My Blog List

Wednesday, April 22, 2020

ಕೊರೋನಾ ವಾರಿಯರ್ಸ್ ಮೇಲಿನ ಹಲ್ಲೆ: ರಾಜಿ ಇಲ್ಲ-ಪ್ರಧಾನಿ ಮೋದಿ

ಕೊರೋನಾ ವಾರಿಯರ್ಸ್  ಮೇಲಿನ ಹಲ್ಲೆ: ರಾಜಿ ಇಲ್ಲ-ಪ್ರಧಾನಿ ಮೋದಿ
ನವದೆಹಲಿ: ಕೋರೋನಾ ವೈರಸ್ (ಕೋವಿಡ್-೧೯) ವಿರುದ್ಧ ಹೋರಾಡುತ್ತಿರುವ ಸಿಬ್ಬಂದಿ ಮೇಲೆ ನಡೆಯುತ್ತಿರುವ  ಹಲ್ಲೆಗಳ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು 2020 ಏಪ್ರಿಲ್ 22ರ ಬುಧವಾರ ಇಲ್ಲಿ ಖಂಡತುಂಡವಾಗಿ ಹೇಳಿದರು.

ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರಿಗೆ ರಕ್ಷಣೆ ಒದಗಿಸುವ ಸುಗ್ರೀವಾಜ್ಞೆಗೆ ಕೇಂದ್ರ ಸಚಿವ ಸಂಪುಟವು ಅನುಮೋದನೆ ನೀಡಿದ ಬಳಿಕ ಟ್ವೀಟ್ ಮಾಡಿದ ಪ್ರಧಾನಿಸಾಂಕ್ರಾಮಿಕ ರೋಗಗಳ (ತಿದ್ದುಪಡಿ) ಸುಗ್ರೀವಾಜ್ಞೆ ೨೦೨೦ ಕೋವಿಡ್ -೧೯ರ ವಿರುದ್ಧ ಮುಂಚೂಣಿಯಲ್ಲಿ ನಿಂತು ದಿಟ್ಟವಾಗಿ ಹೋರಾಡುತ್ತಿರುವ ಪ್ರತಿಯೊಬ್ಬ ಆರೋಗ್ಯ ಕಾರ್ಯಕರ್ತನನ್ನು ರಕ್ಷಿಸುವ ನಮ್ಮ  ಬದ್ಧತೆಯನ್ನು ತೋರಿಸುತ್ತದೆಎಂದು ಬರೆದರು.

ಅದು (ಸುಗ್ರೀವಾಜ್ಞೆ) ನಮ್ಮ ವೃತ್ತಿ ನಿರತರ ಸುರಕ್ಷತೆಯ ಖಾತರಿ ನೀಡುತ್ತದೆ. ಅವರ ಸುರಕ್ಷತೆಯ ವಿಚಾರದಲ್ಲಿ ಯಾವುದೇ ರಾಜಿ ಇಲ್ಲವೇ ಇಲ್ಲಎಂದೂ ಪ್ರಧಾನಿ ಸ್ಪಷ್ಟ ಪಡಿಸಿದರು.

ಸುಗ್ರೀವಾಜ್ಞೆಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದ ಬಳಿಕ ಆರೋಗ್ಯ ವೃತ್ತಿ ನಿರತರು, ವೈದ್ಯಕೀಯ ಸಿಬ್ಬಂದಿ, ಮುಂಚೂಣಿಯ ಕಾರ್ಯಕರ್ತರ ಸುರಕ್ಷತೆಗೆ, ಅವರ ವಿರುದ್ಧದ ಹಿಂಸಾಚಾರ ತಡೆಯಲು ಸೂಕ್ತ ಭದ್ರತಾ ಕ್ರಮಗನ್ನು ಕೈಗೊಳ್ಳುವಂತೆಯೂ ಕೇಂದ್ರ ಸರ್ಕಾರ ರಾಜ್ಯಗಳಿಗೆ ಸೂಚನೆ ನೀಡಿತು. 

ಭಾರತದಲ್ಲಿ ಕೊರೋನಾವೈರಸ್ ಸೋಂಕಿಗೆ ಒಳಗಾದವರ ಸಂಖ್ಯೆ ಬುಧವಾರ ೨೦,೪೭೧ಕ್ಕೆ ಏರಿದ್ದು, ಸಾವಿನ ಸಂಖ್ಯೆ ೬೪೦ಕ್ಕೆ ಏರಿದೆ. ಕಳೆದ ೨೪ ಗಂಟೆಗಳ ಅವಧಿಯಲ್ಲಿ ,೩೫೩ಕ್ಕೂ ಹೆಚ್ಚಿನ ಹೊಸ ಪ್ರಕರಣಗಳು ವರದಿಯಾಗಿದ್ದು, ೫೦ ಸಾವಿನ ವರದಿಗಳು ಬಂದಿವೆ.

