My Blog List

Friday, April 17, 2020

ಭಾರತ: ಕೊರೋನಾ ಪ್ರಕರಣ ೧೩,೩೮೭, ಸಾವು ೪೩೭

ಭಾರತ:  ಕೊರೋನಾ ಪ್ರಕರಣ ೧೩,೩೮೭, ಸಾವು ೪೩೭
ನವದೆಹಲಿ: ಕೊರೋನಾವೈರಸ್ ಸಾಂಕ್ರಾಮಿಕವನ್ನು ಪರಾಭವಗೊಳಿಸುವಲ್ಲಿ ಭಾರತೀಯರ ಸಹಕಾರವನ್ನು ಕೋರಿ ೨೧ ದಿನಗಳ ರಾಷ್ಟ್ರವ್ಯಾಪಿ ದಿಗ್ಬಂಧನವನ್ನು (ಲಾಕ್ ಡೌನ್) ಮೇ ೩ರ ವರೆಗೆ ಪ್ರಧಾನಿ ನರೇಂದ್ರ ಮೋದಿ ಅವರು ವಿಸ್ತರಿಸಿದ್ದರ ಮಧ್ಯೆಯೇ, ಭಾರತದಲ್ಲಿ ಕೋವಿಡ್-೧೯ ಸೋಂಕು ತಗುಲಿದವರ ಸಂಖ್ಯೆ 2020 ಏಪ್ರಿಲ್ 17ರ ಶುಕ್ರವಾರ ೧೩,೩೮೭ ಮತ್ತು ಮೃತರ ಸಂಖ್ಯೆ ೪೦೭ಕ್ಕೆ ಏರಿತು.

೧೩,೩೮೭ ಸೋಂಕಿನ ಪ್ರಕರಣಗಳಲ್ಲಿ ೧೧,೨೦೧ ಪ್ರಕರಣಗಳು ಸಕ್ರಿಯ ಪ್ರಕರಣಗಳಾಗಿದ್ದು, ೧೭೪೮ ಪ್ರಕರಣಗಳಲ್ಲಿ ರೋಗಿಗಳು ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ.

ಏಷ್ಯಾದ ಕೊಳಚೆಗೇರಿಗಳಲ್ಲೇ ಅತ್ಯಂತ ದೊಡ್ಡದಾಗಿರುವ ಮುಂಬೈಯ ಧಾರಾವಿಯಲ್ಲಿ ಕೊರೋನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಶುಕ್ರವಾರ ೧೦೧ಕ್ಕೆ ಏರಿತು. ಪೈಕಿ ೧೦ ಮಂದಿ ಸಾವನ್ನಪ್ಪಿದ್ದಾರೆ. ಹರಿಯಾಣದಲ್ಲಿ ಸೋಂಕಿನ ಸಂಖ್ಯೆ ೨೨೧ಕ್ಕೆ ಏರಿದ್ದು ನುಹ್ ಮತು ಪಂಚಕುಲ ಜಿಲ್ಲೆಗಳಲ್ಲಿ ಹೊಸ ಪ್ರಕರಣಗಳು ವರದಿಯಾದವು. ಅತಿಬಾಧಿತ ನುಹ್ನಲ್ಲಿ ಪ್ರಕರಣಗಳು ವರದಿಯಾದರೆ, ಹಿಂದೆ ಒಂದೇ ಕುಟುಂಬದ ಮಂದಿಯಲ್ಲಿ ಸೋಂಕು ಕಂಡು ಬಂದು ಭಾರೀ ಸುದ್ದಿ ಮಾಡಿದ್ದ ಪಂಚಕುಲದಲ್ಲಿ ಶುಕ್ರವಾರ ಇನ್ನೆರಡು ಪ್ರಕರಣಗಳು ವರದಿಯಾದವು.

