Wednesday, April 22, 2020

ಇಂದಿನಿಂದ ಮನುಷ್ಯರ ಮೇಲೆ ಆಕ್ಸ್‌ಫರ್ಡ್ ಲಸಿಕೆ ಪ್ರಯೋಗ

ಇಂದಿನಿಂದ ಮನುಷ್ಯರ ಮೇಲೆ  ಆಕ್ಸ್ಫರ್ಡ್ ಲಸಿಕೆ ಪ್ರಯೋಗ
ಲಂಡನ್: ಕೊರೊನಾ ವೈರಸ್ ಸೋಂಕಿಗೆ ಲಸಿಕೆಯೊಂದನ್ನು ಅಭಿವೃದ್ಧಿ ಪಡಿಸಿರುವ ಆಕ್ಸ್ಫರ್ಡ್ ವಿಶ್ವವಿದ್ಯಾಲಯದ ಲಸಿಕೆಯನ್ನು 2020 ಏಪ್ರಿಲ್ ೨೩ರಿಂದ ಮನುಷ್ಯರ ಮೇಲೆ ಪ್ರಯೋಗಿಸಲು ಸಿದ್ಧತೆ ನಡೆದಿದೆ.

ಲಸಿಕೆಯನ್ನು ಏಪ್ರಿಲ್ ೨೩ರ ಗುರುವಾರದಿಂದ ಮನುಷ್ಯರ ಮೇಲೆ ಪ್ರಯೋಗಿಸಲಾಗುವುದು ಎಂದು ಸಂಶೋಧಕರು 2020 ಏಪ್ರಿಲ್  22ರ ಬುಧವಾರ  ಹೇಳಿದರು.

ಕೋವಿಡ್-೧೯ ಸೋಂಕು ನಿಗ್ರಹಕ್ಕೆ ಸೂಕ್ತ ಲಸಿಕೆಯೊಂದನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಆಕ್ಸ್ಫರ್ಡ್ ವಿಶ್ವ ವಿದ್ಯಾಲಯವು ಕಾರ್ ಮಗ್ನವಾಗಿದ್ದು, ಇಂಗ್ಲೆಂಡ್ ಸರ್ಕಾರವು ಇದಕ್ಕಾಗಿ ಕೋಟಿ ಪೌಂಡ್ (ಸುಮಾರು ೧೮೯ ಕೋಟಿ ರೂಪಾಯಿ) ನೆರವು ನೀಡುವುದಾಗಿ ಮಂಗಳವಾರ ಘೋಷಿಸಿದೆ.

ವಿಶ್ವವಿದ್ಯಾಲಯದ  ಸಂಶೋಧಕರು ಕೋವಿಡ್-೧೯ ಸೋಂಕಿನ ನಿಗ್ರಹಕ್ಕಾಗಿ ಲಸಿಕೆಯೊಂದನ್ನು ಅಭಿವೃದ್ಧಿ ಪಡಿಸಿದ್ದಾರೆ. ಸಾರ್ಸ್-ಕೋವ್- ವೈರಸ್ ಸೋಂಕಿನಿಂದ ಉಂಟಾಗುವ ರೋಗಕ್ಕೆ ಲಸಿಕೆ ಅಭಿವೃದ್ಧಿ ಪಡಿಸಿರುವುದಾಗಿ ಹೇಳಿರುವ ಪ್ರೊಫೆಸರ್ ಸರಾಹ್ ಗಿಲ್ಬರ್ಟ್ ಸೆಪ್ಟೆಂಬರಿನಲ್ಲಿ ಇದು ಮಾರುಕಟ್ಟೆಗೆ ಬರುವ ವಿಶ್ವಾವಿದೆ ಎಂದು ಹೇಳಿದ್ದಾರೆ.

ಕೋವಿಡ್-೧೯ ಸಾಂಕ್ರಾಮಿಕದ ವಿರುದ್ಧ ಹೋರಾಟಕ್ಕೆ ಲಸಿಕೆ ಕಂಡುಕೊಳ್ಳುವುದು ಅತ್ಯಗತ್ಯವಾಗಿದೆ. ಅದಕ್ಕಾಗಿ ಎಲ್ಲ ರೀತಿಯ ಪ್ರಯತ್ನಗಳನ್ನು ನಡೆಸುತ್ತಿರುವುದಾಗಿ ಇಂಗ್ಲೆಂಡಿನ ಆರೋಗ್ಯ ಕಾರ್ಯದರ್ಶಿ ಮ್ಯಾಟ್ ಹ್ಯಾನ್ಕಾಕ್ ಹೇಳಿದರು.

ಲಂಡನ್ನಿನ ಇಂಪೀರಿಯಲ್ ಕಾಲೇಜ್ ನಡೆಸುತ್ತಿರುವ ಪ್ರಯೋಗಗಳಿಗೂ .೨೫ ಕೋಟಿ ಪೌಂಡ್ ನೆರವು ನೀಡುವುದಾಗಿ ಹ್ಯಾನ್ಲಾಕ್ ನುಡಿದರು.

ಎರಡನೇ ಹಂತದ ಚಿಕಿತ್ಸೆಯ ಪ್ರಯತ್ನಗಳಿಗೆ ಇದು ಸಹಕಾರಿಯಾಗಲಿದ್ದು, ಮೂರನೇ ಹಂತದ ಪ್ರಯೋಗಗಳಿಗೆ ತೆರೆದುಕೊಳ್ಳಲು ಅನುವು ಮಾಡಿಕೊಡಲಿದೆ ಎಂದು ಅವರು ಹೇಳಿದರು.

ಸಾಮಾನ್ಯವಾಗಿ ಪ್ರಯೋಗಗಳಲ್ಲಿ ಹಂತವನ್ನು ತಲುಪಲು ವರ್ಷಗಳೇ ಹಿಡಿಯುತ್ತವೆ ಎಂದು ಹ್ಯಾನ್ಕಾಕ್ ಹೇಳಿದರು.

ಲಸಿಕೆ ಅಭಿವೃದ್ಧಿ ಪಡಿಸುವ ಜಾಗತಿಕ ಹುಡುಕಾಟದಲ್ಲಿ ಇಂಗ್ಲೆಂಡ್ ಮುಂಚೂಣಿಯಲ್ಲಿದ್ದು, ಇತರರಿಗಿಂತ ಹೆಚ್ಚು ಹಣವನ್ನು ಮೀಸಲಿಡುತ್ತಿದ್ದೇವೆ. ಲಸಿಕೆಗಾಗಿ ಹಲವಾರು ನಿಟ್ಟಿನ ಪ್ರಯತ್ನ ಬೇಕಾಗುತ್ತದೆ. ಅದಕ್ಕಾಗಿ ಸರ್ಕಾರ ಎಲ್ಲ ರೀತಿಯ ಪ್ರಯತ್ನಗಳನ್ನೂ ನಡೆಸುತ್ತದೆಎಂದು ಅವರು ನುಡಿದರು.

ಇಂಗ್ಲೆಂಡಿನಲ್ಲಿ ಕೊರೊನಾ ವೈರಸ್ ಸೋಂಕಿಗೆ ಮಂಗಳವಾರ ಒಂದೇ ದಿನ ೮೨೩ ಮಂದಿ ಸಾವಿಗೀಡಾಗಿದ್ದು,  ಸಾವನಪ್ಪಿದವರ ಒಟ್ಟು ಸಂಖ್ಯೆ ೧೭,೩೩೭ಕ್ಕೆ ಏರಿದೆ.

No comments:

Advertisement