ವಿಶ್ವಾದ್ಯಂತ ಕೋವಿಡ್-೧೯ ಸೋಂಕಿಗೆ ಒಳಗಾದವರ ಸಂಖ್ಯೆ ಬುಧವಾರ . ಮಿಲಿಯನ್ (೨೫ ಲಕ್ಷ) ದಾಟಿದ್ದು, ಸಾಂಕ್ರಾಮಿಕದ ಪರಿಣಾಮವಾಗಿ ಸಂಭವಿಸಿರುವ ನಷ್ಟಗಳನ್ನು ಭರ್ತಿ ಮಾಡಿಕೊಳ್ಳಲು ದಾರಿಗಳನ್ನೇ ಕಾಣದೆ ಕಂಗೆಟ್ಟಿವೆ. ಅಮೆರಿಕವು ಅಮೆರಿಕದ ಪ್ರಜೆಗಳಿಗೆ ಉದ್ಯೋಗ ರಕ್ಷಣೆಗಾಗಿ ಎರಡು ತಿಂಗಳ ಅವಧಿಗೆ ವಲಸೆಯನ್ನು ಅಮಾನತುಗೊಳಿಸಿದೆ.

ವಲಸೆಯನ್ನು ಭಾಗಶಃ ಅಮಾನತುಗೊಳಿಸುವ ಆದೇಶಕ್ಕೆ ತಾವು ಬುಧವಾರ ಸಹಿ ಮಾಡುವುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರ ದೃಢ ಪಡಿಸಿದರು.

ಏಷ್ಯಾದ ಮಾರುಕಟ್ಟೆಗಳಲ್ಲಿ ಇಂಧನ ಮಾರುಕಟ್ಟೆಗಳು ಪ್ರಾರಂಭದಲ್ಲಿ ಸ್ವಲ್ಪ ಏರಿಕೆಯ ಲಕ್ಷಣ ತೋರಿಸಿದರೂ, ಬಳಿಕ ದರಗಳು ಶೇಕಡಾ ೧೨ರಷ್ಟು ಕುಸಿದವು.

ಹೈಡ್ರ್ಸೋಕ್ಲೊರೋಕ್ವಿನ್ ಪರಿಣಾಮಕಾರಿಯಲ್ಲ
ಮಧ್ಯೆ, ಕೋವಿಡ್೦-೧೯ರ ವಿರುದ್ಧ  ಆಟ ಬದಲಾಯಿಸುವ ದಾಳಆಗಬಲ್ಲುದು ಎಂಬುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಬಣ್ಣಿಸಿದ್ದ ಮಲೇರಿಯಾ ನಿರೋಧಿ ಹೈಡ್ರೋಕ್ಲೋರೋಕ್ವಿನ್, ಕೊರೋನಾವೈರಸ್ ವಿರುದ್ಧ ಪರಿಣಾಮಕಾರಿಯೇನಲ್ಲ ಎಂದು ಅಧ್ಯಯನವೊಂದು ಬಹಿರಂಗ ಪಡಿಸಿದೆ.

ಕೊರೋನಾವೈರಸ್ ವಿರುದ್ಧದ ಹೋರಾಟದಲ್ಲಿ ಹೈಡ್ರೋಕ್ಲೋರೋಕ್ವಿನ್ ಔಷಧವನ್ನು ಹಲವಾರು ರಾಷ್ಟ್ರಗಳು ವ್ಯಾಪಕವಾಗಿ ಬಳಸುತ್ತಿರುವ ಬಗ್ಗೆ ಅಧ್ಯಯನವು ಕಳವಳ ವ್ಯಕ್ತ ಪಡಿಸಿದೆ.

ಇಮ್ರಾನ್ ಖಾನ್ಗೆ ಕೋವಿಡ್-೧೯ ಪರೀಕ್ಷೆ
ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರು ಬುಧವಾರ ಕೋವಿಡ್-೧೯ ಪರೀಕ್ಷೆಗೆ ಹಾಜರಾಗಲಿದ್ದಾರೆ ಮೂಲಗಳು ತಿಳಿಸಿವೆ. ಖಾನ್ ಅವರು ಖ್ಯಾತ ದಾನಿಯೊಬ್ಬರನ್ನು ಭೇಟಿ ಮಾಡಿದ್ದರು. ಭೇಟಿಯ ಕೆಲ ದಿನಗಳ ಬಳಿಕ ಸದರಿ ದಾನಿಗೆ ಕೋವಿಡ್-೧೯ ಸೋಂಕು ತಗುಲಿದ್ದು ಖಚಿತಪಟ್ಟಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಪಾಕಿಸ್ತಾನದಲ್ಲಿ ಕಳೆದ ೨೪ ಗಂಟೆಗಳಲ್ಲಿ ಒಟ್ಟು ೧೭ ಮಂದಿ ಕೊರೋನಾವೈರಸ್ಸಿಗೆ ಬಲಿಯಾಗಿದ್ದಾರೆ. ಇದರೊಂದಿಗೆ ಸಾವಿನ ಸಂಖ್ಯೆ ೨೦೯ಕ್ಕೆ ಏರಿದೆ. ೫೩೩ ಹೊಸ ಪ್ರಕರನಗಳೊಂದಿಗೆ ಕೊರೋನಾ ಸೋಂಕಿನ ಪ್ರಕರಣಗಳ ಸಂಖ್ಯೆ ,೭೪೯ಕ್ಕೆ ಏರಿದೆ ಎಂದು ರಾಷ್ಟ್ರೀಯ ಆರೋಗ್ಯ ಸೇವಾ ಸಚಿವಾಲಯ ತಿಳಿಸಿದೆ.

No comments:

Advertisement