ಸೇನಾ ವೈದ್ಯ, ವರ್ಷದ ಮಗುವಿಗೆ ಸೋಂಕು: ಉತ್ತರಾಖಂಡದ ಡೆಹ್ರಾಡ್ನಲ್ಲಿ ಸೇನಾ ವೈದ್ಯ ಮತ್ತು ಒಂದು ವರ್ಷದ ಮಗು ಸೇರಿದಂತೆ ಮೂವರಿಗೆ ಕೊರೋನಾಸೋಂಕು ತಗುಲಿದ ಬಗ್ಗೆ ವರದಿಯಾಗಿದ್ದು, ರಾಜ್ಯದಲ್ಲಿ ಕೊರೋನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ ೪೦ಕ್ಕೆ ಏರಿದೆ.

ಉತ್ತರ ಪ್ರದೇಶದ ೪೯ ಜಿಲ್ಲೆಗಳಿಂದ ೮೪೬ ಪ್ರಕರಣಗಳು ವರದಿಯಾಗಿದ್ದು, ಪೈಕಿ ೭೪ ಮಂದಿ ಗುಣಮುಖರಾಗಿ ಮನೆಗಳಿಗೆ ತೆರಳಿದ್ದಾರೆ. ಗುರುವಾರ ,೯೬೨ ಪರೀಕ್ಷೆಗಳನ್ನು ನಡೆಸಲಾಗಿದೆ. ೯೯೩ ಮಂದಿ ಐಸೋಲೇಷನ್ ವಾರ್ಡುಗಳಲ್ಲಿದ್ದು, ೧೦,೦೦೦ಕ್ಕೂ ಹೆಚ್ಚು ಮಂದಿ ರಾಜ್ಯದ ವಿವಿಧ ಕ್ಯಾರಂಟೈನ್ ಘಟಕಗಳಲ್ಲಿ ಇದ್ದಾರೆ ಎಂದು ಮುಖ್ಯ ಕಾರ್ಯದರ್ಶಿ ಅಮಿತ್ ಮೋಹ ಪ್ರಸಾದ್ ಹೇಳಿದರು.

ಕರ್ನಾಟಕದಲ್ಲಿ ೪೪ ಹೊಸ ಪ್ರಕರಣ
ಕರ್ನಾಟಕದಲ್ಲಿ ಕಳೆದ ೨೪ ಗಂಟೆಗಳಲ್ಲಿ ೪೪ ಹೊಸ ಕೋವಿಡ್-೧೯ ಪ್ರಕರಣಗಳು ವರದಿಯಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ ೩೫೯ಕ್ಕೆ ಏರಿತು. ೧೩ ಮಂದಿ ಸಾವನ್ನಪ್ಪಿದ್ದು, ೮೮ ಮಂದಿ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ ಎಂದು ಆರೋಗ್ಯ ಇಲಾಖೆ ಹೇಳಿದೆ.

ವೇತನ ವಿಳಂಬಕ್ಕೆ ಸಿಟ್ಟು, ಕಾರ್ಮಿಕರ ದಾಳಿ
ಲಾಕ್ ಡೌನ್ ಮಧ್ಯೆ ವೇತನ ಪಾವತಿ ವಿಳಂಬವಾದುದಕ್ಕಾಗಿ ಸಿಟ್ಟಿಗೆದ್ದ ಕಾರ್ಮಿಕರು ನಿರ್ಮಾಣ ಸಂಸ್ಥೆಯ ಕಚೇರಿಗೆ ಕಲ್ಲು ತೋರಿದ ಘಟನೆ ಮಹಾರಾಷ್ಟ್ರದ ಸೋಲಾಪುರದಲ್ಲಿ ಘಟಿಸಿತು.
ಘಟನೆಯಲ್ಲಿ
ನಾಲ್ವರು ಪೊಲೀಸರು ಗಾಯಗೊಂಡರು. ಸಂಗೋಲದ ಜುನೋನಿಯಲ್ಲಿನ ದಿಲಿಪ್ ಬಿಲ್ಡಕಾನ್ ಕಚೇರಿಯ ಹೊರಗೆ ಘಟನೆ ಗುರುವಾರ ಸಂಜೆ ಘಟಿಸಿತು, ಘಟನೆಗೆ ಸಂಬಂಧಿಸಿದಂತೆ ಐವರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

