ಕಾಶ್ಮೀರಕ್ಕೆ
ನುಗ್ಗಿಸಲು 450 ಭಯೋತ್ಪಾದಕರನ್ನು ಸಜ್ಜುಗೊಳಿಸಿದ ಪಾಕ್
ನವದೆಹಲಿ: ವಿಶ್ವದ ಇತರ ಭಾಗಗಳಂತೆ ಕೊರೋನವೈರಸ್ ಕಾಯಿಲೆಯೊಂದಿಗೆ ಹೋರಾಡುತ್ತಿರುವ ಪಾಕಿಸ್ತಾನ ತನ್ನ ೧೪ ಕಾರ್ಯಾಚರಣಾ ಉಡಾವಣಾ ತಾಣಗಳಿಂದ ಕಾಶ್ಮೀರಕ್ಕೆ ನುಸುಳಲು ಕಾಯುತ್ತಿರುವ ಭಯೋತ್ಪಾದಕರ ಸಂಖ್ಯೆಯನ್ನು ದ್ವಿಗುಣಗೊಳಿಸಿದೆ ಎಂದು ಅಧಿಕೃತ ಮೂಲಗಳು 2020 ಏಪ್ರಿಲ್ 26ರ ಭಾನುವಾರ ವರದಿ
ಮಾಡಿದವು.
"ಈ ಉಡಾವಣಾ ತಾಣಗಳಲ್ಲಿ ಸುಮಾರು ೪೫೦ ಭಯೋತ್ಪಾದಕರನ್ನು ಪಾಕಿಸ್ತಾನದ ಭಯೋತ್ಪಾದನಾ ತರಬೇತಿ ಶಿಬಿರಗಳಿಂದ ತಂದು ಇರಿಸಲಾಗಿದ್ದು ಅವರು ಭಯೋತ್ಪಾದಕ ಗುಂಪುಗಳ ಜೊತೆ ಸಂಬಂಧ ಹೊಂದಿದ್ದಾರೆ ಎಂದು ಮೂಲಗಳು ತಿಳಿಸಿದವು.
ಪಾಕಿಸ್ತಾನದಲ್ಲಿ ಪ್ರಸ್ತುತ ಸುಮಾರು ೧೨,೭೦೦ ಕೋವಿಡ್ -೧೯ ಪ್ರಕರಣಗಳು ವರದಿಯಾಗಿದ್ದು, ೨೬೮ ಸಾವುಗಳು ಸಂಭವಿಸಿವೆ.
ದೆಹಲಿಯಲ್ಲಿ ರಾಷ್ಟ್ರೀಯ ಭದ್ರತಾ ಯೋಜಕರು ಪಡೆದ ಹೊಸ ಗುಪ್ತಚರ ಮಾಹಿತಿಯಂತೆ ಪಾಕಿಸ್ತಾನವು ಕೇವಲ ಒಂದು ವಾರದಲ್ಲಿ ಉಡಾವಣಾ ತಾಣಗಳಲ್ಲಿ ಭಯೋತ್ಪಾದಕರ ಉಪಸ್ಥಿತಿಯನ್ನು ದ್ವಿಗುಣಗೊಳಿಸಿದೆ ಎಂದು ಗೊತ್ತಾಗಿದೆ.
No comments:
Post a Comment