ಕಾರಿ ಮೂಲಗಳು ಮಾತ್ರ ಮಾತ್ರ  2020 ಏಪ್ರಿಲ್ 06ರ ಸೋಮವಾರ ತಿಳಿಸಿದವು. 

 ದಿಗ್ಬಂಧನವಿಸ್ತರಣೆಯ ಯೋಜನೆಗಳಿವೆ ಎಂಬುದನ್ನು ಕೇಂದ್ರ ಸಂಪುಟ ಕಾರ್‍ಯದರ್ಶಿ ರಾಜೀವ ಗೌಬಾ ಅವರು ವಾರದ ಹಿಂದೆಯೇ ನಿರಾಕರಿಸಿದ್ದರೂ, ನಿರ್ಬಂಧಗಳು ಮುಂದುವರೆಯಬೇಕು ಎಂದು ತೆಲಂಗಾಣ ಮುಖ್ಯಮಂತ್ರಿ  ಸೇರಿದಂತೆ ಹಲವಾರು ರಾಜ್ಯಗಳು ಕೇಂದ್ರ ಸರ್ಕಾರಕ್ಕೆ ಪತ್ರಗಳನ್ನು ಬರೆದಿವೆ ಎಂದು ಸುದ್ದಿ ಮೂಲಗಳು ತಿಳಿಸಿದವು.

ಭಾರತದಲ್ಲಿ ಕೊರೋನಾಸೋಂಕು ದೃಢಪಟ್ಟ ಪ್ರಕರಣಗಳ ಸಂಖ್ಯೆ ಕಳೆದ ಒಂದು ವಾರದಲ್ಲಿ ಗಣನೀಯವಾಗಿ ಏರಿಕೆಯಾಗಿದ್ದು ಸೋಮವಾರ ಬೆಳಗಿನ ವೇಳೆಗೆ ೪೦೦೦ದ ಗಡಿ ದಾಟಿದೆ. ಈವರೆಗೆ ೧೦೯ ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ ಕಳೆದ ನಾಲ್ಕು ದಿನಗಳಲ್ಲಿ ಕೊರೋನಾವೈರಸ್ ಸೋಂಕಿನ ಪ್ರಕರಣಗಳು ಗಮನಾರ್ಹವಾಗಿ ಹೆಚ್ಚಿವೆ. ಸೋಂಕಿನ ಪ್ರಕರಣಗಳ ಗತಿ ಇದೇ ರೀತಿಯಾಗಿ ಕೆಲವು ವಾರಗಳ ಕಾಲ ಮುಂದುವರೆದರೆ ಭಾರತದ ಬಹುತೇಕ ಆಸ್ಪತ್ರೆಗಳಲ್ಲಿ ರೋಗಿಗಳು ಕಿಕ್ಕಿರಿಯಬಹುದು.

ಭಾರತದಲ್ಲಿ ಕೊರೋನಾಸೋಂಕು ಹರಡುತ್ತಿರುವ ಪ್ರಮಾಣ ಕೊರೋನಾವೈರಸ್ಸಿನ  ಜಾಗತಿಕ ಕೇಂದ್ರವಾಗಿ ಪರಿಣಮಿಸಿರುವ ಅಮೆರಿಕಕ್ಕೆ ಹೋಲಿಸಿದರೆ ಕಡಿಮೆಯಾಗಿದ್ದರೂ, ಸಿಂಗಾಪುರ ಮತ್ತು ಜಪಾನಿನಂತಹ ಏಷ್ಯಾದ ರಾಷ್ಟ್ರಗಳಿಗೆ ಹೋಲಿಸಿದರೆ ಹೆಚ್ಚಿದೆ.

ಹಿನ್ನೆಲೆಯಲ್ಲಿ  ರಾಷ್ಟಾದ್ಯಂತ ದಿಗ್ಬಂಧನ ವಿಸ್ತರಿಸುವ ಬದಲಿಗೆ, ಕೋವಿಡ್ -೧೯ರ ಹಾಟ್‌ಸ್ಪಾಟ್‌ಗಳು ಎಂಬುದಾಗಿ ಗುರುತಿಸಲಾಗಿರುವ ಸ್ಥಳಗಳಲ್ಲಿ ಮಾತ್ರವೇ ಲಾಕ್ ಡೌನ್ ವಿಸ್ತರಿಸುವ ಇನ್ನೊಂದು ಪ್ರಸ್ತಾಪವನ್ನೂ ಸರ್ಕಾರ ಪರಿಶೀಲಿಸುತ್ತಿದೆ ಎಂದು ಮೂಲಗಳು ಹೇಳಿವೆ. ಆರೋಗ್ಯ ಸಚಿವಾಲಯವು ಈಗಾಗಲೇ ದೇಶಾದ್ಯಂತ ೨೦ ವೈರಸ್ ಹಾಟ್‌ಸ್ಪಾಟ್‌ಗಳನ್ನು ಗುರುತಿಸಿದ್ದು, ಜೊತೆಗೆ ಸಂಭಾವ್ಯ ಹಾಟ್‌ಸ್ಟಾಟ್‌ಗಳಾಗಿ ಇತರ ೨೨ ಸ್ಥಳಗಳನ್ನು ಗುರುತಿಸಿದೆ.