ಟ್ರಕ್ಕಿನಲ್ಲಿದ್ದ ೧೧ ಜನರ ಸೆರೆ
ಕಾಶ್ಮೀರದ ಕಡೆಗೆ ಟ್ರಕ್ ಒಂದರಲ್ಲಿ ಅಡಗಿಕುಳಿತುಕೊಂಡು ಪಯಣ ಹೊರಟಿದ್ದ ೧೧ ಜನರನ್ನು ಕೇಂದ್ರಾಡಳಿತ ಪ್ರದೇಶದ ರಾಮಬನ ಜಿಲ್ಲೆಯಲ್ಲಿ ಲಾಕ್ ಡೌನ್ ನಿಯಮಗಳನ್ನು  ಉಲ್ಲಂಘಿಸಿದ್ದಕ್ಕಾಗಿ ಬಂಧಿಸಲಾಯಿತು. ಅವರೆಲ್ಲರನ್ನೂ ವೈದ್ಯಕೀಯ ಪರೀಕ್ಷೆಯ ಬಳಿಕ ಕ್ವಾರಂಟೈನ್ಗೆ ಒಳಪಡಿಸಲಾಯಿತು.

ಮಾಮೂಲಿ ತಪಾಸಣೆ ನಡೆಸುತ್ತಿದ್ದ ಪೊಲೀಸ್ ಸಿಬ್ಬಂದಿ ನಾಶ್ರೀಯಲ್ಲಿ ಟ್ರಕ್ಕನ್ನು ತಡೆದು ನಿಲ್ಲಿಸಿದಾಗ ಅದರೊಳಗೆ ೧೧ ಮಂದಿ ಅಡಗಿದ್ದದು ಪತ್ತೆಯಾಯಿತು.

ಲಾಕ್ ಡೌನ್ ಉಲ್ಲಂಘಿಸಿದ್ದಕ್ಕೆ ೨೦,೩೫೩ ಎಫ್ ಐಆರ್
ಉತ್ತರ ಪ್ರದೇಶ ಪೊಲೀಸರು ಲಾಕ್ ಡೌನ್ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ೨೦,೪೫೩ ಪ್ರಕರಣಗಳನ್ನು ದಾಖಲು ಮಾಡಿಕೊಂಡಿದ್ದು, ೬೮,೮೧೧ ಜನg ವಿರುದ್ಧ ಕಾನೂನು ಕ್ರಮ ಜರುಗಿಸಿದ್ದಾರೆ. ಲಾಕ್ಡೌನ್ ಉಲ್ಲಂಘಿಸಿದ್ದಕ್ಕಾಗಿ ಮಾರ್ಚ್ ೨೫ರಿಂದೀಚೆಗೆ .೧೧ ಕೋಟಿ ರೂಪಾಯಿ ದಂಡ ವಸೂಲು ಮಾಡಿದ್ದಾರೆ.

ಮಹಾರಾಷ್ಟ್ರ: ಬಾಡಿಗೆ ವಸೂಲಿ ತಿಂಗಳು ಮುಂದೂಡಿಕೆ
ಕನಿಷ್ಠ ಮೂರು ತಿಂಗಳಕಾಲ ಬಾಡಿಗೆದಾರರಿಂದ ಬಾಡಿಗೆ ವಸೂಲು ಮಾಡದಂತೆ ಮಹಾರಷ್ಟ್ರ ರಾಜ್ಯ ವಸತಿ ಇಲಾಖೆಯು ಮನೆ ಮಾಲೀಕರಿಗೆ ಸೂಚನೆಗಳನ್ನು ನೀಡಿದೆ. ಅವಧಿಯಲ್ಲಿ ಬಾಡಿಗೆ ಪಾವತಿ ಮಾಡಿಲ್ಲ ಎಂಬ ಕಾರಣಕ್ಕಾಗಿ ಮನೆ ಮಾಲೀಕರು ಯಾರೇ ಬಾಡಿಗೆದಾರರನ್ನು ಬಾಡಿಗೆ ಮನೆಗಳಿಂದ ಎಬ್ಬಿಸುವಂತಿಲ್ಲ ಎಂದು ಮುಖ್ಯಮಂತ್ರಿಗಳ ಕಚೇರಿಯು ತಿಳಿಸಿದೆ.

No comments:

Advertisement