ಸುದ್ದಿಮೂಲಗಳ ಪ್ರಕಾರ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಪರಿಸ್ಥಿತಿಯನ್ನು ವಿವರಿಸಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಲಾಕ್ ಡೌನ್ ವಿಸ್ತರಣೆಗೆ ಸಂಬಂಧಿಸಿದಂತೆ ಸ್ವತಃ ಅಂತಿಮ ನಿರ್ಧಾರ ಕೈಗೊಳ್ಳುವರು ಎಂದು ಸುದ್ದಿ ಮೂಲಗಳು ಹೇಳಿವೆ.

ಕಳೆದ ವಾರ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆಗೆ ನಡೆಸಲಾದ ವಿಡಿಯೋ ಕಾನ್ಫರೆನ್ಸಿನಲ್ಲಿ ಪ್ರಧಾನಿಯವರು ಹಂತ ಹಂತವಾಗಿ ದಿಗ್ಬಂಧನ ರದ್ದು ಪಡಿಸುವ ನಿಟ್ಟಿನಲ್ಲಿ ಸಲಹೆಗಳನ್ನು ನೀಡುವಂತೆ ಮುಖ್ಯಮಂತ್ರಿಗಳನ್ನು ಕೋರಿದ್ದರು.

ಲಾಕ್ ಡೌನ್ ಮುಗಿದ ಬಳಿಕ ನಿಧಾನಗತಿಯ ಜನಸಂಚಾರ ಖಾತರಿ ಪಡಿಸುವ ಸಲುವಾಗಿಸಾಮಾನ್ಯ ನಿರ್ಗಮನ ತಂತ್ರವನ್ನು ರೂಪಿಸುವುದು ಅತ್ಯಂತ ಮಹತ್ವದ್ದು ಎಂದು ಪ್ರಧಾನಿ ಹೇಳಿದ್ದರು.

ಸಾಮೂಹಿಕವಾಗಿ ಸೋಂಕು ಹರಡದಂತೆ ತಡೆಯುವ ಸಲುವಾಗಿ ಪ್ರಧಾನಿ ಮೋದಿಯವರು ಮಾರ್ಚ್ ೨೪ರಂದು ಮೂರು ವಾರಗಳ ರಾಷ್ಟವ್ಯಾಪಿ ದಿಗ್ಬಂಧನವನ್ನು ಘೋಷಿಸಿದ್ದರು. ಆದರೆ ವಿಶ್ವದಲ್ಲೇ ಅತ್ಯಂತ ಬೃಹತ್ ಪ್ರಮಾಣದ್ದು ಎಂಬುದಾಗಿ ಪರಿಗಣಿಸಲಾದ ಲಾಕ್ ಡೌನ್ ಪರಿಣಾಮವಾಗಿ ಸಹಸ್ರಾರು ಮಂದಿ ಕೆಲಸಗಳನ್ನು ಕಳೆದುಕೊಂಡಿದ್ದು, ಭಾರೀ ಸಂಖ್ಯೆಯಲ್ಲಿ ವಲಸೆ ಕಾರ್ಮಿಕರು ಆಹಾರ ಮತ್ತು ಆಶ್ರಯ ಅರಸಿ ನಗರಗಳಿಂದ ಹಳ್ಳಿಗಳತ್ತ ಮರುವಲಸೆ ಹೊರಟಿದ್ದರು.

ಭಾನುವಾರ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಕೊರೋನಾವೈರಸ್ ಸೋಂಕಿನ ಪ್ರಕರಣಗಳನ್ನು ಕಂಡ ಮಹಾರಾಷ್ಟ್ರದಲ್ಲಿ ರಾಜ್ಯ ಸರ್ಕಾರವು ಸೋಂಕಿನ ಪ್ರಕರಣಗಳು ಇದೇ ರೀತಿ ಹೆಚ್ಚಿದರೆ ಮಹಾರಾಷ್ಟ್ರದಲ್ಲಿ ದಿಗ್ಬಂಧನ ವಿಸ್ತರಿಸದೆ ಬೇರೆ ದಾರಿಯಿಲ್ಲ ಎಂದು ಈಗಾಗಲೇ ಹೇಳಿದೆ.

ಮಹಾರಾಷ್ಟ್ರದಲ್ಲಿ ಮುಂಬೈ ಮತ್ತು ನಗರ ಪ್ರದೇಶಗಳಲ್ಲಿ ಮುಂದಿನ ಎರಡು ವಾರಗಳ ಕಾಲ ದಿಗ್ಬಂಧನ ವಿಸ್ತರಣೆಯಾಗಬಹುದು ಎಂದು ಮಹಾರಾಷ್ಟ್ರದ ಆರೋಗ್ಯ ಸಚಿವ ರಾಜೇಶ್ ಟೋಪೆ ಹೇಳಿದ್ದರು.

No comments:

Advertisement